fbpx
Useful Information

ಓದುತ್ತಿರುವ ಮಕ್ಕಳಿಗೆ ಜ್ಞಾಪಕಶಕ್ತಿಯನ್ನು ಹೆಚ್ಚಿಸುವ ವಿಧಾನ

ಯಾವುದಾದರೊಂದು ವಿಷಯದಲ್ಲಿ ನಿಮ್ಮ ದೃಷ್ಠಿಯನ್ನು ಕೆಂದ್ರೀಕರಿಸಲಾಗುತ್ತಿಲ್ಲವೇ? ಓದಿರುವುದು ಜ್ಞಾಪಕವಿರುವುದಿಲ್ಲವೇ? ಇಂತಹ ವಿಷಯಗಳಿಗೊಂದು ಪರಿಣಾಮಕಾರಿ ಆವಿಷ್ಕಾರವೇ ‘ಕ್ಯಾಂಡಲ್ ಟ್ರಿಕ್’.!. ಇದನ್ನು ನಿಮ್ಮ ಮಕ್ಕಳು ಸತತವಾಗಿ ಅಭ್ಯಾಸಮಾಡಿದರೆ… ನಿಮ್ಮ ಮಕ್ಕಳ ಜ್ಞಾಪಕಶಕ್ತಿಯಲ್ಲಿ ಗಣನೀಯ ಬದಲಾವಣೆ ಬರುತ್ತದೆ. ಓದುವುದರಲ್ಲಿ ಕೂಡಾ ವ್ಯತ್ಯಾಸ ಕಂಡುಬರುತ್ತದೆ.

ಬೆಳಿಗ್ಗೆ ನಿದ್ದೆಯಿಂದ ಎದ್ದಕೂಡಲೇ, ಪದ್ಮಾಸನದಲ್ಲಿ ಕುಳಿತುಕೊಂಡು, ಸ್ವಲ್ಪ ದೂರದಲ್ಲಿ ನಿಮ್ಮ ಕಣ್ಣುಗಳಿಗೆ ಸಮನಾಂತರವಾಗಿರುವಂತೆ ಒಂದು ಮೇಣದ ಬತ್ತಿಯನ್ನು ಹಚ್ಚಿಟ್ಟು ಅದರ ಜ್ವಾಲೆಯನ್ನೇ ನೋಡುತ್ತಿರಬೇಕು. ಬದಲಾಗುತ್ತಿರುವ ಜ್ವಾಲೆಯ ಬಣ್ಣ, ಜ್ವಾಲೆ ಗಾಳಿಗೆ ಕದಲುತ್ತಿರುವಾಗ ಬದಲಾಗುವ ಅದರ ಆಕಾರ ಇವೆಲ್ಲವನ್ನೂ ತದೇಕಚಿತ್ತದೀದ 5 ನಿಮಿಷಗಳಕಾಲ ನೋಡುತ್ತಲೇ ಇರಬೇಕು.

ನಂತರ ಉರಿಯುತ್ತಿರುವ ಮೇಣದ ಬತ್ತಿಯನ್ನು ಆರಿಸಿ. ಎರಡೂ ಕಣ್ಣುಗಳನ್ನು ಕೈಗಳಿಂದ ಮುಚ್ಚಿಕೊಂಡು ಈ ಹಿಂದೆ ಮೇಣದ ಬತ್ತಿ ಉರಿಯುತ್ತಿರುವುದನ್ನು ಕಲ್ಪಿಸಿಕೊಂಡು ಮನೋ ನೇತ್ರಗಳಿಂದ ನೋಡುತ್ತಿರಬೇಕು. ಹೀಗೆ ಪ್ರತೀದಿನ ನೋಡುತ್ತಾಯಿರಬೇಕು. ಮೊದಲ ದಿನ ಮೇಣದ ಬತ್ತಿಯ ಜ್ವಾಲೆಯನ್ನು 5 ನಿಮಿಷ ನೋಡಿದರೆ ಕ್ರಮೇಣ ಆ ಅವಧಿಯನ್ನು ಕಡಿಮೆಗೊಳಿಸುತ್ತಾ ಬರಬೇಕು. ಹೀಗೆ ಮಾಡುವುದರಿಂದ ಊಹಾ ಶಕ್ತಿಯೂ ಸಹ ಬೆಳೆಯುತ್ತದೆ. ನೀವು ಪ್ರಯತ್ನಿಸಿ ನಿಮ್ಮ ಅನುಭವಗಳನ್ನು ಇತರರೊಂದಿಗೆ ಹಂಚಿಕೊಳ್ಳಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top