fbpx
Achivers

ಪ್ರಪಂಚದ ಅತ್ಯಂತ ಶ್ರೀಮಂತ ವ್ಯಕ್ತಿ ಬಿಲ್ ಗೇಟ್ಸ್-ನ ಕಥೆಗಳು!!!

ಬಿಲ್ ಗೇಟ್ಸ್ ಬಗ್ಗೆ ಇಡೀ ವಿಶ್ವಕ್ಕೆ ತಿಳಿದಿದೆ. ಮೈಕ್ರೋಸಾಫ್ಟ್ ನಮ್ಮ ಜೀವನದ ಒಂದು ಭಾಗವಾಗಿದೆ . ಬಿಲ್ ಗೇಟ್ಸ್ ಬುದ್ದಿವಂತ  ಎಂಬ ವಿಷಯಾ  ಹೊಸದೇನಲ್ಲ . ಆದರೆ ಈ ಕೆಳಗಿನ ಕಥೆಗಳು , ಅವರ  ಹೊಸ ರೂಪವನ್ನೇ ತೋರಿಸುತ್ತದೆ .

 

1 . ಬಿಲ್ ಗೇಟ್ಸ್ ಶಾಲೆಯಲ್ಲಿದ್ದಾಗ , ಆತನ ಶಾಲೆಯ ಆಡಳಿತ ಮಂಡಳಿ  ಅಲ್ಲಿದ್ದ ಕಂಪ್ಯೂಟರ್ ಬಳಸಿ ವೇಳಾಪಟ್ಟಿಯನ್ನ ಮಾಡಲು ಅವರಿಗೆ  ವಹಿಸಿದರು . ಆಗ ಅವರು ಈ ಅವಕಾಶವನ್ನು ಉಪಯೋಗಿಸಿಕೊಂಡು ತಮಗೆ ಆಸಕ್ತಿಯಿದ್ದ ಎಲ್ಲ ಹುಡುಗಿಯರು ಇವರ  ಕ್ಲಾಸ್ಸಲ್ಲಿ ಇರುವಂತೆ ವೇಳಾಪಟ್ಟಿಯನ್ನು ಮಾಡಿದರು.

Image result for bill gates kid

2 . ಅವರು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿದ್ದಾಗ ಅವರು ತೆಗೆದುಕೊಂಡಿದ್ದ ವಿಷಯಗಳ ಕ್ಲಾಸುಗಳಿಗೆ ಅವರು ಹೋಗುತ್ತಲೇ ಇರಲಿಲ್ಲ , ಬದಲಾಗಿ ಅವರಿಗೆ ಆಸಕ್ತಿ ತರಿಸಿದ್ದ ಇತರ ವಿಷಯಗಳ ಕ್ಲಾಸುಗಳಿಗೆ ಹೋಗುತ್ತಿದ್ದರು . ಆದರೂ ಅವರಿಗೆಂದು ಕಮ್ಮಿ ಅಂಕ ಬರಲೇ ಇಲ್ಲ .

Image result for bill gates harvard

3 . ಅವರು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿದ್ದಾಗ , ಬಿಲ್ ಗೇಟ್ಸ್ 30 ವರ್ಷದಿಂದ ಯಾರು ಬಗೆ ಹರಿಸಲಾಗದ ” ಪ್ಯಾನ್ ಕೇಕ್  ಸಾರ್ಟಿಂಗ್” ಎಂಬ ಸಮಸ್ಯೆಯನ್ನು ತಮ್ಮ 20  ನೇ ವಯಸ್ಸಿನಲ್ಲೇ ಬಿಡಿಸಿದ್ದರು . ಅದು ಒಂದು ತಾಂತ್ರಿಕ  ಪೇಪರ್ನಲ್ಲಿ  ಪ್ರಕಟವಾಗುತ್ತದೆಂದು ಅವರ ಪ್ರೊಫೆಸರ್ ಅವರಿಗೆ ತಿಳಿಸಲು ಹೋದಾಗ , ಅವರಿಗೆ ಅದರ ಬಗ್ಗೆ ಹೆಚ್ಚಿನ  ಆಸಕ್ತಿ ಬರಲಿಲ್ಲ  , ಅವರು ಅದಾಗಲೇ ಮೈಕ್ರೋಸಾಫ್ಟ್ ಹುಟ್ಟಿಹಾಕಲು ಶ್ರಮ ಪಡುತ್ತಿದ್ದರು .

Image result for bill gates pancake sorting

4 . ಅವರು ಬಹಳ ವೇಗವಾಗಿ ಕಾರ್ ಅನ್ನು ಚಲಾಯಿಸುತ್ತಿದ್ದರು . ಹೀಗೆ ಒಂದು ಬಾರಿ ಅವರ ಸ್ನೇಹಿತನ ಪೋರ್ಷೆ 928 ಕಾರನ್ನು ತೆಗೆದುಕೊಂಡು ವೇಗವಾಗಿ ಚಲಾಯಿಸುತ್ತಿರುವಾಗ ಅದಕ್ಕೆ ಅಫಘಾತವಾಗಿತ್ತು . ಅದನ್ನು ಸರಿ ಪಡಿಸಲು ವರ್ಷಗಳೇ ಹಿಡಿಯಿತು .

Image result for bill gates car

5 . ಬಿಲ್ ಗೇಟ್ಸ್ ಗೆ ಅತಿಯಾದ ವೇಗದ ಚಾಲನೆಗಾಗಿ 3 ಬಾರಿ ವೇಗದ ಮಿತಿ ಮೀರಿದ ದಂಡ ವಿಧಿಸಲಾಗಿದೆ .

 

6 . ಬಿಲ್ ಗೇಟ್ಸ್ ತನ್ನ ಕಂಪನಿ ಯ ಕೆಲಸಗಾರರ  ಮೇಲೆ ಗಮನವಿಡಲು ಅವರ ಕಾರ್ ಮೇಲಿನ ಲೈಸನ್ಸ್ ನಂ ಗಳನ್ನೂ ಗಟ್ಟು ಹೊಡೆದಿದ್ದರು .

 

7 . ಬಿಲ್ ಗೇಟ್ಸ್ ಗೆ ಮಿನ್ಸ್ವೀಪರ್ ಎಂಬ ಆಟದ ಬಗ್ಗೆ ಎಷ್ಟು ಹುಚ್ಚಿತ್ತೆಂದರೆ , ಅದನ್ನು ಅವರು ಕೆಲಸದ ಬಗ್ಗೆ ಏಕಾಗ್ರತೆ ಹೆಚ್ಚಿಸಲು uninstall  ಮಾಡಿದ್ದರು.

Image result for bill gates minesweeper

8 . ಅವರು ಒಂದು ವಿಷಯ ಓದುವಾಗ ಎಷ್ಟು ಬಾರಿ ” ಫಕ್ ” ಎನ್ನುತಾರೆ ಎಂಬುದರ ಮೇಲೆ ಅವರಿಗೆ ಆ ವಿಷಯದ ಬಗ್ಗೆಗಿನ ಆಸಕ್ತಿ ತಿಳಿದುಕೊಳ್ಳಬಹುದಾಗಿತ್ತು

Image result for bill gates minesweeper

9 . DOS  ನ ಪರವಾನಗಿ IBM ಗೆ ಕೊಟ್ಟ್ಟಾಗ , ಅವರು ಬಿಲ್ ಗೇಟ್ಸ್ ಗೆ ಒಂದಿಷ್ಟು ಆಟಗಳನ್ನು ಅದರೊಂದಿಗೆ ಸೇರಿಸಲು ಹೇಳಿದರು . ಆಗ ಗೇಟ್ಸ್ ಹಾಗು ನೆಯ್ಲ್ ರಾತ್ರಿ ಎಲ್ಲ ಕೂತು ” ಕತ್ತೆ ಬಸ್” ಎಂಬ ಒಂದು ಸಿಲ್ಲಿ ಆಟವಾದ ಕೋಡ್ ಅನ್ನು ಬರೆದರು

 

10 . ಬಿಲ್ ಗಟ್ಸ್ಗೆ ತಮ್ಮ ರಾತ್ರಿ ಊಟದ ತಟ್ಟೆಯನ್ನು ತಾವೇ ತೊಳೆದುಕೊಳ್ಳುವುದೆಂದರೆ ಬಹಳ ಇಷ್ಟ .

Image result for bill gates lunch

11 . ಬಿಲ್ ಗೇಟ್ಸ್ ಒಂದು ಬಾರಿ ಒಬ್ಬ ರಿಪೋರ್ಟರ್ ಪದೇ ಪದೇ ಅದೇ ಪ್ರಶ್ನೆ ಕೇಳುತ್ತಿದ್ದಾಗ , ಬಾತ್ರೂಮ್ ಗೆ ಹೋಗಿ ಲಾಕ್ ಮಾಡಿಕೊಂಡಿದ್ದರು . ಆ ಪತ್ರಕರ್ತ ಕ್ಷಮೆ ಕೇಳುವವರೆಗೆ ತಾನು ಆಚೆ ಬರುವುದಿಲ್ಲ ಎಂದು ಚಿಲಕ ಹಾಕಿಕೊಂಡಿದ್ದರು.

 

12 . ಆದರೆ ಬಿಲ್ ಗೇಟ್ಸ್ ನ ಅತಿ ಕುಖ್ಯಾತ ಸಂದರ್ಶನ ಎಂದರೆ ಅವರು 1994 ರಲ್ಲಿ ಸಂದರ್ಶನದ ಮದ್ಯದಲ್ಲಿ ಎದ್ದು ಹೋಗಿದ್ದು .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top