fbpx
Achivers

ಈ ಆರ್ವರು ಜಗತ್ತಿನಲ್ಲೇ ಅತೀ ಬುದ್ದಿವಂತ ವ್ಯಕ್ತಿಗಳು!!!

ಅನೇಕರು ಬಾಲ್ಯದಲ್ಲಿಯೇ ಸಾಧನೆ ಮಾಡುತ್ತಾರೆ. ಕೆಲವರು ವೈಜ್ಞಾನಿಕ ಆವಿಷ್ಕಾರಗಳನ್ನು ಮಾಡುತ್ತಾರೆ. ಆದಿ ಶಂಕರಾಚಾರ್ಯರು ಬಾಲ್ಯದಲ್ಲಿಯೇ ಸನ್ಯಾಸಿಗಳಾಗಿ ಜಗತ್ತಿಗೇ ಮಾರ್ಗದರ್ಶಕರಾದರು. ಬಾಲ್ಯದಲ್ಲಿ ಮೇಧಾವಿಗಳಾಗಿದ್ದ ಅನೇಕರು ವಯಸ್ಕರಾದ ನಂತರ ಏನೂ ದೊಡ್ಡ ಸಾಧನೆ ಮಾಡದೇ `ಸಾಮಾನ್ಯ’ ಜೀವನ ನಡೆಸಿದ ಉದಾಹರಣೆಗಳೇ ಹೆಚ್ಚು. ಆದರೂ ಬಾಲ್ಯದಲ್ಲಿಯೇ ಅತಿ ಹೆಚ್ಚು ಐಕ್ಯೂ ಹೊಂದಿರುವವರು ಜಗತ್ತಿನ ಗಮನ ಸೆಳೆಯುತ್ತಾರೆ.

ಬಾಲ್ಯದ ತೀವ್ರಬುದ್ಧಿಗೆ ಕಾರಣಗಳನ್ನು ಕೊಡುವುದು ಕಷ್ಟ. ಅದು ಅಭ್ಯಾಸ, ಪರಿಶ್ರಮ, ಸಾಧನೆಗಳಿಂದ ಹರಿತ ಗೊಂಡಿರುವ ಬುದ್ಧಿಯಲ್ಲ. ಸಹಜವಾಗಿ ಹುಟ್ಟಿನಿಂದಲೇ ಬಂದಿರುವುದು. ಆಧುನಿಕ ಜಗತ್ತಿನಲ್ಲಿ ಮಾಹಿತಿ ಪ್ರಸರಣೆ ಚೆನ್ನಾಗಿರುವುದರಿಂದ ಇಂತಹ ಅನೇಕ ಉದಾಹರಣೆಗಳು ಸಿಗುತ್ತವೆ. ಈಗಿನ ಕಾಲದ ಕೆಲವು ಬಾಲ ಮೇಧಾವಿಗಳ ವಿವರ ಇಲ್ಲಿದೆ.

1. ಭಾರತದ ತಥಾಗತ ಅವತಾರ ತುಳಸಿ ಜಗತ್ತಿನ ಅತಿ ಚಿಕ್ಕ ವಯಸ್ಸಿನ ವಿಜ್ಞಾನಿ. `ಜಗತ್ತಿನ ಅತಿ ಚಿಕ್ಕ ವಯಸ್ಸಿನ ಸ್ನಾತಕೋತ್ತರ ಪದವೀಧರ’ (ಪೋಸ್ಟ್‍ಗ್ರಾಜುಯೇಟ್) ಎಂದು ಗಿನ್ನೆಸ್ ದಾಖಲೆ ನಿರ್ಮಿಸಿದವನು. 1987ರ ಸೆಪ್ಟೆಂಬರ್ 9 ರಂದು ಬಿಹಾರದ ಪಾಟ್ನಾ ನಗರದಲ್ಲಿ ಜನಿಸಿದ ತುಳಸಿ 9 ವರ್ಷ ವಯಸ್ಸಿಗೇ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಉತ್ತೀರ್ಣನಾದ. 10 ವರ್ಷವಾಗಿದ್ದಾಗ ಬಿಎಸ್‍ಸಿ ಮುಗಿಸಿ, 12ನೇ ವಯಸ್ಸಿನಲ್ಲಿ ಭೌತಶಾಸ್ತ್ರದಲ್ಲಿ ಎಂಎಸ್‍ಸಿ ಗಳಿಸಿ ದಾಖಲೆ ಸೃಷ್ಟಿಸಿದ. ಅಮೆರಿಕದ ಪ್ರತಿಷ್ಠಿತ `ಸೈನ್ಸ್’ ನಿಯತಕಾಲಿಕ ಆತನನ್ನು `ಸೂಪರ್‍ಟೀನ್’ ಎಂದು ಕೊಂಡಾಡಿದೆ. ಅಮೆರಿಕದ ಟೈಮ್ ಸಾಪ್ತಾಹಿಕ ಜಗತ್ತಿನ 7 ಶ್ರೇಷ್ಠ ಬಾಲಪ್ರತಿಭೆಗಳ ಪೈಕಿ ಅವನನ್ನು ಹೆಸರಿಸಿದೆ. ಈಗ ಆತ ಭೌತಶಾಸ್ತ್ರದ ಪ್ರಾಧ್ಯಾಪಕ.

Image result for tathagat avatar tulsi

2. ಭಾರತ ಮೂಲದ (ಅಮೆರಿಕದ ಪ್ರಜೆ) ಬಾಲಮುರಳಿ ಅಂಬಾಟಿ ಜಗತ್ತಿನ ಅತ್ಯಂತ ಚಿಕ್ಕ ವಯಸ್ಸಿನ ಡಾಕ್ಟರ್ ಎಂಬ ವಿಶ್ವದಾಖಲೆ ನಿರ್ಮಿಸಿದವ. 1995ರಲ್ಲಿ ವೈದ್ಯನಾದಾಗ ಆತನಿಗೆ ಕೇವಲ 17 ವರ್ಷ! ಬಾಲಮುರಳಿ ಜನಿಸಿದ್ದು ಜುಲೈ 29, 1977ರಲ್ಲಿ. ಆತನ ವಿದ್ಯಾಭ್ಯಾಸ ನಡೆದದ್ದು ಅಮೆರಿಕದಲ್ಲಿ. 13 ವರ್ಷವಾಗಿದ್ದಾಗಲೇ ನ್ಯೂಯಾರ್ಕ್ ವಿಶ್ವವಿದ್ಯಾಲಯದ ಪದವಿ ಗಳಿಸಿ, ಅನಂತರ ಮೌಂಟ್ ಸಿನಾಯ್ ಸ್ಕೂಲ್ ಆಫ್ ಮೆಡಿಸಿನ್ ಸೇರಿ ವೈದ್ಯಕೀಯ (ಎಂಡಿ) ಮುಗಿಸಿದಾಗ ಆತನಿಗೆ 17 ವರ್ಷ 294 ದಿನಗಳು! ಈಗ ಆತ ನೇತ್ರತಜ್ಞ.

Image result for balamurali ambati

ಬಾಲಮುರಳಿ ಅಂಬಾಟಿ

3. ಆಸ್ಕರ್ ರಿಗ್ಲಿ ಎಂಬ ಬ್ರಿಟನ್ ದೇಶದ ಬಾಲಕ 160 ಐಕ್ಯೂ ಅಂಕಗಳನ್ನು ಪಡೆದ. ಆಗ ಆತನ ವಯಸ್ಸು ಕೇವಲ 2 ವರ್ಷ 5 ತಿಂಗಳು! ಆತ `ಮೆನ್ಸಾ’ ಕ್ಲಬ್ಬಿನ ಅತ್ಯಂತ ಕಿರಿಯ ವಯಸ್ಸಿನ ಸದಸ್ಯ! 2007ರ ಮೇ ತಿಂಗಳಿನಲ್ಲಿ ಜನಿಸಿರುವ ರಿಗ್ಲಿ 9 ತಿಂಗಳಿನಲ್ಲೇ ಮಾತನಾಡಲು ಆರಂಭಿಸಿದ ಎನ್ನಲಾಗಿದೆ. 2 ವರ್ಷದವನಾಗುವ ಹೊತ್ತಿಗೆ 1000 ಪದಗಳಿಗೆ ಅರ್ಥ ತಿಳಿದಿದ್ದನಂತೆ!

4. ಮೋಶೆ ಕಾಯ್ ಕ್ಯಾವಲಿನ್ ಎಂಬ ಅಮೆರಿಕದ ಬಾಲಕನ ಕಥೆ ಕೇಳಿ. 2009ರಲ್ಲಿ ಆತ ಲಾಸ್ ಏಂಜಲೀಸ್ ಕಾಲೇಜಿನ ಪರೀಕ್ಷೆಯಲ್ಲಿ ರ್ಯಾಂಕ್ ಗಳಿಸಿ ಪದವಿ (ಡಿಗ್ರಿ) ಪಡೆದಿದ್ದಾನೆ. ಈ ಸಾಧನೆ ಮಾಡಿದಾಗ ಆತನ ವಯಸ್ಸು 11 ವರ್ಷ! ಮೋಶೆ ಕಾಲೇಜು ಸೇರಿದಾಗ ಆತನಿಗೆ ಕೇವಲ 8 ವರ್ಷ ವಯಸ್ಸಾಗಿತ್ತು. ಅವನ ಜೊತೆಯಲ್ಲಿ ಓದುತ್ತಿದ್ದವರೆಲ್ಲ 19-20 ವರ್ಷದ ಆಸುಪಾಸಿನವರು. ಅವರ ಮುಂದೆ ಈ ಲಾಲಿಪಾಪ್ ಹುಡುಗ ಬಂದಾಗ ಇಡೀ ತರಗತಿಯೇ ಗೊಳ್ಳೆಂದು ನಕ್ಕಿತ್ತು. ಆದರೆ ವರ್ಷದ ಅಂತ್ಯದ ಹೊತ್ತಿಗೆ ವಿಜ್ಞಾನ ಹಾಗೂ ಗಣಿತ ವಿಷಯಗಳಲ್ಲಿ ಇಡೀ ತರಗತಿಗೇ ಟ್ಯೂಷನ್ ಮಾಡುವಷ್ಟರ ಮಟ್ಟಿಗೆ ಮೋಶೆ ಪ್ರಗತಿ ಸಾಧಿಸಿಬಿಟ್ಟ. ಕೋರ್ಸ್ ಅಂತ್ಯದಲ್ಲಿ ಭಾರಿ ಅಂಕ ಗಳಿಸಿ ಉತ್ತೀರ್ಣನಾದ.
5. ಸರ್ಗೇ ಕರ್ಜಕಿನ್ ಎಂಬ ಬಾಲಕ ಅತಿ ಚಿಕ್ಕ ವಯಸ್ಸಿನಲ್ಲೇ ಚೆಸ್ ಗ್ರ್ಯಾಂಡ್ ಮಾಸ್ಟರ್ ಆಗಿ ವಿಶ್ವದಾಖಲೆ ನಿರ್ಮಿಸಿದ ವ್ಯಕ್ತಿ. ಆತ ಜನಿಸಿದ್ದು 1990ರ ಜನವರಿ 12 ರಂದು. ಉಕ್ರೇನ್ ದೇಶದವನು. ನಂತರದಲ್ಲಿ ರಷ್ಯಾ ದೇಶದ ನಾಗರಿಕತ್ವ ಪಡೆದು ರಷ್ಯಾವನ್ನು ಪ್ರತಿನಿಧಿಸಿ ಈಗ ಚೆಸ್ ಆಡುತ್ತಿದ್ದಾನೆ. 5 ವರ್ಷದ ಬಾಲಕನಾಗಿದ್ದಾಗ ಚೆಸ್ ಕಲಿತ ಸರ್ಗೇ 10 ವರ್ಷದ ಹೊತ್ತಿಗೆ ಚೆಸ್ ಪಟುವಾಗಿದ್ದ. 11 ವರ್ಷ 11 ತಿಂಗಳಾಗಿದ್ದಾಗ `ಇಂಟರ್‍ನ್ಯಾಷನಲ್ ಮಾಸ್ಟರ್’ ಸ್ಥಾನವನ್ನು ಗಳಿಸಿಕೊಂಡು `ಜಗತ್ತಿನ ಅತಿಚಿಕ್ಕ ವಯಸ್ಸಿನ ಚೆಸ್ ಇಂಟರ್ ನ್ಯಾಷನಲ್ ಮಾಸ್ಟರ್’ ಎಂಬ ವಿಶ್ವದಾಖಲೆಯನ್ನು ನಿರ್ಮಿಸಿದ. ಇದಾದ ನಂತರ ಒಂದೊಂದಾಗಿ ಗ್ರ್ಯಾಂಡ್‍ಮಾಸ್ಟರ್ ನಾರ್ಮ್‍ಗಳನ್ನು ಗೆಲ್ಲತೊಡಗಿದ. ಕೆಲವೇ ತಿಂಗಳುಗಳಲ್ಲಿ, ಅಂದರೆ 2002ರ ಆಗಸ್ಟ್‍ನಲ್ಲಿ ಯಶಸ್ಸು ಗಳಿಸಿ ಗ್ರ್ಯಾಂಡ್‍ಮಾಸ್ಟರ್ ಆಗಿಬಿಟ್ಟ. ಆಗ ಆತನಿಗೆ ಕೇವಲ 12 ವರ್ಷ 7 ತಿಂಗಳು! `ಚೆಸ್ ಇತಿಹಾಸದಲ್ಲೇ ಅತಿ ವಯಸ್ಸಿನ ಗ್ರ್ಯಾಂಡ್‍ಮಾಸ್ಟರ್’ ಎಂಬ ಹೊಸ ದಾಖಲೆಯನ್ನು ಸೃಷ್ಟಿಸಿದ್ದಾನೆ.

Image result for sergey karjakin

ಸರ್ಗೇ ಕರ್ಜಕಿನ್

6. ಕ್ಲಿಯೋಪಾತ್ರಾ ಸ್ಟ್ರಾಟನ್ ಎಂಬ ಬಾಲಕಿಯ ಮುದ್ದು ಹೆಸರು ಕ್ಲಿಯೋ. ಆಕೆ ಅಂತಾರಾಷ್ಟ್ರೀಯ ಖ್ಯಾತಿಯ ಗಾಯಕಿ! ಜಗತ್ತಿನಲ್ಲೇ ಕಚೇರಿ ನೀಡುವ ಗಾಯಕಿಯಾಗಿ ಹೆಸರು (ಹಾಗೂ ಹಣ) ಮಾಡಿರುವ ಅತಿ ಚಿಕ್ಕ ವಯಸ್ಸಿನ ವ್ಯಕ್ತಿ ಎಂದರೆ ಕ್ಲಿಯೋ. ಆಕೆ ಪಾಪ್ ಹಾಗೂ ಜಾನಪದ ಸಂಗೀತ ಹಾಡುತ್ತಾಳೆ. 2006ರಲ್ಲಿ ಮೊದಲಬಾರಿಗೆ ಸಾರ್ವಜನಿಕ ಗಾಯನ ಕಾರ್ಯಕ್ರಮ (ಕಚೇರಿ) ನೀಡಿದಾಗ ಆಕೆಗೆ 4 ವರ್ಷ. ಆ ವರ್ಷವೇ ಆಕೆಯ ಮೊದಲ ಆಲ್ಬಮ್ (ಗಾನ ಮುದ್ರಿಕೆಗಳ ಸಂಕಲನ) `ಲಾ ವಾಸ್ರ್ಟಾ ಡೆ ತ್ರಿ ಆ್ಯನಿ’ ಅನ್ನು ಬಿಡುಗಡೆ ಮಾಡಲಾಯಿತು. 2002ರ ಅಕ್ಟೋಬರ್ 6 ರಂದು. ಪೂರ್ವ ಯೂರೋಪಿನ ಪುಟ್ಟ ದೇಶ ಮಾಲ್ಡೋವಾದಲ್ಲಿ ಜನಿಸಿದ ಕ್ಲಿಯೋ ಎಮ್‍ಟಿವಿ ಪ್ರಶಸ್ತಿ ಪಡೆದಿದ್ದಾಳೆ. ಆ ಪ್ರಶಸ್ತಿ ಪಡೆದ ಜಗತ್ತಿನ ಅತಿ ಕಿರಿಯ ವ್ಯಕ್ತಿ ಆಕೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top