ನಮ್ಮ ಬದುಕಿನಲ್ಲಿ ಹಾಸುಹೊಕ್ಕಾದ ವಿದ್ಯುತ್ ಬಲ್ಬ್ನ್ನು ವಿಜ್ಞಾನಿ ಥಾಮಸ್ ಆಲ್ವಾ ಎಡಿಸನ್ ಕಂಡುಹಿಡಿದನೆಂಬುದು ತಿಳಿದ ವಿಷಯ. ಬಲ್ಬ್ ಬಗ್ಗೆ ಎಡಿಸನ್ ಪ್ರಯೋಗ ನಡೆಸಿದ್ದು 1830ರಲ್ಲಿ. ಆದರೆ ಉತ್ಪಾದನೆಗೆ ಯಾರೂ ಮುಂದಾಗಲಿಲ್ಲ. ಅದನ್ನು ಹೇಗೆ ಹೆಚ್ಚಿನ ಸಂಖ್ಯೆಯಲ್ಲಿ ಉತ್ಪಾದನೆ ಮಾಡಬಹುದೆಂಬ ವಿಚಾರವೂ ಬರಲಿಲ್ಲ. ಕೊನೆಗೆ ಎಡಿಸನ್ ಇದನ್ನು ಸವಾಲಾಗಿ ತೆಗೆದುಕೊಂಡು 1870ರಲ್ಲಿ ಮತ್ತಷ್ಟು ಪ್ರಯೋಗ ನಡೆಸಿ ಬಲ್ಬ್ ತಯಾರಿಕೆಗೆ ಪ್ರಾರಂಭಿಸಿದನು.
1879ರಲ್ಲಿ ಎಡಿಸನ್ ಮೊದಲ ಬಾರಿಗೆ ಹೆಚ್ಚು ನಿರ್ವಾತವಿರುವ ಬಲ್ಬ್ನ್ನು ಸೃಷ್ಟಿಸಿದನು. ಇವು ಹೆಚ್ಚು ಗಂಟೆ ಉರಿಯಬಲ್ಲವು ಎಂಬುದು ಅವರ ನಿರೀಕ್ಷೆಯಾಗಿತ್ತು. ಮತ್ತೆ ಕೆಲ ರಾಸಾಯನಿಕಗÀಳನ್ನು ಬದಲು ಮಾಡಿ 1979ರ ಡಿಸೆಂಬರ್ 31ರಂದು ಅಮೆರಿಕದ ಮೆನ್ಲೋ ಪಾರ್ಕ್ನಲ್ಲಿ ಮೊದಲ ಸಲ ಸಾರ್ವಜನಿಕ ಪ್ರದರ್ಶನ ನೀಡಿದರು. 1882ರ ಸೆಪ್ಟೆಂಬರ್ 4ರಂದು ಬಲ್ಬ್ನಲ್ಲಿ ಮತ್ತಷ್ಟು ಆವಿಷ್ಕಾರ ಮಾಡಿ ಅಮೆರಿಕದ ಮೋರ್ಗನ್ವಾಲ್ ಸ್ಟ್ರೀಟ್ ಕಚೇರಿಯಲ್ಲಿ ವಿದ್ಯುತ್ ಬಲ್ಬ್ನ ಗುಂಡಿಯೊತ್ತಿದಾಗ ಕೊಠಡಿಯ ತುಂಬ ಪ್ರಕಾಶಮಾನವಾದ ಬೆಳಕು ಪ್ರಜ್ವಲಿಸಿತು.
ಅದೇ ದಿನ ನ್ಯೂಯಾರ್ಕ್ ನಗರದಲ್ಲಿ 52 ವಿದ್ಯುತ್ ಬಲ್ಬ್ಗಳು ಬೆಳಗಿದವು.ಭಾರತದಲ್ಲಿ 1857ರ ಸುಮಾರಿಗೆ ಕೋಲ್ಕತ್ತಾದ ಜನತೆ ಓರಿಯಂಟ್ ಗ್ಯಾಸ್ ಕಂಪೆನಿಯ ಗ್ಯಾಸ್ಲೈಟ್ಗಳನ್ನೂ (ಪೆಟ್ರೋಮ್ಯಾಕ್ಸ್) ಬಳಸುತ್ತಿದ್ದರು. ದೇಶದಲ್ಲಿ ಮೊದಲ ಬಾರಿಗೆ 1889ರ ಜುಲೈ 24ರಂದು ಫ್ಲೇವ್ರಿ ಕಂಪೆನಿ ವಿದ್ಯುತ್ ಪ್ರದರ್ಶನಗಳನ್ನು ಕೋಲ್ಕತ್ತದಲ್ಲಿ ನೀಡಿತು. ಅಂದು ನೆರೆದ ಜನ ಇದನ್ನು ಅತ್ಯಾಶ್ಚರ್ಯದಿಂದ ನೋಡಿದರು. 1901ರಿಂದ ಇಂದಿನವರೆಗೆ ಅಮೆರಿಕದ ಕ್ಯಾಲಿಫೋರ್ನಿಯಾದ ಲೈವರ್ಮೋರ್ನಲ್ಲಿ 4 ವ್ಯಾಟ್ ಸಾಮಥ್ರ್ಯದ ಬಲ್ಬ್ ಇಂದಿಗೂ ಉರಿಯುತ್ತಿದೆ.

ಲೈವರ್ಮೋರ್ ಬಲ್ಬ್
ಎರಡು ಸಲ ಮಾತ್ರ ಸ್ವಿಚ್ ಆಫ್ ಮಾಡಲಾಗಿದೆ. ಪ್ಯಾರಿಸ್ನ ಐಫೆಲ್ ಟವರ್ನಲ್ಲಿ 20 ಸಾವಿರಕ್ಕೂ ಹೆಚ್ಚು ಮಿನುಗುವ ಬಲ್ಬ್ಗಳಿವೆ. ವಾರ್ಷಿಕ 75 ಲಕ್ಷ ಕಿಲೋವ್ಯಾಟ್ ವಿದ್ಯುತ್ ಇದಕ್ಕಾಗಿ ವ್ಯಯವಾದರೆ, 2.20 ಕೋಟಿ ರೂ. ವಿದ್ಯುತ್ ಬಿಲ್ಲು ಸಂದಾಯವಾಗುತ್ತದೆ. ಅಮೆರಿಕದ ಶ್ವೇತಭವನದ ಎದುರು ಕ್ರಿಸ್ಮಸ್ ಸಂದರ್ಭದಲ್ಲಿ ಸ್ಥಾಪಿಸಲಾಗುವ ಕ್ರಿಸ್ಮಸ್ ಟ್ರೀಗೆ 2000ವ್ಯಾಟ್ ವಿದ್ಯುತ್ ಬೇಕು.ರಾಷ್ಟ್ರಪತಿ ಭವನದಲ್ಲಿ ವಿದ್ಯುತ್ಗಾಗಿ ಪ್ರತಿವರ್ಷ ಖರ್ಚಾಗುವ ಮೊತ್ತ 7 ಕೋಟಿ ರೂಪಾಯಿ.
ಮೈಸೂರು ಅರಮನೆ 98 ಸಾವಿರಕ್ಕೂ ಹೆಚ್ಚು ವಿದ್ಯುತ್ದೀಪಗಳಿಂದ ಸಿಂಗಾರಗೊಂಡು ಕಂಗೊಳಿಸುತ್ತದೆ. ಇದಕ್ಕಾಗಿಯೇ ವಿದ್ಯುತ್ ಪೂರೈಸಲು ನಾಲ್ಕು ವಿದ್ಯುತ್ ಉಪಕೇಂದ್ರಗಳಿವೆ. ಅಮೆರಿಕಾದ ಲಾಸ್ವೇಗಾನ್ನಲ್ಲಿ ಮನುಷ್ಯ ನಿರ್ಮಿತ ಬೆಳಕಿನ ಅತ್ಯಂತ ಶಕ್ತಿಶಾಲಿ ಕಿರಣ, ಕ್ಲಿನಾನ್ ಮೂಲವಸ್ತುವಿನ ಸಹಾಯದಿಂದ ಉರಿಯುವ 39 ಬಲ್ಬ್ಗಳ ಕಿರಣ ಬೆಳಗಿದರೆ ಹತ್ತು ಮೈಲಿ ಎತ್ತರದಲ್ಲಿ ಪುಸ್ತಕ ಓದಬಹುದು. `ನಾವು ವಿದ್ಯುತ್ಅನ್ನು ತೀರಾ ಅಗ್ಗ ಮಾಡುತ್ತಿದ್ದೇವೆ. ಎಷ್ಟರಮಟ್ಟಿಗೆ ಎಂದರೆ ಮೋಂಬತ್ತಿ ಉರಿಸುವವನು ಶ್ರೀಮಂತ ಅನಿಸಿಕೊಳ್ಳಬೇಕು’ ಎಂದು ಎಡಿಸನ್ 1879ರ ಡಿಸೆಂಬರ್ 31ರ ಪ್ರಾತ್ಯಕ್ಷಿಕೆಯಲ್ಲಿ ಅಡಿದ ಮಾತು ನಿಜ ಅನಿಸುತ್ತದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
