fbpx
Awareness

ಜಾತಿ ಮತದ ಎಲ್ಲೇ ಮೀರಿದ ಶಿರೋಳ ಜಾತ್ರೆ

ಗದಗ ಜಿಲ್ಲೆಯ ನರಗುಂದ ತಾಲೂಕಿನ ಶಿರೋಳ ಗ್ರಾಮದ ಶ್ರೀ ತೋಂಟದಾರ್ಯ ಮಠದಲ್ಲಿ ಪ್ರತಿ ವರ್ಷ ನಡೆಯುವ ಜಾತ್ರೆ ರೊಟ್ಟಿ ಊಟದಿಂದಾಗಿ ಉತ್ತರ ಕರ್ನಾಟಕದಲ್ಲಿ ಮನೆಮಾತಾಗಿದೆ. ಈ ಬಾರಿಯ ಜಾತ್ರೆಯು ಜನವರಿ 17, 18 ಹಾಗೂ 19 ಹೀಗೆ ಮೂರು ದಿನಗಳ ಕಾಲ ನಡೆಯುತ್ತದೆ. ಜಾತ್ರೆಯ ಎರಡನೆಯ ದಿನದಂದು ನಡೆಯುವ ರೊಟ್ಟಿ ಊಟದ ಜಾತ್ರೆ ಕೋಮು ಸಾಮರಸ್ಯದ ಸಂಕೇತವಾಗಿದೆ.

Image result for jaatre

ಸರ್ವಧರ್ಮಿಯರು ಒಂದಡೆ ಸೇರಿ ಊಟ ಮಾಡುವ ಮೂಲಕ ಬಡವ ಬಲ್ಲಿದ ದೀನ ದಲಿತ ಎಂಬೆಲ್ಲ ಗಡಿಗಳನ್ನು ದಾಟಿ ಭಾವೈಕ್ಯದ ಸಂದೇಶ ಸಾರುತ್ತಾರೆ.ಹಲವಾರು ವರ್ಷಗಳಿಂದ ನಡೆದು ಕೊಂಡು ಬಂದಿರುವ ಈ ರೊಟ್ಟಿ ಊಟದ ಜಾತ್ರೆಯ ಪರಿಕಲ್ಪನೆ ಕೇಂದ್ರ ಸರ ಕಾರದ ಕೋಮು ಸೌಹಾರ್ದತಾ ಪ್ರಶಸ್ತಿ ಪುರಸೃತರಾದ ಗದಗಿನ ಡಾ|| ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳದು.

Image result for jaatre

ಅದನ್ನು ಶಿರೋಳ ಶ್ರೀಮಠದ ಪೀಠಾಧಿಪತಿಗಳಾದ ಶ್ರೀ ಗುರುಬಸವ ಮಾಹಾಸ್ವಾಮಿಗಳು ಚಾಚೂ ತಪ್ಪದೆ ಮುನ್ನಡೆಸಿಕೊಂಡು ಬರುತ್ತ ಮಾದರಿಯಾಗಿದ್ದಾರೆ.ಉತ್ತರ ಕರ್ನಾಟಕ ಖಡಕ ರೊಟ್ಟಿಗಳು, ಬಾನದ ಉಂಡಿ ರುಚಿಕಟ್ಟಾದ ಕರಿಂಡಿ ವೈವಿಧ್ಯಮಯ ಪಲ್ಲೆ, ಅಲ್ಲದೆ ಎಳ್ಳು ಹಚ್ಚಿದ ಸಜ್ಜಿ ರೊಟ್ಟಿಗಳು ರೊಟ್ಟಿ ಊಟಕ್ಕೆ ಸಿದ್ದಪಡಿಸಲಾಗಿರುತ್ತದೆ. ಉತ್ತರ ಕರ್ನಾಟಕದ ಬಹುತೇಕ ಎಲ್ಲಾ ಜಿಲ್ಲೆಗಳ ಜನರು ಜಾತ್ರೆಯಲ್ಲಿ ಭಾಗವಹಿಸುತ್ತಾರೆ, ಮೊದಮೊದಲು ಸಣ್ಣ ಪ್ರಮಾಣದಲ್ಲಿ ನಡೆಯುತ್ತಿದ್ದ “ರೊಟ್ಟಿ ಊಟದ ಜಾತ್ರೆಗೆ” ಮಾಧ್ಯಮಗಳ ಪ್ರಚಾರದಿಂದ ಹೆಚ್ಚು ಹೆಚ್ಚು ಜನರು ಬರಲಾರಂಭಿಸಿದರು. ಇದಕ್ಕಾಗಿ ಸುಮಾರು ಹತ್ತು ಚೀಲ ಜೋಳದ ರೊಟ್ಟಿಗಳು ಖರ್ಚಾಗುತ್ತವೆ ಎಂದು ಅಂದಾಜಿಸಲಾಗಿದೆ.ಈ ರೊಟ್ಟಿ ಊಟದ ಜಾತ್ರೆಗೆ ಹತ್ತು-ಹದಿನೈದು ದಿನಗಳ ಮೊದಲೇ ತಯಾರಿ ನಡೆಯುತ್ತದೆ. ದಾಸೋಹಕ್ಕೆಂದು ಕೊಡುಗೈ ದಾನಿಗಳಿಂದ ಸಂಗ್ರಹಿಸಿದ ಜೋಳ ಮತ್ತು ಸಜ್ಜಿಯನ್ನು ಹಿಟ್ಟು ಮಾಡಿಸಿ ಜಾತ್ರೆಗೆ ಬರಬಹುದಾದ ನಿರೀಕ್ಷಿತ ಜನ ಪ್ರಮಾಣಕ್ಕೆ ಬೇಕಾಗುವಷ್ಟು ರೊಟ್ಟಿಗಳನ್ನು ಮಾಡಿಸಲಾಗುತ್ತದೆ. ಜಾತ್ರೆಯು ನಡೆಯುವ ಗ್ರಾಮವು ಸೇರಿದಂತೆ ಸುತ್ತಲಿನ ಸುಮಾರು ಏಳೆಂಟು ಗ್ರಾಮಗಳಲ್ಲಿ ಜಾತಿ ಭೇದವಿಲ್ಲದೆ ರೊಟ್ಟಿ ಮಾಡಲು ಮನೆ-ಮನೆಗೆ ತೆರಳಿ ಹಿಟ್ಟನ್ನು ಹಾಕಲಾಗುತ್ತದೆ.

Image result for rotti jaatre

ಹಿಟ್ಟು ಹಾಕಿಸಿಕೊಂಡವರು ರೊಟ್ಟಿಗಳನ್ನು ಮಾಡಿಕೊಡುವಾಗ ತಮ್ಮ ಶಕ್ತ್ಯನುಸಾರ ತಮ್ಮ ಹತ್ತಿಪ್ಪಿತ್ತು ರೊಟ್ಟಿಗಳನ್ನು ಸಹ ಸೇರಿಸಿ ಮಠಕ್ಕೆ ತಂದು ಮುಟ್ಟಿಸುತ್ತಾರೆ ಕೆಲವರಂತೂ ತಮ್ಮ ತಮ್ಮ ಮನೆಯಿಂದ-ಹಳ್ಳಿಯಿಂದ ಇಂತಿಷ್ಟು ರೊಟ್ಟಿಗಳನ್ನು ತರುತ್ತೇವೆ. ಎಂದು ವಾಗ್ದಾನ ಮಾಡಿ ಜಾತ್ರೆಗೆ ಬರುವಾಗ ತಮ್ಮೊಂದಿಗೆ ತರುತ್ತಾರೆ. ಡಾ|| ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳು ಹಾಗೂ ಶಿರೋಳದ ಶ್ರೀ ಗುರುಬಸವ ಮಾಹಾಸ್ವಾಮಿಗಳು ಪ್ರತಿ ವರ್ಷದ ಈ ರೊಟ್ಟಿ ಊಟದ ಜಾತ್ರೆಯಲ್ಲಿ ಭಾಗವಹಿಸುವ ಜನರಿಗೆ ರೊಟ್ಟಿ ಪಲೈ ಬಾನದ ಊಂಡಿ ಕರಿಂಡಿಯನ್ನು ವಿತರಣೆ ಮಾಡುವ ಮೂಲಕ ರೊಟ್ಟಿ ಊಟಕ್ಕೆ ಚಾಲನೆ ನೀಡುತ್ತಾರೆ.ಗದಗಿನ ಶ್ರೀ ತೋಂಟದಾರ್ಯ ಮಠ ಹಾಗೂ ಇದರ ಶಾಖಾಮಠಗಳೆಲ್ಲವೂ ಜನಸಂಸೃತಿಯ ಕೇಂದ್ರಗಳಾಗುವ ನಿಟ್ಟಿನಲ್ಲಿ ಹತ್ತು-ಹಲವು ಜನಪರ ವೈಚಾರಿಕ ವಿದಾಯಕ ಕಾರ್ಯಕ್ರಮಗಳ ಮೂಲಕ ನಿಜ ಜಾತ್ರೆಗೆ ಮುನ್ನುಡಿ ಬರೆದಿದೆ.

ಅದರಂತೆ ಶಿರೋಳ “ರೊಟ್ಟಿ ಊಟದ ಜಾತ್ರೆ” ಸರ್ವಧರ್ಮಿ/ಯರನ್ನು ಒಂದೇ ರೀತಿ ಕಾಣುವುದು. ಹಾಗೂ ಬಡವ ಶ್ರೀಮಂತ ಎಂಬ ಭೇದ ಭಾವ ತೋರದೆ ಎಲ್ಲರೂ ಅಣ್ಣ-ತಮ್ಮ ಅಕ್ಕ-ತಂಗಿಯರೆಂಬ ಭಾವ ತಾಳಿ ಶ್ರೀಮಠದಲ್ಲಿ ಒಟ್ಟಾಗಿ ಕುಳಿತು ಊಟ ಮಾಡುವ ಮೂಲಕ ಸರ್ವಧರ್ಮ ಸಮನ್ವಯದ ಸಂದೇಶವನ್ನು ನಾಡಿನ ತುಂಬ ಪಸರಿಸುವ ಕಾರ್ಯವನ್ನು ಶಿರೋಳ ಗ್ರಾಮದ ಶ್ರೀ ತೋಂಟದಾರ್ಯ ಮಠ ಮಾಡುತ್ತಿದೆ ಎಂಬುದು ಹೆಮ್ಮೆಯ ವಿಷಯ ಹಾಗಾದರೆ, ನೀವು ಒಮ್ಮೆ ಬಂದು ನಮ್ಮೂರ ಜಾತ್ರೆಯಲ್ಲಿನ ರೊಟ್ಟಿ ಊಟದ ಸವಿಯನ್ನು ಸವಿದು. ನೆತ್ತಿ ಮತ್ತು ಹೊಟ್ಟಿಯನ್ನು ತುಂಬಿಸಿಕೊಂಡು ರೊಟ್ಟಿ ಊಟದ ಮಹತ್ವವನ್ನು ನೀವು ತಿಳಿದು ಇತರರಿಗೂ ತಿಳಿಸುವ ಪ್ರಯತ್ನವನ್ನು ಮಾಡಿದ್ದೆ ಆದರೆ ಶಿರೋಳದ ಈ ರೊಟ್ಟಿ ಊಟದ ಜಾತ್ರೆಗೆ ನಿಜವಾದ ಅರ್ಥ ಬಂದಂತಾಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top