fbpx
Achivers

ಬೀದಿಯಲ್ಲಿ ವಾಸಿಸುತ್ತಿದವ ಕೇಂಬ್ರಿಡ್ಜ್ ಗೆ ಹೋದ ಕಥೆ!!!

ನಾವು ಬಹಳಷ್ಟು ಯಶಸ್ಸಿನ ಕಥೆಗಳನ್ನು ಓದಿರುತ್ತೇವೆ ಅದರಲ್ಲಿ ಕೆಲವೊಂದು ನಂಬಲು ಅಸಾಧ್ಯವೆನ್ನಿಸುತ್ತದೆ . ಈ ಕಥೆಯು ಕೂಡ ಹಾಗೆ. ನಂಬಲು ಇಡೀ ಕಥೆ ಓದಿಯೇ ತೀರಬೇಕು .

ಇದು ಅಸಾಧಾರಣ ಶ್ರಮ ಹಾಗು ಶ್ರದ್ದೆಯ ಕಥೆ .

ಜಯವೆಲ್ , ತಮಿಳುನಾಡಿನ ಒಂದು ಬಡ ಕುಟುಂಬದಲ್ಲಿ ಜನಿಸಿದವನು .ಅವನ ಕುಟುಂಬ ೧೯೮೦ರಲ್ಲಿ ತಮ್ಮ ಬೆಳೆ ನಾಶವಾದ ಮೇಲೆ ಚೆನ್ನೈ ಗೆ ವಲಸೆ ಹೋಗುತ್ತಾರೆ . ಮಾಡಲು ಸರಿಯಾದ ಕೆಲಸವಿಲ್ಲದ್ದ ಕಾರಣ ಮನೆ-ಮಂದಿ ಭಿಕ್ಷೆ ಬೇಡಿ ಹೊಟ್ಟೆ ತುಂಬಿಸಿಕೊಳ್ಳುವ ಪರಿಸ್ಥಿತಿ ಬರುತ್ತದೆ . ಜಯವೆಲ್ ಹುಟ್ಟಿದ ಸ್ವಲ್ಪ ದಿನದಲ್ಲೇ ತಂದೆಯನ್ನು ಕಳೆದುಕೊಳ್ಳುತ್ತಾನೆ . ತಾಯಿಗೆ ಕುಡಿತದ ಚಟ ಅಂಟಿಕೊಳ್ಳುತ್ತದೆ . ಆಗ ಜಯವೆಲ್ ಹಾಗು ಅವನ ಒಡಹುಟ್ಟಿದವರು ಚೆನ್ನೈ ನ ಬೀದಿಗಳಲ್ಲಿ ಭಿಕ್ಷೆ ಬೇಡಲು ಶುರುವಿಡುತ್ತಾರೆ . ಅದರಲ್ಲಿ ಬಂದ ಹಣದಲ್ಲಿ ತಮ್ಮ ಊಟ ಹಾಗು ಅವರ ತಾಯಿಗೆ ಸಾರಾಯಿ . ಅವರಿಗೆ ಮನೆಯೇ ಇಲ್ಲವಾಗಿರುತ್ತದೆ . ಫುಟ್ಪಾತ್ ಮೇಲೆಯೇ ಅವರ ವಾಸ .

೧೯೯೦ , ಒಂದು ದಿನ ಜಯವೆಲ್ ಭಿಕ್ಷೆ ಬೇಡುತ್ತಿರುವುದು ಉಮಾ ಮುತ್ತುರಾಮನ್ ಹಾಗು ಅವರ ಪತಿ ಮುತ್ತುರಾಮನ್ ಅವರ ಕಣ್ಣಿಗೆ ಬೀಳುತ್ತದೆ . ಅವರು ಬೀದಿ ಮಕ್ಕಳ ಬಗ್ಗೆ “ಪೇವ್ಮೆಂಟ್ ಫ್ಲವರ್” ಎಂಬ ಡಾಕ್ಯುಮೆಂಟರಿ ಮಾಡುತ್ತಿರುತ್ತಾರೆ. ಅವರು ಜಯವೆಲ್ ನನ್ನು ಶಾಲೆಗೆ ಸೇರಿಸಲು ಬಯಸುತ್ತಾರೆ . ಸುಯಮ್ ಚಾರಿಟೇಬಲ್ ಟ್ರಸ್ಟ್ ನ ಮೂಲಕ ಇವನಿಗೆ ವಿದ್ಯಾಭ್ಯಾಸ ಕೊಡಿಸಲು ಇಚ್ಛಿಸುತ್ತಾರೆ . ಆ ಅವಕಾಶವನ್ನು ಜಯವೆಲ್ ತನ್ನ ಎರಡು ಕೈಗಳನ್ನು ಚಾಚಿ ಬಾಚಿಕೊಳ್ಳುತ್ತಾನೆ . ಅದೇ ಅವನ ಜೀವನದ ತಿರುವಾಗುತ್ತದೆ . ೧೨ ನೇ ತರಗತಿಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ನಂತರ ಅವನು ಕೇಂಬ್ರಿಜ್ ವಿಶ್ವವಿದ್ಯಾಲಯದ ಪರೀಕ್ಷೆಯನ್ನು ಎದುರಿಸಿ ತೇರ್ಗಡೆಯಾಗುತ್ತಾನೆ . ಅಲ್ಲಿ ರೇಸ್ ಕಾರ್ ಗಳ ಬಗ್ಗೆ ಓದುತ್ತಿದ್ದಾನೆ. ೨೨ ವರ್ಷದ ಇವನು ಈಗ ಇಟಲಿ ದೇಶದ ಕಡೆ ಪ್ರಯಾಣ ಬೆಳುಸುತಿದ್ದಾನೆ.

ಈ ಸಾಧಕನಿಗೆ ನಮ್ಮ ಕಡೆಯಿಂದ ಒಂದು ಅಲ್  ದಿ ಬೆಸ್ಟ್ !  

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top