fbpx
ಜೀವನ ಕ್ರಮ

ನೆಮ್ಮದಿಯ ಸುಖಿ ಜೀವನಕ್ಕೆ ಸುಲಭೋಪಾಯಗಳು!!!

ನಿಮ್ಮ ಮನಸ್ಸನ್ನು ಗಮನಿಸಿ. ಅದರೊಳಗೆ ಏನು ನಡೆಯುತ್ತಿದೆ? ನಿರಂತರವಾದ ರಾಗ ಮತ್ತು ದ್ವೇಷಗಳು. ಬೇಕು ಮತ್ತು ಬೇಡದೆ ಇರುವ ವಿಷಯಗಳು. “ನನಗೆ ಅದು ಬೇಕು, ನನಗೆ ಇದು ಬೇಡ”. ನಿರಂತರವಾದ ವಾಗ್ವಾದ, ಚಂಚಲತೆ, ತಿರಸ್ಕಾರ, ನಿಂದನೆ, ಉದಾಸೀನತೆ, ಖಿನ್ನತೆ. ಈ ಎಲ್ಲಾ ಚಂಚಲತೆಗಳನ್ನೂ ನೀವು ನೋಡುತ್ತಿದ್ದೀರೆ? ನಿಮ್ಮ ಮನಸ್ಸಿನಲ್ಲಿ ಈ ರೀತಿಯಾಗಿ ನಡೆಯುತ್ತಿದೆ ಎಂಬ ಅರಿವಾದರೂ ನಿಮಗಿದೆಯೆ? ಸ್ವಲ್ಪ ಕಾಲದವರೆಗೆ ಎಲ್ಲವನ್ನೂ ಎಸೆದುಬಿಡಿ. ಸುಮ್ಮನೆ ಕುಳಿತುಕೊಳ್ಳಿ. ಏನಾಗುತ್ತಿದೆ? ಅದೇ ವೈರಾಗ್ಯ, ಕೇಂದ್ರೀಕರಣ.

Image result for vairagya

ನಿಜವಾದ ಆತ್ಮೀಯತೆಯಲ್ಲಿ ವೈರಾಗ್ಯವಿದೆ. ಎಂತಹ ದೊಡ್ಡ ಆನಂದವನ್ನು ನೀವು ನಿಮ್ಮ ಬಳಿಯೇ ಹಿಡಿದಿಟ್ಟುಕೊಳ್ಳಲು ಸಾಧ್ಯ? ನೀವು ಬಹಳ ನಕ್ಕುಬಿಟ್ಟ ಮೇಲೆ ಮತ್ತು ಬಹಳ ಉದ್ರೇಕಗೊಂಡ ನಂತರ ಆ ಉದ್ರೇಕವನ್ನು ನಿಮ್ಮ ಮನಸ್ಸಿನಲ್ಲಿ ಹಿಡಿದಿಟ್ಟುಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಗಮನಿಸಿದ್ದೀರೆ? ಬಹಳ ಕಸಿವಿಸಿಯಾದಂತೆ ಆಗುತ್ತದೆ. ಆ ಉದ್ರೇಕವನ್ನು ಎಸೆದುಬಿಟ್ಟು ಸ್ವಲ್ಪ ಸಮಯ ಸುಮ್ಮನೆ ಕುಳಿತುಕೊಳ್ಳೋಣ ಎಂದೆನಿಸುತ್ತದೆ. ಇಂತಹ ಅನುಭವ ನಿಮಗೆ ಆಗಿದೆಯೆ? ಸಂತೋಷವು ವೇದನಕರ ಎಂದು ಅರಿತುಕೊಂಡ ದಿನ ನಿಮಗೆ ಜ್ಞಾನದ ಉದಯವಾಗುತ್ತದೆ. ನಿಮ್ಮ ಸಂತೋಷ ಉದ್ರೇಕ ಗೊಳಿಸುತ್ತದೆ, ಕ್ಷೋಭೆಗೊಳಿಸುತ್ತದೆ ಎಂದು ನೀವು ಗುರುತಿಸಿದ ದಿನವೇ ನಿಮ್ಮ ವೈರಾಗ್ಯ ಉದಯವಾಗತೊಡಗುತ್ತದೆ.

ಸ್ವಲ್ಪ ಶಾಂತವಾಗಿ, ಸ್ತಬ್ಧವಾಗಿ ಇರೋಣ ಎಂದನಿಸುತ್ತದೆ. ನಾವು ಆ ಸೂಕ್ಷ್ಮತೆಯನ್ನು ಕಳೆದುಕೊಂಡು ಬಿಟ್ಟಿದ್ದೇವೆ. ಆದ್ದರಿಂದಲೇ ಸಂತೋಷಕ್ಕಾಗಿ, ಏನೋ ದೊಡ್ಡದ್ದಕ್ಕಾಗಿ ಅಷ್ಟೊಂದು ಹಂಬಲವಿರುವುದು. “ಇದಕ್ಕಿಂತಲೂ ಏನೋ ಉತ್ತಮವಾದದ್ದು ನನಗೆ ದೊರಕಬೇಕು, ಏನೋ ನನಗೆ ಇನ್ನೂ ಹೆಚ್ಚು ಸಂತೋಷವನ್ನು ಕೊಡಬೇಕು.” ಇದೇ ಜ್ವರತೆ.

Image result for give

Image Credits: Chepngoror Education Foundation

ಒಂದು ಜ್ವರತೆಯಿಂದ ಇನ್ನೊಂದು ಜ್ವರತೆಗೆ ಚಲಿಸುತ್ತೇವೆ. ಸಂತೋಷದ ನೋವು ಜ್ವರತೆ ಮತ್ತು ಆ ಜ್ವರತೆಯಿಂದ ಈ ಜ್ವರತೆಗೆ ಚಲಿಸುತ್ತೀರಿ. ಇದೊಂದು ನಿರಂತರವಾದ ಹೋರಾಟ. ವೈರಾಗ್ಯವೆಂದರೆ ಸಂತೋಷ ಮತ್ತು ದುಃಖಗಳೆರಡನ್ನೂ ಮೀರಿರುವ ಒಂದು ನವಿರಾದ ಸಮತೋಲನ. ವೈರಾಗ್ಯದಲ್ಲಿ ಯಾವ ದೊಡ್ಡ ಸಂತೋಷವಾದರೂ ಬರಬಹುದು, ಅದು ನಿಮ್ಮನ್ನು ಅಲುಗಾಡಿಸುವುದಿಲ್ಲ. ಅದೇ ಸಾಕ್ಷಾತ್ಕಾರ. ನಿಮಗೆ ಸ್ವರ್ಗಗಳನ್ನೇ ನೀಡಿದರೂ ಸಹ ನಿಮ್ಮ ಸ್ಥಾನದಿಂದ ನೀವು ಒಂದು ಇಂಚೂ ಸಹ ಕದಲುವುದಿಲ್ಲ. ಅದೇ ಸಾಧನೆಯ ಅಂತಿಮ ಸ್ಥಿತಿ. ವೈರಾಗ್ಯವೇ ರಹಸ್ಯ.

ನೀವು ಪ್ರಕ್ರಿಯೆಗಳನ್ನು ಕಲಿತುಕೊಳ್ಳಬಹುದು ಮತ್ತು ಧ್ಯಾನ ಮಾಡಲು ಕಲಿತುಕೊಳ್ಳಬಹುದು. ನೀವು ಬಹಳ ವಿಷಯಗಳನ್ನು ಕಲಿತುಕೊಳ್ಳಬಹುದು. ಆದರೆ ವೈರಾಗ್ಯವನ್ನು ನೀವು ಕಲಿತುಕೊಳ್ಳಲು ಸಾಧ್ಯವಿಲ್ಲ. ಕಾಲಕ್ರಮೇಣವಾಗಿ ಅದು ನಿಮ್ಮ ಜೀವನದಲ್ಲಿ ಅರಳಲು ಮಾತ್ರ ಸಾಧ್ಯ ಅಥವಾ ನಿಮ್ಮ ಶಿಕ್ಷಕರ, ಗುರುವಿನ ಸಾನಿಧ್ಯದಲ್ಲಿ ಮಾತ್ರ ಅರಳಲು ಸಾಧ್ಯ. ಪುಸ್ತಕಗಳಿಂದ ಅದನ್ನು ಪಡೆಯಲು ಅಸಾಧ್ಯ. ಕೇವಲ ಅನುಭವ ಮಾತ್ರ ನಿಮಗೆ ಇದನ್ನು ಕಲಿಸುತ್ತದೆ. ಈ ಭೂಮಿಯಲ್ಲಿ ನೀವು ಸಾಧಿಸಬಹುದಾದಂತಹ ಅತ್ಯುನ್ನತ ಜ್ಞಾನ ಎಂದರೆ ವೈರಾಗ್ಯ. ಏನನ್ನಾದರೂ ಅಲುಗಾಡಿಸಬಹುದು, ಆದರೆ ವೈರಾಗ್ಯವನ್ನು ಅಲುಗಾಡಿಸಲು ಸಾಧ್ಯವಿಲ್ಲ. ಏನನ್ನಾದರೂ ಕೊಂಡುಕೊಳ್ಳಬಹುದು, ಆದರೆ ವೈರಾಗ್ಯವನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ.

Image Credit: Wisdom Planet

ನೀವು ವೈರಾಗಿಗಳಾಗಿದ್ದರೆ, ನೀವು ಕೇಂದ್ರೀಕೃತರಾಗಿದ್ದರೆ ನಿಮ್ಮನ್ನು ಯಾವುದೂ ಸಹ ಅಲುಗಾಡಿಸಲು ಸಾಧ್ಯವಿಲ್ಲ. ವೈರಾಗಿಗಳಾದವರು ಮಾತ್ರವೇ ನಿಜವಾದ ಧನಿಕರು. ಇಲ್ಲದಿದ್ದರೆ ನಿಮ್ಮನ್ನು ಪ್ರಲೋಭನೆಗೆ ಒಳಗಾಗಿಸಬಹುದು, ನಿಮ್ಮನ್ನು ಅಲುಗಾಡಿಸಬಹುದು. ಆದರೆ ವೈರಾಗಿಗಳಾದವರನ್ನು ಅಲುಗಾಡಿಸಲು ಸಾಧ್ಯವೇ ಇಲ್ಲ. ಒಂದು ವೇಳೆ ಯಾರಾದರೂ ನಿಮ್ಮ ಬಳಿ ಬಂದು, “ನೀನು ಈ ಸುಳ್ಳನ್ನು ಹೇಳು. ನಾನು ನಿನಗೆ ಎರಡು ಮಿಲಿಯನ್ ಡಾಲರ್‍ಗಳನ್ನು ಕೊಡುತ್ತೇನೆ” ಎಂದರೆ, ನೀವು ಏನು ಮಾಡಬಹುದು ಊಹಿಸಿ! ಅದರ ಬಗ್ಗೆ ಆಲೋಚಿಸಿ.

ನಿಮ್ಮ ಮನಸ್ಸು ನೂರಾ ಒಂದು ಸಮಜಾಯಿಷಿಗಳನ್ನು ನೀಡುತ್ತದೆ, ನೀವು ಮಾಡುವ ಎಲ್ಲದಕ್ಕೂ. “ಸರಿ, ಆದರೇನಂತೆ? ನಾನು ಇದನ್ನು ಹೇಳುತ್ತೇನೆ ಮತ್ತು ಇದು ಒಳ್ಳೆಯದ್ದಕ್ಕೂ ಆಗಿರಬಹುದು. ನನಗೆ ಸಿಕ್ಕಿಬಿಟ್ಟರೆ ನಾನು ಅದನ್ನು ಮಾನವ ಜನಾಂಗದ ಒಳಿತಿಗಾಗಿ ಉಪಯೋಗಿಸುತ್ತೇನೆ. ನನಗಾಗಿ ಏನೂ ಬೇಡ, ಆದರೆ ಇಡೀ ಜಗತ್ತಿಗೆ ನಾನು ಒಳ್ಳೆಯದನ್ನು ಮಾಡಬಹುದು.” ಉತ್ತರ ಭಾರತದ ಸಂತರಾದ ಕಬೀರರ ಮೇಲೆ ಒಂದು ಸುಳ್ಳನ್ನು ಹೇಳುವಂತೆ ಒಬ್ಬ ವೇಶ್ಯೆಯ ಬಳಿ ಬಂದು ಪೂಜಾರಿಗಳು ಪ್ರಚೋದಿಸಿದರು. ಆಕೆ ಅತೀ ಧರ್ಮಶೀಲಳಾಗಿದ್ದಳು ಮತ್ತು ಸುಳ್ಳನ್ನು ಹೇಳುತ್ತಿರಲಿಲ್ಲ. ಅವರು ಆಕೆಗೆ ಹೇಳಿದರು, “ನೀನು ಏನೂ ಮಾಡಬೇಡ. ಕಬೀರನು ಸತ್ಸಂಗ ಮಾಡುತ್ತಿದ್ದಾಗ ಅವನ ಬಳಿ ಹೋಗಿ ಅವನನ್ನು ತಬ್ಬಿಕೊ. “ಓಹ್ ಪ್ರಿಯತಮ, ನಾನು ನಿನ್ನನ್ನು ಬಹಳ ದಿವಸಗಳಿಂದ ಭೇಟಿಯಾಗಿರಲಿಲ್ಲವಲ್ಲ?” ಎಂದಷ್ಟೇ ಹೇಳು” ಎಂದು ಆಕೆಯನ್ನು ಪುಸಲಾಯಿಸಿದರು. ಎರಡು ಚಿನ್ನದ ನಾಣ್ಯಗಳಿಗಾಗಿ ಜನರು ಆಕೆಯನ್ನು ಪ್ರಲೋಭನೆಗೆ ಒಳಗಾಗಿಸಿದರು.

Image result for Indian love

Image Credits: OneFabDay

ಆಕೆಯು ಆ ರೀತಿ ಮಾಡಿದಾಗ ಕಬೀರರು, “ಓಹ್, ನಾನು ನಿನಗಾಗಿ ಕಾಯುತ್ತಿದ್ದೆ. ನಾನು ಬಹಳ ಕಾಲದಿಂದ ಇಲ್ಲೇ ಇದ್ದೆ. ನೀನು ಎಲ್ಲಿಗೆ ಹೋಗಿದ್ದೆ?” ಎಂದರು. ಇದನ್ನು ಕೇಳಿದ ಹಲವಾರು ಜನರಿಗೆ ತಮ್ಮ ಸಮತೋಲನ ಕಳೆದುಕೊಂಡಂತೆಯೇ ಅನಿಸಿತು. ಕಬೀರರು ಪ್ರತಿರಾತ್ರಿ ಪ್ರವಚನಗಳನ್ನು, ಸತ್ಸಂಗಗಳನ್ನು ನೀಡುತ್ತಿದ್ದರು. ಅವು ಅಷ್ಟು ಸುಂದರವಾಗಿದ್ದವು, ಅಷ್ಟು ಅದ್ಭುತವಾಗಿದ್ದವು. ಈ ಘಟನೆ ನಡೆದ ನಂತರ ಅನೇಕ ಜನರು ಕಬೀರರನ್ನು ತ್ಯಜಿಸಿ ಹೊರಟುಹೋದರು, ಏಕೆಂದರೆ ಅವರ ಆತ್ಮೀಯತೆಯು ಕೇವಲ ಪದಗಳಿಗೆ ಮಾತ್ರ ಸೀಮಿತವಾಗಿತ್ತು. ಅದು ಏಕಮುಖವಾದ ಆತ್ಮೀಯತೆ ಆಗಿರಲಿಲ್ಲ. ಅವರನ್ನು ತಿರುಗಿ ಬೀಳಿಸಲು ಕೇವಲ ಒಂದು ಘಟನೆಯು ಸಾಕಾಗಿತ್ತು. ಅದನ್ನು ಕಬೀರರು ಸ್ವಾಗತಿಸಿದರು. ಒಂದು ವಾರದ ನಂತರ ಆಕೆಗೆ ಸುಮ್ಮನಿರಲು ಸಾಧ್ಯವಾಗಲಿಲ್ಲ. ಆಕೆ ರಾಜನ ಬಳಿ ಹೋಗಿ ತಾನು ಮಾಡಿದ್ದನ್ನು ಒಪ್ಪಿಕೊಂಡಳು. ಆಗ ಆಕೆಯ ಇಡೀ ಜೀವನವೇ ಪರಿವರ್ತನೆಯಾಗಿಬಿಟ್ಟಿತು. ವೈರಾಗ್ಯವು ಸದಾ ಸತ್ಯವನ್ನೇ ಪ್ರಕಟಗೊಳಿಸುತ್ತದೆ. ಯಾವುದರ ಬಗ್ಗೆಯಾದರೂ ನೀವು ಸತ್ಯವನ್ನು ತಿಳಿದುಕೊಳ್ಳಬೇಕಾದ ಪಕ್ಷದಲ್ಲಿ, ಅತೀ ವೈರಾಗ್ಯದಿಂದ ಕೇಂದ್ರೀಕೃತರಾಗಿರಿ. ಅಷ್ಟೊಂದು ಕೇಂದ್ರೀಕೃತರಾಗಿರಿ. ಅದೇ ಶಕ್ತಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top