ಬರ್ಲಿನ್: ಕಡ್ಡಾಯದ ಸೇನಾ ಕಾರ್ಯನಿರ್ವಹಣೆಯಲ್ಲಿ ವಿಫಲರಾದ ಕಾರಣಕ್ಕೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರ ಅಜ್ಜನನ್ನು 1990ರ ದಶಕದಲ್ಲಿ ತಾಯ್ನಾಡು ಜರ್ಮನಿಯಿಂದ ಓಡಿಸಲಾಗಿತ್ತು ಎಂದು ಜರ್ಮನಿಯ ಇತಿಹಾಸಜ್ಞರೊಬ್ಬರು ಹೇಳಿದ್ದಾರೆ.
ಡೋನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಈ ಸಮಯದಲ್ಲಿ ಇಂಥದ್ದೊಂದು ಆಶ್ಚರ್ಯಕರ ಸಂಗತಿ ಬಹಿರಂಗೊಂಡು ಚರ್ಚೆಗೆ ಗ್ರಾಸವಾಗಿದೆ.
ಅಮೆರಿಕಕ್ಕೆ ವಲಸೆ ಹೋಗಿರುವ ಫ್ರೈಡ್‍ರಿಚ್ ಟ್ರಂಪ್ ಅವರ ಜರ್ಮನಿ ಪೌರತ್ವವವನ್ನು ಹಿಂದಿರುಗಿಸಲು ಸಾಧ್ಯವಿಲ್ಲ ಮತ್ತು ಕೇವಲ 8 ವಾರಗಳಲ್ಲಿ ಅವರು ದೇಶವನ್ನು ತೊರೆಬೇಕು. ಇಲ್ಲವಾದಲ್ಲಿ ಅವರನ್ನು ಗಡೀಪಾರು ಮಾಡಲಾಗುವುದೆಂಬ 1905ರ ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂಬ ಹೇಳಿಕೆಯನ್ನು ಜರ್ಮನಿ ರೋನಾಲ್ಡ್ ಪೌಲ್ ನೀಡಿರುವುದಾಗಿ ಸಿಎನ್‍ಎನ್ ವರದಿ ಮಾಡಿದೆ.
ಅಮೆರಿಕಕ್ಕೆ ವಲಸೆ ಹೋಗುವ ಮೊದಲು ಫ್ರೈಡ್‍ರಿಚ್ ಟ್ರಂಪ್ ಸೇನೆ ನೀಡಿದ್ದ ಯಾವುದೇ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ವಿಫಲರಾಗಿದ್ದರು ಎಂಬುದನ್ನು ಪತ್ರ ಬಹಿರಂಗಪಡಿಸಿದೆ. ಅಮೆರಿಕಕ್ಕೆ ವಲಸೆ ಹೋಗುವ ಕುರಿತು ಅಧಿಕಾರಿಗಳು ಯಾವುದೇ ಮಾಹಿತಿಯನ್ನು ಫ್ರೈಡ್‍ರಿಚ್ ನೀಡಿರಲಿಲ್ಲ ಹಾಗೂ ಜರ್ಮನಿಯನ್ನು ಕಾನೂನುಬಾಹಿರವಾಗಿ ಅವರು ತೊರೆದಿದ್ದರು ಎಂದು ಪೌಲ್ ತಿಳಿಸಿದ್ದಾರೆ.
ಅಮೆರಿಕದಲ್ಲಿ ಹೋಟೆಲ್‍ಗಳು ಮತ್ತು ವಸತಿಗೃಹ ವ್ಯವಹಾರದ ಮೂಲಕ ಅದೃಷ್ಟ ಕಂಡುಕೊಂಡ ಅಮೆರಿಕದ ವಲಸಿಗ ಫ್ರೈಡ್‍ರಿಚ್ ಅವರು ಕಾಲ್ಲಸ್ಟಡ್ಟ್‍ನ ಬವರಿಯನ್ ಪಟ್ಟಣದಲ್ಲಿ ಜನಿಸಿದ್ದರು ಎಂದು ಹೇಳಿದ್ದಾರೆ.
ಈ ಕುರಿತು ಟ್ರಂಪ್ ವಲಯದಿಂದ ಈವರೆಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ ಎಂದು ಸಿಎನ್‍ಎನ್ ವರದಿ ತಿಳಿಸಿದೆ.
ಚುನಾವಣಾ ಪ್ರಚಾರದ ವೇಳೆ ಅಮೆರಿಕದಲ್ಲಿನ ವಲಸಿಗರಗಳನ್ನು ಗಡೀಪಾರು ಮಾಡುವುದಾಗಿ ಡೋನಾಲ್ಡ್ ಟ್ರಂಪ್ ಭರವಸೆ ನೀಡಿದ್ದರು. ಅಕ್ರಮ ವಲಸೆ ಕುರಿತು ಮಾತನಾಡುವ ಟ್ರಂಪ್ ಅವರು ಮೊದಲು ತಮ್ಮ ಕುಟುಂಬದ ಹಿನ್ನೆಲೆ ಬಗ್ಗೆ ತಿಳಿದುಕೊಳ್ಳಬೇಕು ಎಂದು ಪೌಲ್ ಹೇಳಿದ್ದಾರೆ.
ಕೈಸೆರಸ್ಲೌಟೆರ್ನ್‍ನಲ್ಲಿನ ಇತಿಹಾಸ ಸಂಸ್ಥೆಯ ನಿರ್ದೇಶಕರಾಗಿದ್ದ ಪೌಲ್ ಅವರು ಕಳೆದ ವರ್ಷ ಸಂಶೋಧ ನಡೆಸುತ್ತಿದ್ದ ವೇಳೆ ಡೋನೋಲ್ಡ್ ಟ್ರಂಪ್ ಈ ಪತ್ರ ದೊರೆತಿತ್ತು. ತದನಂತರ ಈ ಕುರಿತು ಸ್ಥಳೀಯ ಪತ್ರಿಕೆವೊಂದರಲ್ಲಿ ವರದಿ ಪ್ರಕಟವಾದ ಬಳಿಕ ಈ ವಿಚಾರ ಬಹಿರಂಗಗೊಂಡಿತ್ತು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
