fbpx
ಉಪಯುಕ್ತ ಮಾಹಿತಿ

ನೀವು ಸಹಿ ಮಾಡುವ ಶೈಲಿಯಿಂದ ನಿಮ್ಮ ವ್ಯಕ್ತಿತ್ವದ ಬಗ್ಗೆ ತಿಳಿದುಕೊಳ್ಳಿ.!

ನೀವು ಸಹಿ ಮಾಡುವ ಶೈಲಿಯಿಂದ ನಿಮ್ಮ ವ್ಯಕ್ತಿತ್ವವನ್ನು ನಿರ್ಧರಿಸಬಹುದೇ? ಹೌದು ಎನ್ನುತ್ತದೆ ಗ್ರಾಫಾಲಜಿ ಅಥವಾ ವಿಶ್ಲೇಷಣಾ ಶಾಸ್ತ್ರ. ‘ಫೇಸ್ ಈಸ್ ದ ಇಂಡೆಕ್ಸ್ ಆಫ್ ಮೈಂಡ್” ಅಂದರೆ ಮುಖ ಮನಸ್ಸಿನ ಸೂಚಕ. ಒಬ್ಬರ ಮುಖವನ್ನು ನೋಡಿ ಅವರ ಮನಸ್ಸು ಎಂತಹುದೆಂದು ಸುಲಭವಾಗಿ ತಿಳಿದುಕೊಳ್ಳಬಹುದಂತೆ. ಅದೇ ರೀತಿ, ನೀವು ಮನೆಯಲ್ಲಿ ಮಾಡುವ ಸಹಿಯನ್ನು ನೋಡಿ ನಿಮ್ಮ ವ್ಯಕ್ತಿತ್ವ ಎಂತಹುದೆಂದು ಹೇಳಬಹುದಂತೆ. ಆದ್ದರಿಂದ ಮನಸ್ಸಿನ ಏರಿಳಿತಗಳನ್ನು ಮುಖದಲ್ಲಿ ನೋಡಿ ಸ್ವಲ್ಪಮಟ್ಟಿಗಾದರೂ ಅವರ ವ್ಯಕ್ತಿತ್ವ ಪ್ರತಿಬಿಂಬಿಸುತ್ತದೆ ಎಂಬುದರಲ್ಲಿ ಅರ್ಥವಿದೆ.

ನಿಮ್ಮ ಸಹಿಯ ಶೈಲಿಯಿಂದ ನಿಮ್ಮ ಮನಸ್ತತ್ವ, ನೀವು ಮಾಡುವ ಕೆಲಸಗಳು, ನಿಮ್ಮ ಮನೋವೃತ್ತಿ ಹೇಗಿರುತ್ತದೆಂದು ಕರಾರುವಾಕ್ಕಾಗಿ ಹೇಳಬಹುದಂತೆ. ಇದರ ಕುರಿತಾಗಿ ಎಲ್ಲರಿಗೂ ಅಲ್ಪ ಸ್ವಲ್ಪ ತಿಳಿದೇಯಿರುತ್ತದೆ. ಆದರೆ, ನಾವು ಸಾಮಾನ್ಯವಾಗಿ ಹಲವು ರೀತಿಯಾಗಿ ಸಹಿ ಮಾಡುತ್ತಿರುತ್ತೇವೆ. ಅವುಗಳನ್ನೇ ಆಧಾರವನ್ನಾಗಿರಿಸಿಕೊಂಡು ನಮ್ಮ ವ್ಯಕ್ತಿತ್ವ ಹೇಗಿರುತ್ತದೆಂದು ಪರಿಶೀಲಿಸೋಣ.

ಹಾಗಾದರೆ ಬನ್ನಿ ನಿಮ್ಮ ನಿಮ್ಮ ಸಹಿಯ ಶೈಲಿಯಿಂದ ನಿಮ್ಮ ವ್ಯಕ್ತಿತ್ವದ ಬಗ್ಗೆ ಹೇಗೆ ತಿಳಿದುಕೊಳ್ಳ ಬಹುದೆಂದು ತಿಳಿಯೋಣ:

1. ಸಹಿ ಮಾಡಿ ಕೆಳಗೆ ಗೆರೆ ಎಳೆಯುವವರು :

ಇಂತಹವರಿಗೆ ವಿಶ್ವಾಸ ಹೆಚ್ಚಾಗಿರುತ್ತದೆ. ಆದರೂ ಸಹ ಇವರು ಕೆಲವು ವಿಷಯಗಳನ್ನು ಕುರುಡಾಗಿ ನಂಬುತ್ತಿರುತ್ತಾರೆ. ನನಗೆ ತಿಳಿದಿರುವುದೇ ಸರಿ ಎನ್ನುವ ವಿಧದವರು. ಮನುಷ್ಯರನ್ನು ಅಷ್ಟು ಬೇಗನೆ ನಂಬಲಾರರು. ನಂಬಿದರೆ ಮಾತ್ರ ಪ್ರಾಣ ಕೊಡಲೂ ತಯಾರಿರುತ್ತಾರೆ.

2.ಸಹಿಯು ಕೈ ಬರವಣಿಗೆಗಿಂತಾ ದೊಡ್ಡದಾಗಿದ್ದರೆ :

ಸಮಾಜದಲ್ಲಿ ಗೌರವ, ಮರ್ಯಾದೆಗಳನ್ನು ಗಳಿಸುತ್ತಾರೆ. ಶೇಕಡಾವರು ವಿಶ್ವಾಸ ಅಧಿಕವಿರುತ್ತದೆ. ಎಲ್ಲ ವಿಷಯಗಳಿಗೂ ಮುಂದಿರುತ್ತಾರೆ. ದೈರ್ಯವಂತರು.

3. ಸಹಿ ಕೆಳಮುಖವಾಗಿದ್ದರೆ :

ಸ್ವಾರ್ಥ ಹೆಚ್ಚಾಗಿರುತ್ತದಂತೆ.

4. ಸಹಿ ಮೇಲ್ಮುಖವಾಗಿದ್ದರೆ :

ನಿಮಗೆ ತೀಕ್ಷ್ಣ ಬುದ್ಧಿಯಿರುತ್ತದೆ. ಧನಾತ್ಮಕ ವ್ಯಕ್ತಿತ್ವ, ಯಾವುದೇ ವಿಷಯವನ್ನಾಗಲಿ ಬೇಗನೆ ಅರ್ಥ ಮಾಡಿಕೊಳ್ಳುತ್ತೀರ. ಅಭಿವೃದ್ಧಿ ಪಥದಕಡೆ ನಿಮ್ಮ ಪಯಣ.

5. ಸಹಿಯ ಮೊದಲ ಅಕ್ಷರ ದೊಡ್ಡದಿದ್ದರೆ :

ಹೆಚ್ಚಾಗಿ ನಾಯಕತ್ವದ ಲಕ್ಷಣಗಳನ್ನು ಹೊಂದಿರುತ್ತೀರಿ (ಮಹಾತ್ಮ ಗಾಂಧಿ ಸಹಿಯಲ್ಲಿ ಮೊದಲ ಅಕ್ಷರದ ಗಾತ್ರ ದೊಡ್ಡದಾಗಿತ್ತು)

6. ಸಹಿಯ ಮೊದಲ ಅಕ್ಷರಕ್ಕೆ ಸುತ್ತಿಹಾಕಿದ್ದರೆ :

ಎಂದೆಂದಿಗೂ ನಿಮಗೆ ಜಯ ಲಭಿಸುತ್ತದೆ.

7. ಸಹಿಯ ಕೊನೆ ಅಕ್ಷರದಿಂದ ಗೆರೆಯನ್ನು ಹಿಂದೆ ಎಳೆದಿದ್ದರೆ :

ಗತಕಾಲವನ್ನು ಕುರಿತು ಹೆಚ್ಚಾಗಿ ಆಲೋಚಿಸುತ್ತಿರುತ್ತೀರಿ. ವರ್ತಮಾನದ ಬಗ್ಗೆ ಗಮನ ಹರಿಸುವುದಿಲ್ಲ.

8. ಸಹಿಯಲ್ಲಿ ಚುಕ್ಕೆಗಳಿದ್ದರೆ :

ನಾನು ಯಾವಾಗಲೂ ಕಾರ್ಯನಿರತನಾಗಿರುತ್ತೇನೆ ಎನ್ನುವ ಸ್ವಭಾವದವರು.

9. ಸಹಿಯಲ್ಲಿ ಅಂತರ ಹೆಚ್ಚಾಗಿದ್ದರೆ :

ಆರಂಭ ಶೂರತ್ವ ಹೆಚ್ಚಾಗಿರುತ್ತದೆ. ಒಳ್ಳೆಯ ಐಡಿಯಾ ಗಳಿರುತ್ತವೆ. ಆದರೆ, ಆಚರಣೆಗೆ ತರುವುದರಲ್ಲಿ ಮಾತ್ರ ವಿಫಲರಾಗುತ್ತೀರ.

ಗ್ರಾಫಾಲಜಿಯಲ್ಲಿ ಇನ್ನು ಆನೇಕ ವಿಷಯಗಳಿವೆ. ಅನೇಕ ಮನೋವೈಜ್ಞಾನಿಕ ಪುಸ್ತಕಗಳನ್ನು ಬರೆದು ಯಶಸ್ವಿ ಆಗಿರುವ ತೆಲುಗಿನ ಹೆಸರಾಂತ ಲೇಖಕ ಯಂಡಮೂರಿ ವೀರೇಂದ್ರನಾಥ್ ಅವರ ಒಂದು ಉತ್ತಮವಾದ ಹೊತ್ತಿಗೆ ಇದು. ಗ್ರಾಫಾಲಜಿ ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತ. ಇದನ್ನು ಕನ್ನಡಕ್ಕೆ ಅನುವಾದಿಸಿದವರು ರಾಜಾ ಚೆಂಡೂರು.

ಹೇಗೆ ಕೈಬರಹ ಉತ್ತಮಪಡಿಸಿಕೊಳ್ಳುವ ಮೂಲಕ, ತಮ್ಮ ವ್ಯಕ್ತಿತ್ವದಲ್ಲೇ ಸುಧಾರಣೆ ತಂದುಕೊಂಡು ಜೀವನದಲ್ಲಿ ಯಶಸ್ಸು ಗಳಿಸಿದವರ ಉದಾಹರಣೆಗಳು ನಮಗೆ ಸಿಗುತ್ತವೆ. ಹಾಗೆ ನೀವು ಸಹಿ ಮಾಡುವ ಶೈಲಿಯಿಂದ ನಿಮ್ಮ ವ್ಯಕ್ತಿತ್ವದ ಬಗ್ಗೆ ತಿಳಿದುಕೊಳ್ಳಿ.! ನಿಮ್ಮ ಮನಸತ್ವವನ್ನು ಅರಿಯಿರಿ.!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top