fbpx
ರಾಜಕೀಯ

ದೇಶಭಕ್ತಿಗೆ ಸ್ಫೂರ್ತಿ ವಂದೇ ಮಾತರಂ!!!

ಸ್ವಾತಂತ್ರ್ಯ ಸಂಗ್ರಾಮದಲ್ಲಿ ದೇಶಭಕ್ತರಿಗೆ ಅಸಮಾನ್ಯ ಪ್ರೇರಣೆ ಹಾಗೂ ಸ್ಫೂರ್ತಿ ಒದಗಿಸಿದ “ವಂದೇ ಮಾತರಂ’……. ಗೀತೆ ಜನ ಮಾನಸದಲ್ಲಿ ರೋಮಾಂಚನ ಮೂಡಿಸಿತ್ತು, ಉತ್ಕಟ ರಾಷ್ಟ್ರಪ್ರೇಮವನ್ನು ಹಾಡಿನ ಮೂಲಕ ಪ್ರಕಟಪಡಿಸಿ ಗಲ್ಲಿಗೇರಿದ ಕ್ರಾಂತಿಕಾರರ ಕೊನೆಯುಸಿರಿನ ಆವೇಶ ಪೂರ್ಣಗೀತೆಯ ಕುರಿತು ಮಾಹಿತಿ ಇಂತಿದೆ. ಭಾರತದ ಅಧಿಕೃತ ರಾಷ್ಟ್ರಗೀತೆ ‘ಜನ ಗಣಮನ ……..ದಂತೆ “ವಂದೇ ಮಾತರಂ ‘’ ಹಾಡಿಗೂ ಸಹ ಸಮಾನಸ್ಥಾನ ಲಭಿಸಿದೆ. ಬಂಗಾಲದ ಸರ್ ವಾಲ್ಟರ್ ಸ್ಕಾಟ್ ಎಂದು ಪ್ರಸಿದ್ಧರಾಗಿದ್ದ ಕವಿ, ಕಾದಂಬ-ರಿಕಾರ ಮತ್ತು ಪರಮ ದೇಶಭಕ್ತ ಬಂಕಿಮ್‍ಚಂದ್ರಚಟರ್ಜಿ ಅವರು ಬಂಗಾಳಿ ಭಾಷೆಯಲ್ಲಿ “ವಂದೇ ಮಾತರಂ‘’ ರಾಷ್ಟ್ರಗಾನವನ್ನು 1875ರ ಸೆಪ್ಟಂಬರಲ್ಲಿ ರಚನೆ ಮಾಡಿದರು. ಈ ಗೀತೆ ‘ಬಂಗದರ್ಶನ್‘ ಎಂಬ ಪತ್ರಿಕೆಯಲ್ಲಿ ಪ್ರಥಮ ಮುದ್ರಣ ಕಂಡಿತಾದರೂ ಪ್ರಾರಂಭದಲ್ಲಿ ಅದು ಯಾರ ಗಮನ ವನ್ನು ವಿಶೇಷವಾಗಿ ಸೆಳೆಯಲಿಲ್ಲ. ನಂತರ 1883ರಲ್ಲಿ ಅವರದೇ ಪ್ರಸಿದ್ಧ ಕಾದಂಬರಿ ‘ಆನಂದಮಠ‘ದಲ್ಲಿ ಈ ಹಾಡು ಪ್ರಕಟವಾದಾಗ ಬಂಗಾಳಿ ಜನರಷ್ಟೇ ಅಲ್ಲದೇ ಪ್ರತಿಯೊಬ್ಬ ಭಾರತೀಯನಲ್ಲಿ ರಾಷ್ಟ್ರ ಪ್ರೇಮ ಉದ್ದೀಪನಗೊಳಿಸುವ ಒಕ್ಕೊರಲ ವೀರಗಾನವಾಗಿ ಹೊರಹೊಮ್ಮಿತು. ಸ್ವಾತಂತ್ರ್ಯ ಪೂರ್ವದ ದಿನಗಳಲ್ಲಿ ರಾಷ್ಟ್ರಕ್ಕೆ ಮಾತೃರೂಪ ಕೊಟ್ಟು, ಭಾರತಮಾತೆ ಎಂಬ ಕಲ್ಪನೆ ಆಗಿನ್ನೂ ಹೊಸದು. ಬಂಕಿಮ್ ಚಂದ್ರರು ಭಾರತವನ್ನು ಸುಜಲೆ, ಸುಫಲೆ, ಸಸ್ಯಶ್ಯಾಮಲೆ, ಬಹು ಜಲಧಾರಣಿ, ಶಕ್ತಿಮಯಿ ಎಂದು ಈ ಗೀತೆಯಲ್ಲಿ ವರ್ಣಿಸಿದರು. ಈ ಗೀತೆಯ ಮೊದಲ ವೃತ್ತ ಹಾಗೂ ಅದರ ಅನುವಾದ ಇಂತಿದೆ.

Image result for india patriotic

Image Credits: Firstpost

ವಂದೇ ಮಾತರಮ್‍ ಸುಜಲಾಮ್, ಸುಫಲಾಮ್‍ಮಲಯಜ ಶೀತಲಾಮ್ ಸಸ್ಯಶ್ಯಾಮಲಾಮ್‍ ಮಾತರಮ್‍ ಶುಭ್ರಜ್ಯೋತ್ಸ್ನಾ ಪುಲಕಿತಯಾಮೀನಿಮ್‍ ಪುಲ್ಲಕುಸುಮಿತ ದ್ರುಮದಲ ಶೋಭಿನೀಮ್‍ ಸುಹಾಸಿನೀಮ್‍ ಸುಮಧುರ ಭಾಷಿಣೀಮ್‍ ಸುಖದಾಮ್ ವರದಾಮ್‍ ಮಾತರಮ್ !

ಈ ಗೀತೆಯ ಶ್ರೀ ಅರವಿಂದರ ಇಂಗ್ಲೀಷ ರೂಪಾಂತರದ ಕನ್ನಡ ಅನುವಾದ ಹೀಗಿದೆ.

ತಾಯೇ ನಿನಗೆ ವಂದನೆ, ಒಳ್ಳೆಯ ಜಲವುಳ್ಳವಳು ಒಳ್ಳೆಯ ಫಲಪುಷ್ಪವುಳ್ಳವಳು ಚಂದನದಿಂದ ತಂಪಾದವಳು, ಸಸ್ಯಗಳಿಂದ ಕಪ್ಪಾದವಳು ಇಂತಹ ತಾಯಿಗೆ ವಂದನೆಶುಭ್ರವಾದ ಬೆಳದಿಂಗಳನ್ನು ಅನುಭವಿಸಿ, ರೋಮಾಂಚನ ಹೊಂದುವಂಥ ರಾತ್ರಿಯುಳ್ಳವಳು; ಅರಳಿದ ಹೂಗಳುಳ್ಳಮರಗಳಿಂದ ಶೋಭಿಸುವವಳು;ಚೆನ್ನಾಗಿ ನಗುವಂಥ,ಒಳ್ಳೆಯ ಮಧುರವಾಗಿಮಾತನಾಡುವಂಥ ಸುಖಕೊಡುವ ವರಕೊಡುವತಾಯಿಗೆ ವಂದನೆ’’ ಪ್ರಕೃತಿಯಿಂದ ಬಂದ ಸ್ಫೂರ್ತಿಕಂಟಲಪಾಡಾದ ಶ್ರೀಮಂತ ಕುಟುಂಬದಲ್ಲಿ 27 ಅಗಷ್ಟ 1838ರಂದು ಬಂಕಿಮ್‍ಚಂದ್ರ ಚಟರ್ಜಿ ಅವರ ಜನನ. ಮೊದಲ ಸ್ವಾತಂತ್ರ್ಯ ಸಂಗ್ರಾಮದ ವೇಳೆಗೆ ಯುವ ವಿದ್ಯಾರ್ಥಿಯಾಗಿದ್ದರು. ಅಂದಿ ನಿಂದಲೇ ರಾಷ್ಟೀಯತೆಯನ್ನು ಆಳವಾಗಿ ರೂಢಿಸಿಕೊಂಡು, ಬಂಗಾಲಿ ಸಾಹಿತ್ಯದಲ್ಲಿ ಕವಿಯಾಗಿ ಪ್ರಸಿದ್ಧರಾಗಿದ್ದರು.

Related image

Image Credit: Indian Youth

1875ರ ರಜಾದಿನಗಳಲ್ಲಿ ಚಟರ್ಜಿ ಅವರು ತಮ್ಮ ಊರಾದ ಕಂಟಲಪಾಡಾಕ್ಕೆರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಇಡೀ ದಿನ ಪ್ರಯಾಣ ದೂದ್ದಕ್ಕೂ ಕಂಡ ಪ್ರಕೃ ತಿಯ ವಿಜೃಂಭಣೆ ಅವರನ್ನು ಸಮ್ಮೋಹನಗೊಳಿಸಿತು. ವಿಶಾಲ ಭೂಪ್ರದೇಶ, ಮೋಡಿ ಮಾಡುವ ಹಸಿರೆಲೆ, ಸಸ್ಯಶ್ಯಾಮಾಲೆ, ಧರೆಗೆ ಅಲಂಕೃತಗೊಂಡ ಪುಷ್ಪಗಳು, ಜುಳು ಜುಳು ಹರಿಯುವ ನದಿ-ತೊರೆಗಳು, ಸುಂದರ ಸರೋವರಗಳನ್ನು ಕಂಡು ಭಾವ ಪರವಶಗೊಂಡ ಕವಿ ಹೃದಯ ತಾಯಿ ಭಾರತ ಮಾತೆಯನ್ನು ಸೊಗಸಾದ ಅಕ್ಷರರೂಪದಲ್ಲಿ ಹೊರಹಾಕಿತ್ತು. ಅಂದು ಜನಿಸಿದ “ವಂದೇ ಮಾತರಂ’’ ಗೀತೆ ಜನಮಾನಸ ತಲುಪಲು ಏಳು ವರ್ಷಗಳೇ ಬೇಕಾಯಿತು. ಬಂಗಾಳ ವಿಭಜನೆ ಸನ್ಯಾಸಿ ಬಂಡಾಯದ( 1763-1800) ಸ್ಫೂರ್ತಿಯಿಂದ ಅವರು ರಚಿಸಿದ ಐತಿಹಾಸಿಕ ಕಾದಂಬರಿ ಆನಂದ ಮಠದಲ್ಲಿ ಅದು ಪ್ರಕಟಗೊಂಡಿತು. ತನ್ಮೂಲಕ ಪೂರ್ವ ಬಂಗಾಳ ಸ್ವಾತಂತ್ರ್ಯ ಹೋರಾಟದ ಕೇಂದ್ರಬಿಂದು ಬಾರಿಸಾಲ್‍ನಲ್ಲಿ ವಿದ್ಯುತ್ ಪ್ರವಾಹದೋಪಾದಿಯಲ್ಲಿ ಮಾರ್ದನಿಸಿತು.

ಬಂಗಾಳವನ್ನು ವಿಭಜಿಸುವ ಸೂಚನೆ ವಿರುದ್ಧ ಚಳುವಳಿ ತೀವ್ರ ಗೊಂಡಾಗ ಕಲಕತ್ತೆಯ ಬೀದಿಗಳಲ್ಲಿ ವಂದೇ ಮಾತರಂ ಘೋಷ ಮೊಳಗಿತು. ಲಾರ್ಡ್‍ಕರ್ಜನ್ ನೇತೃತ್ವದಲ್ಲಿ ಬಂಗಾಳವು ವಿಭಜನೆಯಾದಾಗ ‘ವೀರ ಗಾನ ‘ವಾಗಿ ಮೈದಾಳಿದ “ವಂದೇ ಮಾತರಂ ‘ ಬಂಗಾಳಿಗಳೆಲ್ಲರ ಪ್ರಾತಃ ಸ್ಮರಣೆಯಾಯಿತು. 1905 ಅಕ್ಟೋಬರ 16 ರಂದು ಬಂಗಾಳ ವಿಭಜನೆಯಾಯಿತು. ಬ್ರಿಟಿಷರ ಈ ಅನ್ಯಾಯವನ್ನು ಪ್ರತಿಭಟಿಸಿ ಬಂಗಾಳಿಗಳು ಈ ಗೀತೆಯನ್ನು ರಾಗವಾಗಿ ಹಾಡುತ್ತ ಮೆರವಣಿಗೆಯಲ್ಲಿ ಸಾಗಿದರು. ಅವರು ಅಂದು ವ್ಯಕ್ತಪಡಿಸಿದ ಈ ಗೀತೆಯ ಭಾವೋದ್ರೇಕ ದೇಶದಾದ್ಯಂತ ಅನುರಣಿಸಿತು. ಮೇಧಾವಿಗಳ ಸಂಗಮ 1886ರಲ್ಲಿ ಕಲ್ಕತ್ತಾದಲ್ಲಿ ಜರುಗಿದ ಭಾರತ ರಾಷ್ಟ್ರೀಯ ಕಾಂಗ್ರೆಸ್‍ನ ಮಹಾ ಧಿವೇಶನ ಈ ಗೀತೆ ಹಾಡಲ್ಪಟ್ಟ ಪ್ರಪ್ರಥ ಮ ರಾಜಕೀಯ ಸಂದರ್ಭವಾಗಿತ್ತು.

Image result for india patriotic

ಅಧಿವೇಶನ ದಲ್ಲಿದ್ದ ಜನಸಾಗರೆದುರು ರಾಷ್ಟ್ರಕವಿ ರವೀಂದ್ರನಾಥ್ ಠಾಗೋರರು ‘ವಂದೇ ಮಾತರಂ‘ ಗೀತೆಯನ್ನು ತಮ್ಮ ಇಂಪಾದ ಹಾಗೂ ಉಚ್ಚಸ್ತರದರದ ಕಂಠದಿಂದ ಸುಶ್ರಾವ್ಯವಾಗಿ ಹಾಡಿದಾಗ ನೆರೆದ ಜನ ಸ್ತೋಮದಲ್ಲಿ ವಿದ್ಯುತ್ ಸಂಚಾರವಾಗಿತ್ತು. ರಾಷ್ಟ್ರ ಪ್ರೇಮದ ಈ ಅವ್ಯಕ್ತ ಸ್ಫೂರ್ತಿ, ದೇಶಭಕ್ತಿಯ ಹಾಡಾಗಿ ಸ್ವಾತಂತ್ರ್ಯಕ್ಕಾಗಿ ಪ್ರಾಣತೆತ್ತ ಹುತಾತ್ಮರ ಕೊನೆಯುಸಿರಿನ ದನಿಯಾಗಿತ್ತು. ಈ ರಾಷ್ಟ್ರೀಯ ಗೀತೆಯನ್ನು ರಚಿಸಿದ್ದು ಬಂಕಿಮ್ ಚಂದ್ರ ಚಟರ್ಜಿ . ಅದಕ್ಕೆ ಸಂಗೀತ ಸಂಯೋಜಿಸಿ ಹಾಡಿದವರು ರವೀಂದ್ರನಾಥ್ ಠಾಗೋರರು. ಈ ಕವಿತೆಯನ್ನು ಇಂಗ್ಲೀಷಿಗೆ ಅನುವಾದಿಸಿದವರು ಶ್ರೀ ಅರವಿಂದಘೋಷರು. ಭಾರತದ ಮೂವರು ಮೇಧಾವಿಗಳನ್ನು ಒಂದೆಡೆ ಸೇರಿಸಿದ ಅಪರೂಪ ರಾಷ್ಟ್ರಗೀತೆಯಿದು… ವಂದೇ ಮಾತರಂ….

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top