ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿಗೆ ಈಗಾಗಲೇ ಕುಡಿಯುವ ನೀರಿಗೆ ಬರ ಬಂದಿದೆ. ಬೆಂಗಳೂರಿಗೆ ನಿತ್ಯ 600 ಟಿಎಂಸಿಯಂತೆ ಪ್ರತಿ ತಿಂಗಳು 1.4 ಟಿಎಂಸಿ ನೀರು ಪೂರೈಕೆಯಾಗಬೇಕು. ಇದೀಗ ಈಗಾಗಲೇ ಮಳೆಯ ಅಭಾವ ಉಂಟಾಗಿರುವ ಕಾರಣ ನೀರಿನ ಸಮಸ್ಯೆ ನೀಗಿಸಲು ಸರ್ಕಾರ ನಾನಾ ಕಸರತ್ತು ನಡೆಸುತ್ತಿದೆ. ಇದಕ್ಕೆ ಬಂದರು ನಗರಿ ಮಂಗಳೂರಿನಲ್ಲಿ ಪ್ಲಾನ್ ರೆಡಿಯಾಗ್ತಿದೆ. ಏನಿದು ಅಂತ ಆಶ್ಚರ್ಯ ಆಗುತ್ತಿದೆನಾ..? ಕರಾವಳಿಯ ಸಮುದ್ರದ ನೀರನ್ನೇ ಬೆಂಗಳೂರಿಗರಿಗೆ ಕುಡಿಯಲು ಸರಬರಾಜು ಮಾಡುವ ಪ್ಲಾನ್ ಫಿಕ್ಸ್ ಆಗಿದೆ ಅಂತೇ… ಅದೇ ಸಮುದ್ರದ ನೀರನ್ನ ಸಿಹಿ ಮಾಡಿ ಹರಿಸುವ ಯೋಜನೆ.
ಹೌದು. ಸೌದಿ ಅರೇಬಿಯಾ, ಕುವೈತ್ ಸೇರಿದಂತೆ ಪೆಟ್ರೋಲ್ ಉತ್ಪಾದಿಸುವ ಬಹುತೇಕ ರಾಷ್ಟ್ರಗಳು ಸಮುದ್ರದ ಉಪ್ಪು ನೀರನ್ನ ಸಿಹಿ ನೀರಾಗಿಸಿ ಬಳಕೆ ಮಾಡುತ್ತಿವೆ. ಈಗಾಗಲೇ ಮುಂಬೈ, ವಿಶಾಖಪಟ್ಟಣದಲ್ಲಿ ಯೋಜನೆ ರೆಡಿಯಾಗಿದೆ. ಚೆನ್ನೈನಲ್ಲಿ ಕೂಡ ಪ್ಲಾಂಟ್ ಶುರುವಾಗಿದೆ. ಇದೇ ಮಾದರಿಯಲ್ಲಿ ಮಂಗಳೂರಿನ ತಣ್ಣೀರುಬಾವಿ ಭಾಗದಲ್ಲಿ ಪ್ಲಾಂಟ್ ನಿರ್ಮಿಸಿ ಬೆಂಗಳೂರು, ಕೋಲಾರ ಭಾಗಕ್ಕೆ ನೀರು ಹರಿಸಲು ಸರ್ಕಾರ ಚಿಂತನೆ ನಡೆಸಿದೆ.
ಈ ಅಧ್ಯಯನ ತಂಡದ ತಜ್ಞರ ಪ್ರಕಾರ, ಈ ಯೋಜನೆಯಡಿ 100 ಎಂಎಲ್‍ಡಿ ನೀರು ಉತ್ಪಾದಿಸಲು 600 ಕೋಟಿ ರೂ. ಖರ್ಚಾಗುತ್ತೆ. 18 ರಿಂದ 20 ಎಕರೆ ಭೂಮಿ ಬೇಕಾಗುತ್ತೆ. ಅಷ್ಟೇ ಅಲ್ಲ ಇದಕ್ಕೆ ಮಂಗಳೂರಿನ ಎಂಆರ್‍ಪಿಎಲ್ ಮತ್ತು ಎಂಸಿಎಫ್ ಕೈಗಾರಿಕೆಗಳು ಈ ಯೋಜನೆಗೆ ಕೈ ಜೋಡಿಸಲಿವೆ ಎಂದು ಮೂಲಗಳ ಪ್ರಕಾರ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಹೈದ್ರಾಬಾದ್‍ನ ಅಧಿಕಾರಿಗಳ ತಂಡವೂ ಬಂದರು ನಗರಿ ಮಂಗಳೂರಿಗೆ ಭೇಟಿ ಕೊಟ್ಟು ಅಧ್ಯಯನ ನಡೆಸಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
