fbpx
Achivers

ಪ್ರತಿಯೊಬ್ಬ ಬೆಂಗಳೂರಿನ ನಾಗರಿಕನಿಗೂ ಮಾದರಿ ಇವರು!!

ವಿನಾಶದತ್ತ ಸಾಗುತ್ತಿರುವ ರಾಜಧಾನಿ ಬೆಂಗಳೂರಿನಲ್ಲಿ ವಾಯು ಮಾಲಿನ್ಯ, ಶಬ್ಧ ಮಾಲಿನ್ಯ ಹೆಚ್ಚಾಗುತ್ತಿದೆ. ಈ ಕಾರಣದಿಂದ ಅನೇಕ ಗೃಹಿಣಿಯರು ತಮ್ಮ ಮನೆಯ ಸುತ್ತ-ಮುತ್ತಲು ಗಿಡಮರಗಳನ್ನು ಬೆಳೆಸಿ, ತಾವು ವಾಸಿಸುವ ಪರಿಸರವನ್ನು ರಕ್ಷಣೆ ಮಾಡಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದಾರೆ. ಇದಲ್ಲದೆ ಹಣ್ಣು, ತರಕಾರಿಗಳು, ಸೊಪ್ಪು ಹೀಗೆ ತಮ್ಮ ಮನೆಗೆ ಬೇಕಾದ ಆಹಾರ ಪದಾರ್ಥಗಳನ್ನು ಬೆಳೆಸಿಕೊಂಡು ಉಪಯೋಗಿಸುತ್ತಿದ್ದಾರೆ. ಇಂತಹ ವ್ಯಕ್ತಿಗಳಲ್ಲಿ ಜಯಶ್ರೀ ಹೆಗಡೆ ಒಬ್ಬರು.

ಕೈ ತೋಟ ನಿರ್ವಹಣೆ ಬೆಂಗಳೂರಿನ ಮಾಚೋಹಳ್ಳಿ ಯಲ್ಲಿರುವ ಇವರು ತಮ್ಮಮನೆಯ ಮುಂಭಾಗದಲ್ಲಿ ಹೂ, ಹಣ್ಣು ಗಿಡಗಳನ್ನು ಬೆಳೆಸಿದ್ದಾರೆ, ಹೆಚ್ಚು ಅರಣ್ಯ ಪ್ರದೇಶಗಳಿಂದ ಕೂಡಿರುವ ಸಿದ್ದಾಪುರದಲ್ಲಿ ಬೆಳೆದ ಇವರಿಗೆ ಪರಿಸರದ ಮೇಲೆ ಉನ್ನತವಾದ ಕಾಳಜಿ. ಇವರು ತಮ್ಮ ಕೈ ತೋಟದ ನಿರ್ವಹಣೆಗೆ ನಿತ್ಯವು ಶ್ರಮಿಸುತ್ತಿದ್ದಾರೆ. ಶುದ್ಧಗೊಳಿಸಿದ ನಂತರ ವ್ಯರ್ಥವಾಗುವ ನೀರನ್ನು ತಮ್ಮ ಕೈ ತೋಟಕ್ಕೆ ಬಳಸುವ ವ್ಯವಸ್ಥೆಯನ್ನು ಮಾಡಿಕೊಂಡಿದ್ದಾರೆ. ಆರೋಗ್ಯದ ದೃಷ್ಠಿಯಿಂದ ಮನೆಯ ಮುಂಭಾಗದ ಅವರಣದಲ್ಲಿ ಸಾವಯವಗೊಬ್ಬರದ ಮೂಲಕ ವಿವಿಧ ತರಕಾರಿಗಳನ್ನು ಬೆಳೆಸಿ ಉಪಯೋಗಿಸುವ ವ್ಯವಸ್ಥೆಯನ್ನು ಮಾಡಿಕೊಂಡಿದ್ದಾರೆ ಕಾಲಕ್ಕೆ ತಕ್ಕಂತಹ ಬೆಳೆ ಈ ಕೈ ತೋಟದಲ್ಲಿ ಸುಮಾರು 10-15 ತರದ ತರಕಾರಿ, 5-8 ರೀತಿಯ ಸೊಪ್ಪು.

ಹತ್ತಾರು ತರದ ಔಷಧಿ ಗಿಡಗಳನ್ನು ಬೆಳೆದಿದ್ದಾರೆ. ಇಲ್ಲಿ ಮುಂಜಾನೆ ಎದ್ದ ತಕ್ಷಣವೇ ಎಲ್ಲಾ ತರದ ತಾಜಾ ತರಕಾರಿ ಕೈಗೆ ಸಿಗುತ್ತದೆ. ಇದು ಯಾವುದೇ ರಾಸಯನಿಕ ಬಳಸದೇ ಸಾವಯವ ಗೊಬ್ಬರದಿಂದ ತಯಾರಾದ ತರಕಾರಿ. ಮಳೆಗಾಲದಲ್ಲಿ ಮನೆಯ ಮೇಲೆ ಬೀಳುವ ಮಳೆ ನೀರನ್ನು ಸಂಗ್ರಹಿಸಿ ಅದರಿಂದ ಕೈ ತೋಟದ ನಿರ್ವಹಣೆ ಮಾಡುತ್ತಾರೆ. ಮನೆಯ ಮುಂಭಾಗದ ಚಿಕ್ಕದಾದ ಜಾಗದಲ್ಲೇ ದೊಡ್ಡ ತರಕಾರಿ ತೋಟ ಮಾಡಿಕೊಂಡಿರುವ ಜಯಶ್ರೀ ಹೆಗಡೆ ಅವರಿಗೆ ಯಾವ ಕಾಲದಲ್ಲಿ ಯಾವ ಬೆಳೆಯನ್ನು ಬೆಳೆದರೆ ಉತ್ತಮ ಫಸಲು ಸಿಗುತ್ತದೆ ಎಂಬ ಅರಿವಿದೆ. ತಾವೇ ಸಿದ್ದಪಡಿಸಿರುವ ತೋಟದಲ್ಲಿ ತಮಗೆ ಬೇಕಾದ ತರಕಾರಿಯನ್ನು ಮನೆಯಲ್ಲಿ ಬಳಸುತ್ತಾರೆ.

ಇದರಿಂದ ಮಾರುಕಟ್ಟೆಯಲ್ಲಿ ತರಕಾರಿಯನ್ನು ಹೆಚ್ಚು ಖರೀದಿ ಮಾಡುತ್ತಿಲ್ಲ. ಈ ಕೈ ತೋಟದಿಂದ ನಿತ್ಯ ಸಮಯ ಹಾಗೂ ಹಣ ಉಳಿತಾಯವಾಗುತ್ತಿದೆ. ಅಲ್ಲದೆ, ತಮಗೆ ಬೇಕಾದ ತಾಜಾತರಕಾರಿಯಿಂದ ಅಡುಗೆ ಮಾಡಬಹುದು. ಇಲ್ಲಿನ ಗಿಡಗಳಿಗೆ ಯಾವುದೇ ರಾಸಾಯನಿಕ ಬಳಸದೆ, ಸಾವಯವಗೊಬ್ಬರದಿಂದ ಬೆಳೆದ ಕಾರಣಕ್ಕಾಗಿ ತಮ್ಮ ಆರೋಗ್ಯಕ್ಕೂ ಅನುಕೂಲವಾಗಿದೆ. ಇದೆ ರೀತಿ ಎಲ್ಲರೂ ತಮ್ಮ ಮನೆ ಮಹಡಿ ಮೇಲೆ ಅಥವಾ ಮನೆ ಮುಂಭಾಗದಲ್ಲಿ ಕೈ ತೊಟ ಮಾಡಿದರೆ ತಾಜಾತರಕಾರಿ ಜೊತೆಗೆ ಉತ್ತಮ ಆರೋಗ್ಯ ಸಿಗುತ್ತದೆ. ಇದಲ್ಲದೆ ನಿತ್ಯ ಮಾರುಕಟ್ಟೆ ಹೋಗದೆ ನೆಮ್ಮದಿ ಜೀವನ ನಡೆಸಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top