fbpx
My Story

ವರ ಕಾವ್ಯ ಕರ್ತೃ `ವಾಲ್ಮೀಕಿ’

ವಾಲ್ಮೀಕಿಯ ಜೀವನದ ಕುರಿತಾಗಿ ಅನೇಕ ದಂತಕಥೆಗಳಿವೆ. ಅವುಗಳಲ್ಲಿ ಒಂದು ಕಥೆಯ ಪ್ರಕಾರ, ವಾಲ್ಮೀಕಿ ಋಷಿಯಾಗುವ ಮೊದಲು ರತ್ನ ಎಂಬ ಹೆಸ-ರಿನ ಒಬ್ಬ ಡಕಾಯಿತನಾಗಿದ್ದನು. ಕಾಡಿನ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರನ್ನು ದೋಚಿ ಜೀವನ ನಡೆಸುತ್ತಿದ್ದನು.

ಒಮ್ಮೆ ನಾರದ ಋಷಿಯು ರತ್ನನಿಗೆ ಎದುರಾದಾಗ, ಅವನು ನಾರದನನ್ನು ದರೋಡೆ ಮಾಡಲು ಯತ್ನಿಸಿದನು. ಆಗ ನಾರದನ ಉಪದೇಶದಿಂದ ರತ್ನನಿಗೆ ಜ್ಞಾನೋದಯವಾಯಿತೆಂದು ಹೇಳಲಾಗುತ್ತದೆ.ವಾಲ್ಮೀಕಿ ಮಹರ್ಷಿಗಳು ಪ್ರಚೇತಸ ಮುನಿಯ ಮಗ. ಹೀಗಾಗಿ ಅವರಿಗೆ ‹ಪ್ರಾಚೇತಸ’ ಎಂಬ ಹೆಸರಿದೆ. ಪರಮಾತ್ಮನನ್ನು ಕುರಿತು ಬಹಳ ವರ್ಷಗಳ ಕಾಲ ತಪಸ್ಸು ಮಾಡುತ್ತಿದ್ದಾಗ ಅವರ ಸುತ್ತಲೂ ಹುತ್ತವು ಬೆಳೆದಿತ್ತು. ದೀರ್ಘ ತಪಸ್ಸಿನ ನಂತರಜ್ಞಾನೋದಯವಾಗಿ ಹುತ್ತವನ್ನು ಭೇದಿಸಿಕೊಂಡು ಹೊರಗೆ ಬಂದಿದ್ದರಿಂದ ‹ವಾಲ್ಮೀಕಿ’ ಎಂಬ ಹೆಸರು ಬಂತು.

(ಸಂಸ್ಕೃತ ದಲ್ಲಿ ಹುತ್ತಕ್ಕೆ ವಲ್ಮೀಕ ಎಂದರ್ಥ)ರಾಮಾಯಣ ಕಾವ್ಯವಾಲ್ಮೀಕಿ ಮಹರ್ಷಿಗಳು ತಮಸಾ ನದೀ ತೀರದಲ್ಲಿ ಸಂತೋಷವಾಗಿ ಹಾರಾಡುತ್ತಿದ್ದ ಕ್ರೌಂಚಪಕ್ಷಿ ಜೋಡಿಯನ್ನು ನೋಡುತ್ತಿದ್ದಾಗ, ಬೇಡನೊಬ್ಬನು ಬಂದು ಬಾಣ ಹೂಡಿ ಗಂಡು ಹಕ್ಕಿಯನ್ನು ಕೊಂದುಬಿಡುತ್ತಾನೆ. ಅದರ ಸಂಗಾತಿ ಹೆಣ್ಣು ಹಕ್ಕಿಯು ಸಂಕಟದಿಂದ ಕೂಗಲಾರಂಭಿಸುತ್ತದೆ. ಈ ಹೃದಯವಿದ್ರಾವಕ ಸನ್ನಿವೇಶವನ್ನು ನೋಡಿ, ಕರುಣೆ, ದುಃಖ, ಕೋಪದಿಂದ ಮಹರ್ಷಿಗಳು ಬೇಡನನ್ನು ಶಪಿಸುತ್ತಾರೆ. ಆ ವೇಳೆಗೆ ಬ್ರಹ್ಮದೇವ ಮಹರ್ಷಿಗಳ ಆಶ್ರಮಕ್ಕೆ ಬಂದು ರಾಮಾಯಣ ಕಾವ್ಯ ರಚಿಸಲು ಹೇಳುತ್ತಾರೆ.

ನಾರದರು ತಮಗೆ ಸಂಗ್ರಹವಾಗಿ ಹೇಳಿದ್ದ ರಾಮನ ಕx-Éಯನ್ನು ವಾಲ್ಮೀಕಿ ಮಹರ್ಷಿಗಳು 24,000 ಶ್ಲೋಕಗಳನ್ನೊಳಗೊಂಡ ಮಹಾ ಗ್ರಂಥವಾಗಿ ಬರೆದರು.ಮುಂದೊಮ್ಮೆ ಶ್ರೀ ರಾಮನು ಅಯೋಧ್ಯೆಯ ಕೆಲವು ಸಾಮಾನ್ಯ ಜನರು ಸೀತೆಯ ಬಗೆಗೆ ಅರೋಪ ಮಾಡುತ್ತಿರುವುದನ್ನು ಗೂಢಚಾರರ ಮೂಲಕ ತಿಳಿದುಕೊಳ್ಳುತ್ತಾನೆ. ಒಂದು ವರ್ಗದ ಸಾಮಾನ್ಯ ನೊಬ್ಬನು ಸಿಟ್ಟಿನಿಂದ ಬಿಟ್ಟು ಹೋದ ಹೆಂಡತಿಯು ಮರಳಿ ಮನೆಗೆ ಬಂದಾಗ `ಬಿಟ್ಟ ಹೆಂಡತಿ ಸೇ-ರಿಸಿಕೊಳ್ಳೋಕೆ ನಾನೇನು ಆ ರಾಮನೇ?’ ಎಂಬ ಮಾತಿಗೆ ನೊಂದು ಶ್ರೀ ರಾಮನು ತುಂಬು ಗರ್ಭಿಣಿ ಸೀತೆಯನ್ನು ಪರಿತ್ಯಾಗ ಮಾಡಲು ನಿಶ್ಚಯಿಸಿ ಸೋದರ ಲಕ್ಷಣನಿಗೆ ಸೀತೆಯನ್ನು ಗೊಂಡಾರಣ್ಯದಲ್ಲಿ ಬಿಟ್ಟು ಬರುವಂತೆ ಆದೇಶಿಸುತ್ತಾನೆ.

ರಾಮನ ಆಜ್ಞೆಯಂತೆ ಲಕ್ಷಣನು ಸೀತೆಯನ್ನು ತನ್ನ ವಿವೇಕವನ್ನು ಉಪಯೋಗಿಸಿ ಕಾಡಿನಲ್ಲಿರುವ ವಾಲ್ಮೀಕಿ ಮುನಿಯ ಆಶ್ರಮದ ಹತ್ತಿರ ಬಿಟ್ಟು ಹೋಗುತ್ತಾನೆ. ಅರಣ್ಯದಲ್ಲಿ ಶೋಕ ತಪ್ತಳಾಗಿದ್ದ ಸೀತೆಯನ್ನು ವಾಲ್ಮೀಕಿ ಮಹರ್ಷಿಗಳು ಆಶ್ರಮಕ್ಕೆ ಕರೆತಂದು, ಋಷಿಪತ್ನಿಯರ ಮೂಲಕ ಆಕೆಯನ್ನು ಉಪಚರಿಸಿ, ಆದ-ರಿಸುತ್ತಾರೆ. ನವ ಮಾಸಗಳ ನಂತರ ಅಲ್ಲಿಯೇ ಲವ-ಕುಶರ ಜನನವಾಗುತ್ತದೆ. ಆ ಅವಳಿ ಮಕ್ಕಳಿಗೆ ವಾಲ್ಮೀಕಿ ಮಹರ್ಷಿಗಳೇ ಗುರುಗಳು. ರಾಮಾಯಣ ಮಹಾಕಾವ್ಯದ ಗಾಯನವನ್ನು ಲವ-ಕುಶರಿಗೆ ಮುಂದೆ ರಾಮಾಶ್ವಮೇಧದ ಕುದುರೆಯನ್ನು ಕಟ್ಟಿ ಹಾಕಿದ ಲವಕುಶರು ತಂದೆಯೆಂಬ ಅರಿವಿಲ್ಲದೆ g ರಾಮಸೇನೆಯೊಡನೆ ಸಮx-ರ್Àರಾಗಿ ಹೋರಾಡುವ ಸಂದರ್ಭದಲ್ಲಿ ಈ ಮಕ್ಕಳ ಅಸಾಧಾರಣ ಪೌರುಷವನ್ನು ಕಂಡು, ಅವರ ಹೆತ್ತವರ ಬಗ್ಗೆ ತಿಳಿಯಲು ಉತ್ಸುಕರಾಗುತ್ತಾರೆ. ಈ ಸಂದರ್ಭದಲ್ಲಿ ಮಹರ್ಷಿ ವಾಲ್ಮೀಕಿ ಲವಕುಶರ ಜನ್ಮ ವೃತ್ತಾಂತವನ್ನು, ಸೀತಾ ಮಾತೆಯ ವಿವರವನ್ನೂ ತಿಳಿಸುತ್ತಾರೆ. ವೀರ ಪುತ್ರರು ತನ್ನವರೆಂದು ತಿಳಿದ ಶ್ರೀ ರಾಮನು ತನ್ನ ತಪ್ಪಿಗೆ ಪಶ್ಚಾತ್ತಾಪಪಡುತ್ತಾನೆ. ಸತೀ ಪುತ್ರರೊಂದಿಗೆ ಸಂತೋಷದಿಂದ ಹಿಂದಿರುಗುವ ಮೂಲಕ ಕಥೆ ಸುಖಾಂತವಾಗುತ್ತದೆ. ಇಂತಹ ಅದ್ಭುತವಾದ ಕಾವ್ಯವನ್ನು ರಚಿಸಿ ಲೋಕ ವಿಖ್ಯಾತರಾದ ಮಹರ್ಷಿ ವಾಲ್ಮೀಕಿಯವರನ್ನು ಇಂದಿಗೂ ಪೂಜ್ಯ ಭಾವನೆಯೊಂದಿಗೆ ಸ್ಮರಿಸಲಾಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top