fbpx
Achivers

ಮುಂಬೈ ಸ್ಲಮ್ ನ ಹುಡುಗಿ ಇಂದು 100 ಮಿಲಿಯನ್ ಡಾಲರ್ ನ ಒಡತಿ

ಮಹಾರಾಷ್ಟ್ರದ ಅಕೋಲಾದ ಒಂದು ಬಡ ಹಿಂದುಳಿದ ವರ್ಗದ ಕುಟುಂಬದಲ್ಲಿ ಪೊಲೀಸ್ ಪೇದೆಗೆ 5 ಮಕ್ಕಳು ಅದರಲ್ಲಿ ಮೂರು ಹೆಣ್ಣು ಮಕ್ಕಳು ,ಇಬ್ಬರು ಗಂಡು ಮಕ್ಕಳು.

ಕಡುಬಡತನದ ಬಾಲ್ಯ

ಕಡು ಬಡತನದ ಕುಟುಂಬದಲ್ಲಿ ಐವರು ಮಕ್ಕಳ ಪೈಕಿ ಹಿರಿಯವಳು ಈ ಕಲ್ಪನಾ ಸರೋಜ್ ,ಅಪ್ಪ ತರುತ್ತಿದ್ದ ಸಂಬಳದಲ್ಲಿ ಒಂದೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ಹೀಗಿರುವ ತಮ್ಮ ಅಕ್ಕ ಪಕ್ಕದ ದಲಿತ ಕುಟುಂಬಗಳಲ್ಲಿ ಬಾಲ್ಯ ವಿವಾಹ ಸರ್ವೇ ಸಾಮಾನ್ಯ ವಾಗಿತ್ತು.

ದುಡ್ಡಿಗಿದ್ದ ಅತಿಯಾದ ಅಗತ್ಯತೆಯಿಂದ ಹೇಗಾದರೂ ಮಗಳಿಗೆ ಮದುವೆ ಮಾಡಿಬಿಡುವ , ಸಂಸಾರದ ಹೊರೆ ಕಡಿಮೆ ಮಾಡಿಕೊಳ್ಳುವ ಎನ್ನುವ ಮನಸ್ಥಿತಿ ಸರೋಜ್ ನ ತಂದೆಯದಾಗಿರುತ್ತದೆ, ಹಾಗೆ ಒಂದು ದಿನ ಸರೋಜ್ 12 ವರ್ಷದವಳಾಗಿದ್ದಾಗ ಸರೋಜ್ ನ ತಂದೆ ಸರೋಜ್ ಳಿಗೆ ತನಗಿಂತ 10 ವರ್ಷ ದೊಡ್ಡವನಾದ ವ್ಯಕ್ತಿಗೆ ಮದುವೆ ಮಾಡಿ ಕೊಟ್ಟುಬಿಡುತ್ತಾರೆ.

ಕಷ್ಟದ ವೈವಾಹಿಕ ಜೀವನ

ತನ್ನ ಮುಂದಿನ ಜೀವನ ಮುಳ್ಳಿನ ಹಾಸಿಗೆ ಎಂದು ತಿಳಿದಿದ್ದ ಹುಡುಗಿ , ಅತೀವ ದುಃಖದಿಂದ ಗಂಡನ ಮನೆಯನ್ನು ಪ್ರವೇಶಿಸುತ್ತಾಳೆ.

ಅದು ಮುಂಬೈನ ಕೊಳಗೇರಿ ಒಂದರಲ್ಲಿ ಇದ್ದ ಮನೆ, ನಿತ್ಯ ಕುಡಿದು ಬರುತ್ತಿದ್ದ ಗಂಡ , ಅತ್ತೆ ಮಾವನ ಕುಹಕಿ ಮಾತುಗಳು, ಒಡೆತ,ಬಡೆತ ಎಲ್ಲದರಿಂದಳು ಬೇಸತ್ತು ಹೋಗಿದ್ದಳು ಸರೋಜ್ ,ಅದೊಂದು ದಿನ ಸರೋಜ್ ನ ತಂದೆ ಆಕೆಯನ್ನು ನೋಡಲು ಬರುತ್ತಾರೆ .

ಸರೋಜ್ ನ ವಾಸ್ತವ ಪರಿಸ್ಥಿತಿಯನ್ನು ಕಂಡು ಬೇಜಾರುಪಟ್ಟುಕೊಂಡು ಮಗಳನ್ನು ತಮ್ಮೊಂದಿಗೆ ಕರೆದುಕೊಂಡು ವಾಪಸ್ ತಮ್ಮ ಮನೆಗೆ ಬಂದು ಬಿಡುತ್ತಾರೆ,ಸರೋಜ್ ನ ಅಕ್ಕ ಪಕ್ಕದ ಮನೆಯವರ ನಿತ್ಯ ಆಕೆಯನ್ನು ಕಂಡು ಗಂಡ ಬಿಟ್ಟವಳೆಂದು, ಕುಟುಂಬಕ್ಕೆ ಕಳಂಕವೆಂದು ನಿಂದಿಸುತ್ತ ಇರುತ್ತಾರೆ.

ಹೀಗೆ ಇರುವಾಗ ಒಮ್ಮೆ ತನ್ನ ಜೀವನವನ್ನು ಕೊನೆಗೊಳಿಸಬೇಕೆಂದು ನಿರ್ಧಾರಮಾಡಿ ವಿಷ ಸೇವನೆಯನ್ನು ಮಾಡುತ್ತಾಳೆ, ಅದೃಷ್ಟವಶಾತ್ ಬದುಕಿ ಉಳಿಯುತ್ತಾಳೆ, ಅಂದೇ ತಾನು ಏನಾದರೂ ಮಾಡುತ್ತೇನೆ ಎಂದು ನಿರ್ಧಾರ ಮಾಡುತ್ತಾಳೆ.

ಟೈಲರ್ ಆಗಿ ಒಂದು ಬಟ್ಟೆಗೆ 10 ರೂಪಾಯಿಯಂತೆ ದುಡಿಯಲು ಶುರು ಹಚ್ಚಿ ನಂತರ ಕುಟುಂಬ ನಡೆಸಲು ಸಾಕಾಗುದಿವುದಿಲ್ಲವೆಂದು ಮುಂಬೈಗೆ ತೆರಳಿ ಒಂದು ಬೇಕರಿ ಒಂದರಲ್ಲಿ ಕೆಲಸ ಮಾಡಲು ಶುರು ಮಾಡುತ್ತಾಳೆ ನಂತರದ ದಿನಗಳಲ್ಲಿ ಅಕೋಲಾದಲ್ಲಿದ್ದ ತನ್ನ ಕುಟುಂಬವು ಆಕೆಯ ಜೊತೆಯಾಗುತ್ತದೆ , ಮುಂಬೈ ಅಪಾರ್ಟ್ಮೆಂಟ್ ಒಂದನ್ನು 40 ರುಪಾಯಿಗೆ ಬಾಡಿಗೆ ಹಿಡಿದು ಸಾಗುತ್ತದೆ ಜೀವನ.

ತನ್ನ ಎರಡನೇ ತಂಗಿಯು ಕಾಯಿಲೆಗೆ ತುತ್ತಾಗುತ್ತಾಳೆ ಆಕೆಯನ್ನು ಸರೋಜ್ ಳ ಖಾಲಿ ಕೈ ಉಳಿಸಿಕೊಳ್ಳಲು
ಆಗಲಿಲ್ಲ, ಅಂದು ಆಕೆ ಬದುಕಲು ದುಡ್ಡಿನ ಅನಿವಾರ್ಯತೆ ಬಹಳವಿದೆ ನಾನು ದುಡ್ಡು ಮಾಡಿಯೇ ತೀರುತ್ತೇನೆ ಎಂದು ಕಂಕಣತೊಟ್ಟಳು.

ಮಿಂಚಲು ಶುರು ಮಾಡಿದ ತಾರೆ!

ಜ್ಯೋತಿ ಬಾಪುಲೆ scheme ಒಂದರ ಆಧಾರದ ಅಡಿ ಸರ್ಕಾರದಿಂದ loan ಪಡೆದು ಪೀಠೋಪಕರಣದ ಮಾರಾಟದ ಅಂಗಡಿಯೊಂದನ್ನು ತೆರೆಯುತ್ತಾಳೆ, ಇದು ಹೆಚ್ಚು ಬೆಲೆಯ ಪೀಠೋಪಕರಣಗಳನ್ನು ಕಡಿಮೆ ಬೆಲೆಗೆ ಮರು ಮಾರಾಟಮಾಡುವ ಉದ್ದಿಮೆ ಯಾಗಿರುತ್ತದೆ.
ಆ ನಂತರ ರಿಯಲ್ ಎಸ್ಟೇಟ್ ಉದ್ದಿಮೆಗೂ ಸಹ ಕೈ ಹಾಕಿ ಹೆಚ್ಚು ಹಣ ಹಾಗೂ ಜನಪ್ರಿಯತೆ
ಸಂಪಾದಿಸುತ್ತಾಳೆ.

ಅಳಿವಿನ ಅಂಚಿನಲ್ಲಿದ್ದ ಸ್ವಾತಂತ್ರ ಹೋರಾಟಗಾರ ಗಾಂಧೀಜಿಯವರ ಅನುಯಾಯಿ ಕಾಮೆನಿ ಯವರು ಕಟ್ಟಿ ಬೆಳೆಸಿದ್ದ ಕಾಮೆನಿ ಕಂಪನಿಗಳಲ್ಲಿ ಒಂದಾಗಿದ್ದ ಕಾಮೆನಿ ಪೈಪ್ಸ್ ನ ಚೇರ್ಮನ್ ಆಗಿ ಅಧಿಕಾರ ಸ್ವೀಕಾರ ಮಾಡುತ್ತಾಳೆ.


ಇದು ಆಕೆಯ ಜೀವನದ ಮೈಲಿಗಲ್ಲು 100 ಮಿಲಿಯನ್ ಡಾಲರ್ ನ ಒಡತಿಯಾಗುತ್ತಾಳೆ.
2013ರಲ್ಲಿ ಪದ್ಮ ಶ್ರೀ ಪ್ರಶಸ್ತಿಗೂ ಭಾಜನರಾಗುತ್ತಾರೆ.

ಸ್ವಂತ ಉದ್ದಿಮೆದಾರರಾಗಲು ಡಿಗ್ರಿಗಳ ಅವಶ್ಯಕತೆ ಇಲ್ಲ ಕೇವಲ ಬುದ್ಧಿ ಬಲ , ಪರಿಶ್ರಮ ಮುಖ್ಯ
ಮನಸ್ಸಿದ್ದರೆ ಮಾರ್ಗ ಯೋಗ ಇದ್ದವನಿಗೆ ಒಳ್ಳೆದು ಆಗುತ್ತದೆ, ಸಾಮಾನ್ಯನು ಅಸಾಮಾನ್ಯನಾಗುತ್ತಾನೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top