fbpx
Achivers

ಸ್ವಾತಂತ್ರ್ಯ ಹೋರಾಟಗಾರ ಲಾಲಾ ಲಜಪತ್ ರಾಯ್-ರವರ ಸಾಧನೆ ಅಪೂರ್ವ!!!

ಬ್ರಿಟಿಷರಿಂದ ಭಾರತ ಸ್ವಾತಂತ್ರ್ಯ ಸಂಪಾದಿಸಿದ್ದು ಸುಲಭದ ಮಾತಲ್ಲ. ಭಾರತೀಯರ ಸ್ವಾತಂತ್ರ್ಯ ಹೋರಾಟ ಮರೆಯುವಂತಹದೂ ಅಲ್ಲ. ಸತ್ಯ, ಶಾಂತಿ, ಸಹನೆ, ಅಹಿಂಸೆಯಂತಹ ಮಂತ್ರಗಳು ಈ ಸಮರದ ಮೂಲ ಎನಿಸಿದರೂ ಕಾಲಕಾಲಕ್ಕೆ ಹಿಂಸಾಚಾರ ಸಂಭವಿಸಿದ್ದು ಸುಳ್ಳಲ್ಲ. ಗಾಂಧೀಜಿ, ನೆಹರು ಅವರಂತೆಯೇ ಈ ಹೋರಾಟದಲ್ಲಿ ಪಾಲ್ಗೊಂಡು ಸ್ವಾತಂತ್ರ್ಯ ತಂದುಕೊಟ್ಟವರ ಸಂಖ್ಯೆ ಬಲು ದೊಡ್ಡದು. ಇಂಥವರಲ್ಲಿ ಲಾಲ್, ಬಾಲ್, ಪಾಲ್ ಎಂಬ ಖ್ಯಾತನಾಮರೂ ಸೇರಿದ್ದನ್ನು ಮರೆಯುವಂತಿಲ್ಲ.
ಬಿಪಿಲ್ ಚಂದ್ರ ಪಾಲ್, ಬಾಲಗಂಗಾಧರ ತಿಲಕ್ ಮತ್ತು ಲಾಲಾ ಲಜಪತರಾಯ್ ಮುಂತಾದವರು ಸ್ವಾತಂತ್ರ್ಯ ಹೋರಾಟವನ್ನು ಯಶಸ್ವಿ ಹಾದಿಯಲ್ಲಿ ಮುನ್ನಡೆಸಿದ್ದು ಗಮನಾರ್ಹ. ಲಾಲಾ ಲಜಪತರಾಯ್ ಅಚರಂತೂ ಪಂಜಾಬ್ ಕೇಸರಿ ಎಂದೇ ಹೆಸರಾದವರು. ಅನ್ಯಾಯದ ವಿರುದ್ಧ ಸಿಂಹದಂತಹ ಗರ್ಜನೆ. ಹಾಗೆಯೇ ನೇರಮಾತು. ದಿಟ್ಟ ನಡೆ. ವಕೀಲ ವೃತ್ತಿ ಒಲಿದು ಬಂದರೂ ಬ್ರಿಟಿಷರ ಸಂಕೋಲೆಯಿಂದ ತಾಯಿ ಭಾರತಾಂಬೆಯನ್ನು ಬಿಡಿಸಿಕೊಳ್ಳುವ ಸಂಕಲ್ಪ ಇವರದ್ದು, ಲೇಖಕರಾಗಿ, ಹಣಕಾಸು ಸಂಸ್ಥೆಗಳನ್ನು ಕಟ್ಟಿ ಬೆಳಸಿದ ರೂವಾರಿಯೂ ಹೌದು. ಜತೆಗೆ ಅಪ್ಪಟ ಕಾಂಗ್ರೆಸ್ಸಿಗ, ಚತುರ ರಾಜಕಾರಣಿ.
ತಾಯಿ ಗುಲಾಬದೇವಿ ಆಶೀರ್ವಾದದಂತೆ ಸಮಾಜ ಸೇವೆ, ದೇಶ ಸೇವೆಗೆ ನಿಂತು ಯಶಸ್ಸು ಸಾಧಿಸಿದ ದಿಟ್ಟ ವ್ಯಕ್ತಿ-ಶಕ್ತಿ ಲಾಲಾ ಲಜಪತರಾಯ್. ಹಿಂದುತ್ವ, ಹಿಂದುಸ್ತಾನ ಎಂದರೆ ಅಪಾರ ಗೌರವ. ಭಾರತೀಯ ಜೀವನ ಶೈಲಿಯನ್ನು ತಕ್ಕ ಮಟ್ಟಿಗೆ ಸುಧಾರಿಸುವ ನಿಟ್ಟಿನಲ್ಲಿ ಯಶಸ್ಸು ಕಂಡ ಅಭಿಮಾನಿ. ಬ್ರಿಟಿಷರನ್ನು ಓಡಿಸಲೆಂದೇ ದೇಶಾಭಿಮಾನಿಗಳ ದಂಡು ಕಟ್ಟಿಕೊಂಡು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನಲ್ಲಿ ಮಿನುಗಿದ ಮಹಾಮಹಿಮ. ದಯಾನಂದ ಸರಸ್ವತಿಯವರ ಅಭಿಮಾನಿಯಾಗಿ ಹಿಂದೂ ಮಹಾಸಭಾ ಆರ್ಯ ಸಮಾಜದಂತರ ಸಂಘಟನೆಗಳಿಗೆ ದಾರಿದೀಪವಾದ ಹಿರಿಮೆ.

ವೈಸ್‍ರಾಯ್ ಲಾರ್ಡ್‍ಮಿಂಟೋ ಎದುರು ನಿಂತು ನಮ್ಮ ದೇಶ ನಮಗೆ ಬಿಡಿ ನಿಮ್ಮ ದೇಶಕ್ಕೆ ನೀವು ಹೊರಡಿ ಎಂದದ್ದೇ ತಡ. ಕೆಲಕಾಲ 1907ರಲ್ಲಿ ಮಂಡಾಲೆ ಜೈಲು ಸೇರಬೇಕಾಯಿತು. ಇವರ ಅನುಯಾಯಿಗಳಲ್ಲಿ ಹುತಾತ್ಮ ಭಗತ್ ಸಿಂಗ್ ಒಬ್ಬ.

ಮುಸ್ಲಿಮರಿಗೆ ಪ್ರತ್ಯೇಕ ಜಾಗ ಕೊಟ್ಟರೂ ಸರಿ, ಭಾರತದಲ್ಲಿ ಅವರ ಇರುವಿಕೆ ಸರಿ ಕಾಣುವುದಿಲ್ಲ ಎಂದು ಪಟ್ಟು ಹಿಡಿದಿದ್ದ ಸ್ವಾಭಿಮಾನಿ. ಈ ಮಧ್ಯ ಅಮೆರಿಕಾ ಪ್ರವಾಸ ಯೋಗ. ಬ್ರಿಟಿಷರನ್ನು ಓಡಿಸುವುದೊಂದೇ ತಮ್ಮ ಗುರಿ ಎಂದು ಅಲ್ಲಿನ ಭಾರತೀಯರಿಗೆ ಮನದಟ್ಟು ಮಾಡಿಕೊಟ್ಟ ಮೇಧಾವಿ.
ಬ್ರಿಟಿಷರ ವಿರುದ್ಧ ಅಸಹಕಾರ ಚಳವಳಿಯಲ್ಲಿ ಗುರುತರ ಪಾತ್ರ. ಭಾರತದ ರಾಜಕೀಯ ಸ್ಥಿತಿಗತಿ ಅರಿಯಲು ಬಂದಿದ್ದ ಜಾನ್ ಸೈಮನ್ ಆಯೋಗದ ಎದುರು ನಿಮ್ಮ ಸಮಿತಿಯಲ್ಲಿ ಭಾರತೀಯರ ಪ್ರತಿನಿಧ್ಯವಿಲ್ಲ. ಅಂದ ಮೇಲೆ ವರದಿ ಹೇಗೆ ಸಲ್ಲಿಸುತ್ತೀರಿ ಎಂದು ಪ್ರಶ್ನಿಸಿದ್ದಕ್ಕೆ ಲಾಠಿ ಏಟು ತಿಂದು ಸಹಿಸಿಕೊಂಡ ಮಹಾನ್ ಶಕ್ತಿ. ನನಗೆ ಬಿದ್ದ ಪೆಟ್ಟು ಬ್ರಿಟಿಷರ ಆಡಳಿತದ ಶವ ಪೆಟ್ಟಿಗೆಗೆ ಹಾಕಿದ ಅಂತಿಮ ಮೊಳೆಗಳೇ ಸರಿ ಎಂದು ಗರ್ಜಿಸಿದ ಕೇಸರಿ. ಬಲವಾಗಿ ಬಿದ್ದ ಪೆಟ್ಟಿನ ಕಾರಣದಿಂದಲೋ ಏನೋ ಮುಂದೆ ಬಹುದಿನ ಬಾಳಲಿಲ್ಲ. ಸ್ವಾತಂತ್ರ್ಯದ ಕ್ಷಣ ಅನುಭವಿಸಲೂ ಇಲ್ಲ.ಲಾಲಾ ಸಾವಿನ ಪ್ರತೀಕಾರವನ್ನು ಬ್ರಿಟಿಷರ ವಿರುದ್ಧ ತೀರಿಸಿಕೊಂಡು ಶ್ರೇಯಸ್ಸು ಭಗತ್ ಸಿಂಗ್ ಅವರದ್ದು, ಬ್ರಿಟಿಷರನ್ನು ನಮ್ಮ ನಾಡಿನಿಂದ ಓಡಿಸುವ ತಪಸ್ಸು ನಮ್ಮದು ಎಂದು ವಚನ ಕೊಟ್ಟ ನಂತರವೇ ತಾಯಿ ಗುಲಾಬದೇವಿ ಲಾಲಾ ಕೈಯಲ್ಲಿ ಕೈ ಇರಿಸಿ ಪ್ರಾಣ ಬಿಟ್ಟದ್ದು, ಮುಂದೆ ಒಂದೇ ವರ್ಷದಲ್ಲಿ 1928ರಲ್ಲಿ ಲಜಪತರಾಯ್ ವಿಧಿವಶರಾದದ್ದು ವಿಧಿಲಿಖಿತ.

ಭಾರತೀಯರು ಈ ಅಪ್ಪಟ ದೇಶಾಭಿಮಾನಿಯನ್ನು ಎಂದೂ ಮರೆಯಲಾರರು. ಅಂತೆಯೇ ಅವರ ಹೆಸರಿನಲ್ಲಿ ದೆಹಲಿಯಲ್ಲಿ ಖರಗಪುರದಲ್ಲಿ ಶಿಕ್ಷಣ ಸಂಸ್ಥೆಗಳ ಉದಯ. ರಸ್ತೆ – ಆಸ್ಪತ್ರೆಗಳ ಸ್ಥಾಪನೆ ಅಂತಹ ಪ್ರಾಥಃಸ್ಮರಣಿಯರು ಲಾಲಾ ಲಜಪತರಾಯ್.

ಇಂದಿನ ಕಾಂಗ್ರೆಸ್ಸಿಗರು ಪ್ರತಿಷ್ಠೆ, ಪ್ರತೀಕಾರ ಮರೆತು ಲಾಲಾ ಲಜಪತರಾಯ್ ಅವರನ್ನು ಮಾದರಿಯಾಗಿ ಅನುಸರಿಸಿದರೆ ಪ್ರಜೆಗಳ ಹಿತರಕ್ಷಣೆಗೆ ಮುಂದಾದರೆ ಭಾರತಾಂಬೆಗೆ ಸುಖವಾದೀತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top