fbpx
Useful Information

ನಾಯಿ ಅಟ್ಟಿಸಿಕೊಂಡು ಬಂದರೆ ಏನು ಮಾಡಬೇಕು

ರಸ್ತೆಯಲ್ಲಿ ನೆಡೆದಾಡುವಾಗ ನಾಯಿಗಳು ಅಟ್ಟಿಸಿಕೊಂಡು ಬಂದರೆ, ಯಾರೇ ಆಗಲಿ ಓಡಿಹೋಗುತ್ತಾರೆ. ಆದಷ್ಟು ದೂರ ಹೋಗಲು ಪ್ರಯತ್ನಿಸುತ್ತಾರೆ. ಯಾರೇ ಆಗಲಿ ಇದನ್ನೇ ಮಾಡುತ್ತಾರೆ.ಆದರೆ…. ಯಾರೂ ಹಿಂದಿರುಗಿ ನಿಲ್ಲುವ ಸಾಹಸವನ್ನು ಮಾಡಲಾರರು. ಆದರೆ, ವಾಸ್ತವವಾಗಿ ಹೇಳಬೇಕೆಂದರೆ… ನಾಯಿಗಳು ನಮ್ಮನ್ನು ಅಟ್ಟಿಸಿಕೊಂಡುಬಂದರೆ, ಓಡಿಹೋಗಬೇಕಾದ ಅಗತ್ಯವೇ ಇಲ್ಲ. ಅವು ಕಚ್ಚಿದರೆ ಹೇಗೆಂದು ಕೇಳುತ್ತೀರಾ…? ಅಲ್ಲಿವರೆಗೂ ನಾವು ಸುಮ್ಮನಿರುತ್ತೀವಾ? ಆ ನಾಯಿಗಳ ದಾರಿ ತಪ್ಪಿಸಬೇಕು. ನಮ್ಮ ಕಡೆಗೆ ಬರದಂತೆ ನೋಡಿಕೊಳ್ಳಬೇಕು. ಹೀಗೆ ಮಾಡುವುದರಿಂದ ನಾವು ಕ್ಷೇಮವಾಗಿ ತಪ್ಪಿಸಿಕೊಳ್ಳಬಹುದು.ಹಾಗೆ ತಪ್ಪಿಸಿಕೊಳ್ಳಬೇಕೆಂದರೆ…ನಾಯಿಗಳು ನಮ್ಮನ್ನು ಅಟ್ಟಿಸಿಕೊಂಡು ಬಂದಾಗ ಏನುಮಾಡಬೇಕೆಂದು ತಿಳಿಯೋಣ..

ನಾಯಿಗಳು ಅಟ್ಟಿಸಿಕೊಂಡು ಬರುವಾಗ ಎಲ್ಲರೂ ಮಾಡೋದು ಇದನ್ನೇ . ತುಂಬಾ ಭಯಪಡುವುದು. ಎಲ್ಲಿ ಕಚ್ಚಿಬಿಡುತ್ತೋ ಎಂದು ದೂರ ಓಡಿಹೋಗುವುದು. ಆದರೆ, ನಾವು ಮೊದಲಿಗೆ ಹೀಗೆ ಹೆದರುವುದನ್ನು ಬಿಡಬೇಕು. ನಾವು ಹೆಚ್ಚು ಹೆದರಿದರೆ,ನಾಯಿಗಳು ಧೈರ್ಯದಿಂದ ನಮ್ಮ ಮೇಲೇ ಮುಗಿಬೀಳಲು ಪ್ರಾರಂಭಿಸುತ್ತವೆ. ಆದುದರಿಂದ ನಾವು ಹೆದರಲೇಬಾರದು. ಆದಷ್ಟು ಧೈರ್ಯವಂತರಾಗಿರಬೆಕು. ನಾವೆನಾದರೂ ಹೆದರಿದ್ದೇವೆಂದು ನಾಯಿಗಳಿಗೆ ಗೊತ್ತಾದರೆ, ಇನ್ನು ನಮ್ಮ ಕೆಲಸ ಮುಗಿದಂತೆಯೇ. ಏನೇ ಮಾಡಿದರೂ ಪ್ರಯೋಜನವಾಗುವುದಿಲ್ಲ.

ನಾಯಿಗಳು ಅಟ್ಟಿಸಿಕೊಂಡು ಬಂದರೆ, ಶಕ್ತಿಮೀರಿ ಓಡಿಹೋಗುತ್ತೇವೆ. ಆದರೆ ಹಾಗೆ ಮಾಡಬಾರದು. ಅವುಗಳ ಮುಂದೆಯೇ ಹಾಗೇ ನಿಂತಿರಬೇಕು. ಕದಲಲೇಬಾರದು. ನಾವು ಹೀಗೆ ಮಾಡಿದೆವೆಂದರೆ, ನಮ್ಮ ಬಗ್ಗೆ ಆಸಕ್ತಿತೋರದೆ, ಒಡನೆಯೇ ನಮ್ಮಿಂದ ದೂರ ಹೋಗುತ್ತವೆ. ಆದರೆ, ಅಂತಹ ಸಮಯದಲ್ಲಿ ಸಾಧ್ಯವಾದಷ್ಟು ಸಹಜವಾಗಿಯೇ ಇರಬೇಕು. ಓಡಿಹೋಗಬರದು.

ನಾಯಿಯ ಕಣ್ಣಲ್ಲಿ ಕಣ್ಣಿಟು ನೋಡಬಾರದು. ಹಾಗೆ ನೋಡಿದರೆ, ಅವು ಇನ್ನೂ ಮುಂದೆ ಬರಲು ಪ್ರಾರಂಭಿಸುತ್ತವೆ. ನಮ್ಮನ್ನು ಹೆದರಿಸಲು ಪ್ರಯತ್ನಿಸುತ್ತವೆ. ಹಾಗಾಗಿ ನಾವು ಅಂತಹ ಯಾವುದೇ ಪ್ರಯತ್ನಗಳನ್ನು ಮಾಡಲೇಬಾರದು.

ನಾಯಿ ನಮ್ಮನ್ನು ಓಡಿಸಿಕೊಂಡು ಬಂದರೆ ಮೇಲೆ ತಿಳಿಸಿದಂತೆ ಮಾಡಬೇಕು. ಈ ನಿಟ್ಟಿನಲ್ಲಿ ಅವುಗಳ
ದಿಕ್ಕನ್ನು ಬದಲಿಸಲೂ ಪ್ರಯತ್ನಿಸಬೇಕು. ಅದು ಹೇಗೆಂದರೆ, ನಿಮ್ಮ ಬಳಿಯಿರುವ ಯವುದಾದರೊಂದು ವಸ್ತುವನ್ನು ನಾಯಿಗೆ ತೋರಿಸುತ್ತಾ ದೂರ ಬಿಸಾಡಬೇಕು. ಇದರಿಂದಾಗಿ ನಾಯಿ ಆ ವಸ್ತುವನ್ನು ಹಿಡಿಯಲು ಹೋಗುತ್ತದೆ.ಆಗ ನೀವು ತಪ್ಪಿಸಿಕೊಳ್ಳಬಹುದು.
.
ನಾಯಿಗಳು ಅಟ್ಟಿಸಿಕೊಂಡು ಬಂದರೆ, ಮೃದುವಾಗಿ ಅಥವಾ ಜೋರಾಗಿ ಹೋಗೆಂದು ಕಿರುಚಬೇಕು. ಹೀಗೆ ಮಾಡುವುದರಿಂದ ಅವು ನಮ್ಮ ಕಿರುಚುವಿಕೆಯನ್ನು ಗ್ರಹಿಸಿ ಬಾಲಮುದುಡಿಕೊಂಡು ಹೋಗುತ್ತವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top