fbpx
ಆರೋಗ್ಯ

ಆರೋಗ್ಯಕರ ಈ ಸುಲಭ ವಿಧಾನದ ಮೂಲಕ ನೀವು ನಿಮ್ಮ ದೇಹದ ತೂಕ ಹೀಗೆ ಹೆಚ್ಚಿಸಿಕೊಳ್ಳಿ

 

ಕೆಲವರು ಹೆಚ್ಚೇನು ತಿಂದದಿದ್ದರೂ ದಪ್ಪಗಾಗುತ್ತ ಹೋಗುತ್ತಾರೆ. ಕೆಲವರು ಎಷ್ಟೇ ಪ್ರಯತ್ನಪಟ್ಟರೂ ತೂಕವನ್ನು ಹೆಚ್ಚಿಸಿಕೊಳ್ಳಲಾಗುವುದಿಲ್ಲ. ನಮ್ಮ ಎತ್ತರಕ್ಕೆ ತಕ್ಕ ತೂಕವನ್ನು ಹೊಂದಿರುವುದು ಆರೋಗ್ಯದ ದೃಷ್ಟಿಯಿಂದ ಅತ್ಯಗತ್ಯ. ನೀವು ಸಹ ತೂಕವನ್ನು ಹೆಚ್ಚಿಸಿಕೊಳ್ಳಲು ಪರದಾಡುತ್ತಿದ್ದೀರಾ? ಒಮ್ಮೆ ಈ ಸುಲಭ ಸಲಹೆಗಳನ್ನು ಪ್ರಯತ್ನಿಸಿ ನೋಡಿ…

ಅದೆಷ್ಟು ಪ್ರಯತ್ನ ಮಾಡಿದರೂ ತೂಕ ಹೆಚ್ಚಾಗುವುದಿಲ್ಲ.  ನಮ್ಮ ಎತ್ತರಕ್ಕೆ ತಕ್ಕ ತೂಕವನ್ನು ಹೊಂದಿರುವುದು ಆರೋಗ್ಯದ ದೃಷ್ಟಿಯಿಂದ ಅತ್ಯಗತ್ಯ. ಅದ್ದರಿಂದ  ಈ ಆರೋಗ್ಯಕರ ವಿಧಾನದ ಮೂಲಕ ನೀವು ನಿಮ್ಮ ದೇಹದ ತೂಕ ಹೀಗೆ ಹೆಚ್ಚಿಸಿ.

*ಪ್ರೊಟೀನ್‌ ಹೆಚ್ಚಾಗಿರುವ ಆಹಾರಗಳ ಸೇವನೆ ಹೆಚ್ಚಿಸಿ, ಡೈರಿ ಪ್ರೊಡಕ್ಟ್‌, ಬೀನ್ಸ್‌, ಮೊಟ್ಟೆ, ಮೀನು ಮಾಂಸ, ಆಲೂಗಡ್ಡೆ, ಬಾದಾಮಿ, ಚೀಸ್‌ ಮತ್ತು ಯೋಗರ್ಟ್‌ ಸೇವನೆ ಮಾಡಿ.

*ಹೆಚ್ಚೆಚ್ಚು ತಿನ್ನಿ: ಬೆಳಿಗ್ಗೆ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಹೊಟ್ಟೆ ಬಿರಿಯುವ ಹಾಗೆ ತಿನ್ನುವ ಬದಲು ದಿನಕ್ಕೆ ಐದಾರು ಸಲ ಸ್ವಲ್ಪ ಸ್ವಲ್ಪ ತಿನ್ನಿ.ರಾತ್ರಿ ಊಟದ ಬಳಿಕ ಸಿಹಿ ತಿನ್ನಿ.

* ದೇಹಕ್ಕೆ ಪ್ರತಿ  ಗಳಿಗೆಯೂ ಶಕ್ತಿ ಬೇಕಾಗುತ್ತದೆ. ಆದುದರಿಂದ ಒಂದು ಬಾರಿ ಊಟ – ತಿಂಡಿ ಸೇವನೆ ಮಾಡಿದ ನಂತರ ನಾಲ್ಕು ಗಂಟೆ ಏನು ತಿನ್ನದೆ ಹಾಗೇ ಇರಬೇಡಿ. ಬದಲಾಗಿ ಮಧ್ಯ ಮಧ್ಯ ಆಹಾರ ಸೇವನೆ ಮಾಡುತ್ತ ಬನ್ನಿ.

*ಪೋಷಕಾಂಶ ಭರಿತ ಆಹಾರಗಳು ಆಯ್ಕೆ:  ಆರೋಗ್ಯಕರ ಆಹಾರದ ಭಾಗವಾಗಿ, ಪೂರ್ಣ ಧಾನ್ಯ,ಕಾಳುಗಳು, ಪಾಸ್ತಾ, ಹಣ್ಣುಗಳು ಮತ್ತು ತರಕಾರಿಗಳು; ಹಾಲಿನ ಉತ್ಪನ್ನಗಳು; ನೇರ ಪ್ರೋಟೀನ್ ಮೂಲಗಳು, ಬೀಜಗಳನ್ನು ಬಳಸಿ

*ಹೆಚ್ಚು ಕೊಬ್ಬಿನ೦ಶ ಇರುವ ಡಾರ್ಕ್ ಚಾಕೋಲೇಟ್ ನಿಮ್ಮ ಹಸಿವನ್ನು ತಣಿಸುತ್ತದೆ, ಆದರೆ ನಿಮ್ಮ ತೂಕವನ್ನೂ ಹೆಚ್ಚಿಸುತ್ತದೆ. ಅದರೊ೦ದಿಗೆ, ನಿಮ್ಮ ಮೂಡನ್ನು ವೃದ್ಧಿಸಿ ನಿಮ್ಮನ್ನು ಖುಷಿಯಾದ ಮೂಡಿನಲ್ಲಿಡುತ್ತದೆ.

*ಜ್ಯೂಸ್ ಮತ್ತು ಶೇಕ್ಸ್ ಸೇವಿಸಿ: ಕಡಿಮೆ ಕ್ಯಾಲೋರಿ, ಕಡಿಮೆ ಪೌಷ್ಟಿಕಾಂಶದ ಡಯಟ್ ಸೋಡಾ, ಕಾಫಿ ತ್ಯಜಿಸಿ. ಅದರ ಬದಲಿಗೆ

ಹಣ್ಣು-ತರಕಾರಿ ಜ್ಯೂಸ್,  ಆರೋಗ್ಯಕರ ಶೇಕ್ಸ್ ಕುಡಿಯಿರಿ. ದ್ರವ ಪದಾರ್ಥಗಳು ಸಹ ಸಹಾಯಕ.

* ಓಟ್ ಮೀಲ್ ಆರೋಗ್ಯಕರವಾದ ಧಾನ್ಯ, ಹಾಗೂ ಇದು ಕಾರ್ಬನ್‌ ಹೆಚ್ಚಾಗಿರುವ ಆಹಾರವಾಗಿದೆ. ಇದು ನಿಮಗೆ ತೂಕವನ್ನು ಹೆಚ್ಚಿಸಲು ನೆರವಾಗುತ್ತದೆ, ಹಾಗೆಯೇ ಅದೇ ಸಮಯದಲ್ಲಿ ಮೆಗ್ನೇಶಿಯಮ್ ಹಾಗೂ ವಿಟಮಿನ್ ಬಿ 6 ಅ೦ಶ ನಿಮ್ಮ ಚರ್ಮದ ಅಂದ ಹೆಚ್ಚಿಸಿ  ನಿಮ್ಮ ಕೂದಲಿನ ಬೆಳವಣಿಗೆಗೆ ನೆರವಾಗುತ್ತದೆ.

*ಊಟ ಮಾಡುವಾಗ ಹೆಚ್ಚೆಚ್ಚು ನೀರು ಕುಡಿಯಬೇಡಿ.

* ಬೆಳಗ್ಗಿನ ಉಪಾಹಾರ ಮಿಸ್ ಮಾಡಬೇಡಿ: ಬೆಳಗ್ಗಿನ ಉಪಾಹಾರ ದಿನದ ಅತೀ ಪ್ರಮುಖ ಆಹಾರ. ರಾತ್ರಿಯ ನಿದ್ದೆಯ ಬಳಿಕ ಬೆಳಗಿನ ಉಪಾಹಾರ ದೇಹಕ್ಕೆ ಬೇಕಾಗಿರುವ ಶಕ್ತಿ ತುಂಬುತ್ತದೆ. ಏನೂ ತಿನ್ನದಿದ್ದರೆ ನಿಮ್ಮ ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುತ್ತದೆ.

*ಒಣದ್ರಾಕ್ಷಿಯಲ್ಲಿ ವಿಟಮಿನ್ನುಗಳು ಹೆಚ್ಚಾಗಿವೆ. ರಕ್ತಹೀನತೆಯನ್ನು ತಡೆಯುತ್ತದೆ. ಒಣದ್ರಾಕ್ಷಿಯಲ್ಲಿ ಜೀರ್ಣಕ್ರಿಯೆಯನ್ನು ಹೆಚ್ಚಿಸುವ ಶಕ್ತಿಯಿದೆ.

*ಒಣದ್ರಾಕ್ಷಿಯಲ್ಲಿ ಪ್ರೊಟೀನ್, ವಿಟಮಿನ್ನುಗಳು ಹೆಚ್ಚಿರುವುದರಿಂದ ತುಂಬಾ ಸಣ್ಣ ಇರುವವರು ತೆಗೆದುಕೊಳ್ಳಬಹುದು.

*ಇವುಗಳಲ್ಲಿನ ಕೊಲೆಸ್ಟರಾಲ್, ವಿಟಮಿನ್ನುಗಳು ಮುಂತಾದವು ಪೋಷಕಾಂಶಗಳನ್ನು ಒದಗಿಸಿ ರೋಗ ನಿರೋಧಕ ಶಕ್ತಿ ನೀಡುತ್ತವೆ.

*ಇವುಗಳಲ್ಲಿನ ಪೊಟಾಸಿಯಂ ರಕ್ತನಾಳಗಳಲ್ಲಿನ ಒತ್ತಡವನ್ನು ಕಡಿಮೆ ಮಾಡಿ ಆರೋಗ್ಯವಾಗಿರಿಸುತ್ತದೆ.

*ಒಣದ್ರಾಕ್ಷಿಯಲ್ಲಿನ ವಿಟಮಿನ್ ಬಿ ಕಾಂಪ್ಲೆಕ್ಸ್, ಕಬ್ಬಿಣ ಇರುವುದರಿಂದ ರಕ್ತಕಣಗಳ ಉತ್ಪಾದನೆಗೆ ತುಂಬಾ ಸಹಾಯಕವಾಗಿವೆ.

*ಇತರರೊಂದಿಗೆ ಊಟ ಮಾಡುವಾಗ ನೀವು ಎಷ್ಟು ತಿನ್ನುತ್ತೀರಿ ಎನ್ನುವ ಬಗ್ಗೆ ಲೆಕ್ಕವೇ ಇರಲ್ಲ ಎಂದು ಅಧ್ಯಯನಗಳು ಹೇಳುತ್ತವೆ. ಊಟ ಮಾಡುವಾಗ ಮತ್ತೊಬ್ಬ ವ್ಯಕ್ತಿಯಿದ್ದರೆ ನೀವು ಸಾಮಾನ್ಯವಾಗಿ ತಿನ್ನುವುದಕ್ಕಿಂತ ಶೇ. 35ರಷ್ಟು ಹೆಚ್ಚು ತಿನ್ನುತ್ತೀರಿ. 4 ಮಂದಿಯೊಂದಿಗೆ ಊಟ ಮಾಡುತ್ತಿದ್ದರೆ ನೀವು ಶೇ. 75ರಷ್ಟು ಹೆಚ್ಚಿಗೆ ತಿನ್ನುತ್ತೀರಂತೆ. ಇದು ನಿಮ್ಮ ದೇಹದ ತೂಕವನ್ನು ಹತ್ತು ಕೆ.ಜಿಯಷ್ಟು ಹೆಚ್ಚಿಸುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top