fbpx
ಸಮಾಚಾರ

ಈ ಆಕಾಶಬುಟ್ಟಿ ನಿಮಗೆ ನೆನಪಿದ್ಯಾ??

ಇಂದಿನ ಆಧುನಿಕ ಭರಾಟೆ ಯಲ್ಲಿ ಅನೇಕ ಗ್ರಾಮೀಣ ಕಲೆ ಗಳು ಮಾಯವಾಗುತ್ತಿವೆ. ಅದರಲ್ಲಿ ಈ ಆಕಾಶ ಬುಟ್ಟಿ ಗಳನ್ನು ಹಾರಿಸುವ ಸಂಭ್ರ ಮವೂ ಒಂದು. ಆಕಾಶಬುಟ್ಟಿ ಎಂದರೆ ಎಲ್ಲಿಲ್ಲದ ಖುಷಿ ಇತ್ತು. ಆದರೆ ಇಂದಿನ ದಿನಗಳಲ್ಲಿ ಆಕಾಶಬುಟ್ಟಿ ಎಂದರೇನು ಎನ್ನುವಂತಹ ಪ್ರಶ್ನೆ ಮಕ್ಕಳಲ್ಲಿ ಬಂದಿದೆ. ಆ ಒಂದು ಆಕಾಶ ಬುಟ್ಟಿ ಯನ್ನು ತಯಾ-ರಿಸುವುದೆಂದರೆ ನಮ್ಮ ವಿಜ್ಞಾನಿಗಳು ಹೇಗೆ ಕ್ಷಿಪಣಿಗಳನ್ನು ತಯಾರಿಸುತ್ತಾರೋ ಅದೇ ರೀತಿ ಹಿಂದೆ ಮಕ್ಕಳು ಆಕಾಶಬುಟ್ಟಿ ಎಂಬ ಕ್ಷಿಪಣಿಗಳನ್ನು ತಯಾರಿಸಿ ಆಕಾಶಕ್ಕೆ ಬಿಡುತ್ತಿದ್ದರು.

Image result for akashabutti

© Google Photo Album

ಆ ದಿನಗಳಲ್ಲಿ ಹಳ್ಳಿಯ ಪ್ರತಿಯೊಂದು ಮನೆ ಗಳಲ್ಲಿ ಆಕಾಶಬುಟ್ಟಿಯನ್ನು ತಯಾರಿ ಮಾಡಿಬಿಡುವ ಒಬ್ಬ ವಿಜ್ಞಾನಿಗಳಿರುತ್ತಿದ್ದರು ಆದರೆ ಈಗ ಎಲ್ಲವೂ ಕಣ್ಮರೆ ಯಾಗಿವೆ.ತಯಾರಿಸುವ ಬಗೆಹಗುರವಾಗಿರುವ ತಂತಿಯನ್ನು ಹೆಣೆದು ಅದಕ್ಕೆ ಬಣ್ಣದ ಕಾಗದ ಅಂಟಿಸಿ ಸುಮಾರು ಎರಡು ಮೀಟರ್ ಉದ್ದಎರಡು ಮೀಟರ್ ಅಗಲ ಅಳತೆಯ ಬಣ್ಣದ ಕಾಗದದ ಆಕಾಶ ದೀಪವನ್ನು ತಯಾರಿಸುತ್ತಾರೆ. ಎಲ್ಲಾ ಕಡೆ ಮುಚ್ಚಿ ಒಂದು ಭಾಗದಲ್ಲಿ ರಂಧ್ರದ ರೀತಿಯಲ್ಲಿ ತಂತಿಯನ್ನು ಜೋಡಿಸಿ ತೆರೆದಿಡುವಂತೆ ಮಾಡಿರುತ್ತಾರೆ. ಇದರ ಎಲ್ಲಾ ಭಾರ ಸೇರಿದರೆ ಅರ್ಧ ಕಿಲೋ ಇರುತ್ತದೆ.

Image result for akashabutti

© cilentonotizie.it

ಈಗ ಇದು ಮೇಲೆ ಗಾಳಿಯಲ್ಲಿ ತೇಲಬೇಕು ಎಂದರೆ ವಾತಾವರಣದಲ್ಲಿರುವ ಗಾಳಿಗಿಂತ ಇದು ಹಗುರ ವಾಗಿರ ಬೇಕು. ಆಂದರೆ ಅರ್ಧ ಕಿಲೋಕ್ಕಿಂತ ಹೆಚ್ಚು ತೂಕವನ್ನು ಇದು ಕಳೆದುಕೊಳ್ಳಬೇಕು. ಅದಕ್ಕಾಗಿ ಈ ಆಕಾಶದೀಪದ ಮುಚ್ಚಿದ ಭಾಗ ಮೇಲೆ ಮಾಡಿ ನೆಲದಿಂದ ಒಂದು ಅಡಿ ಎತ್ತರದಲ್ಲಿ ಹಿಡಿದುಕೊಂಡು ಹುಡುಗರ ತಂಡ ನೆಲದ ಮೇಲೆ ಬೆಂಕಿಯನ್ನು ಹಾಕಿ ವಿಪರೀತ ಹೊಗೆ ಹೋಗುವ ಹಾಗೆ ಮಾಡುತ್ತಾ ಆ ಹೊಗೆಯು ಎತ್ತ ಕಡೆ ಹೋಗದಂತೆ ಒಂದು ರಟ್ಟು ತೆಗೆದುಕೊಂಡು ಡಬ್ಬದ ರೀತಿಯಲ್ಲಿಮಾಡಿಕೊಂಡು ತಡೆ ಹಿಡಿದು ನಂತರ ಆ ಆಕಾಶ ಬುಟ್ಟಿಯನ್ನು ತಂದು ರಂಧ್ರ ಮಾಡಿದ ಜಾಗದಲ್ಲಿ ಹೊಗೆ ಹೋಗುವಂತೆ ಮಾಡಿ ಹೊಗೆಯನ್ನು ತುಂಬುತ್ತಾರೆ.

ಸುಮಾರು 15 ರಿಂದ 20 ನಿಮಿಷಗಳ ಕಾಲ ಹಿಡಿದು ಆಕಾಶಬುಟ್ಟಿಯ ಒಳಗೆ ದಟ್ಟ ಹೊಗೆ ತುಂಬುತ್ತಿದ್ದಂತೆಯೇ ಆಕಾಶಬುಟ್ಟಿ ನಿಧಾನವಾಗಿ ಹಿಡಿದು ಕೊಂಡವರ ಕೈ ಯಿಂದ ಮೇಲೆಳಲು ಪ್ರಾರಂಭಿಸುತ್ತದೆ. ಆಗಾ ರಂಧ್ರಕ್ಕೆ ಕಟ್ಟಿದ ತಂತಿಗೆ ಸೀಮೆ ಎಣ್ಣೆಯಿಂದ ಅದ್ದಿದ ತಂತಿಯಿಂದ ಸುತ್ತಿದ ಬಟ್ಟೆಯನ್ನು ನಿಧಾನವಾಗಿ ಆ ರಂಧ್ರದ ತಂತಿಗೆ ಗಟ್ಟಿಯಾಗಿ ಕಟ್ಟುತ್ತಾರೆ. ತಕ್ಷಣ ಮೇಣದ ಬತ್ತಿಯಿಂದ ಅದಕ್ಕೆ ಬೆಂಕಿ ಸ್ವರ್ಶ ಮಾಡುತ್ತಾರೆ. ಆಗ ಅಲ್ಲಿ ನೆರೆದಿದ್ದ ಪಡ್ಡೆಹೈಕಳು ಕೇಕೆ ಸೀಟಿ ಹಾಕುತ್ತಾ ಈಗ ಎಲ್ಲರೂ ದೂರ ಸರಿಯಿರಿ ಎಂದು ಕೂಗುತ್ತಾ ಆಕಾಶಬುಟ್ಟಿಯನ್ನು ಬಿಟ್ಟಿದ್ದೇ ತಡ ಅದು ಮೊದಲು ನಿಧಾನವಾಗಿ ಆಗಸದಲ್ಲಿ ಮೇಲೆರತೊಡಗುತ್ತದೆ. ಆಗ ಅಲ್ಲಿ ಸೇರಿದ್ದ ಮಕ್ಕಳೆಲ್ಲಾ ನಮ್ಮ ಆಕಾಶದೀಪ ಸೆಕ್ಸಸ್…. ಎಂದು ಕುಣಿದು ಕುಪ್ಪಳಿಸುತ್ತಾ ರಾಕೆಟ್ ವಿಜ್ಞಾನಿಗಳ ಹಾಗೆ ಸಂಭ್ರಮ ಪಡುತ್ತಿದ್ದರು. ಕೆಲವೇ ಕ್ಷಣಗಳಲ್ಲಿ ಆಕಾಶಬುಟ್ಟಿ ಸುಮಾರು 500 ಅಡಿ ಮೇಲಕ್ಕೆ ಹಾರಿತು.

Image result for akashabutti

© thezingofmylife.blogspot.in

ಅದರ ಬುಡದಲ್ಲಿ ಉರಿ ಯುತ್ತಿದ್ದ ಸೀಮೆಎಣ್ಣೆ ಬಟ್ಟೆಯ ಬೆಂಕಿಯ ಉರಿ ಕ್ರಮೇಣ ಒಂದು ಚುಕ್ಕೆಯಷ್ಟು ಮಾತ್ರ ಗೋಚರಿಸುತ್ತದೆ. ಹೊಗೆ ಯಿಂದ ಅದರ ಒಳಗಿನ ಗಾಳಿ ಬಿಸಿಯಾಗಿ ಅದು ಆಕಾಶಬುಟ್ಟಿ ಅನ್ನು ಮೇಲಕ್ಕೆ ಒಯ್ಯತ್ತದೆ. ಮತ್ತೆ ಅದಕ್ಕೆ ಕೆಳಗಿನಿಂದ ಸೀಮೆ ಎಣ್ಣೆ ಬೆಂಕಿಯಿಂದ ಹೊಗೆಯ ಶಾಖ ವ್ಯವಸ್ಥೆ ಮಾಡಿರುವುದರಿಂದ ಅದು ಮೇಲೆ ಮೇಲೆ ಹೋಗುತ್ತಲೇ ಇರುತ್ತದೆ. ಯಾವಾಗ ಬೆಂಕಿ ಆರುತ್ತದೋ ಆಗ ಆಕಾಶಬುಟ್ಟಿಯ ಒಳಗಿನ ಹೊಗೆಯ ಶಾಖ ಕಡಿಮೆ ಯಾಗುತ್ತದೆ. ಆಗ ನಿಧಾನವಾಗಿ ಅದು ಕೆಳಗೆ ಬಂದು ಎಲ್ಲಿಯಾದರೂ ಬೀಳುತ್ತದೆ. ಅದಕ್ಕೂ ಮೊದಲೇ ಅದರ ಬೆಂಕಿ ಆರಿಹೋಗಿರುತ್ತದೆ. ಇಷ್ಟೆಲ್ಲಾ ಕೆಲಸವನ್ನು ಬೆಂಕಿ ನಿಯಂತ್ರಿಸುತ್ತದೆ. ಆಂದರೆ ಗಾಳಿ ಬಿಸಿಯಾದರೆ ಹಗುರವಾಗುತ್ತದೆ ಎಂಬ ವೈಜ್ಞಾನಿಕ ಸತ್ಯವನ್ನು ಆಕಾಶಬುಟ್ಟಿ ಹೇಳುತ್ತಿತ್ತು.

Image result for akashabutti

© Pintrest User: avanie

ತಯಾರಿಸಿದ ಆಕಾಶಬುಟ್ಟಿಗಳು ಕೆಲವೊಂದು ವಿಫಲತೆಯನ್ನು ಹೊಂದುತ್ತವೆ. ಇದಾವುದನ್ನು ಲೆಕ್ಕಿಸದೇ ವಿಫಲತೆಯನ್ನು ಮರೆತು ಮತ್ತೇ ಮರುದಿನ ಆಕಾಶಬುಟ್ಟಿಗಳನ್ನು ಹಾರಿ ಬಿಡುವ ಕಾರ್ಯ ಹುರುಪುನಿಂದ ಶುರು ಮಾಡುತ್ತಿದ್ದರು ಹುಡುಗರು ಆಗ. ಕೆಲವೊಮ್ಮೆ ಪೈಪೋಟಿಯ ಮೇಲೆ ಆಕಾಶಬುಟ್ಟಿಗಳನ್ನು ತಯಾರಿಸಿ ಹಾರಿಬಿಡುತ್ತಿದ್ದರು. ಮಕ್ಕಳ ಸಾಮೂಹಿಕ ಮನರಂಜನೆಗೆ ಕಾರಣವಾಗಿದ್ದ ಆಕಾಶಬುಟ್ಟಿಗಳು ಈಗ ಕಣ್ಮರೆಯಾಗುತ್ತಿವೆ. ಮಕ್ಕಳು ಈಗ ಹೋಮ್ ವರ್ಕ್‍ನಲ್ಲಿ ಮುಳುಗಿಹೋಗಿದ್ದಾರೆ. ದೊಡ್ಡವರು ಕೆÀಲಸದ ಆಭದ್ರತೆಯಲ್ಲಿ ಚಡಪಡಿಸುತ್ತಿದ್ದಾರೆ. ಇನ್ನು ಮಹಿಳೆಯರು ಧಾರಾವಾಹಿಗಳಲ್ಲಿ ಕಳೆದು ಹೋಗುತ್ತಿ ದ್ದಾರೆ. ಹೀಗಿರುವಾಗ ನಮ್ಮ ಮಕ್ಕಳಿಗೆ ಆಕಾಶ ಬುಟ್ಟಿಯ ಕಲ್ಪನೆ ಕೊಡುವವರು ಯಾರು? ನೀವೇ ಹೇಳಿ…

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top