
P V Sindhu and Sakshi Malik; Source: India Today
ಏನಾದರೂ ಸಾಧನೆ ಮಾಡಬೇಕೆನ್ನುವವರು ಧೈರ್ಯ ಮತ್ತು ಸಾಹಸದಿಂದ ಮುನ್ನುಗ್ಗಿದಾಗ ಯಶಸ್ಸು ಮತ್ತು ಕೀರ್ತಿ ಅವರನ್ನು ಹುಡುಕಿಕೊಂಡು ಬರುತ್ತದೆ. ನಮ್ಮ ದೇಶದ ಸಾಕ್ಷಿ ಮಲ್ಲಿಕ್ 59 ಕೆ.ಜಿ.ವರ್ಗದಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ರಿಯೋ ಒಲಿಂಪಿಕ್ಸ್ನಲ್ಲಿ ಭಾರತದ ಕೀರ್ತಿಪತಾಕೆಯನ್ನು ಎತ್ತಿಹಿಡಿದರು. ಬ್ಯಾಡ್ಮಿಂಟನ್ ಪಟು ಪಿ.ವಿ. ಸಿಂಧು ಬೆಳ್ಳಿ ಪದಕಕ್ಕೆ ಭಾಜನರಾಗುವ ಮೂಲಕ ಕೋಟ್ಯಂತರ ಭಾರತೀಯರು ಗರ್ವದಿಂದ ತಲೆಯೆತ್ತುವಂತೆ ಮಾಡಿದರು. ಜಿಮ್ನಾಸ್ಟ್ ದೀಪಾ ಕರ್ಮಾಕರ್ ಒಲಂಪಿಕ್ನ ವ್ಯಕ್ತಿಗತ ವಾಲ್ಟ್ ಸ್ಪರ್ಧೆಯ ಕೊನೆಯ ಹಂತದಲ್ಲಿ ಪ್ರವೇಶ ಗಿಟ್ಟಿಸಿ ಇತಿಹಾಸ ಸೃಷ್ಟಿಸಿದರು. ಪ್ಯಾರಾಲಂಪಿಕ್ಸ್ ಕ್ರೀಡೆಗಳಲ್ಲಿ ಶಾಟ್ಪುಟ್ನಲ್ಲಿ ಬೆಳ್ಳಿ ಪದಕ ಪಡೆದ ಪ್ರಪ್ರಥಮ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆ ಪಾತ್ರರಾದವರು 45 ವರ್ಷದ ದೀಪಾ ಮಲಿಕ್…!
ಸಶಕ್ತ ಮಹಿಳೆಸ್ಪೋಟ್ರ್ಸ್ ಪ್ರಮೋಟರ್ ಮತ್ತು ರಿಲಾಯನ್ಸ್ ಸಂಸ್ಥಾಪಕಿ ನೀತಾ ಅಂಬಾನಿ ಅವರನ್ನು ಏಷ್ಯಾದ ಪ್ರಭಾವಿ ಮಹಿಳೆಯ ಪಟ್ಟ ನೀಡಿ ಪ್ರಸಿದ್ಧ ಫೋಬ್ರ್ಸ್ ಪತ್ರಿಕೆ ಗೌರವಿಸಿತು. ಒಲಂಪಿಕ್ ಸಮಿತಿಯಲ್ಲಿರುವ ಏಕೈಕ ಭಾರತೀಯ ಮಹಿಳಾ ಸದಸ್ಯೆ ಅವರೆಂಬುದು ವಿಶೇಷ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮುಖ್ಯಸ್ಥೆ ಅರುಂಧತಿ ಭಟ್ಟಾಚಾರ್ಯ ಅವರಿಗೆ ಅಮೆರಿಕ ಬಿಟ್ಟು ಬೇರೆಡೆ ಇರುವ ಅತ್ಯಂತ ಪ್ರಭಾವಿ ಮತ್ತು ಶಕ್ತಿಶಾಲಿ ಮಹಿಳೆ ಎಂದು ಗುರುತಿಸಿದ ಫೋಬ್ರ್ಸ್ 25ನೇ ಸ್ಥಾನ ನೀಡಿತು. ಐಸಿಐಸಿಐ ವ್ಯವಸ್ಥಾಪಕ ನಿರ್ದೇಶಕಿ ಚಂದಾಕೋಚರ್, ಎಕ್ಸಿಸ್ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿಖಾ ಶರ್ಮಾ ಅವರಿಗೂ 50ನೇ ಸ್ಥಾನ ನೀಡಿತು.ಫೋಬ್ರ್ಸ್ ಬಿಡುಗಡೆ ಮಾಡಿದ ಜಗತ್ತಿನ ಅತ್ಯಂತ ಶ್ರೀಮಂತ ನೂರು ಮಂದಿಯಲ್ಲ್ಲಿ ಉದ್ಯಮಿ ಕಿರಣ್ ಮಜುಂದಾರ್ ಎಲ್ಲಕ್ಕಿಂತ ಶ್ರೀಮಂತ ಮತ್ತು ಆತ್ಮವಿಶ್ವಾಸದ ಮಹಿಳೆಯಾಗಿ ಹೊರಹೊಮ್ಮಿದರು.

ಕಿರಣ್ ಮಝುಮದಾರ್ ಮತ್ತು ಚಂದ ಕೋಚ್ಚರ್; Source: India Today
ಜೈವಿಕ ವಿಜ್ಞಾನಕ್ಷೇತ್ರದಲ್ಲಿ ನೀಡಿದ ಉತ್ಕøಷ್ಠ ಕೊಡುಗೆಗಾಗಿ ಫ್ರಾನ್ಸ್ನ ಉನ್ನತ ನಾಗರಿಕ ಸನ್ಮಾನಕ್ಕೂ ಕಿರಣ್ ಪಾತ್ರರಾದರು.ಕ್ಯೂ ಸಿಗ್ಮಾದ ಸಿಇಓ ಅಂಬಿಕಾ ಧೀರಜ್-14ನೇ ಸ್ಥಾನ, ವೆಲ್ಸ್ಪನ್ ಇಂಡಿಯಾದ ಸಿಇಓ ದೀಪಾಲಿ ಗೋಯಂಕಾ-16ನೇ ಸ್ಥಾನ, ಲ್ಯೂಪಿನ್ ಸಿಇಓ ನೀನಾ ಟಂಡನ್-18ನೇ ಸ್ಥಾನ ಮತ್ತು ವಿಎಲ್ಸಿಸಿಯ ವಂದನಾ ಲೂಥರ್ಗೆ 26ನೇ ಸ್ಥಾನ ನೀಡಿ ಫೋಬ್ರ್ಸ್ ಗೌರವಿಸಿದೆ.ಯುವ ನಾಯಕಿಸಂಯುಕ್ತರಾಷ್ಟ್ರದಲ್ಲಿ ಯುವ ನೇತಾರರನ್ನಾಗಿ ಆಯ್ಕೆ ಮಾಡಲಾದ ಜಗತ್ತಿನ 17 ಯುವ ನಾಯಕರ ಪೈಕಿ ಭಾರತದ 25ರ ತ್ರಿಷಾ ಶೆಟ್ಟಿ ಹೆಸರೂ ಸೇರ್ಪಡೆಗೊಂಡಿದ್ದು ಈ ವರ್ಷದ ವಿಶೇಷತೆಗಳಲ್ಲೊಂದು. ಈಕೆ ಶೀರೋಜ್ ಹೆಸರಿನ ಸಂಸ್ಥೆ ಸ್ಥಾಪಿಸುವ ಮೂಲಕ ಭಾರತದಲ್ಲಿ ನಡೆಯುವ ಲೈಂಗಿಕ ಕಿರುಕುಳ ಮತ್ತು ಹಲ್ಲೆಗಳ ವಿರುದ್ಧ ಕ್ರಮ ಕೈಗೊಳ್ಳುವ ಕುರಿತಂತೆ ಮಹಿಳೆಯರಲ್ಲಿ ಜಾಗೃತಿ ಮೂಡಿಸುವ, ಅವರನ್ನು ಶಿಕ್ಷಿತರನ್ನಾಗಿಸುವುದರ ಜೊತೆಗೆ ಸಂತ್ರಸ್ತ ಮಹಿಳೆಯರಿಗೆ ಪುನರ್ವಸತಿಯನ್ನೂ ಕಲ್ಪಿಸುವ ಮಹತ್ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
60000ಕ್ಕೂ ಮೇಲ್ಪಟ್ಟು ಯುವಜನತೆ ಈ ಸಂಸ್ಥೆ ಸೇರಿಕೊಂಡಿದ್ದಾರೆ..!ಜಾಗತಿಕ ಕುಬೇರಇನ್ನು ಫೋಬ್ರ್ಸ್ ಬಿಡುಗಡೆ ಮಾಡಿದ ನೂರು ಜಾಗತಿಕ ಕುಬೇರರ ಪಟ್ಟಿಯಲ್ಲಿ ಓ.ಪಿ. ಜಿಂದಾಲ್ ಗ್ರೂಪ್ನ ಅಧ್ಯಕ್ಷೆ ಸಾವಿತ್ರಿ ಜಿಂದಾಲ್-5.3 ಅರಬ್ ಡಾಲರ್-19ನೇ ಸ್ಥಾನ, ಕಿರಣ್ ಮಜುಂದಾರ್ ಶಾ 1.83 ಅರಬ್ ಡಾಲರ್-65ನೇ ಸ್ಥಾನ, ಲೀನಾ ತಿವಾರಿ 79ನೇ ಸ್ಥಾನ ಪಡೆದಿದ್ದಾರೆ. ಹೆಚ್ಚಿನ ಆದಾಯಜಗತ್ತಿನ ಅತೀ ಹೆಚ್ಚು ಆದಾಯದ ಕಿರುತೆರೆ ಅಭಿನೇತ್ರಿಯರ ಪೈಕಿ ಬಾಲಿವುಡ್ನ ಪ್ರಿಯಾಂಕಾ ಚೋಪ್ರಾ ಎಂಟನೇ ಸ್ಥಾನ ಪಡೆಯುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಕಲಾವಿದೆಯರ ಹೆಸರು ಬೆಳಗಿಸಿದ್ದಾರೆ.

ಸಾವಿತ್ರಿ ಜಿಂದಾಲ್; Source: Hindustan Times
ಹೌದು, ಬಾಲಿವುಡ್ನ ಹಿರಿ ತೆರೆ ನಟಿ ಪಿಗ್ಗಿ ಚಾಪ್ಸ್ ಅಮೆರಿಕದಲ್ಲಿ ಕ್ವಾಂಟಿಕೋ ಹೆಸರಿನ ಟಿ.ವಿ. ಸೀರಿಯಲ್ನಲ್ಲಿ ನಟಿಸುವ ಮೂಲಕ ಮನೆಮಾತಾಗಿದ್ದು, ಟೈಮ್ಸ್ ಬಿಡುಗಡೆ ಮಾಡಿದ್ದ ಜಗತ್ತಿನ ಅತ್ಯಂತ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲೂ ಸ್ಥಾನ ಪಡೆದಿದ್ದರು. ತನ್ಮೂಲಕ ಪ್ರಿಯಾಂಕಾಳ ಖ್ಯಾತಿ ಯಾವ ಉತ್ತುಂಗಕ್ಕೇರಿತ್ತೆಂದರೆ ಫೋಟೋ ಶೇರಿಂಗ್ ಸೈಟ್ ಇನ್ಸ್ಟಾಗ್ರಾಮ್ನಲ್ಲಿ ಇವರ ಪ್ರಶಂಸಕರ ಸಂಖ್ಯೆ 50ಲಕ್ಷಕ್ಕೇರಿತ್ತು. ಜೊತೆಗೆ ಕ್ವಾಂಟಿಕೋ ಧಾರಾವಾಹಿಯಲ್ಲಿ ಇವರು ನೀಡಿದ ಆಕರ್ಷಕ ನಟನೆಗಾಗಿ `ಪೀಪಲ್ಸ್ ಚಾಯ್ಸ್’ ಪ್ರಶಸ್ತಿಗೂ ಇವರು ಪಾತ್ರರಾದರು. ಬಾಜೀರಾವ್ ಮಸ್ತಾನಿ ಚಿತ್ರದಲ್ಲಿನ ಅತ್ಯುತ್ತಮ ಪೋಷಕ ಪಾತ್ರಕ್ಕಾಗಿ ಫಿಲ್ಮ್ಫೇರ್ ಮತ್ತುಐಫಾ ಪ್ರಶಸ್ತಿಗಳಿಂದಲೂ ಪ್ರಿಯಾಂಕಾ ಸನ್ಮಾನಿತರಾದರು.ಯಂಗ್ ಗ್ಲೋಬಲ್ ಲೀಡರ್ಸ್ವಿಶ್ವ ಆರ್ಥಿಕ ಫೋರಮ್ನ ಯಂಗ್ ಗ್ಲೋಬಲ್ ಲೀಡರ್ಸ್ನ ನೂತನ ಪಟ್ಟಿಯಲ್ಲಿ ಕತಿಕಾ ದೀವಾನ್, ಬಾಸ್ಕೋ ಗ್ರೂಪ್ನ ಸಿಇಓ ದಿವ್ಯಾ ಸೂದಿವರಾ, ಶೀತಲ್ ಆಮ್ಟೆ ತಮ್ಮ ಪಾರಮ್ಯ ಮೆರೆದರು.

ಪ್ರಿಯಾಂಕಾ ಚೋಪ್ರಾ; Source: India Today
ಎಲ್ಲಕ್ಕಿಂತ ವಿಶೇಷವೆಂದರೆ ಜಗತ್ತಿನಲ್ಲೇ ಪ್ರಪ್ರಥಮವಾಗಿ ಮಾನವ ಅಸ್ಥಿ ವಿಕಸಿತಗೊಳಿಸುವ ಸಂಸ್ಥೆ ಸ್ಥಾಪಿಸಿದ ನೀನಾ ಟಂಡನ್ ಹೆಸರು ಕೂಡಾ ಈ ಪಟ್ಟಿಯಲ್ಲಿದ್ದುದು..!ಕೊನೆಹನಿಸದ್ದಿಲ್ಲದ ಸರಿದು ಹೋದ ದಿನಗಳಲ್ಲಿ ಇಷ್ಟೊಂದು ಮಹಿಳೆಯರು ಭಾರತಮಾತೆಯ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎತ್ತಿ ಹಿಡಿದಿದ್ದಾರೆ. ಇವರು ಸಾಧನೆಯಲ್ಲಿ ಯಾವ ಪುರುಷರಿಗೆ ಕಡಿಮೆ? ತಮಗಿರುವ ಅವಕಾಶದ ಪರಿಧಿಯನ್ನೇ ವಿಸ್ತರಿಸಿಕೊಂಡು, ಪಾಲಿಗೆ ಬಂದದ್ದಷ್ಟೇ ಪಂಚಾಮೃತವೆಂದುಕೊಳ್ಳದೆ ಹೆಚ್ಚಿನ ಗಳಿಕೆಗಾಗಿ ಅಮೂಲ್ಯ ಕ್ಷಣಗಳನ್ನೆಲ್ಲ ಒತ್ತೆಯಿಟ್ಟು, ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಸಾಧನೆಯ ಸಾರ್ಥಕ ಕ್ಷಣಗಳನ್ನು ಅಪ್ಪಿಕೊಂಡು, ದೇಶವೇ ಹೆಮ್ಮೆ ಪಡುವಂತೆ ಮಾಡಿದವರು. ಮಗಳ ಹುಟ್ಟನ್ನು ವಿರೋಧಿಸುವ, ತಡೆಯುವ ಜನರ ನಡುವೆಯೇ ಇಂತಹ ಅಪ್ರತಿಮ ಪ್ರತಿಭಾವಂತೆಯರನ್ನು ಹೆತ್ತ ಭಾರತಮಾತೆ ಧನ್ಯೆ! ಮುಂಬರುವ ವರುಷಗಳಲ್ಲಿ ಇಂಥ ಹೆಮ್ಮೆಯ ಪುತ್ರಿಯರ ಸಂತಾನ ಲಕ್ಷ…ಲಕ್ಷವಾಗಲೀ…!
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
