ಫೆಬ್ರವರಿ 21, 2017 (ಮಂಗಳವಾರ)
ಪಂಚಾಂಗ: 1938 ದುರ್ಮುಖಿ ಸಂವತ್ಸರ
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಮಾಘ ಮಾಸ,
ಕೃಷ್ಣ ಪಕ್ಷ, ದಶಮೀ ತಿಥಿ,
ಮೂಲ ನಕ್ಷತ್ರ,
ರಾಹುಕಾಲ: ಬೆಳಿಗ್ಗೆ 8:11 am – 9:38 am
ಗುಳಿಕಕಾಲ: ಮಧ್ಯಾಹ್ನ 2:00 pm – 3:28 pm
ಯಮಗಂಡಕಾಲ: ಬೆಳಿಗ್ಗೆ 11:05 am – 12:33 pm
ಮೇಷ
ಈ ದಿನ ಬಲವಾಗಿ ನಿಮ್ಮ ಇಷ್ಟ ದೈವವನ್ನು ನೆನೆಯಿರಿ. ಇದರಿಂದ ಇಂದಿನ ಕೆಲಸ ಕಾರ್ಯಗಳು ಸುಗಮವಾಗಿ ಆಗುವುದು.
ವೃಷಭ
ಮಾಡಿ ಮುಗಿಸಲೇಬೇಕಾದ ಕೆಲಸವನ್ನು ಆದಷ್ಟು ಜಾಗ್ರತೆಯಾಗಿ ಮುಗಿಸಿರಿ. ಏಕೆಂದರೆ ಈ ದಿನ ಮನೆಗೆ ಬಂದು ಹೋಗುವ ಬಂಧುಗಳ ಸಂಖ್ಯೆ ಅಧಿಕವಾಗಿರುತ್ತದೆ. ಅವರ ಇಷ್ಟನಿಷ್ಟಗಳನ್ನು ಪೂರೈಸುವುದರಲ್ಲಿಯೇ ಈ ದಿನ ಕಳೆದು ಹೋಗುವುದು.
ಮಿಥುನ
ಕೆಲಸದ ಒತ್ತಡದ ದೆಸೆಯಿಂದ ಗೊಂದಲದ ಗೂಡಾಗಿರುವ ಮನಸ್ಸಿನಲ್ಲಿ ಯಾವ ಕೆಲಸವನ್ನು ಮೊದಲು ಮುಗಿಸಬೇಕು ಎಂದು ಚಿಂತಿಸುವಿರಿ. ಮೊದಲು ಮಾಡಿಕೊಂಡ ಒಪ್ಪಂದದ ಕೆಲಸವನ್ನು ಬೇಗನೆ ಮುಗಿಸಿ ಮತ್ತೊಂದು ಕೆಲಸವನ್ನು ಕೈಗೆತ್ತಿಕೊಳ್ಳಿರಿ.
ಕಟಕ
ಕೋರ್ಟು, ಕಚೇರಿಯ ಕೆಲಸಗಳಲ್ಲಿ ಹಿನ್ನಡೆ ತೋರುವ ಸಾಧ್ಯತೆಯಿದೆ. ಈ ಬಗ್ಗೆ ನಿಮ್ಮ ಕೇಸನ್ನು ನಡೆಸುತ್ತಿರುವ ವಕೀಲರನ್ನೇ ಬದಲಿಸಬೇಕೆಂಬ ಇಚ್ಛೆ ಮನದಲ್ಲಿ ಸುಳಿಯುವುದು. ಆದರೆ ಹಾಗೆ ಮಾಡುವುದು ಈ ಹಂತದಲ್ಲಿ ಸರಿಯಲ್ಲ.
ಸಿಂಹ
ವೃಥಾ ಕಾಡುಹರಟೆಯಿಂದ ಸಮಯ ಕಳೆಯಲು ಈ ದಿನ ಸಮಯವಿಲ್ಲ. ಮೈತುಂಬಾ ಕೆಲಸಗಳು. ಯಾವ ಕೆಲಸ ಮಾಡಲು ಹೋದರೂ ಟೀಕೆಗೆ ಗುರಿ ಆಗುವಿರಿ. ಆದರೆ ಬಂದದ್ದೆಲ್ಲಾ ಬರಲಿ ಗೋವಿಂದನ ದಯೆ ಇರಲಿ ಎಂದು ಬಯಸಿರಿ.
ಕನ್ಯಾ
ಗುರುಕಾರುಣ್ಯದಿಂದ ಪಾಪರಾಶಿಗಳು ಸುಟ್ಟು ಹೋಗುವುದು. ದೇಹದಲ್ಲಿ ನವಚೈತನ್ಯ ತುಂಬುವುದು. ಧಾರ್ಮಿಕ ಕಾರ್ಯದಲ್ಲಿ ಭಾಗವಹಿಸುವಿರಿ. ಈ ದಿನ ಲೌಕಿಕ ಕಾರ್ಯ ಮಾಡಲು ಬಿಡುವು ಸಿಗದೆ ಹೋಗುವ ಸಾಧ್ಯತೆ ಇರುವುದು.
ತುಲಾ
ಕುಟುಂಬದ ಜನರೊಂದಿಗೆ ಬೆರೆತು ಉಲ್ಲಾಸದ ದಿನವನ್ನಾಗಿ ಪರಿವರ್ತಿಸಿ ಕೊಳ್ಳುವಿರಿ. ಮಡದಿ, ಮಕ್ಕಳು ನಿಮ್ಮ ಸಂತೋಷದಲ್ಲಿ ಪಾಲ್ಗೊಳ್ಳುವರು. ಹಣಕಾಸು ಅಲ್ಪಮಟ್ಟಿಗೆ ಕೈಬಿಟ್ಟರೂ ಅದರಿಂದ ಸಂತೋಷವನ್ನು ಹೊಂದುವಿರಿ.
ವೃಶ್ಚಿಕ
ದೂರ ದೂರದ ಊರಿನ ಪ್ರಯಾಣದಿಂದ ಅನೇಕ ಉತ್ತಮ ಅವಕಾಶಗಳು ಲಭ್ಯವಾಗಲಿವೆ. ಧೈರ್ಯವನ್ನು ಕಳೆದುಕೊಳ್ಳಬೇಡಿರಿ. ಗುರುವಿನ ಕೃಪಾದೃಷ್ಟಿಯಿಂದ ಎಲ್ಲವೂ ಒಳಿತಾಗಲಿದೆ.
ಧನು
ಮನೆಗೆದ್ದು ಮಾರುಗೆಲ್ಲು ಎಂದರು ಹಿರಿಯರು. ಹಾಗಾಗಿ ಮನೆಯ ವಾತಾವರಣವನ್ನು ನಿರ್ಲಕ್ಷಿಸದಿರಿ. ಮಗ/ ಮಗಳಿನ ವಿದ್ಯಾಭ್ಯಾಸದ ವಿಚಾರವಾಗಿ ಸ್ವಲ್ಪ ಗಮನಹರಿಸಿ. ಸಾಧ್ಯವಾದರೆ ಅವರ ಓದಿಗೆ ಸಹಾಯ ಮಾಡಿರಿ.
ಮಕರ
ಮಾತು ಬೆಳ್ಳಿ ಮೌನ ಬಂಗಾರ ಎಂದರು ಹಿರಿಯರು. ಹಾಗಾಗಿ ಈ ದಿನ ನೀವಾಡುವ ಮಾತುಗಳು ಹಿತಮಿತವಾಗಿರಲಿ. ಸೂಜಿಗೆ ಮುತ್ತು ಕೊಟ್ಟಂತೆ ನಿಮ್ಮ ಮಾತುಗಳು ಹೊರಗೆ ಬರಲಿ. ಇದರಿಂದ ಗೌರವ ಘನತೆ ನಿಮ್ಮದಾಗುವುದು.
ಕುಂಭ
ವೃಥಾ ಸಂಯಮ ಕಳೆದುಕೊಳ್ಳಬೇಡಿರಿ. ಗುರು-ಹಿರಿಯರು ತೋರಿದ ಮಾರ್ಗದಲ್ಲಿ ನಡೆಯಿರಿ. ನಿಮ್ಮ ಬಾಲ್ಯ ಸ್ನೇಹಿತರ ಭೇಟಿ ಸಂಭವವಿದೆ. ಹಣಕಾಸಿನ ವಿಷಯದಲ್ಲಿ ಜಾಗ್ರತೆಯಿರಲಿ. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿರಿ.
ಮೀನ
ನಿಮ್ಮ ಸನಿಹದ ಜನರಿಂದ ಪ್ರಶಂಸೆ ಸಿಗುವುದು. ನಿಮ್ಮ ಸೌಮ್ಯ ಸ್ವಭಾವದಿಂದಾಗಿ ನೀವು ಎಲ್ಲರ ಗಮನ ಸೆಳೆಯುವಿರಿ. ನಿಮ್ಮಲ್ಲಿ ಮಾಡಿದ ಹೊಸ ವಿಚಾರವನ್ನು ಗೆಳೆಯರ ಮುಂದೆ ಪ್ರಕಟಗೊಳಿಸುವಿರಿ.
ಸುಂದರ್ ರಾಜ್, ದೂ: 9844101293 / 9902345293
Consulting Hours:
1 PM – 9 PM
10 AM -4 PM (Sunday)
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
