fbpx
Achivers

ನವೋತ್ಥಾನದ ವಿವೇಕಾನಂದ!!!

ಸನಾತನ ಧರ್ಮದ ಭಾರತೀಯ ಸಂಸ್ಕøತಿಯ ಆರಾಧಕರಾಗಿ, ಸಂಪೂರ್ಣ ವಿಶ್ವದಲ್ಲಿ ವಿಶ್ವಮಾನವ ಸಂದೇಶವನ್ನು ನೀಡಿದ ಪ್ರತಿಭಾವಂತರದ ಸ್ವಾಮಿ ವಿವೇಕನಾಂದರು ಭಾರತ ಮಾತೆಯ ಸತ್ಪುತ್ರರಾಗಿದ್ದರು. ಭಾರತ ದೇಶದಲ್ಲಿ ಶತಶತಮಾನಗಳಿಂದ ನಡೆದು ಬಂದಿರುವ ಜೀವನ ಶೈಲಿಯನ್ನು ಹಿಂದೂ ಧರ್ಮದ ಸಾರವನ್ನು ಜಗತ್ತಿಗೆ ತಿಳಿಸಿ ಕೊಟ್ಟ ಮಹಾನುಭಾವರು ವಿವೇಕಾನಂದವರು. ಅಂತಹ ವ್ಯಕ್ತಿಯ ಜೀವನಗಾಥೆ ಇಂದಿನ ಯುವಕರಿಗೆ ಸ್ಫೂರ್ತಿದಾಯಕ. ಬಹುಮುಖಿ ವ್ಯಕ್ತಿತ್ವ. ಆಟ, ಪಾಠ, ಸಂಗೀತ ಹಾಗೂ ವಾಕ್‍ಚಾತುರ್ಯವನ್ನು ಹೊಂದಿದವರು.

ಬಿ.ಎ. ಓದುತ್ತಿರುವ ಸಮಯದಲ್ಲಿ ಬ್ರಹ್ಮ ಸಮಾಜಕ್ಕೆ ಸೇರಿದ ಮಹರ್ಷಿ ದೇವೇಂದ್ರನಾಥ ಠಾಕೂರರೊಡನೆ ಮಹಾಶಯರೇ ನೀವು ದೇವರನ್ನು ಕಂಡಿರುವಿರಾ…? ಎಂದು ಕೇಳಿದಂತೆ ಅನೇಕರನ್ನು ಇದನ್ನೇ ಪ್ರಶ್ನೆಸಿದರು. ಆದರೆ ಯಾರಿದಲೂ ಸರಿಯಾದ ಉತ್ತರ ಬರಲಿಲ್ಲ. ಕೊನೆಗೆ ದಕ್ಷಿಣೇಶ್ವರದಲ್ಲಿರುವ ಶ್ರೀರಾಮಕೃಷ್ಣರ ಬಳಿಗೆ ಬಂದು ತನ್ನ ಮನಸ್ಸಿನಲ್ಲಿನ ದೇವರ ಪ್ರಶ್ನೆಗೆ ಉತ್ತರ ಕಂಡುಕೊಂಡರು, ನಂತರ ರಾಮಕೃಷ್ಣರನ್ನೇ ತನ್ನ ಗುರುವಾಗಿಸಿಕೊಂಡ ಎಲ್ಲ ಆಧ್ಯಾತ್ಮಿಕ ಶಕ್ತಿಯನ್ನು ಅವರಿಂದ ಪಡೆದರು. ನಂತರ ನರೇಂದ್ರ ಎಂಬ ಹೆಸರನ್ನು ಸ್ವಾಮಿ ವಿವೇಕಾನಂದರಾಗಿ ಬದಲಾಯಿಸಿಕೊಂಡರು.

Image result for vivekananda

Image Credits: Culture India

ಅವರಲ್ಲಿನ ವಿಚಾರಧಾರೆಗೆ ಅಮೆರಿಕಾ ದೇಶದಲ್ಲಿ ವಿಶ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಿ ಭಾರತ ದೇಶದ ಸಂಸ್ಕøತಿ, ವೇದಾಂತ, ಉಪನಿಷತ್ತು ವಿಷಯಗಳನ್ನು ವಿಶ್ವ ಮಟ್ಟದಲ್ಲಿ ಸಾರಿದರು.ಆಧ್ಯಾತ್ಮಕತೆಯಲ್ಲಿಯೇ ಭಾರತದ ಭವಿಷ್ಯ.ಭಾರತದ ಉದ್ಧಾರ ಜನ ಸಾಮಾನ್ಯರ ಏಳಿಗೆಯನ್ನು ಅವಲಂಬಿಸಿದೆ. ಶಿಕ್ಷಣವೊಂದೇ ಭಾರತದ ಸಮಸ್ಯೆಗಳಿಗೆ ಏಕಮಾತ್ರ ಪರಿಹಾರವಾಗಿದೆ. ಸೇವೆ ಮತ್ತು ತ್ಯಾಗಗಳೆಂಬ ಅದರ ಆದರ್ಶವನ್ನು ನಮ್ಮ ಯುವ ಜನರು ಪಾಲಿಸಬೇಕು ಇದುವೇ ಭಾರತ ಮಾತೆಗೆ ಸಲ್ಲಿಸಬಹುದಾದ ಶ್ರೇಷ್ಠ ಗೌರವ.

ದೇಶದಲ್ಲಿ ಮಹಿಳೆಯರ ಅಭಿವೃದ್ಧಿ ಬಗ್ಗೆ ನಿರ್ಲಕ್ಷ್ಯ ವಹಿಸುವ ಗಂಡಸರಿಗೆ ಅಧಿಕಾರ ಕೊಟ್ಟವರು ಯಾರು, ಪುರುಷರ ಹಸ್ತಕ್ಷೇಪ ಇಲ್ಲಿ ಬೇಡ ಎಂದು ಕಠಿಣವಾಗಿ ಎಚ್ಚರಿಸುತ್ತಾರೆ. ನಮ್ಮ ದೇಶ ಇರುವುದು ಬಡ ಗುಡಿಸಿಲುಗಳಲ್ಲಿ. ನಮ್ಮ ಶ್ರೀಸಾಮಾನ್ಯ ತನ್ನ ತನವನ್ನು ಉಳಿಸಿಕೊಂಡು ತನ್ನ ಸಂಸ್ಕøತಿಗನುಗುಣವಾಗಿ ಅಭಿವೃದ್ಧಿಯಾಗಬೇಕು ಎಂದು ಎಚ್ಚರಿಕೆಯಿಂದಲೇ ಎಲ್ಲೆಡೆ ಸಂದೇಶ ಸಾರುತ್ತಿದ್ದರು.ಈ ಭಾರತವು ಜೀವಿಸಿರುವುದು ಆಧ್ಯಾತ್ಮಕೆಯಲ್ಲಿ. ರಾಜಕೀಯದಲ್ಲಲ್ಲ ಎಂಬುದನ್ನು ಸ್ವಾಮೀಜಿ ಸ್ಪಷ್ಟ ಪಡಿಸುತ್ತಾರೆ. `ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರಿಯೆಸಿ’ ಎಂದು ಅವರು ಹೇಳಿದ ನಾಡಿನಲ್ಲಿಯೇ ಅದರ ಬಗ್ಗೆ ತಾತ್ಸಾರ ಮನೋಭಾವ ತಲೆ ಎತ್ತಿರುವುದು ಅವರಿಗೆ ಸಹಿಸಲಾಗದ ನೋವುಂಟು ಮಾಡಿದೆ. ಆದರೆ ಭಾರತದ ಆಧ್ಯಾತ್ಮಕ ಶಕ್ತಿಯ ಬಗೆಗೆ ಅಪಾರ ವಿಶ್ವಾಸ ಅವರಿಗೆ. ಇಡೀ ವಿಶ್ವಕ್ಕೆ ಬೆಳಕನ್ನು ಕೊಡಬಲ್ಲ ಶಕ್ತಿ ಭಾರತಕ್ಕಿದೆ ಎಂಬುದನ್ನು ಅವರು ಮನಗಂಡಿದ್ದರು.

Image result for vivekananda

Image Credits: Cultural India

ಸ್ವಾಮಿ ವಿವೇಕಾನಂದರು ಬರಡು ವೇದಾಂತ ಬೋಧಿಸುವ ಸನ್ಯಾಸಿ ಆಗಿರಲಿಲ್ಲ. ಅಪ್ಪಟ್ಟ ವಾಸ್ತವವಾದಿ ಧರ್ಮವನ್ನು ವೈಜ್ಞಾನಿಕ ದೃಷ್ಟಿಯಿಂದ ವಿಶ್ಲೇಷಿಸಿ ಅದರಲ್ಲಿ ಸತ್ಯವನ್ನು ಕಂಡು ಕೊಂಡವರು. ಗುರಿಯನ್ನು ತಲುಪಬೇಕಾದರೆ ಏನನ್ನು ಹೇಗೆ ಮಾಡಬೇಕು ಎಂಬುದನ್ನು ಚೆನ್ನಾಗಿ ಅರಿತಿದ್ದರು. ಪ್ರತಿಯೊಬ್ಬರ ಮನೆಯ ಬಾಗಿಲಿಗೆ ಉದಾತ್ತ ವಿಚಾರಗಳನ್ನು ತಲುಪಿಸುವಂತಹ ವ್ಯವಸ್ಥೆಯೊಂದು ನಿರ್ಮಾಣ ಮಾಡುವುದು, ಹಾಗಿದ್ದಾಗ ಸ್ತ್ರೀ ಪುರುಷರು ತಮ್ಮ ತಮ್ಮ ಭವಿಷ್ಯವನ್ನು ತಾವೇ ರೂಪಿಸಿಕೊಳ್ಳ ಬಲ್ಲವರಾಗುತ್ತಾರೆ ಎಂಬುದು ಸ್ವಾಮಿಜಿ ಅವರ ಉದ್ದೇಶ. ಅವರ ಉದ್ದೇಶದಂತೆ ಭಾರತದಲ್ಲಿ ವಿಚಾರಧಾರೆಗಳು ಮನೆಯಿಂದ ಮನೆಗೆ ಸಾಗಿದಾಗಲೇ ವಿಶ್ವಮಟ್ಟದಲ್ಲಿ ಭಾರತ ದೇಶ ಬಲಿಷ್ಠ ಯುವ ರಾಷ್ಟ್ರವಾಗಿ ರೂಪಗೊಳ್ಳಲು ಸಾಧ್ಯ. ಆದ್ದರಿಂದ ಯುವಕರೇ ಏಳಿ ಎದ್ದೇಳಿ ವಿವೇಕಾನಂದ ಆಶಯವನ್ನು ಪೂರೈಸಿ….

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top