ಫೆಬ್ರವರಿ 22, 2017 (ಬುಧವಾರ)
ಪಂಚಾಂಗ: 1938 ದುರ್ಮುಖಿ ಸಂವತ್ಸರ
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಮಾಘ ಮಾಸ,
ಕೃಷ್ಣ ಪಕ್ಷ, ಏಕಾದಶೀ ತಿಥಿ,
ಪೂರ್ವ ಆಷಾಢ ನಕ್ಷತ್ರ,
ರಾಹುಕಾಲ: ಬೆಳಿಗ್ಗೆ 8:11 am – 9:38 am
ಗುಳಿಕಕಾಲ: ಮಧ್ಯಾಹ್ನ 2:00 pm – 3:28 pm
ಯಮಗಂಡಕಾಲ: ಬೆಳಿಗ್ಗೆ 11:05 am – 12:33 pm
ಮೇಷ
ನಿಮ್ಮ ಪಾಡಿಗೆ ನೀವಿದ್ದರೂ ನಿಮ್ಮನ್ನು ಮಾತನಾಡಿಸಿ ತಪ್ಪು ಹುಡುಕುವ ಮಂದಿಯಿಂದ ಈ ದಿನ ಎಚ್ಚರದಿಂದಿರಿ. ಆದಷ್ಟು ಈ ದಿನ ಮೌನವಾಗಿದ್ದು ಗಣಪತಿಯ ಆರಾಧನೆ ಮಾಡಿರಿ.
ವೃಷಭ
ಹಿರಿಯರ ಆಶೀರ್ವಾದದಿಂದ ಈ ದಿನ ನಿಮ್ಮ ಕಾರ್ಯಗಳು ಕೈಗೂಡುವವು. ಹಾಗಾಗಿ ಹಿರಿಯರ ಸಹಾಯವನ್ನು ಕಡೆಗಣಿಸದಿರಿ.
ಮಿಥುನ
ಕುಟುಂಬ ಕಲಹದಿಂದ ಮನಸ್ಸಿಗೆ ಅಶಾಂತಿ ಉಂಟಾಗುವುದು. ಹಿರಿಯರ ಮಧ್ಯಸ್ಥಿಕೆಯಿಂದ ಕಲಹವು ಶಮನಗೊಳ್ಳುವುದು. ಪತಿ-ಪತ್ನಿಯರು ಈ ದಿನ ಶಿವನ ದೇವಾಲಯಕ್ಕೆ ಹೋಗಿ ಪ್ರಾರ್ಥನೆ ಸಲ್ಲಿಸಿರಿ.
ಕಟಕ
ಪರಾಕ್ರಮ ಕೆಲಸಗಳು ಸುಸೂತ್ರವಾಗಿ ನಡೆಯುವುದು. ಆದಾಗ್ಯೂ ನಿಮ್ಮ ಎದುರಾಳಿಗಳು, ಪ್ರತಿಸ್ಪರ್ಧಿಗಳು ತಲೆನೋವಿಗೆ ಕಾರಣರಾಗುತ್ತಾರೆ.
ಸಿಂಹ
ನಿಮ್ಮ ಎಲ್ಲಾ ಕಾರ್ಯಗಳು ಸುಗಮವಾಗಿ ಸಾಗುವವು. ಆದರೆ ನಿಮ್ಮ ಕಠೋರ ಮಾತು ಇತರೆಯವರನ್ನು ಘಾಸಿಗೊಳಿಸುವುದು. ಇದರಿಂದಾಗಿ ಅವರು ಹಣಕಾಸಿನ ವ್ಯವಹಾರದಲ್ಲಿ ಸಂಶಯ ತಾಳುವರು.
ಕನ್ಯಾ
ಕೈ ಧಾರಾಳತನವಿರುವ ನೀವು ಇಂದಿನಿಂದ ಹಣ ಕೂಡಿಡುವ ಪರಿಪಾಠವನ್ನು ಬೆಳೆಸಿಕೊಳ್ಳಬೇಕು. ಏಕೆಂದರೆ ನಿಮ್ಮ ಆಪತ್ ಕಾಲದಲ್ಲಿ ಯಾರೂ ನಿಮಗೆ ಸಹಾಯ ಮಾಡುವುದಿಲ್ಲ.
ತುಲಾ
ನಿಮಗೆ ವಹಿಸಿದ ಕಾರ್ಯವನ್ನು ಶ್ರದ್ಧೆಯಿಂದ ಮಾಡಿರಿ. ಇದರಿಂದ ನಿಮ್ಮ ಮೇಲಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗುವಿರಿ. ಹಣಕಾಸು ಕೂಡಾ ನಿಮಗೆ ಸಕಾಲದಲ್ಲಿ ಒದಗಿ ಬರುವುದು.
ವೃಶ್ಚಿಕ
ದ್ವಿತೀಯ ವಾಕ್ ಸ್ಥಾನದಲ್ಲಿ ಸಂಚರಿಸುವ ಸಂದರ್ಭದಲ್ಲಿ ಮಾತಿನಿಂದ ಸಮಸ್ಯೆಗಳು ಎದುರಾಗುವುದು. ಹಾಗಾಗಿ ಈ ದಿನ ಎಚ್ಚರಿಕೆ ಅಗತ್ಯ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ.
ಧನು
ತಣ್ಣೀರನ್ನು ಆರಿಸಿ ಕುಡಿಯುವ ಕಾಲವಿದು. ಹಾಗಾಗಿ ನಿಮ್ಮ ಎದುರಾಳಿಯು ಆಡಿದ ಮಾತಿಗೆ ತಕ್ಷ ಣವೇ ಪ್ರತಿಕ್ರಿಯಿಸುವುದು ಈ ದಿನ ಸೂಕ್ತವಲ್ಲ. ಹಾಗಾಗಿ ಇದು ನಿಮ್ಮ ಸೋಲಲ್ಲ. ಸೋತಂತೆ ನಟಿಸಿ ಗೆಲ್ಲಲು ಪ್ರಯತ್ನಿಸಿ.
ಮಕರ
ಗುರು ಕೃಪೆಯಿಂದ ಪಡೆದ ಹಣವು ಶನಿಯ ವ್ಯಯಸ್ಥಾನದ ಸಂಚಾರದಿಂದಾಗಿ ವೃಥಾ ಸರ್ಕಾರಕ್ಕೆ ದಂಡ ತೆರುವ ಮೂಲಕ ಖರ್ಚಾಗುವುದು. ಸಂಚಾರ ನಿಯಮ ಪಾಲಿಸಿ ಮತ್ತು ಸೂಕ್ತ ದಾಖಲೆಗಳನ್ನು ಇಟ್ಟುಕೊಳ್ಳಿ
ಕುಂಭ
ವ್ಯಾಪಾರ-ವ್ಯವಹಾರಸ್ಥರಿಗೆ ಸಾಧಾರಣ ಫಲ ಕಂಡು ಬರುವುದು. ಕೃಷಿಕರಿಗೆ ಸರ್ಕಾರದ ಧನ ಸಹಾಯ ದೊರೆಯುವುದು. ಮನೆಯ ಇತರೆ ಕಾರ್ಯಗಳು ಮಂದಗತಿಯಿಂದ ಸಾಗುವುದು.
ಮೀನ
ರಾಜಕೀಯ ನೇತಾರರಿಗೆ ಗುರುವಿನ ರಕ್ಷೆ ಇರುವುದರಿಂದ ಸಮಾಜದಲ್ಲಿ ನಿಮ್ಮ ಮಾತಿಗೆ ಬೆಲೆ ಬರುವುದು. ಸಂಘಸಂಸ್ಥೆಗಳ ಚುನಾವಣೆಗಳಲ್ಲಿ ಯಶಸ್ಸನ್ನು ಹೊಂದುವಿರಿ. ಇದರಿಂದ ಜನಪ್ರಿಯತೆ ಹೆಚ್ಚುವುದು.
ಸುಂದರ್ ರಾಜ್, ದೂ: 9844101293 / 9902345293
Consulting Hours:
1 PM – 9 PM
10 AM -4 PM (Sunday)
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
