ತರಕಾರಿ ಬೆಳೆಗಳಲ್ಲಿ ಪ್ರಮುಖವಾದದ್ದು ಹಿರೇಕಾಯಿ. ಅಲ್ಪಾವಧಿ ಬೆಳೆಯಾದ ಇದಕ್ಕೆ ಸ್ಥಳೀಯ ಮಾರುಕಟ್ಟೆ ಇರುವುದರಿಂದ ಸಾಕಷ್ಟು ಲಾಭಕಾರಿಯೂ ಹೌದು. ಇದು ನಾವು ಬಳಸುವ ಪ್ರಮುಖ ತರಕಾರಿಗಳಲ್ಲಿ ಒಂದು. ಇದರಲ್ಲಿ ಅನೇಕ ಪೋಷಕಾಂಶಗಳು ಅಡಗಿರುವುದಲ್ಲದೆ ಹಲವಾರು ಔಷಧೀಯ ಗುಣಗಳೂ ಕೂಡ ಇವೆ.
- ಹಿರೇಕಾಯಿ ಯಿಂದ ಮಾಡಿರುವ ಸಾರು ಅಥವಾ ಹುಳಿ ರೂಪಗಳಲ್ಲಿ ಉಪಯೋಗ ಮಾಡುವುದರಿಂದ ತೂಕ ಹೆಚ್ಚುವ ಭಯವಿಲ್ಲ.
- ಮಧುಮೇಹಿ ರೋಗಿಗಳಿಗೆ ಇದೊಂದು ಒಳ್ಳೆಯ ಔಷಧ.
- ಆಮಶಂಕೆ ಉಂಟಾದಾಗ ಬೀಜವನ್ನು ಮಜ್ಜಿಗೆಯೊಂದಿಗೆ ಬಳಸಬಹುದು.
- ಹಿರೇಕಾಯಿ ಗಿಡದ ಎಲೆಯನ್ನು ಅರೆದು ಗಾಯಗಳಿಗೆ ಹಚ್ಚುವುದರಿಂದ ಗಾಯ ಮಾಯವಾಗುತ್ತದೆ.
- ಹಿರೇಕಾಯಿ ಗಿಡದ ಬೇರನ್ನು ತೇದು ಮೂಲವ್ಯಾಧಿ ಮೊಳಕೆಗಳಿಗೆ ಹಚ್ಚಿದರೆ ಗುಣವಾಗುತ್ತದೆ. ಮತ್ತು ರಕ್ತಸ್ರಾವವನ್ನು ತಗ್ಗಿಸುತ್ತದೆ.
ಇಷ್ಟೆಲ್ಲ ಗುಣಗಳನ್ನು ಹೊಂದಿರುವ ಈ ಬೆಳೆಯನ್ನು ಮನೆಯಂಗಳದಲ್ಲಿಯೇ ಬೆಳೆಯಬಹುದು. ಕಾರಣ ಇದನ್ನು ನೀರಾವರಿ ಮತ್ತು ಮಳೆಯಾಶ್ರಿತವಾಗಿಯೂ ಬೆಳೆಯಬಹುದು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
