fbpx
ಆರೋಗ್ಯ

ಉಪ್ಪಿಗಿಂತ ರುಚಿಯಿಲ್ಲ, ಅತಿಯಾದರೆ ಸುಖವಿಲ್ಲ…!

ಗಾಳಿ, ನೀರಿನ ನಂತರ ಮನುಷ್ಯನಿಗೆ ಆಹಾರ ಅತಿಮುಖ್ಯ. ಅದರಲ್ಲಿಯೂ ಉಪ್ಪಿನ ಅಂಶ ಜೀವಕ್ಕೆ ಅತೀ ಅವಶ್ಯ. ಉಪ್ಪಿಲ್ಲದೇ ಜೀವಕೋಶವಿಲ್ಲ. ಉಪ್ಪಿಲ್ಲದೇ ರುಚಿಯಿಲ್ಲ. ಇತ್ತೀಚೆಗೆ ವೈಜ್ಞಾನಿಕ ಆಧಾರಗಳಿಂದ ತಿಳಿದುಬಂದ ಸಂಗತಿ ಏನೆಂದರೆ ಅನೇಕ ಜನ ಸಮುದಾಯಗಳಿಗೆ ಸ್ವಾಭಾವಿಕವಾಗಿ ಆಹಾರದಲ್ಲಿ ದೊರಕಬೇಕಾದಷ್ಟು ಅಯೋಡಿನ್ (Iodine) ಎಂಬ ರಾಸಾಯನಿಕ ಅಂಶವು ದೊರೆಯದೇ ಅದರ ಕೊರತೆಯಿಂದಾಗಿ ಥೈರಾಯ್ಡ್ ಗ್ರಂಥಿಯ ದೋಷಗಳು ಉಂಟಾಗುತ್ತವೆ. ಇದನ್ನು ಸರಿಪಡಿಸಲು ಅಂತಹ ವ್ಯಕ್ತಿಗಳಿಗೆ ಆಹಾರದ ಮೂಲಕ ಅಯೋಡಿನ್ ದೇಹಕ್ಕೆ ತಲುಪಿಸುವುದು ಹಾಗೂ ಥೈರಾಯ್ಡ್ ದೋಷಗಳನ್ನು ತಡೆಯುವುದು ಅವಶ್ಯ.

Image result for salt problems

Image Credits: RiverPools&Spas

ಥೈರಾಯ್ಡ್ ಗ್ರಂಥಿಯಿಂದ ಒಸರುವ ಹಾರ್ಮೋನ್ಗಳು ಕಡಿಮೆಯಾದರೂ ಅಥವಾ ಜಾಸ್ತಿಯಾದರೂ ದೈಹಿಕವಾಗಿ ವಿಕಾರ / ತೊಂದರೆ ಆಗುವುದರಿಂದ ಉಪ್ಪಿನಲ್ಲಿ ಅಯೋಡಿನ್ ಅಂಶವನ್ನು ಕೂಡಿಸಿ ಕೊಡಲಾಗುತ್ತಿದೆ. ಸರ್ಕಾರದಿಂದ ಅಯೋಡೈಸ್ಡ್ ಉಪ್ಪು ಮಾನ್ಯವಷ್ಟೇ ಅಲ್ಲ ಅದು ಕಡ್ಡಾಯವೂ ಕೂಡ. ಹೀಗಾಗಿ ಮಾರುಕಟ್ಟೆಯಲ್ಲಿ ಹಿಂದಿನ ಹರಳು ಉಪ್ಪನ್ನು ಇಂದು ನಾವು ಹೆಚ್ಚಾಗಿ ಕಾಣುತ್ತಿಲ್ಲ. ಉಪ್ಪಿನ ಬಗ್ಗೆ ಎಚ್ಚರವಿರಲಿ ಉಪ್ಪು ಒಂದು ರಾಸಾಯನಿಕ ಸಂಯುಕ್ತ. ಸೋಡಿಯಮ್ ಹಾಗೂ ಕ್ಲೋರಿನ್ ರಾಸಾಯನಿಕ ಅಣುಗಳಿಂದ ಉಂಟಾದ ಸೋಡಿಯಂ ಕ್ಲೋರೈಡ್ (sodium chloride) ಎಂಬ ಸಂಯುಕ್ತ.

ನಾಲಿಗೆಯ ಮೇಲೆ ಉಪ್ಪಿದ್ದರೆ ಮಾತ್ರ ಎಲ್ಲ ತಿನಿಸು, ಊಟಗಳ ರುಚಿ! ಉಪ್ಪು ಹೆಚ್ಚಾದಷ್ಟೂ ಕೆಲವರಿಗೆ ಇಷ್ಟವಾಗುತ್ತದೆ. ಮತ್ತೆ ಕೆಲವರಿಗೆ ಕಹಿ ಆಗುತ್ತದೆ. ಮಿತಿ ಮೀರಿದರೆ ಹಾನಿಕರವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಪ್ರತಿಯೊಬ್ಬ ವ್ಯಕ್ತಿ ದಿನಕ್ಕೆ ಗರಿಷ್ಠ 5 ಗ್ರಾಂ ಉಪ್ಪನ್ನು ಮೀರಬಾರದು, ತಿನ್ನಬಾರದು. ಭಾರತದಲ್ಲಿ ಒಬ್ಬ ವ್ಯಕ್ತಿ ಸರಾಸರಿ 10 ಗ್ರಾಂಗಳಿಗೂ ಮಿಕ್ಕಿ ಉಪ್ಪನ್ನು ಸೇವಿಸುತ್ತಾನೆ. ಅಂದರೆ ಎಲ್ಲ ವಿಧದ ಊಟ, ತಿಂಡಿ ವಗೈರೆಗಳಲ್ಲಿ ಅಡಗಿರುವ ಉಪ್ಪು ಮಿತಿ ಮೀರಿದರೆ ದೇಹಾರೋಗ್ಯಕ್ಕೆ ಹಾನಿಕರ.

Image result for salt problems

Image Credits: DoctorSolve

ಹೃದ್ರೋಗಗಳಿಗೆ ಮೂಲವಾದ ರಕ್ತದ ಒತ್ತಡಕ್ಕೆ ನಾಂದಿಯಾಗುತ್ತದೆ. ಇದನ್ನು ಅತ್ಯಂತ ಗಮನದಲ್ಲಿರಿಸಿ ಜಾಗೃತೆಯಿಂದ ಬಳಸಬೇಕು.ದಿಢೀರ್ ತಿನಿಸುಗಳುಮಾರುಕಟ್ಟೆಯಲ್ಲಿ ಲಭ್ಯವಾದ ದಿಢೀರ್ ತಿಂಡಿಗಳು, ಪೊಟ್ಟಣಗಳು ಬಟಾಟೆ ಚಿಪ್ಸ್, ಬೇಕರಿ ತಿನಿಸುಗಳು, ಸಾಲ್ಟ್ ಬಿಸ್ಕತ್ತುಗಳು, ಜಂಕ್ ಫುಡ್ಸ್, ಇತ್ಯಾದಿಗಳಿಂದ ದೇಹಕ್ಕೆ ಸೇರುವ ಉಪ್ಪಿನ ಅಂಶ ಹೆಚ್ಚಾಗುತ್ತದೆ. ಈ ವಸ್ತುಗಳ ಬಗ್ಗೆ ವಿಚಾರ ಮಾಡಿ ಉಪಯೋಗಿಸಬೇಕು. ಇನ್ನು ಮನೆಯಲ್ಲಿಯೇ ಸಾಧಾರಣವಾಗಿ ಎಲ್ಲರೂ ತಿನ್ನುವ ಗೋಜಿಗೆ ಹೋಗಬಾರದು.

ರಕ್ತದೊತ್ತಡಕ್ಕೆ ದಾರಿನಾವು ತಿನ್ನುವ ಸೋಡಿಯಂ ಲವಣವು ಹೆಚ್ಚಾದರೆ ರಕ್ತದೊತ್ತಡ ತರುತ್ತದೆ. ಇದರ ವಿರುದ್ಧ ಅಂದರೆ ಸೋಡಿಯಂ ಲವಣದ ರಕ್ತದೊತ್ತಡದ ಗುಣವನ್ನು ಸಂಭಾಳಿಸಲು ಪೊಟ್ಯಾಶಿಯಂ ಲವಣಗಳು ಉಪಯುಕ್ತವೆಂದು ವೈಜ್ಞಾನಿಕವಾಗಿ ತಿಳಿದು ಬಂದಿದೆ. ಹರಳು ಉಪ್ಪಿನಲ್ಲಿ ಕೇವಲ ಸೋಡಿಯಂ ಲವಣವಲ್ಲದೇ ಪೊಟ್ಯಾಸಿಯಂ ಹಾಗೂ ಮೆಗ್ನೇಸಿಯಂ ಲವಣಗಳೂ ಸ್ವಲ್ಪ ಪ್ರಮಾಣದಲ್ಲಿ ಇರುತ್ತವೆ. ವ್ಯಕ್ತಿಯ ರಕ್ತದೊತ್ತಡದಲ್ಲಿ ಸ್ವಲ್ಪ ಏರುಪೇರು ಉಂಟಾದರೂ ವೈದ್ಯರು ಅನೇಕ ನಿರ್ಬಂಧಗಳನ್ನು ವಿಧಿಸಿ ವ್ಯಕ್ತಿಯನ್ನು ಕಾಪಾಡಲು ಪ್ರಯತ್ನ ನಡೆಸಿರುತ್ತಾರೆ. ಇಂತಹ ನಿರ್ಬಂಧನೆಗಳಲ್ಲಿ ಒಂದೆಂದರೆ, ಉಪ್ಪನ್ನು ವಿಶೇಷ ಮಿತಿಗೊಳಿಸಿ ಅಥವಾ ಉಪ್ಪನ್ನು ಸಾಧ್ಯವಿದ್ದಷ್ಟೂ ತಿನ್ನಲೇಬಾರದು ಎನ್ನುವ ಮಟ್ಟಿಗೆ ಇರುತ್ತದೆ.

Image result for salt problems

Image Credits: Pritikin Longevity Center

ಆಗಲೇ ಏರುತ್ತಿರುವ ರಕ್ತದೊತ್ತಡ ಉಪ್ಪಿನ ಸೇವನೆಯಿಂದ ಮತ್ತೂ ಹೆಚ್ಚಿ ಸ್ವಲ್ಪ ಕಾಲದಲ್ಲೇ ಡಯಾಬಿಟಿಸ್ ಅಂದರೆ ಸಕ್ಕರೆ ಖಾಯಿಲೆಗೆ ತಿರುಗಿ ತದನಂತರದಲ್ಲಿ ಹೃದ್ರೋಗಕ್ಕೆ ಕಾರಣವಾಗುತ್ತದೆ ಎಂಬ ಕಾರಣದಿಂದ ಉಪ್ಪನ್ನು ವರ್ಜಿಸುವಂತೆ ರೋಗಿಗಳಿಗೆ ವೈದ್ಯರು ನಿರ್ದೇಶಿಸುತ್ತಾರೆ. ಉಪ್ಪಿನಿಂದ ಉಂಟಾಗುವ ಈ ಆರೋಗ್ಯ ಬಾಧೆ ದೈಹಿಕವೇ ಅಥವಾ ಮಾನಸಿಕ ಕಾರಣಗಳಿಂದಾಗಿ ಶುರುವಾಗುವುದೋ! ಅನುವಂಶಿಕ  ಕಾರಣಗಳು ಇದರಲ್ಲಿ ಅಡಗಿವೆಯೇ?

Image result for blood pressure

Image Credits: Saga.co.uk

ಈ ರಕ್ತದೊತ್ತಡ, ಸಕ್ಕರೆ ಖಾಯಿಲೆ, ಮತ್ತು ಹೃದ್ರೋಗಳಿಂದ ದೇಶದಲ್ಲಿ ಅನೇಕ ಜನರು ಜೀವ ಕಳೆದುಕೊಳ್ಳುತ್ತಿರುವವರು ಮತ್ತೂ ಹೆಚ್ಚಿನ ಸಂಶೋಧನೆಯಿಂದ ಮಾನವ ಕೋಟಿಗೆ ಪರಿಹಾರ ದೊರೆತು ಕಲ್ಯಾಣವಾಗಬಹುದೆಂಬ ಆಶಯವಿದೆ. ಹೇಗೆ ಮನುಷ್ಯನ ದೇಹದಲ್ಲಿ ಉಪ್ಪು ಹೆಚ್ಚಾದಾಗ ಆರೋಗ್ಯ ಸಮಸ್ಯೆಗಳು ಉದ್ಭವಿಸುವುದೋ ಅದೇ ಪ್ರಕಾರ ಭೂಮಿಯಲ್ಲಿ ಉಪ್ಪು ಮಿತಿಮೀರಿದಾಗ ಆ ನೆಲದಲ್ಲಿ ಬೆಳೆಗಳು ಕುಂಠಿತಗೊಳ್ಳುತ್ತವೆ. ಇಂತಹ ಉಪ್ಪಿನಿಂದ ಕೂಡಿದ ನೆಲವನ್ನು ಸವಳು ಭೂಮಿಯೆನ್ನುವರು. ಇದು ಹಾಳು ಭೂಮಿಯೇ ಆಗಿ ಇದರಿಂದ ಆಹಾರ ಇಳುವರಿ ಕಡಿಮೆಯಾಗುತ್ತದೆ. ಉಪ್ಪಿನ ಹೆಚ್ಚುಗಾರಿಕೆ ಜಗತ್ತಿನಲ್ಲಿ ಗುರುತಿಸಿರುವ ಆರು ರಸಗಳಾದ ಸಿಹಿ, ಕಹಿ, ಹುಳಿ, ಖಾರ, ಒಗರು, ಉಪ್ಪು, ಇವುಗಳು ಆಹಾರ, ಔಷಧ ಇತ್ಯಾದಿಗಳಲ್ಲಿ ನಾವು ಕಾಣುತ್ತೇವೆ. ಆದರೆ ಆಹಾರದಲ್ಲಿ ಉಪ್ಪಿನ ಮಹತ್ವ ಎಲ್ಲರಿಗೂ ಪರಿಚಯವಿದೆ. ಇಂತಹ ಉಪ್ಪಿನ ಮೇಲೂ ಬ್ರಿಟಿಷರು ನಮ್ಮ ದೇಶದಲ್ಲಿ ಅಧಿಕಾರದಲ್ಲಿದ್ದಾಗ ತೆರಿಗೆಯನ್ನು ವಿಧಿಸಿದಾಗ ಪ್ರತಿಭಟಿಸಿ ಮಹಾತ್ಮಾಗಾಂಧಿಯವರು ಐತಿಹಾಸಿಕ ‘ಉಪ್ಪಿನ ಸತ್ಯಾಗ್ರಹ’ ನಡೆಸಿ ಬ್ರಿಟಿಷರಿಗೆ ಬುದ್ಧಿ ಕಲಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top