fbpx
ಕರ್ನಾಟಕ

‘ಅಸಮಾನತೆಯಿಂದ ಸಮಾನತೆಯೆಡೆಗೆ ಕರ್ನಾಟಕ’

ಐದೂವರೆ ದಶಕಗಳ ಹಿಂದೆ ಕರ್ನಾಟಕ ರಾಜ್ಯ ಅಸಮಾನತೆಯಿಂದ 20 ವಿವಿಧ ಪ್ರಾಂತ್ಯಗಳಾಗಿ ಹರಿದು ಹಂಚಿಹೋಗಿತ್ತು. ಕರ್ನಾಟಕವೆಂಬುದು ಅಸ್ತಿತ್ವದಲ್ಲೇ ಇರಲಿಲ್ಲ! ನಮ್ಮಲ್ಲಿ ಸ್ವಂತಿಕೆ ಎಂಬುದು ಇರಲಿಲ್ಲ. ನಮ್ಮ ನೆಲ ಎಂದು ಹೇಳಿಕೊಳ್ಳಲು ಮೈಸೂರು ಸಂಸ್ಥಾನ ಹೊರತುಪಡಿಸಿದರೆ ನಿರ್ದಿಷ್ಟ ಪ್ರದೇಶವೇ ಇದ್ದಿಲ್ಲ. ಉಳಿದ ಪ್ರಾಂತ್ಯಗಳ ಆಡಳಿತದಲ್ಲಿ ಕನ್ನಡ, ಕನ್ನಡಿಗರಿಗೆ ಪ್ರಾಧಾನ್ಯತೆ ಇದ್ದಿಲ್ಲ. ಅಷ್ಟೆಯಲ್ಲದೇ ಪ್ರಾದೇಶಿಕ ಪ್ರಗತಿಯಲ್ಲೂ ಅಸಮಾನತೆ ಕಾಡಿತ್ತು. ಒಟ್ಟಾರೆ ಹೇಳಬೇಕೆಂದರೆ ಕನ್ನಡಿಗರು ಪರಕೀಯರಂತೆ ಜೀವನ ನಡೆಸುವ ಅಸಹನೀಯ ಪರಿಸ್ಥಿತಿ ಇತ್ತು ಎಂದರೂ ನಂಬಲೇಬೇಕು! ಇದು ಕರ್ನಾಟಕ ಏಕೀಕರಣವಾಗಲೂ ಕಾರಣವಾಯಿತು. ಹರಿದುಹೋದ ಕರ್ನಾಟಕವನ್ನು ಒಂದು ಗೂಡಿಸಲು ನಾಯಕರು ಆಗ್ರಹಿಸತೊಡಗಿದರು. ಕರ್ನಾಟಕ ರೂಪುಗೊಳ್ಳಲು ಕಾರಣರಾದ ರಾ.ಹ.ದೇಶಪಾಂಡೆ ಹಾಗೂ ಸಮಾನ ಮನಸ್ಕರು ಒಚಿದೆಡೆ ಸೇರಿದರು. ಕನ್ನಡ ಭಾಷೆಯ ದುಸ್ಥಿತಿಯನ್ನ ದೂರಮಾಡಲು 20-7-1890ರಲ್ಲಿ ಧಾರವಾಡದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘವನ್ನು ಸ್ಥಾಪಿಸಿದರು.
ಪ್ರಾಚೀನ ಕನ್ನಡ ಕೃತಿಗಳ ಸಂಪಾದನೆ ಮತ್ತು ಪ್ರಕಟಣೆ, ಕನ್ನಡದಲ್ಲಿ ಶಿP್ಷÀಣ ಪ್ರಸಾರಕ್ಕೆ ಪ್ರೋತ್ಸಹಾ, ಕನ್ನಡದಲ್ಲಿ ಸ್ವತಂತ್ರ ಕೃತಿಗಳ ರಚನೆ, ಉತ್ತಮ ಮತ್ತು ಉಪಯುಕ್ತ ಕೃತಿಗಳ ಅನುವಾದ ಮತ್ತು ಪ್ರಕಟಣೆಗೆ ಪ್ರೋತ್ಸಹಾ, ಗ್ರಂಥ ಭಂಡಾರಗಳ ಸ್ಥಾಪನೆ ಮತ್ತು ನಿರ್ವಹಣೆಗೆ ನೆರವು ನೀಡುವುದು ಸಂಸ್ಥೆಯ ಮೂಲ ಉದ್ದೇಶವಾಗಿ. ಈ ಉದ್ದೇಶಶಗಳನ್ನು ಸಾಧಿಸುವುದರ ಜೊತೆಗೆ ಸಂಘ 1896ರಲ್ಲಿ ‘ವಾಗ್ಭೂಷಣ’ ಎಂಬ ಮಾಸಪತ್ರಿಕೆ ಆರಂಭಿಸಿತು. ಆ ಮೂಲಕ ವಿವಿಧ ಲೇಖಕರ ಪ್ರಬುದ್ಧ ಲೇಖನಗಳನ್ನು ಪ್ರಕಟಿಸಿ, ಚಿಂತನೆಗಳ ವಿನಿಮಯಕ್ಕೆ ನೆರವಾಯಿತು. ಲೇಖಕರನ್ನು ಬೆಳೆಸಿದ ಸಂಘ, ಕನ್ನಡ ಗ್ರಂಥಗಳ ಭಾಷೆಯಲ್ಲಿ ಏಕರೂಪತೆ ಇರಬೇಕೆಂಬ ಕಾರಣದಿಂದ 1907ರ ಜೂನ್ ತಿಂಗಳ ಮೊದಲ ವಾರದಲ್ಲಿ ಧಾರವಾಡದಲ್ಲಿ ಅಖಿಲ ಕರ್ನಾಟಕ ಗ್ರಂಥಕರ್ತರ ಮೊದಲ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top