fbpx
Achivers

ಎಷ್ಟು ಜನಕ್ಕೆ ಗೊತ್ತು ಇದರ ಬಗ್ಗೆ ??

ನಮ್ಮ ದೇಶದಲ್ಲಿ, ಒಬ್ಬ ಹೀರೋನ ಸಿನಿಮಾ ಬಿಡುಗಡೆಯಾಗುತ್ತದೆ ಎಂದರೆ ಸಾಕು ಬಟ್ಟೆಗಳನ್ನು ಹರಿದುಕೊಂಡು ಥಿಯೇಟರ್ ಮುಂದೆ ಗಲಾಟೆ ಮಾಡುತ್ತೇವೆ. ಒಬ್ಬ ರಾಜಕೀಯ ನಾಯಕನ ಹುಟ್ಟುಹಬ್ಬದಂದು ದಾನಧರ್ಮದ ಹೆಸರಿನಲ್ಲಿ ದೊಡ್ಡ ಪ್ರಚಾರವನ್ನು ಮಾಡುತ್ತೇವೆ. ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ದೇಶ ಹೆಮ್ಮೆಯ ಪಡುವಂತಹ ವಿಷಯಕ್ಕೆ ಮಾತ್ರ ತಲೆಕೆಡಿಸಿಕೊಳ್ಳುವುದಿಲ್ಲ. ನಮ್ಮ ರಕ್ಷಣೆಗಾಗಿ ಗಡಿಯಲ್ಲಿ ತನ್ನ ಪ್ರಾಣವನ್ನು ತ್ಯಾಗ ಮಾಡುತ್ತಿರುವ ಸೈನಿಕರ ಬಗ್ಗೆ ತಿಳಿದುಕೊಳ್ಳುವ ಅವಶ್ಯಕತೆ ಇಲ್ಲ. ನಿಮಗಾಗಿ ಕಷ್ಟಪಡುತ್ತಿರುವ ದೇಶದ ವಿಜ್ಞಾನಿಗಳ ಬಗ್ಗೆ ಆಸಕ್ತಿ ಇಲ್ಲ. ನಾವು ಬದಲಾಗದವರೆಗೂ ನಮ್ಮ ದೇಶ ಹೀಗೆಯೇ ಇರುತ್ತದೆ.

ಈಗ ಇವೆಲ್ಲವನ್ನು ಯಾಕೆ ಹೇಳುತ್ತಿದ್ದೇವೆ ಎಂದರೆ ಪ್ರತಿಯೊಬ್ಬ ಭಾರತೀಯ ಹೆಮ್ಮೆಪಡುವಂತಹ ದಿನ ಬರಲಿದೆ. ಇದುವರೆಗೆ ಮಾಡಿದ ಎಲ್ಲಾ ಪ್ರಯೋಗಗಳಲ್ಲಿ ಯಶಸ್ಸು ಪಡೆದಿರುವ ನಮ್ಮ ಇಸ್ರೋ ಫೆಬ್ರುವರಿ 15 ರಂದು ಪ್ರಪಂಚ ದೇಶಗಳಿಗೆ ಸವಾಲು ಹಾಕುತ್ತಾ ಒಂದೇ ಬಾರಿಗೆ ನೂರಕ್ಕೂ ಹೆಚ್ಚು ಉಪಗ್ರಹಗಳನ್ನು ಅಂತರಿಕ್ಷಕ್ಕೆ ಪ್ರಯೋಗಿಸಲಿದೆ. ಬೆಂಕಿಯನ್ನು ಉಗುಳುತ್ತಾ ಅಂತರಿಕ್ಷಕ್ಕೆ ಒಂದು ರಾಕೆಟ್ ಹಾರುವುದನ್ನು ಆಶ್ಚರ್ಯದಿಂದ ನೋಡುತ್ತವೆ. ಅಂತಹದರಲ್ಲಿ ಒಮ್ಮೆಲೇ ನೂರು ಉಪಗ್ರಹಗಳನ್ನು ಆಕಾಶಕ್ಕೆ ಕಳಿಸಿದರೆ… ಆ ಆನಂದವನ್ನು ವರ್ಣಿಸಲು ಪದಗಳು ಸಿಗುವುದಿಲ್ಲವೆನೋ.

ಮಂಗಳಯಾನ, ಚಂದ್ರಯಾನ-೧, ನಾವಿಕ್ ನಂತಹ ಪ್ರತಿಷ್ಠಿತ ಪ್ರಯೋಗಗಳನ್ನು ಯಶಸ್ವಿಯಾಗಿ ಮುಗಿಸಿರುವ ಇಸ್ರೋ ಇದೇ ಆತ್ಮವಿಶ್ವಾಸದೊಂದಿಗೆ ಮತ್ತೊಂದು ದೊಡ್ಡ ಪ್ರಯೋಗಕ್ಕೆ ಕೈ ಹಾಕಲಿದೆ. ಇದೇ ತಿಂಗಳ 15ರಂದು 104 ಉಪಗ್ರಹಗಳನ್ನು ಕಕ್ಷೆಗೆ ಕಳುಹಿಸಲಿದೆ. ಇಲ್ಲಿಯವರೆಗೂ ಇಂತಹ ದೊಡ್ಡ ಮಟ್ಟದಲ್ಲಿ ಉಪಗ್ರಹಗಳನ್ನು ಯಾವುದೇ ಪ್ರಯೋಗಿಸಿದ ಖ್ಯಾತಿ ಹಾವು ದೇಶಕ್ಕಿಲ್ಲ. ಅದು ನಮ್ಮ ಭಾರತ ದೇಶಕ್ಕೆ ಮಾತ್ರ ಸಿಗಲಿರುವ ಅಪರೂಪದ ಗೌರವ.60ನೇ ರಾಕೆಟ್ ಪ್ರಯೋಗದ ಮೂಲಕ 104 ಉಪಗ್ರಹಗಳನ್ನು PSLV ವಾಹನ ನೌಕೆಯ ಮೂಲಕ ಮೂರು ಸ್ವದೇಶಿ, 101 ವಿದೇಶಿ ಉಪಗ್ರಹಗಳನ್ನು ಕಕ್ಷೆಗೆ ಬಿಡಲಿದೆ.

2016ರಲ್ಲಿ PSLV-34 ರಾಕೆಟ್ ಮೂಲಕ 20 ಉಪಗ್ರಹಗಳನ್ನು ಒಂದೇಸಾರಿ ಕಕ್ಷೆಗೆ ಕಳುಹಿಸಿ ಯಶಸ್ಸು ಪಡೆದಿದೆ. ಈ ದಾಖಲೆಯನ್ನು ಅಳಿಸಿ ಹಾಕಲು ಬರೊಬ್ಬರಿ 83 ಉಪಗ್ರಹಗಳನ್ನು ಆಕಾಶಕ್ಕೆ ಹಾರಿಬಿಡಲು ಇಸ್ರೋ ಪ್ರಣಾಳಿಕೆ ಸಿದ್ದಪಡಿಸಿದೆ. ಇದೇ ಸಂದರ್ಭದಲ್ಲಿ ಆ ಪಟ್ಟಿಯಲ್ಲಿ ನಮ್ಮ ದೇಶದ ಉಪಗ್ರಹಗಳನ್ನು ಸೇರಿಸುವಂತೆ 20 ದೇಶಗಳು ಬೇಡಿಕೆ ಇಟ್ಟಿದ್ದರಿಂದ ಒಟ್ಟು 104 ಉಪಗ್ರಹಗಳನ್ನು ಕಳಿಸಲು ಇಸ್ರೋ ಸಿದ್ಧವಾಗಿದೆ. ಈ ಪ್ರಯೋಗ ಯಶಸ್ಸುಯಾದರೆ ಅಂತರಿಕ್ಷದಲ್ಲಿ ನಮ್ಮ ದೇಶದ ಧ್ವಜ ವಿರಾಜಮಾನವಾಗಿ ಹಾರಡಲಿದೆ. ಈ ಪ್ರಯೋಗ ಯಶಸ್ವಿಯಾಗಲೆಂದು ಬೇಡಿಕೊಳ್ಳೋಣ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top