fbpx
Travel

ಜಾಸ್ತಿ ಜನಕ್ಕೆ ಗೊತ್ತಿರದ ಈ ಎರಡು ಜಲಪಾತಗಳಿಗೆ ನೀವು ಭೇಟಿ ನೀಡಲೇಬೇಕು!!!

ಉತ್ತರ ಕನ್ನಡ ಜಿಲ್ಲೆಯಾದ್ಯಂತ ಇರುವ ಜಲಪಾತಗಳು ಒಂದೊಂದು ಒಂದೊಂದು ಬಗೆಯವು. ಪ್ರತಿ ಜಲಪಾತಗಳು ತನ್ನ ಜಲ ಸೌಂದರ್ಯದಿಂದ ನೋಡುಗರ ಕಣ್ಮನ ಸೆಳೆ ಯುತ್ತದೆ. ಎಲ್ಲ ಜಲಪಾತವೂ ವಿಶಿಷ್ಟತೆಗಳ ಆಗರವಾಗಿರುವುದು ವಿಶೇಷ.ಆ ಪೈಕಿ ಮಾವಿನಗುಂಡಿ ಜಲಪಾತ ಬಲು ವಿಶಿಷ್ಟ. ಇದು ಮಳೆಗಾಲದ ಜಲಪಾತ. ಜೋಗ ಜಲಪಾತದಿಂದ ಕೇವಲ ನಾಲ್ಕು ಕಿಮಿ ದೂರ ಇರುವ ಈ ಜಲಪಾತ ಅಷ್ಟೇನೂ ಮುನ್ನಲೆಗೆ ಬಂದಿಲ್ಲ. ಸಿದ್ದಾಪುರ ತಾಲೂಕಿನ ಗಡಿಯಲ್ಲಿರುವ ಈ ಜಲಪಾತವು ಮೂವತ್ತು ಅಡಿ ಎತ್ತರದಿಂದ ಧುಮ್ಮಿಕ್ಕುತ್ತದೆ. ಬೆಟ್ಟದಿಂದ ಹರಿದು ಬರುವ ನೀರು ಸಣ್ಣ ಹಳ್ಳದ ರೂಪ ತಾಳಿ ಗುಡ್ಡದಿಂದ ಕೆಳಕ್ಕೆ ಧುಮ್ಮಿಕ್ಕುತ್ತದೆ. ರಸ್ತೆಯ ಮೇಲಿಂದಲೇ ಕಾಣ ಸಿಗುವ ಇದರ ನೋಟ ಆಪ್ಯಾಯಮಾನ. ಹತ್ತಿರ ಹೋಗಿ ಮೈಕೈ ತೋಯಿಸಿಕೊಂಡು ಜಲಪಾದಗುಂಡಿಯಲ್ಲಿ ಮನಸ್ವಿ ಆಟವಾಡುವ ಆಸೆಯಿದ್ದರೆ ಅದಕ್ಕೆ ಮಾವಿನಗುಂಡಿ ಜಲಪಾತ ಪ್ರಶಸ್ತ ತಾಣ.

ವಿಭೂತಿ ಫಾಲ್ಸ: ಅಂಕೋಲಾ ತಾಲೂಕಿನ ಈ ವಿಭೂತಿ ಫಾಲ್ಸ ತಣ್ಣನೆಯ ನೀರಿನಿಂದಲೇ ಜನ ರನ್ನು ಸೆಳೆಯುತ್ತಿದೆ. ದಟ್ಟವಾದ ಕಾನನದ ನಡುವೆ ಇರುವ ಈ ಜಲಪಾತದ ನೀರು ಹಿಮ ದಷ್ಟು ತಂಪು. ಸೂರ್ಯನ ಬಿಸಿಲೇ ತಾಗದಂತಹ ನಿತ್ಯಹ-ರಿದ್ವರ್ಣ ಕಾಡಿನಲ್ಲಿ ಅಡಗಿಕೊಂಡಿರುವ ವಿಭೂತಿ ಫಾಲ್ಸ ಚನಗಾರ ಹಳ್ಳದಿಂದ ನಿರ್ಮಾಣವಾಗಿದ್ದು ಇದು ನಂತರ ಗಂಗಾವಳಿ ನದಿಯನ್ನು ಸೇರುತ್ತದೆ. ಮೂವತ್ತು ಅಡಿ ಎತ್ತರದಿಂದ ವಿಭೂತಿ ಚೆಲ್ಲಿದಂತೆ ಕಾಣುವ ಈ ಜಲಪಾತಕ್ಕೆ ಈ ಹೆಸರು ಅನ್ವರ್ಥಕ ವಾದದ್ದು. ಪುರಾಣದಲ್ಲಿ ಕೂಡ ಈ ವಿಭೂತಿ ಎನ್ನುವ ಹೆಸರಿಗೆ ಅರ್ಥವಿದೆ. ಸ್ಥಳಿಯ ಐತಿಹ್ಯದ ಪ್ರಕಾರ ಬಸ್ಮಾಸುರ ಮೋಹಿನಿಯ ಕಥೆ ಈ ಸ್ಥಳದೊಂದಿಗೆ ತಳಕು ಹಾಕಿಕೊಂಡಿದೆ. ಬಸ್ಮಾಸುರನನ್ನು ಕೊಲ್ಲಲೆಂದೇ ವಿಷ್ಣುವು ಮೋಹಿನಿಯ ರೂಪ ಧರಿಸಿ ಬರು ತ್ತಾನಂತೆ. ಅದನ್ನು ಕಂಡು ಸ್ವತಃ ಶಿವನೇ ಮೋಹಿಸುತ್ತನಂತೆ. ಆಗ ಭಸ್ಮಾಸುರನಿಗೆ ಎಲ್ಲಿಲ್ಲದ ಕೋಪ ಬಂದು ಶಿವನನ್ನು ಅಟ್ಟಾಡಿಸಿಕೊಂಡು ಹೋಗುತ್ತಿರುವಾಗ ಶಿವ ಬೈರವೇಶ್ವರನಾಗಿ ಆ ಗುಹೆಯಲ್ಲಿ ನಿಲ್ಲುತ್ತಾನಂತೆ. ನಂತರ ಭಸ್ಮಾಸುರ ಮೋಹಿನಿಯ ತಾಳಕ್ಕೆ ನೃತ್ಯ ಮಾಡುತ್ತ ತನ್ನ ತಲೆಯ ಮೇಲೆ ತಾನು ಕೈ ಇಟ್ಟುಕೊಂಡು ಭಸ್ಮ ನಾಗುತ್ತಾನೆ. ಹಾಗೆ ಹಾರಿದ ವಿಭೂತಿ ಅಲ್ಲೇ ಸಮೀಪದಲ್ಲಿ ನದಿಯ ರೂಪದಲ್ಲಿ ನೊರೆ ನೊರೆಯಾಗಿ ಕೆಳಗೆ ಬೀಳುತ್ತಿದೆ ಎಂಬುದಾಗಿ ಸ್ಥಳಿಯರು ನಂಬುತ್ತಾರೆ.

Image result for vibhuti falls

ವಿಭೂತಿ ಫಾಲ್ಸ

ಬೆಣ್ಣೆಹೊಳೆ ಜಲಪಾತ: ಬೆಣ್ಣೆ ಹೊಳೆಯು ಅಘನಾಶಿನಿ ನದಿಯ ಉಪನದಿ. ಸುಮಾರು ಎಂಬತ್ತು ಅಡಿ ಎತ್ತರದಿಂದ ಧುಮ್ಮಿಕ್ಕುವ ಈ ಜಲಪಾತವನ್ನು ನೋಡುವುದೇ ಒಂದು ಖುಷಿ. ಶಿರಸಿ ಕುಮಟಾ ರಾಜ್ಯ ಹೆದ್ದಾರಿಯ ಬಳಿಯಲ್ಲಿನ ಕಸಗೆ ಎಂಬ ಪುಟ್ಟ ಊರಲ್ಲಿ ಇಳಿದು ಕಾಡಲ್ಲಿ ಸಾಗಿದರೆ ಸಿಗುವ ಈ ಜಲಪಾತ ದಟ್ಟವಾದ ಕಾಡಿನ ಮಧ್ಯೆ ಇದೆ. ಕಪ್ಪು ಹೆಬ್ಬಂಡೆಯನ್ನು ಸೀಳಿದಂತೆ ಧುಮ್ಮಿಕ್ಕುವ ಈ ಜಲಪಾತವು ವರ್ಷವಿಡೀ ಭೋರ್ಗರೆಯುತ್ತದೆ. ದಟ್ಟವಾದ ಕಾಡಿನ ಮಧ್ಯದಲ್ಲಿರುವ ಈ ಜಲಪಾತವನ್ನು ನೋಡುವಾಗ ಅದನ್ನು ತಲುಪಲು ಸುಮಾರು ಎರಡು ಕಿ.ಮಿ ಕಾಲ್ನಡಿಗೆಯಲ್ಲಿ ಬಂದಿದ್ದು ಮರೆತು ಹೋಗುತ್ತದೆ.ಕೆಪ್ಪ ಜೋಗ ಜಲಪಾತ ಮತ್ತು ಬಂಗಾರದ ಕುಸುಮ- ಗೇರು ಸೊಪ್ಪೆಯ ಸಮೀಪದ ಬಂಗಾರಮಕ್ಕಿಯಲ್ಲಿ ಮೈದಳೆಯುವ ಜಲಪಾತ ಇದು. ಹೊನ್ನಾವರದಿಂದ ಬೆಂಗಳೂರಿಗೆ ಹೋಗುವ ಮಾರ್ಗzಲ್ಲಿ ಗೇರುಸೊಪ್ಪದಿಂದ ಎರಡು-ಮೂರು ಕಿ.ಮಿ ದೂರ ನಡೆದರೆ ಈ ಜಲಪಾತ ಕಾಣಸಿಗುತ್ತದೆ. ಸಿದ್ದಾಪುರ ತಾಲೂಕಿನ ಲಂಬಾಪುರದಿಂದ ಇಟಗಿಯ ಮೂಲಕ ಬರುವ ಚಿಕ್ಕದೊಂದು ಹೊಳೆಯು ಪಶ್ಚಿಮಘಟ್ಟದ ಇಳುಕಲಿನಲ್ಲಿ ಎರಡು ಹಂತದಲ್ಲಿ ಧುಮ್ಮಿಕ್ಕುತ್ತದೆ. ಮೊದಲನೆಯ ಹಂತದ ಜಲಪಾತಕ್ಕೆ ಕೆಪ್ಪ ಜೋಗ ಎಂದು ಕರೆದರೆ ಎರಡನೇ ಹಂತದ ಜಲಪಾತಕ್ಕೆ ಚಿಕ್ಕ ಜಲಪಾತ ಎಂದು ಸ್ಥಳಿಯವಾಗಿ ಕರೆಯಲಾಗುತ್ತಿತ್ತು. 2008ರಲ್ಲಿ ಒಮ್ಮೆ ಭೇಟಿ ಕೊಟ್ಟ ಮಾರುತಿ ಗುರೂಜಿಯವರು ತಮ್ಮ ಕ್ಷೇತ್ರವಾದ ಬಂಗಾರಮಕ್ಕಿಯ ನೆನಪಿನಲ್ಲಿ ಬಂಗಾರದ ಕುಸುಮ ಎಂದು ಹೆಸರಿಟ್ಟಿದ್ದಾಗಿ ಸ್ಥಳಿಯರು ತಿಳಿಸುತ್ತಾರೆ. ಶರಾವತಿ ವಿದ್ಯುತ್ ಯೋಜನೆಯ ಕೊನೆಯ ಹಂತದ ಕಾಮಗಾರಿಗಾಗಿ ಶರವಾತಿ ಟೇಲರೇಸ್ ಡ್ಯಾಮ್‍ನ ನಿರ್ಮಾಣದ ಹಂತದಲ್ಲಿ ಜಲಪಾತದ ಸಮೀಪದವರೆಗೂ ಹನೇಹಳ್ಳ ಸೇತುವೆಯಿಂದ ಸುಮಾರು ಒಂದು ಕಿ.ಮಿ ಕಚ್ಚಾ ರಸ್ತೆಯನ್ನು ನಿರ್ಮಿಸಲಾಗಿತ್ತು.

Image result for benne hole falls

ಬೆಣ್ಣೆಹೊಳೆ ಜಲಪಾತ

ಈಗ ಅದು ಶಿಥಿಲಗೊಂಡು ಹಾಳಾಗಿದ್ದರೂ ಜಲಪಾತವನ್ನು ನೋಡಿದ ನಂತರ ರಸ್ತೆಯ ಆಯಾಸವು ಪರಿಹಾರವಾಗುವುದರಲ್ಲಿ ಯಾವ ಸಂಶಯವೂ ಇಲ್ಲ. ಹೊನ್ನಾವರ ಬೆಂಗಳೂರು ಮಾರ್ಗದಲ್ಲಿ ದೂರದಲ್ಲಿ ರಸ್ತೆಯ ಮೇಲಿಂದಲೂ ಈ ಜಲ ಪಾತವನ್ನು ಕಾಣಬಹುದಾಗಿದೆ.ವಜ್ರ ಫಾಲ್ಸ್: ಮಳೆಗಾಲದಲ್ಲಿ ಬೆಳಗಾವಿ ಯಿಂದ ಕಾರವಾರಕ್ಕೆ ಬರುವ ಹಾದಿಯಲ್ಲಿ ಕಾಣ ಸಿಗುವ ಈ ಜಲಪಾತ ಎತ್ತರದ ಗುಡ್ಡದಿಂದ ಧುಮ್ಮಿಕ್ಕುತ್ತದೆ. ದೂರದಿಂದ ನೋಡಿದವರಿಗೆ ಎತ್ತರದಿಂದ ಬೀಳುವ ನೀರಿನ ಹನಿಗಳು ಎಳೆ ಬಿಸಿಲಿಗೆ ವಜ್ರದ ಹರಳಿನಂತೆ ಮಿನುಗಿದಂತೆ ಗೋಚರಿಸುತ್ತದೆ. ಅಣಶಿ-ದಾಂಡೇಲಿ ರಸ್ತೆಗೆ ತಿರುಗುವಾಗ ಕದ್ರಾದಿಂದ ಕೇವಲ ಆರು-ಏಳು ಕಿ.ಮಿ ಸಾಗಿದರೆ ಅಣಶಿ ಘಟ್ಟದ ಬಲಭಾಗದಲ್ಲಿ ಕಾಣುತ್ತದೆ. ಈ ಜಲಪಾತದ ಸೌಂದರ್ಯವನ್ನು ವೀಕ್ಷಿಸಲು ಎತ್ತರದ ಗುಡ್ಡ ಹತ್ತ ಬೇಕಿಲ್ಲ, ಕೊರಕಲಿನಲ್ಲಿ ಇಳಿಯ ಬೇಕಿಲ್ಲ. ನಿಮ್ಮ ವಾಹನದಲ್ಲಿಂದ ಇಣುಕಿದರೂ ಸಾಕು. ಮಳೆ ಜೋರಾಗಿದ್ದು ನೀರಿನ ಹರಿವು ಹೆಚ್ಚಾಗಿದ್ದರೆ ಅನಾಯಾಸವಾಗಿ ಜಲಪಾತದ ತುಂತುರು ಹನಿಯ ಪ್ರೋಕ್ಷಣೆಯೂ ದೊರೆ ಯುತ್ತದೆ. ಆದರೆ ಮಳೆಯ ತೀವೃತೆ ಕಡಿಮೆ ಆದಂತೆ ಅಂದರೆ ಅಕ್ಟೋಬರ್ ನಂತರ ಈ ಜಲ ಪಾತ ನೊಡಲು ಸಿಗದು. ಇತ್ತೀಚಿನ ದಿನಗಳಲ್ಲಿ ಮಳೆಯ ಪ್ರಮಾಣ ಕಡಿಮೆ ಆಗಿರುವುದರಿಂದ ವಜ್ರ ಜಲಪಾತ ಸೊರಗಿದಂತೆ ಕಾಣುತ್ತಿದೆ.ದೇವಕಾರ ಜಲಪಾತ-ಗಂಗಾವಳಿಗೆ ಬಂದು ಸೇರುವ ಪುಟ್ಟ ಹಳ್ಳವÁದ ದೇವ ಕಾರು ಹಳ್ಳವು ಯಲ್ಲಾಪುರದ ಸಮೀಪ ನಿರ್ಮಿಸಿರುವ ಜಲಪಾತವೇ ದೇವ ಕಾರು ಜಲಪಾತ. ಯಲ್ಲಾಪುರದ ದಟ್ಟ ಕಾನನ ದಲ್ಲಿ ಸುಮಾರು ಹದಿನೆಂಟು ಕಿ.ಮಿ ನಡೆದು ಕೊಂಡೇ ಹೋಗಬೇಕಾದ ಈ ಜಲಪತವು ಅತ್ಯಂತ ಮನಮೋಹಕವಾಗಿದ್ದರೂ ಅದರ ದುರ್ಗಮ ವಾದ ಹಾಗೂದೂರದ ಹಾದಿಯಿಂ ದಾಗಿ ಇನ್ನೂ ಪ್ರವಾಸಿಗರಿಗೆ ಮುಕ್ತವಾಗಿ ತೆರೆದುಕೊಂಡಿಲ್ಲ. ನೂರಾರು ಮೀಟರ್ ಎತ್ತರದಿಂದ ಧುಮ್ಮಿಕ್ಕುವ ಈ ಜಲಪಾತವು ಅತ್ಯಂತ ತಂಪಾದ ಜಲ ಧಾರೆಯನ್ನು ಹೊಂದಿದ್ದು ಹಿಮಗಡ್ಡೆಯನ್ನು ಸ್ಪರ್ಶಿಸಿದ ಅನುಭವವನ್ನು ನೀಡುತ್ತದೆ.ಬುರುಡೆ ಜೋಗ-ಸಿದ್ದಾಪುರ ತಾಲೂಕಿನ ಹಲವಾರು ಜಲಪಾತಗಳಲ್ಲಿ ಇದೂ ಒಂದು. ಬಿಳಗಿ ಹಾಗೂ ದೊಡ್ಮನೆ ನಡುವಿನ ರಸ್ತೆಯಲ್ಲಿ ಸಿಗುವ ಈ ಜಲಪಾತವು ಇನ್ನೂ ಪ್ರವಾಸಿಗರನ್ನು ಅಷ್ಟಾಗಿ ತನ್ನತ್ತ ಸೆಳೆದಿಲ್ಲವಾದರೂ ಜಲಪಾತದ ಸೌಂದರ್ಯದ ದೃಷ್ಟಿಯಿಂದ ಯಾರೊಂದಿಗೂ ರಾಜಿ ಆಗುವುದಿಲ್ಲ ಎಂಬುದೂ ಸತ್ಯ.

ಮಲ್ಮನೆ ಜಲಪಾತ-ಸಿದ್ದಾಪುರ ತಾಲೂಕಿನ ದೊಡ್ಮನೆ ಸಮೀಪದ ಮಲ್ಮನೆ ಘಟ್ಟದಲ್ಲಿ ಗೊಚರವಾಗುವ ಈ ಜಲಪಾತವೂ ಕೂಡ ಇಂದಿಗೂ ಹೊರ ಜಗತ್ತಿನ ಪಾಲಿಗೆ ಎಲೆ ಮರೆಯ ಹೂವಾಗಿಯೇ ಇದೆ. ಸುಮಾರು 230 ಮೀಟರ್ ಎತ್ತರದಿಂದ ಧುಮ್ಮಿಕ್ಕುವ ಜಲಧಾರೆಯನ್ನು ವರ್ಣಿಸುವುದಕ್ಕಿಂತ ಅದರ ಎದುರು ನಿಂತು ಸೌಂದರ್ಯವನ್ನು ಅನುಭವಿಸುವುದೇ ಅದ್ಭುತ ಅನುಭವವನ್ನು ನೀಡುತ್ತದೆ.ಮುರೇಗಾರ ಜಲಪಾತ-ಶಿರಸಿ ತಾಲೂಕಿನ ಸಾಲ್ಕಣಿಯ ಸಮೀಪದ ಮುರೇಗಾರ ಎಂಬ ಹಳ್ಳಿಯ ಸಮೀಪದಲ್ಲೊಂದು ಸುಂದರ ಜಲಪಾತವಿದೆ. ಈ ಜಲಪಾತವು ಮುರೆಗಾರ ಎಂಬ ಚಿಕ್ಕ ಹಳ್ಳದಿಂದ ನಿರ್ಮಾಣವಾಗಿದ್ದು ದೈವಭಕ್ತರಿಗೆ ಒಳ್ಳೆಯ ಸ್ಥಳ. ದೊಡ್ಡ ದೊಡ್ಡ ಬಂಡೆಗಳ ನಡುವಿಂದ ಧುಮ್ಮಿಕ್ಕುವ ಮುರೇಗಾರ ಹಳ್ಳವು ತನ್ನ ಅಮಿತ ಸೌಂದರ್ಯದಿಂದಲೇ ಗಮನ ಸೆಳೆಯುತ್ತದೆ.ನಾಗರಮಡಿ ಜಲಪಾತ-ಕಾರವಾರ ತಾಲೂಕಿನ ಚೆಂಡಿಯಾದ ದಟ್ಟವಾದ ಕಾಡಿನ ಮಧ್ಯದಲ್ಲಿರುವ ಇದು ಮಳೆಗಾಲದ ಜಲಪಾತ. ಹಾಗೆಂದು ಮೂಗು ಮುರಿಯಬೇಕಾಗಿಲ್ಲ. ಕೇವಲ ಮಳೆಗಾಲದ ಪ್ರಾರಂಭದಿಂದ ಹೆಚ್ಚೆಂದರೆ ಅಕ್ಟೋಬರ್ ತಿಂಗಳವರೆಗೆ ಇರುವ ಜಲಪಾತವಾದರೂ ಇದರ ಸೌಂದರ್ಯದಲ್ಲಿ ಯಾವುದೇ ಹುಳುಕಿಲ್ಲ. ಮಳೆಗಾಲದ ಜಲಪಾತವಾದರೂ ಪ್ರವಾಸಿಗರನ್ನು ಸೆಳೆಯಲು ಯಾವತ್ತು ಹಿಂದೆ ಮುಂದೆ ನೋಡುವುದಿಲ್ಲ. ಪ್ರವಾಸಿಗರು ಜಲಪಾತದ ಸನಿಹ ಹೋಗಲು ಅವಕಾಶ ಇರುವುದರಿಂದ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top