fbpx
Achivers

ಆಧುನಿಕ ಭಾರತದ ದಿವ್ಯ ಕನಸ್ಸು ಕಂಡ ನೇತಾಜಿ ಸುಭಾಷ್ ಚಂದ್ರ ಬೋಸ್

ನೇತಾಜಿ ಅವರ ಜನನ- ಜನವರಿ 23, 1897ರಂದು ಒರಿಸ್ಸಾದ ಕಟಕ್‍ನಲ್ಲಿ. ಜಾನಕೀನಾಥ ಬೋಸ್-ಪ್ರಭಾವತಿ ದಂಪತಿಯ 9 ಮಕ್ಕಳಲ್ಲಿ 6ನೇ ಮಗುವಾಗಿ ಜನಿಸಿದವರು ಸುಭಾಶ್ಚಂದ್ರ ಬೋಸ್. ಕಟಕ್‍ನಲ್ಲಿ ರ್ಯಾವೆನ್‍ಶಾ ಕೊಲಿಜಿಯೇಟ್ ಶಾಲೆಯಲ್ಲಿ ಪ್ರಾಥಮಿಕ ವ್ಯಾಸಂಗ, ಅಲ್ಲಿ ಮುಖ್ಯೋಪಾಧ್ಯಾಯ ಬೇಣಿಮಾಧವದಾಸ್‍ರಿಂದ ಪ್ರೇರಣೆ, ಮುಂದೆ ವಿವೇಕಾನಂದರ ಸಾಹಿತ್ಯಗಳು, ಪತ್ರಗಳು ಮತ್ತು `ಕೊಲೊಂಬೋದಿಂದ ಆಲ್ಮೋರಾಕ್ಕೆ’ ಉಪನ್ಯಾಸಗಳಿಂದ ಪ್ರಭಾವಿತರಾದ ಬೋಸರು ಅರವಿಂದರ `ಆರ್ಯ’ ಮಾಸಪತ್ರಿಕೆಯ ತಪ್ಪದ ಓದುಗರು!

Image result for young netaji

1919ರಲ್ಲಿ ತತ್ವಶಾಸ್ತ್ರ ವಿಭಾಗದಲ್ಲಿ ಬಿ.ಎ. ಪದವಿ, ನಂತರ 1919ರ ಸೆಪ್ಟೆಂಬರ್ 15ರಂದು ಐ.ಸಿ.ಎಸ್ ಪರೀಕ್ಷೆಗಾಗಿ ಇಂಗ್ಲೆಂಡಿಗೆ ಪಯಣ. 1920ರ ಸೆಪ್ಟಂಬರ್‍ನಲ್ಲಿ ನಾಲ್ಕನೇ ರ್ಯಾಂಕ್ ಪಡೆದು ಐ.ಸಿ.ಎಸ್ ಪದವಿ ಪ್ರಾಪ್ತಿ. ಐ.ಸಿ.ಎಸ್. ಪದವಿಯ ಜೊತೆಗೆ ಲಭಿಸಿದ ವಿದೇಶೀ ನೌಕರಿಯನ್ನು ತಿರಸ್ಕರಿಸಿ, 1921ರ ಏಪ್ರಿಲ್ 22ರಂದು ಬ್ರಿಟಿಷ್ ಸರ್ಕಾರದ ಭಾರತ ವ್ಯವಹಾರ ಸಚಿವ ಎಡ್ವಿನ್ ಮಾಂಟೆಗುಗೆ ಪತ್ರವೊಂದನ್ನು ಬರೆದು ತನ್ನ ಪದವಿಯನ್ನೂ ಮರಳಿಸಿದ್ದಾಗಿ ತಿಳಿಸಿದ್ದರು ನೇತಾಜಿ ಬೋಸ್! 20 ತಿಂಗಳ ಇಂಗ್ಲೆಂಡ್ ವಾಸದ ನಂತರ 1921ರ ಜುಲೈ 16ರಂದು ಮುಂಬಯಿಗೆ ಮರಳಿದ ಬೋಸ್ ಅಂದೇ ಗಾಂಧೀಜಿಯವರನ್ನು ಮೊದಲಸಲ ಭೇಟಿ ಮಾಡಿದರು. 1921ರ ಆಗಸ್ಟ್‍ನಿಂದ ಚಿತ್ತರಂಜನ್‍ದಾಸ್‍ರ ಮಾರ್ಗದರ್ಶನದಲ್ಲಿ ಯುವಕರ ಸಂಘಟನೆಗೆ ಆದ್ಯತೆ ನೀಡಿದರು. ಚಳವಳಿಯ ಸಂದರ್ಭವೊಂದರಲ್ಲಿ ಮ್ಯಾಜಿಸ್ಟ್ರೇಟರು 6 ತಿಂಗಳ ಸಜೆ ಘೋಷಿಸಿದಾಗ `ಬರಿಯ 6 ತಿಂಗಳೇ? ನನ್ನದೇನು ಕೋಳಿ ಕದ್ದ ಅಪರಾಧವೇ?’ ಎಂದು ಸವಾಲು ಎಸೆದಿದ್ದರು ಬೋಸ್!

Image result for young netaji

ರಾಷ್ಟ್ರ ನಿರ್ಮಾಣದ ಜವಾಬ್ದಾರಿಯುತ ಸ್ಥಾನದಲ್ಲಿದ್ದು ರಾಷ್ಟ್ರಹಿತಕ್ಕೆ ಧಕ್ಕೆಯಾಗುವ ಯಾವುದೇ ವಿಷಯಗಳಲ್ಲಿ ದುರ್ಬಲನೀತಿ ಹೊಂದಿರಬಾರದೆಂಬ ಸುಭಾಷ್‍ರ ದಿಟ್ಟನಿಲುವಿನ ಪ್ರತಿಧ್ವನಿಯಾಗಿತ್ತು ಆ ಮಾತು. ಕಾಂಗ್ರೆಸ್‍ನ ಬಲಹೀನ ನಾಯಕತ್ವ, ದುರ್ಬಲ ಒಪ್ಪಂದಗಳು, ಸ್ವಾಭಿಮಾನಶೂನ್ಯ ವರ್ತನೆಗೆ ಪ್ರತಿಯಾಗಿ ಆತ್ಮಾಭಿಮಾನದ ಸ್ವರಾಜ್ಯಹೋರಾಟಕ್ಕೆ ಬಲತುಂಬಿದವರು ನೇತಾಜಿ. ತಾನು ಕಷ್ಟಪಟ್ಟು ಗಳಿಸಿದ್ದ ಐ.ಸಿ.ಎಸ್. ಪದವಿಯನ್ನೇ ತಿರಸ್ಕರಿಸಿ, ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದ ಬೋಸರಿಗಿದ್ದ ರಾಜಕೀಯ ಚಿಂತನೆಯ ವೈಶಾಲ್ಯತೆ ಆ ಕಾಲಮಾನದ ಯಾರೊಬ್ಬರಲ್ಲೂ ಇರಲಿಲ್ಲ. ಆಸ್ಟ್ರಿಯಾ, ಇಂಗ್ಲೆಂಡ್, ಜರ್ಮನಿ, ಜಪಾನ್ ಸೇರಿದಂತೆ ಹತ್ತಾರು ರಾಷ್ಟ್ರಗಳಲ್ಲಿ ಮಿಂಚಿನಂತೆ ಸಂಚಾರ ನಡೆಸಿ ಭಾರತೀಯ ಸ್ವರಾಜ್ಯ ಹೋರಾಟದ ದನಿಗೆ ಕ್ರಾಂತಿಯ ತೀವ್ರತೆ ತಂದಿದ್ದ ಬೋಸರು, ತಾನು ನಂಬಿದ್ದ ಕ್ರಾಂತಿಪಥದಲ್ಲಿ ಎಂದೂ ರಾಜಿಮಾಡಿದವರಲ್ಲ.

Image result for netaji

ಶೀಘ್ರ ಸ್ವಾತಂತ್ರ್ಯಪ್ರಾಪ್ತಿಗಾಗಿ ಅವರು ಮಂಡಿಸುತ್ತಿದ್ದ ವಾದಗಳು, ಅದಕ್ಕಾಗಿ ಶ್ರಮಿಸ ಬೇಕಾದ ತ್ವರಿತ ಸಿದ್ಧತೆಗಳ ಕುರಿತು ಬೋಸ್‍ರ ನಿಲುವುಗಳೆಲ್ಲ ಕಾಂಗ್ರೆಸ್‍ನ ಮಂದಗಾಮಿ ಗುಂಪಿಗೆ ಅಸಹ್ಯವಾಗಿತ್ತು. ಸ್ವತಃ ಗಾಂಧೀಜಿಯವರೇ “ಬೋಸ್‍ಗೆ ದೂರಗಾಮಿ ಚಿಂತನೆ ಇಲ್ಲ” ಎಂದು ಹಲವು ಬಾರಿ ಬೋಸ್‍ರನ್ನು ಟೀಕಿಸಿದ್ದರು! ಆದರೆ 1938ರಲ್ಲಿ ಭಾರತದ ವಿಭಜನೆಯ ಮುಸ್ಲಿಂಲೀಗ್- ಬ್ರಿಟಿಷರ ತಂತ್ರಗಾರಿಕೆಯ ಕುರಿತು ಮೊದಲಬಾರಿಗೆ ಬಹಿರಂಗವಾಗಿ ಎಚ್ಚರಿಸಿದರೂ ಮಂದಗಾಮಿಗಳಿಗೆ ಕೇಳಿಸಲಿಲ್ಲ. ಪರಿಣಾಮವಾಗಿ 9 ವರ್ಷದಲ್ಲೇ ದೇಶ ಹೋಳಾಯಿತು! ಬೋಸ್‍ರ ದೂರಗಾಮಿ ಚಿಂತನೆಗಳಿಗೂ ಕವಡೆ ಕಾಸಿನ ಕಿಮ್ಮತ್ತು ಕೊಡದ ಕಾಂಗ್ರೆಸ್‍ನಿಂದ ಸ್ವತಃ ಹೊರನಡೆದರು ಬೋಸ್.

`ಸ್ವರಾಜ್ಯ ಪಕ್ಷ ಸ್ಥಾಪನೆ. ಬೋಸ್‍ರು ದಾಸ್‍ರ ಜತೆಗೇ ಚಟುವಟಿಕೆ ಗಳಲ್ಲಿ ಭಾಗಿಯಾದರು. 1923ರ ಅಕ್ಟೋಬರ್‍ನಿಂದ ದಾಸ್‍ರು ಸ್ಥಾಪಿಸಿದ್ದ `ಫಾರ್ವರ್ಡ್’ ದಿನಪತ್ರಿಕೆಯ ನಿರ್ವಹಣೆಯ ಜವಾಬ್ದಾರಿಯನ್ನು ವಹಿಸಿಕೊಂಡರು. 1925ರ ಜೂನ್ 16, ದಾಸ್ ನಿಧನರಾದರು. ಕ್ರಾಂತಿಕಾರಿ ಚಟುವಟಿಕೆಗಳಿಗಾಗಿ ಬೋಸ್‍ರು ಬಂಧನಕ್ಕೊಳಗಾಗಿ ನಂತರ ಬಿಡುಗಡೆಗೊಂಡರು. 1927ರ ನವೆಂಬರ್‍ನಲ್ಲಿ ಬಂಗಾಳಪ್ರದೇಶ ಕಾಂಗ್ರೆಸ್‍ನ ಅಧ್ಯಕ್ಷರಾಗಿ ಆಯ್ಕೆಗೊಂಡರು. ಎಂ.ಕೆ. ಗಾಂಧಿ ಪ್ರಣೀತ ಮಂದ ಮಾರ್ಗಕ್ಕಿಂತ ಸುಭಾಷ್‍ರದು ತೀರಾ ಭಿನ್ನ ಎಂಬುದು ಕ್ರಮೇಣ ಚಳವಳಿಯಲ್ಲಿರುವ ಎಲ್ಲರಿಗೂ ಸ್ಪಷ್ಟವಾಯಿತು. ಜನಜಾಗೃತಿಗಾಗಿ ಹತ್ತಾರು ಚಳವಳಿಗಳನ್ನು ತನ್ನ ನೇತೃತ್ವದಲ್ಲೇ ಆರಂಭಿಸಿದರು. ಅಖಿಲಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್‍ನ ಅಧ್ಯಕ್ಷರಾಗಿ ಆಯ್ಕೆಗೊಂಡರು. ಫೆಬ್ರವರಿ 23, 1933ರಂದು ಯೂರೋಪಿನಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟಪರ ಅಭಿಯಾನ. ಇಂಗ್ಲೆಂಡ್, ಆಸ್ಟ್ರಿಯಾ, ಇಟೆಲಿ ವಿಯೆನ್ನಾಗಳ ಭೇಟಿ,

Image result for netaji with hitler

ತ್ವರಿತಗತಿಯ ಪ್ರವಾಸ ಎಲ್ಲವೂ ನಡೆಯಿತು. ಸ್ವಿಟ್ಜರ್ಲೆಂಡ್, ಚೆಕೋ
ಸ್ಲೋವಾಕಿಯಾ, ಪೆÇೀಲೆಂಡ್, ಜರ್ಮನಿಗಳಲ್ಲಿ ಭಾರತದ ಪರ ಪ್ರಚಾರ ನಡೆಸಿದರು. ಇಟೆಲಿ ಪ್ರಧಾನಿ ಬೆನಿತೋ ಮುಸೋಲಿನಿಯ ಜತೆ ಚರ್ಚೆ ನಡೆಸಿದರು. 1936 ಏಪ್ರಿಲ್ 8ರಂದು ಮರಳಿ ಭಾರತಕ್ಕೆ ಬಂದು ಬಂದರಿನಲ್ಲೇ ಬಂಧನಕ್ಕೊಳಗಾದರು. 1937ರಲ್ಲಿ ಮತ್ತೆ ಆಸ್ಟ್ರಿಯಾಕ್ಕೆ ಹೋದರು.

1938ರ ಫೆಬ್ರವರಿ 19ರಂದು, ಹರಿಪುರದಲ್ಲಿ ಕಾಂಗ್ರೆಸ್‍ನ ಅಖಿಲಭಾರತ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದರು. ವಿದೇಶೀ ನೆಲಗಳ ಓಡಾಟದಿಂದ ಪಡೆದ ರಾಜಕೀಯ ಅನುಭವದ ಒಳನೋಟಗಳಿಂದ ಬ್ರಿಟಿಷರ ಒಡೆದಾಳುವ ನೀತಿ ಕುರಿತ ಕ್ಷಾತ್ರತೇಜದ ಐತಿಹಾಸಿಕ ಭಾಷಣವನ್ನು ಮಾಡಿದರು. ದೇಶ ವಿಭಜನೆ ಮಾಡುವುದೇ ಬ್ರಿಟಿಷರ ತಂತ್ರ ಎಂದು ಬೋಸ್‍ರು ನುಡಿದ ಭವಿಷ್ಯ ಮುಂದಿನ 9 ವರ್ಷಗಳಲ್ಲೇ ಸತ್ಯವಾಯ್ತು! ಕಾಂಗ್ರೆಸ್ ಅಧ್ಯಕ್ಷಗಾದಿಗೆ ನಡೆದ ಮೊತ್ತಮೊದಲ ಚುನಾವಣೆಯಲ್ಲಿ ಡಾ|| ಪಟ್ಟಾಭಿ ಸೀತಾರಾಮಯ್ಯರ ವಿರುದ್ಧ 215 ಮತಗಳ ಗೆಲುವು ಪಡೆದುಕೊಂಡರು!

ಯಾರನ್ನೂ ಟೀಕಿಸದವರೆಂದು ಗುರುತಿಸಿಕೊಂಡ ಗಾಂಧೀಜಿಯಿಂದ ಸುಭಾಷ್ ವಿರುದ್ಧ ಹಲವಾರು ಟೀಕೆಗಳು, ಋಣಾತ್ಮಕ ಮಾತುಗಳು ಕೇಳಿಬರುತ್ತಲೇ ಇದ್ದವು.  ಸ್ವಾತಂತ್ರ್ಯ ಪ್ರಾಪ್ತಿಯ ದಿನ ಸಮೀಪ ಇರುವಂತೆಯೇ ಬ್ರಿಟಿಷ್ ಸರ್ಕಾರದ ಜತೆ ದುರ್ಬಲ ಕಾಂಗ್ರೆಸ್ ಇರಿಸಿಕೊಂಡ ತಾರ್ಕಿಕ ನಡೆಗಳಿಂದ ಬೇಸತ್ತು ಕಾಂಗ್ರೆಸ್‍ಗೆ ರಾಜೀನಾಮೆ ಕೊಟ್ಟುಬಿಟ್ಟರು. ನಂತರ `ಫಾರ್ವರ್ಡ್ ಬ್ಲಾಕ್’ ಸ್ಥಾಪನೆಮಾಡಿದರು.

ಕಾಬೂಲ್ ಮೂಲಕ ಬರ್ಲಿನ್ ಸೇರಿದ ಬೋಸ್‍ರಿಂದ ಸೈನಿಕ ಕಾರ್ಯಾಚರಣೆ ಆರಂಭಗೊಂಡಿತು. 1941ರ ನವೆಂಬರ್ 2ರಂದು `ಫ್ರೀ ಇಂಡಿಯಾ ಸೆಂಟರ್’ ಉದ್ಘಾಟನೆ ಮಾಡಿದರು. `ಆಜಾದ್ ಹಿಂದ್’ ಎಂಬ ಲಾಂಛನ ಇರಿಸಿಕೊಂಡು `ಜೈಹಿಂದ್’ ಎಂಬ ಘೋಷಣೆಯನ್ನು ಕೂಗುವುದಕ್ಕೆ ಪ್ರೇರೇಪಿಸಿದರು. ಜನತೆ ಪ್ರೀತಿಯಿಂದ ಬೋಸರಿಗೆ `ನೇತಾಜಿ’ ಬಿರುದನ್ನಿತ್ತು ಗೌರವಿಸಿತು. ಜರ್ಮನ್ ಸೇನಾಕೇಂದ್ರಗಳಿಗೆ ಸೈನಿಕ ತರಬೇತಿ, ಬರ್ಲಿನ್ ರೇಡಿಯೋದಲ್ಲಿ ಆಗಾಗ ಭಾಷಣ, ಹಿಟ್ಲರ್ ಜತೆ ಭೇಟಿ. ಜಪಾನ್‍ಗೆ ತೆರಳಿ ಅಲ್ಲಿಂದ ಪೂರ್ವಾಂಚಲ ಭಾರತದ ಗಡಿಗಳಲ್ಲಿ ಸೈನ್ಯ ಸಜ್ಜು ಮಾಡಲು ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್ ಮೂಲಕ ಅವಿರತ ಚಟುವಟಿಕೆ.

Image result for netaji with indian flag

ಲಿಷ್ಠಗೊಂಡ ಆಜಾದ್ ಹಿಂದ್ ಸೇನೆಗೆ ದೌಡಾಯಿಸುತ್ತಿದ್ದ ನಿವೃತ್ತಯುದ್ಧ ಕೈದಿಗಳು. ಮುಂದಿನ ದಿನಗಳಲ್ಲಿ ಪಕ್ವ ಸೈನ್ಯವಾಗಿ ರೂಪುಗೊಂಡ ಇಂಡಿಯನ್ ನ್ಯಾಷನಲ್ ಆರ್ಮಿ [ಐ.ಎನ್.ಎ]. ಪಾದರಸದಂತೆ ಪೂರ್ವ ಏಷ್ಯಾ ರಾಷ್ಟ್ರಗಳಲ್ಲಿ ಓಡಾಡಿ ಸ್ವರಾಜ್ಯ ಹೋರಾಟಕ್ಕೆ ಅಗಾಧ ಬೆಂಬಲ ಪಡೆದ ಬೋಸ್‍ರಿಂದ ಆರ್ಜೀ-ಹುಕುಮಂತ್-ಎ-ಆಜಾದ್ ಹಿಂದ್ [ಸ್ವತಂತ್ರ ಭಾರತದ ಹಂಗಾಮಿ ಸರ್ಕಾರ] ಸ್ಥಾಪನೆ; ಐಎನ್‍ಎಯ ಕಮಾಂಡರ್-ಇನ್-ಚೀಫ್ ಆಗಿ ಬೋಸ್.
1945ರ ಆಗಸ್ಟ್ 18ರಂದು ದಕ್ಷಿಣ ವಿಯೆಟ್ನಾಂನ ಸೈಗಾನ್‍ನಿಂದ ವಿಮಾನಹತ್ತಿದ ಸುಭಾಷ್, ವಿಮಾನ ಸ್ಫೋಟದಿಂದಾಗಿ ನಿಧನರಾದರು ಎಂಬುದು `some’-ಭಾವಿತ ಮತ್ತು ಅದೇ ಒಂದು ನಿಗೂಢ ರಹಸ್ಯವಾಗಿ ಇಂದಿಗೂ ಚರ್ಚೆಯ ವಸ್ತುವಾಗಿದೆ. ಸ್ಪಷ್ಟಗೊಳ್ಳದ ಅನೇಕ ವಿವಾದಗಳು ಇಂದಿಗೂ ಇವೆ. ಅನ್ವೇಷಣಾ ಸಮಿತಿಗಳನ್ನು ನೇಮಿಸಿದರೂ ಅವರ ಸಾವನ್ನೊಪ್ಪದ ಅನೇಕಮಂದಿ ಬಹಳವರ್ಷ ನೇತಾಜಿ ಬದುಕಿದ್ದರೆಂದೇ ತಿಳಿದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top