fbpx
Achivers

ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿಮುದ್ದಣ್ಣನ ನೆನಪು ಸದಾ ಹಸಿರು…

ಕನ್ನಡ ಸಾಹಿತ್ಯದ ಮುಂಗೋಳಿ ಎಂದೇ ಹೆಸ ರಾಗಿದ್ದ ಕನ್ನಡದ ಮಹಾಕವಿ ಮುದ್ದಣ ಈ ರೀತಿಯಾಗಿ ಹೇಳಿದ್ದರು.ನೀರಿಳಿಯದ ಗಂಟಲೊಳ್ ಕಡುಬಂತುರುಕಿದಂತಾಯ್ತು, ಕನ್ನಡಂ ಕತ್ತೂರಿಯಲ್ತೆ , ಪದ್ಯಂ ವದ್ಯಂ ಗದ್ಯಂ ಹೃದ್ಯಂ , ಹೃದ್ಯಮಪ್ಪ ಗದ್ಯದೊಳೆ ಪೇಳ್ವುದು ಸಪ್ತಾಕ್ಷರಿ ಮಂತ್ರಮುದ್ದಣ ಎಂಬುದು ಕವಿಯ ಕಾವ್ಯನಾಮ. ಅವರ ನಿಜವಾದ ಹೆಸರು ಲಕ್ಷ್ಮೀನಾರಣಪ್ಪ.

ಇವರು ಹುಟ್ಟಿದ್ದು ಉಡಪಿಯ ಬಳಿಯ ’ನಂದಳಿಕೆ’ ಎಂಬ ಗ್ರಾಮದಲ್ಲಿ ೨೪ ಜನೇವರಿ ೧೮೭೦ ರಂದು.ತಂದೆ ಪಾಠಾಳಿ ತಿಮ್ಮಪ್ಪಯ್ಯ, ತಾಯಿ ಮಹಾ ಲಕ್ಷ್ಮಮ್ಮ. ನಾರಾಣಪ್ಪ ಮುದ್ದು ಮುದ್ದಾಗಿದ್ದ. ತಾಯಿ ತನ್ನ ಮಗನನ್ನು ಮುದ್ದಿನಿಂದ ಕರೆದ ’ಮುದ್ದಣ’ ಎಂಬ ಹೆಸರೇ ಮುಂದೆ ಅವರ ಕಾವ್ಯನಾಮವಾಯಿತು, ಮನೆದೇವರು ಮಹಾಲಿಂಗೇಶ್ವರ ಸ್ವಾಮಿ.

ತಂದೆ ದೇವಾಲಯಕ್ಕೆ ಪೂಜೆ ಮಾಡಲು ನಿತ್ಯವು ಹೋಗುತ್ತಿದ್ದರು. ಅವರ ಜೊತೆಗೆ ಮುದ್ದಣನೂ ಹೂಕಟ್ಟಿಕೊಡಲು ಹೋಗು ತ್ತಿದ್ದನು. ತಿಮ್ಮಪ್ಪಯ್ಯನಿಗೆ ಇಬ್ಬರು ಗಂಡು ಮಕ್ಕಳು. ಮುದ್ದಣ ಹಿರಿಯವನು. ಶಿವ ರಾಮಯ್ಯ ಚಿಕ್ಕವನು. ಕಿತ್ತು ತಿನ್ನುವ ಬಡತನ. ಪ್ರಾಥಮಿಕ ವಿದ್ಯಾಭ್ಯಾಸ ನಂದಳಿಕೆಯಲ್ಲೇ ಆಯಿತು. ಅದು ನಾಲ್ಕನೇ ಇಯತ್ತೆ ಮಾತ್ರ. ತಂದೆ ಶಾಲೆ ಬಿಡಿಸಿ ಕೂಲಿಕೆಲಸಕ್ಕ್ಕೆ ಕಳಿಸಿದ. ಅದರೆ ಮುದ್ದಣನಿಗೆ ಓದಬೇಕೆಂಬ ಹಂಬಲ. ಕಷ್ಟಪಟ್ಟು ಉಡುಪಿಗೆ ಹೋಗಿ ವಾರಾನ್ನದ ಮನೆಯೊಂದನ್ನು ಗೊತ್ತು ಮಾಡಿಕೊಂಡು ಆರನೇ ತರಗತಿಯವರೆಗೆ ಓದಿದ. ಮತ್ತೆ ಓದು ಮುಂದುವರೆಸುವುದು ಅಸಾಧ್ಯವಾದಾಗ ಪ್ರಧಾನಗುರುಗಳ ಸಲಹೆ ಯಂತೆ ಕನ್ನಡ ತರಬೇತಿ ಶಾಲೆ ಸೇರಿದ. ಅಲ್ಲಿ ವಿದ್ಯಾರ‍್ಥಿ ವೇತನ ಸಿಗುತ್ತಿದ್ದರಿಂದ ೨ ವರ್ಷಗಳ ತರಬೇತಿ ಪಡೆದು ಬಂದರು.

ಆಗ ಉಡಪಿಯ ಸರಕಾರಿ ಶಾಲೆಯಲ್ಲಿ ವ್ಯಾಯಾಮ ಶಿಕ್ಷಕನ ಹುದ್ದೆ ದೊರೆಯಿತು.ಶಾಲಾ ಗ್ರಂಥಾಲಯದಲ್ಲಿನ ಪುಸ್ತಕ ಗಳನ್ನು ಓದಲಾರಂಭಿಸಿದ ಮುದ್ದಣ ಓದುವುದರ ಜೊತೆಗೆ ಬರೆಯುವುದನ್ನೂ ಹವ್ಯಾಸ ಮಾಡಿಕೊಂಡು ೧೮೮೯ರಲ್ಲಿ ರತ್ನಾವತಿ ಕಲ್ಯಾಣ, ೧೮೯೨ ರಲ್ಲಿ ’ಕುಮಾರ ವಿಜಯ’ ಎಂಬ ಎರಡು ಯಕ್ಷಗಾನ ಪ್ರಸಂಗಗಳನ್ನು  ಬರೆದು ತಾವೇ ಮುದ್ರಿಸಿ ಪ್ರಕಟಿಸಿದರು..

ಜೊತೆಗೆ ಕೇಶಿರಾಜನ ಶಬ್ದಮಣಿದರ‍್ಪಣ, ಕಿಟ್ಟೆಲ್ ಪದಕೋಶ ಅವರಿಗೆ ಸಹಾಯಕವಾದವು. ಮುದ್ದಣನ ಬದುಕಿಗೊಂದು ತಿರುವು ತಂದು ಕೊಟ್ಟಂತ ಕೃತಿ ಅದ್ಭುತ ರಾಮಾಯಣ. ಆದರೆ ಪ್ರಕಟಿಸಲು ಮತ್ತು ಕೃತಿಗೆ ತನ್ನ ಹೆಸರು ಸೇರಿಸಲು ಹಿಂಜರಿಕೆಯಾಗಿ ಇದು ನನಗೆ ಸಿಕ್ಕಿದ ಹಸ್ತಪ್ರತಿ ಎಂದು ’ಕಾವ್ಯ ಮಂಜರಿ’ ಮಾಸ ಪತ್ರಿಕೆಯಲ್ಲಿ ಹೆಸರಿಲ್ಲದೆ ಪ್ರಕಟವಾಯಿತು. ಮುಂದೆ ರಚಿಸಿದ ಶ್ರೀರಾಮ ಪಟ್ಟಾಭಿಷೇಕ ಕೃತಿಗೆ ಮಹಾಲಕ್ಷ್ಮೀರಚಿತ ಎಂದು ತನ್ನ ತಾಯಿಯ ಹೆಸರಿನಿಂದ ಪ್ರಕಟಿಸಿದರು. ಇದಾದ ನಂತರ ’ಸುವಾಸಿನಿ’ ಪತ್ರಿಕೆಗೆ ’ಜೋಜೋ’ ಎಂಬ ಕವಿತೆ ಬರೆದು ’ಚಕ್ರಧಾರಿ’ ಅನ್ನುವ ಕಾವ್ಯ ನಾಮದಿಂದ ಪ್ರಕಟಿಸಿದರು.ಮುದ್ದಣ ಕೆಲವು ಕಾಲ ಉಡುಪಿಯ ಕ್ರಿಶ್ಚಿಯನ್ ಶಾಲೆಯಲ್ಲಿ ಕನ್ನಡ ಅಧ್ಯಾಪಕ ನಾಗಿ ಕೆಲಸ ಮಾಡಿದರು. ನಂತರ ಅಪ್ಪ-ಅಮ್ಮ ಮುದ್ದಣನಿಗೆ ಶಿವಮೊಗ್ಗದ ಹತ್ತಿ ರದ ’ಕಾಗೆಕೋಡಮಗ್ಗಿ’ ಗ್ರಾಮದ ಕನ್ಯೆ ಕಮಲಳನ್ನು ತಂದು ಮದುವೆ ಮಾಡಿದರು. ಕಮಲ ಹೆಚ್ಚು ಓದಿದವಳಲ್ಲ.

ಕೆಲವೇ ದಿನಗಳಲ್ಲಿ ಎಲ್ಲರ ಪ್ರೀತಿಗೆ ಪಾತ್ರಳಾಗಿ ಅಚ್ಚು ಮೆಚ್ಚಿನವಳಾದಳು. ಈ ಸಮಯದಲ್ಲಿ ಮುದ್ದಣ ’ರಾಮಾಶ್ವಮೇಧ’ ಕೃತಿಯನ್ನು ರಚಿಸಿದರು. ಅದನ್ನು ’ಕರ್ನಾಟಕ ಕಾವ್ಯ ಕಲಾನಿಧಿ’ ಪತ್ರಿಕೆಗೆ ಕಳಿಸಿ ಪ್ರಕಟಿಸಿದನು.ಮುದ್ದಣನಿಗೆ ಒಂದು ಮಗುವಾಯ್ತು. ಆ ಮಗುವಿನ ಆಟ ಅವರ ಬಡತನ ಮೆರೆಸಿತು. ಆದರೆ ವಿಧಿಯ ಆಟ ಆರಂಭವಾಗಿತ್ತು. ಕೆಮ್ಮು ಶುರುವಾಯಿತು.

ಅದು ಹಾಗೇ ಮುಂದುವರೆದು ಕ್ಷಯರೋಗ ಅಂತ ತಿಳಿಯಿತು. ಈಗ ಮುದ್ದಣ ಯೋಚಿಸಿ ನನ್ನ ಕಾಯಿಲೆ ನನ್ನ ಹೆಂಡತಿ ಮಗನಿಗೆ ಬರಬಾರದೆಂದು ಏನೋ ನೆಪ ಹೇಳಿ ಹೆಂಡತಿ ಕಮಲಾಳನ್ನು ಹಾಗೂ ಮಗು ರಾಧಾಕೃಷ್ಣನನ್ನೂ ಹೆಂಡತಿಯ ತವರಿಗೆ ಕಳಿಸಿದರು. ಇತ್ತ ರೋಗ ಉಲ್ಬಣ ವಾಯಿತು. ಚಿಕಿತ್ಸೆಗೂ ಹಣ ಇಲ್ಲದೇ ಪರ ದಾಡಿ ಕೆಮ್ಮಿಕೆಮ್ಮಿ ಕಾರಿಕೊಂಡು ತನ್ನ ಮೂವತ್ತೆರಡನೇ ವಯಸ್ಸಿಗೆ ಅಂದರೆ ೧೯೦೧ ಫೆಬ್ರುವರಿ ೧೬ ರಂದು ಮರಳಿಬಾರದ ಲೋಕಕ್ಕೆ ಹೋದರು.

ಮೊದಲೇ ಹೇಳಿ ದಂತೆ ಮುದ್ದಣ ರಚಿಸಿದ ಕೃತಿಗಳು ರಾಮಾಶ್ವಮೇಧ, ಅದ್ಭುತ ರಾಮಾಯಣ, ಶ್ರೀ ರಾಮ ಪಟ್ಟಾಭಿಷೇಕ ಎಂಬ ಷಟ್ಪದಿ ಕಾವ್ಯ, ಭಗವದ್ಗೀತೆ ಹಾಗೂ ರಾಮಾಯಣಗಳ ಕನ್ನಡ ಅನುವಾದ, ಕಾಮಶಾಸ್ತ್ರವನ್ನು ಕುರಿತ ಗ್ರಂಥ ಮತ್ತು ಗೋದಾವರಿ ಎಂಬ ಕಾಲ್ಪನಿಕ ಕಾದಂಬರಿ ಹೃದ್ಯಮಪ್ಪ ಗದ್ಯದಲ್ಲಿ ಅಂದರೆ ಪದ್ಯದ ಗೋಜಲು ಇಲ್ಲದ ಹೃದಯಕ್ಕೆ ಗದ್ಯದಲ್ಲಿ ಕಾವ್ಯ ರಚನೆ ಮಾಡುತ್ತೇನೆ ಎಂದು ಕರಿ ಮಣಿಯ ಸರದೋಳ್ ಚೆಂಬವಳಮಂ ಕೋದಂತೆ ಅಲ್ಲಲ್ಲಿ ಸಂಸ್ಕೃತ ಪದಗಳನ್ನೂ ಬಳಸಿಕೊಂಡು ಕಾವ್ಯ ರಚನೆ ಮಾಡಿದ್ದಾರೆ.

ಮುದ್ದಣ ನವಿರಾದ ಹಾಸ್ಯ ಬೆರೆತ ನೂತನ ಶೈಲಿಯಲ್ಲಿ ತನ್ನ ಮಡದಿ ಮನೋರಮೆಗೆ ಕಥೆಹೇಳುವ ವೈಖರಿ ಎಂಥವರ ಮನಸ್ಸನ್ನಾದರೂ ಆಕರ್ಷಿಸುತ್ತದೆ. ಮುದ್ದಣನ ಪತ್ನಿಯ ಹೆಸರು ಕಮಲಾ ಎಂದಿದ್ದರೂ ಮುದ್ದಣ ಪ್ರೀತಿಯ ಮಡದಿಗೆ ಮನೋರಮಾ ಎಂದೇ ಮುದ್ದಿನಿಂದ ಕರೆಯುತ್ತಿದ್ದನು.ಮುದ್ದಣನ ನೆನಪು ಸದಾಹಸಿರಾಗಿರ ಬೇಕೆಂಬ ಬಯಕೆಯಿಂದ ಅವರ ಅಭಿ ಮಾನಿಗಳು ನಂದಳಿಕೆಯಲ್ಲಿ ಮುದ್ದಣ ಸ್ಮಾರಕ ರೈತಸಂಘ, ಮುದ್ದಣ ಸ್ಮಾರಕ ಮಿತ್ರಮಂಡಳಿ ಸ್ಥಾಪಿಸಿದರು. ಇವರ ಕುರಿತು ಮುದ್ದಣಾಭಿನಂದನಾ ಎಂಬ ಅಭಿನಂದನಾ ಗ್ರಂಥವನ್ನು ಪ್ರಕಟಿಸಿದರು. ಮುದ್ದಣ ನಮ್ಮನ್ನು ಅಗಲಿ ಹೋಗಿ ೧೧೬ ವರ್ಷ ಕಳೆದರೂ ಇಂದಿಗೂ ಕನ್ನಡ ಸಾರ ಸ್ವತ ಲೋಕದಲ್ಲಿ ಪ್ರಸ್ತುvಪ್ರಸ್ತುತನಾಗಿದ್ದಾನೆ, ಆತನ ನೆನಪು ಸದಾಹಸಿರು!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top