fbpx
Achivers

ಕನ್ನಡ ವಿರೋಧಿ ನೀತಿ ಪ್ರಶ್ನಿಸಿ ಫ್ಲಿಪ್ ಕಾರ್ಟ್ ಗೆ ಬೆಂಗಳೂರು ಜಿಲ್ಲಾಧಿಕಾರಿಗಳಿಂದ ನೋಟೀಸ್

ಫ್ಲಿಪ್ ಕಾರ್ಟ್ ಭಾರತದ ಒಂದು ಪ್ರಮುಖ ಇ ಕಾಮರ್ಸ್ ಕಂಪೆನಿ. ಅದರ ಮುಖ್ಯ ಕಚೇರಿ ಇರೋದು ಬೆಂಗಳೂರಿನಲ್ಲಿ. ಇ ಕಾಮರ್ಸ್ ಕಂಪೆನಿ ಬೆಂಗಳೂರಲ್ಲಿ ಕನ್ನಡವನ್ನು ನಿರ್ಲಕ್ಷಿಸುವುದನು ಕಂಡು ಫ್ಲಿಪ್ ಕಾರ್ಟ್ ಗೆ ತುಂಬಾ ಜನ ಸಾಮಾನ್ಯ ಕನ್ನಡಿಗರು ದೂರು ಕೊಟ್ಟರು ಪ್ರಜಾಜನ ಆಗಿಲ್ಲ. ಕನ್ನಡ ಭಾಷೆ ಜಾರಿ ವಿಚಾರವಾಗಿ ಕಂಪೆನಿ ನಿರ್ಲಕ್ಷ್ಯ ಮಾಡಿದೆ.

ಈ ನಿಟ್ಟಿನಲ್ಲಿ ಸಾಮಾನ್ಯ ಕನ್ನಡಿಗ ತಂಡ ಒಂದು ಪ್ರೆಸ್ ಮೀಟ್ ಸಹ ಮಾಡಿತ್ತು. ಯಾವುದಕ್ಕೂ ಜಗ್ಗದೆ ಇದ್ದಾಗ ಸಾಮಾನ್ಯ ಕನ್ನಡಿಗರು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ದೂರು ಕೊಟ್ಟರು , ಇದನ್ನು ಗಂಭೀರವಾಗಿ ಪರಿಗಣಿಸಿ ಡಾ ಮುರಳಿಧರ್ ರವರು ಫ್ಲಿಪ್ ಕಾರ್ಟ್ ಗೆ ಒಂದು ನೋಟೀಸ್ ಜಾರಿ ಮಾಡಿದ್ದರು.

ಫ್ಲಿಪ್ ಕಾರ್ಟ್ ಲಕ್ಷಾಂತರ ಮಂದಿಯನ್ನು ನೇಮಿಸಿಕೊಂಡಿರಬಹುದು. ಆದರೆ ಅದರ ಆಡಳಿತದಲ್ಲಿ ಕನ್ನಡ ಅನುಷ್ಠಾನಕ್ಕಾಗಿ ಏನೂ ಮಾಡುತ್ತಿಲ್ಲ. ಗ್ರಾಹಕ ಸೇವಾ ವಿಭಾಗಕ್ಕೆ ಕನ್ನಡ ಮಾತನಾಡುವವರು ಕರೆ ಮಾಡಿದರೆ, ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಮಾತನಾಡುವಂತೆ ಸೂಚಿಸುತ್ತಾರೆ ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ. ಸರೋಜಿನಿ ಮಹರ್ಷಿ ವರದಿ ಪ್ರಕಾರ ಉದ್ಯೋಗದಲ್ಲಿ ಕನ್ನಡಿಗರಿಗೆ ಆಧ್ಯತೆ ಕೊಡಬೇಕು ಅಂತಾನೂ ಇನೊಂದು ನೋಟೀಸ್ ಕಳ್ಸಿದಿವಿ

ಡಾ ಮುರಳಿಧರ್ , ಕನ್ನಡ ಅಭಿವೃದ್ಧಿ ಪ್ರಾಧಿಕಾರ

15356015_10154411045793025_1170479207_n

15357072_10154411047593025_350812985_n

ಅದಕ್ಕೆ ಪ್ರತಿಯಾಗಿ ಫ್ಲಿಪ್ ಕಾರ್ಟ್ ನಿಂದ ಬೇಜವಾಬ್ದಾರಿ ಉತ್ತರ ಬಂತು !!!
15416174_10154411048728025_415590679_n
ಇದನ್ನು ಹೀಗೆ ಬಿಡಬಾರದೆಂದು ಸಾಮಾನ್ಯ ಕನ್ನಡಿಗ ಅಧ್ಯಷರು ಆದ ಸಂದೀಪ್ ಪಾರ್ಶ್ವನಾಥ್ ಮತ್ತು ಕನ್ನಡ ಅಮಂದಿರ ತಂಡದಿಂದ ಪೂರ್ವಿ ಅರಸು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಷರಾದ ಸಿದ್ದರಾಮಯ್ಯ ರವರನ್ನು ಭೇಟಿ ಮಾಡಿದರು .

ಸಿದ್ದರಾಮಯ್ಯನವರು ಮತ್ತು ಡಾ ಮುರಳಿಧರ್ ಈ ವಿಷಯವನ್ನು ಗಂಭೀರವಾಗಿ ತಗೊಂಡು ಬೆಂಗಳೂರು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸುತ್ತಾರೆ. ವಿಷಯವನ್ನು ತಿಳಿದು ಬೆಂಗಳೂರು ಡೆಪ್ಯುಟಿ ಕಮಿಷನರ್, ವಿ ಶಂಕರ್ ರವರು ಬೆಂಗಳೂರಲ್ಲಿದ್ದರೂ, ಇಲ್ಲಿನ ಆಡಳಿತ ಭಾಷೆ ಕನ್ನಡವನ್ನು ನಿರ್ಲಕ್ಷಿಸುತ್ತಾ ಬಂದಿದ್ದ Flipkart ಸಂಸ್ಥೆಗೆ ಜಿಲ್ಲಾಧಿಕಾರಿ ಕಚೇರಿ ಇಂದ ನೋಟೀಸ್ ಜಾರಿಗೊಳಿಸಿದ್ದಾರೆ. ಸರೋಜಿನಿ ಮಹಿಷಿ ವರದಿ ಅನುಸಾರ ತಕ್ಷಣವೇ ಸ್ಥಳೀಯರಿಗೆ ಉದ್ಯೋಗ ಕಲ್ಪಿಸಿ, ಕನ್ನಡದಲ್ಲಿ ಗ್ರಾಹಕರ ಕುಂದು ಕೊರತೆ ವಿಭಾಗವನ್ನು ಸ್ಥಾಪಿಸಬೇಕೆಂದು ಆಗ್ರಹಿಸಿದೆ.

ಈ ಹೋರಾಟ ಶುರು ಮಾಡಿದ ಸಾಮಾನ್ಯ ಕನ್ನಡಿಗ ತಂಡ , ಅದಕೆ ಬೆಂಬಲವಾಗಿ ನಿಂತ ಸಂದೀಪ್ ಪಾರ್ಶ್ವನಾಥ್ , ಪೂರ್ವಿ ಅರಸ್ . ಇದನ್ನು ಗಂಭೀರವಾಗಿ ಪರಿಗಣಿಸಿ ಫ್ಲಿಪ್ ಕಾರ್ಟ್ ಗೆ ಬಿಸಿ ಮುಟ್ಟಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಡಾ ಮುರಳಿಧರ್, ಸಿದ್ದರಾಮಯ್ಯ ಮತ್ತು ಬೆಂಗಳೂರು ಡೆಪ್ಯುಟಿ ಕಮಿಷನರ್, ವಿ ಶಂಕರ್ ರವರಿಗೆ aralikatte ಇಂದ ಹೃತ್ಪೂರ್ವಕ ಅಭಿನಂದನೆಗಳು.

ಇನ್ನು ಮುಂದೆ ಯಾವುದೇ ಸಂಸ್ಥೆಗೆ ಕರೆ ಮಾಡಿದಾಗಲೂ ಕನ್ನಡದಲ್ಲಿ ಮಾತನಾಡಿ. ಕನ್ನಡದ ಉಪಯೋಗ ಹೆಚ್ಚಿಸಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top