ಈಗಿನ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹಿಲಿ ಬಗ್ಗೆ ಎಲ್ಲ ಕಡೆ ಮಾತು, ತಂಡದ ಈಗಿನ ಸ್ಥಾನ ಮಾನಕ್ಕೆ ಕಾರಣವಾಗಿರುವ ಮುಖ್ಯ ತರಬೇತುದಾರ ,ಮಾಜಿ ಟೆಸ್ಟ್ ನಾಯಕ, ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆಗೂ ಶ್ಲಾಗನೆಯ ಭರಪೂರ . ಇವರಿಬ್ಬರ ಶ್ರಮ ಹಾಗು ವೈಖರಿಯನ್ನು ಮಾತಿ ನಲ್ಲಿ ಬಣ್ಣಿಸಲು ಅಸಾಧ್ಯ . ಇವರಿಬ್ಬರ ಶ್ರಮಕ್ಕೆ ಸಿಕ್ಕಿರುವ ಪ್ರೋತ್ಸಾಹ , ಶ್ಲಾಘನೆ , ಫಲಿತಂಶವನ್ನು ನೋಡಿದರೆ ಖುಷಿಯಾಗುತ್ತದೆ.

Source: The Indian Express
ಆದರೆ ಇದೆಲ್ಲದರ ಮಧ್ಯೆ ಎಲ್ಲೋ ಒಂದು ಕಡೆ ರಾಹುಲ್ ದ್ರಾವಿಡ್ರವರು ಮತ್ತೆ ಎಲೆ ಮರೆಯ ಕಾಯಿಯಾಗೆ ಉಳಿದಿದ್ದಾರಲ್ಲ ಎಂಬ ಚಿಕ್ಕ ಬೇಸರ. ಆದರೂ ಅವರೆಂದು ತೆರೆಯ ಮುಂದೆ ಬರುವ ಪ್ರಯತ್ನಕ್ಕೆ ಮುಂದಾಗಲಿಲ್ಲ. ಅವರ ಕರ್ತವ್ಯವನ್ನು , ಭಾರತ ‘ಎ’ ತಂಡದ ತರಬೇತುದಾರನ ಜವಾಬ್ದಾರಿಯನ್ನು , ಭಾರತ ತಂಡದ ಭವಿಷ್ಯದ ನಿರ್ಮಾಣವನ್ನು ತೆರೆಯ ಹಿಂದೆಯೇ ಬಹಳ ಶ್ರದ್ದೆಯಿಂದ ಮಾಡುತ್ತಿದ್ದರೆ .
ಜನರೆಲ್ಲಾ ಒಮ್ಮತದಿಂದ ೨೦೧೫ ರಲ್ಲಿ ರಾಹುಲ್ ದ್ರಾವಿಡ್ ರವರೇ ಭಾರತ ತಂಡದ ತರಬೇತುದಾರರಾಗಬೇಕು ಅಂದಾಗಲೂ ಸಹ ಅವರು ಭಾರತ ‘ಎ’ ತಂಡದ ತರಬೇತುದಾರರಾಗಲು ಬಯಸಿದರು. ಭಾರತದ ಭವಿಷ್ಯದ ನಿರ್ಮಾಣದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಅದಾಗಿ ಈಗ ಒಂದೂವರೆ ವರ್ಷವಾಗಿದೆ , ಅವರು ಆ ದಿನ ತೆಗೆದುಕೊಂಡ ನಿರ್ಧರದ ಫಲವು ಈಗಾಗಲೇ ನಮ್ಮ ಮುಂದಿದೆ. ಚೇತೇಶ್ವರ್ ಪೂಜಾರ ಹಾರ್ದಿಕ್ ಪಾಂಡ್ಯ ಜಯಂತ್ ಯಾದವ್ ಕರುಣ್ ನಾಯರ್. ಅದರಲ್ಲೂ ಜಯಂತ್ ಯಾದವ್ ಹಾಗು ಕರುಣ್ ನಾಯರ್ , ದ್ರಾವಿಡ್ ಗರಡಿಯಲ್ಲೇ ಪಳಗಿದ್ದವರು. ಅವರಲ್ಲಿ ಪ್ರತಿಯೊಬ್ಬರ ಬಾಯಲ್ಲೂ ಬರುವ ಹೆಸರು ರಾಹುಲ್ ದ್ರಾವಿಡ್. ಆಗ ಬ್ಯಾಟ್ಸಮನ್ ಆಗಿರಬಹುದು ಈಗ ತರಬೇತುದಾರನಾಗಿರಬಹುದು , ಆದರೆ ಈ ದಂತಕಥೆಯು ಭಾರತ ತಂಡದ ಬೆನ್ನೆಲುಬಾಗೆ ಉಳಿದಿದ್ದಾರೆ
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
