fbpx
News

ಚಾಹಲ್‍ ಚಮತ್ಕಾರಿ ಸಿಕ್ಸ್: ಭಾರತಕ್ಕೆ ಟಿ-20 ಸರಣಿ ಫಿಕ್ಸ್

ಲೆಗ್‍ ಬ್ರೇಕರ್‍ ಯಜುರ್ವೇಂದ್ರ ಚಾಹಲ್‍ ಜೀವನಶ್ರೇಷ್ಠ 6 ವಿಕೆಟ್‍.. ಮಾಜಿ ನಾಯಕ ಮಹೇಂದ್ರ ಸಿಂಗ್‍ ಧೋನಿ ಅವರ ಚೊಚ್ಚಲ ಅರ್ಧಶತಕ…ರೈನಾ ಮಿಂಚಿನ ಅರ್ಧಶತಕಗಳ ಅಭೂತಪೂರ್ವ ಕೊಡುಗೆಗಳ ನೆರವಿನಿಂದ ಭಾರತ ತಂಡ 75 ರನ್‍ಗಳ ಮಹನ್ನೋತ ಜಯದೊಂದಿಗೆ ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಟಿ-20 ಸರಣಿಯನ್ನು 2-1ರಿಂದ ಗೆದ್ದುಕೊಂಡಿತು.

ಸರಣಿಯ ಮೊದಲ ಪಂದ್ಯ ಗೆದ್ದಿದ್ದ ಇಂಗ್ಲೆಂಡ್‍ 2ನೇ ಪಂದ್ಯವನ್ನು ಕೊನೆಯ ಓವರ್‍ ನಲ್ಲಿ ಸೋತಿತ್ತು. ಇದರಿಂದ ಮೂರನೇ ಹಾಗೂ ಸರಣಿಯ ಅಂತಿಮ ಪಂದ್ಯ ತೀವ್ರ ಕುತೂಹಲ ಮೂಡಿಸಿತ್ತು. ಆದರೆ ನಿರ್ಣಾಯಕ ಪಂದ್ಯದಲ್ಲಿ ಆಟಗಾರರು ಇಡೀ ಸಾಮರ್ಥ್ಯವನ್ನು ಪಣಕ್ಕಿಟ್ಟು ಆಡಿ ಸುಲಭ ಗೆಲುವು ದಾಖಲಿಸಿದ್ದೂ ಅಲ್ಲದೇ ಸರಣಿ ವಶಪಡಿಸಿಕೊಂಡು ಬೆಂಗಳೂರಿನ ಅಭಿಮಾನಿಗಳನ್ನು ಖುಷಿಪಡಿಸಿದರು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‍ ಮಾಡಿದ ಭಾರತ ತಂಡ 203 ರನ್‍ಗಳ ಬೃಹತ್‍ ಮೊತ್ತ ದಾಖಲಿಸಿತು. ಕಠಿಣ ಗುರಿ ಬೆಂಬತ್ತಿದ ಇಂಗ್ಲೆಂಡ್‍ ಯಜುರ್ವೆಂದ್ರ ಚಾಹಲ್‍ ದಾಳಿಗೆ ತತ್ತರಿಸಿ 16.3 ಓವರ್‍ ಗಳಲ್ಲಿ 127 ರನ್‍ ಗಳಿಗೆ ಆಲೌಟಾಯಿತು. ಇದರೊಂದಿಗೆ ಇಂಗ್ಲೆಂಡ್ ಟೆಸ್ಟ್‍ ಸರಣಿಯಲ್ಲಿ 0-4, ಏಕದಿನ ಸರಣಿಯಲ್ಲಿ 1-4 ಮತ್ತು ಟಿ-20 ಸರಣಿಯನ್ನು 1-2ರಿಂದ ಸೋತು ನಿರಾಶಾದಾಯಕವಾಗಿ ಭಾರತ ಪ್ರವಾಸ ಮುಗಿಸಿತು.

ಇಂಗ್ಲೆಂಡ್‍ ಪರ ಜೋ ರೂಟ್‍ (42) ಮತ್ತು ನಾಯಕ ಇಯಾನ್‍ ಮಾರ್ಗನ್‍ (40) ಮತ್ತು ರಾಯ್ (32) ಹೊರತುಪಡಿಸಿ ಯಾವುದೇ ಬ್ಯಾಟ್ಸ್‍ ಮನ್‍ ಎರಡಂಕಿಯ ಮೊತ್ತವನ್ನೂ ದಾಟಲಿಲ್ಲ.

ಬ್ಯಾಟಿಂಗ್‍ನಲ್ಲಿ ಧೋನಿ, ರೈನಾ ಮಿಂಚು

ಇದಕ್ಕೂ ಮುನ್ನ ಬ್ಯಾಟ್‍ ಮಾಡಿದ ಭಾರತ ತಂಡ ಮಹೇಂದ್ರ ಸಿಂಗ್‍ ಧೋನಿ ಮತ್ತು ಸುರೇಶ್‍ ರೈನಾ ಅವರ ಅರ್ಧಶತಕಗಳ ನೆರವಿನಿಂದ ಬೃಹತ್‍ ಮೊತ್ತ ಸಂಪಾದಿಸಿತು.

ಎಲ್ಲಾ ಮಾದರಿಯ ಕ್ರಿಕೆಟ್‍ನ ನಾಯಕತ್ವ ತ್ಯಜಿಸಿದ ನಂತರ ಸಿಡಿಲಬ್ಬರದ ಬ್ಯಾಟಿಂಗ್‍ ಪ್ರದರ್ಶಿಸಿದ ಧೋನಿ 36 ಎಸೆತಗಳಲ್ಲಿ  ಬೌಂಡರಿ ಹಾಗೂ 2 ಸಿಕ್ಸರ್‍ ಸೇರಿದ 6 ರನ್ ಬಾರಿಸುವ ಮೂಲಕ ಟಿ-20 ಕ್ರಿಕೆಟ್‍ನಲ್ಲಿ ಚೊಚ್ಚಲ ಅರ್ಧಶತಕ ಗಳಿಸಿದ ಸಾಧನೆ ಮಾಡಿದರು.

ರೈನಾ 45 ಎಸೆತಗಳಲ್ಲಿ 2 ಬೌಂಡರಿ ಹಾಗೂ 5 ಸಿಕ್ಸರ್‍ ಸಹಾಯದಿಂದ 63 ರನ್‍ ಗಳಿಸಿದರೆ, ಯುವರಾಜ್‍ ಸಿಂಗ್ 10 ಎಸೆತಗಳಲ್ಲಿ 1 ಬೌಂಡರಿ ಹಾಗೂ 3 ಸಿಕ್ಸರ್‍ ಒಳಗೊಂಡ 27 ರನ್‍ ಚಚ್ಚಿದರು.

ಸಂಕ್ಷಿಪ್ತ ಸ್ಕೋರ್‍

ಭಾರತ 20 ಓವರ್‍ 6 ವಿಕೆಟ್‍ 202 (ರೈನಾ 63, ಧೋನಿ 56, ಯುವರಾಜ್‍ 27, ರಾಹುಲ್‍ 22, ಮಿಲ್ಸ್ 32/1, ಸ್ಟೋಕ್ಸ್ 32/1, ಫ್ಲಂಕಿಟ್ 22/1).

ಇಂಗ್ಲೆಂಡ್ 16.3 ಓವರ್‍ 127 (ರೂಟ್‍ 42, ಮಾರ್ಗನ್‍ 40, ರಾಯ್ 32, ಚಾಹಲ್‍ 25/5, ಬುಮ್ರಾ 14/2 ).

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top