fbpx
ಸಮಾಚಾರ

3 ಲಕ್ಷ ಅಕ್ರಮ ಭಾರತಿಯ ವಲಸಿಗರಿಗೆ ಟ್ರಂಪ್ ಗೇಟ್ ಪಾಸ್

ವಾಷಿಂಗ್ಟನ್: ಅಮೆರಿಕದಲ್ಲಿ ನೆಲೆಸಿರುವ 3ಲಕ್ಷಕ್ಕೂ ಅಧಿಕ ಭಾರತಿಯರಿಗೆ ಟ್ರಂಪ್ ವಲಸಿಗರನ್ನು ಗೇಪಾಸ್ ಮಾಡಲು ಸಿದ್ದತೆಯನ್ನು ಮಾಡಿದ್ದಾರೆ. ಅಕ್ರಮ ನಿವಾಸಿಗಳಿಗೆ ಕಡಿವಾಣ ಹೇರುವ ನಿಟ್ಟಿನಲ್ಲಿ ವಲಸೆ ನೀತಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಟ್ರಂಪ್ ಮಾರ್ಗದರ್ಶಿ ಸೂತ್ರಗಳನ್ನು ಜಾರಿ ಮಾಡಿದ್ದಾರೆ.

ಎಚ್-ಒನ್ ಬಿ ವೀಸಾ ನೀತಿ ಕಠಿಣಗಿಳಿಸುವ ಮೂಲಕ ಭಾರತೀಯ ಐಟಿ ಉದ್ಯೋಗಿಗಳಿಗೆ ಆಘಾತ ನೀಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಪರಿಷ್ಕೃತ ವಲಸೆ ನೀತಿ ಮೂಲಕ ಅಮೆರಿಕದಲ್ಲಿ ನೆಲೆಸಿರುವ 3 ಲಕ್ಷಕ್ಕೂ ಅಧಿಕ ಭಾರತೀಯರಿಗೆ ಶಾಕ್ ನೀಡಲು ಸಿದ್ಧತೆ ನಡೆಸಿದ್ದಾರೆ. ಇದರಿಂದ ಅಕ್ರಮವಾಗಿ ನೆಲೆಸಿರುವ ನಿವಾಸಿಗಳಿಗೆ ಕಡಿವಾಣ ಹೇರುವ ನಿಟ್ಟಿನಲ್ಲಿ ವಲಸೆ ನೀತಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಟ್ರಂಪ್ ಮಾರ್ಗದರ್ಶಿ ಸೂತ್ರವನ್ನು ಜಾರಿ ಮಾಡಿದ್ದು, ಇದರಿಂದ ಅಮೆರಿಕದಲ್ಲಿ ವಾಸವಾಗಿರುವ ವಿವಿಧ ದೇಶಗಳ ಒಂದು ಕೋಟಿಗೂ ಅಧಿಕ ಜನರು ಗಡಿಪಾರು ಭೀತಿ ಎದುರಿಸುವಂತಾಗಿದೆ.

ಭಾರತೀಯರಿಗೆ ಸ್ವಲ್ಪಕಾಲ ರಿಲೀಫ್

ಅಮೆರಿಕಕ್ಕೆ ವಲಸೆ ಹೊಗಿರುವವರಲ್ಲಿ ಭಾರತೀಯರ ಸಂಖ್ಯೆ ಹೆಚ್ಚಾಗಿದೆ. ಅಂದಾಜಿನ ಪ್ರಕಾರ 3 ಲಕ್ಷ ಭಾರತೀಯರು ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿದ್ದಾರೆ. ಇದರಲ್ಲಿ ಹೆಚ್ಚಿನವರು ವೀಸಾ ಅವಧಿ ಪೂರ್ಣಗೊಂಡ ಬಳಿಕವೂ ಅಲ್ಲಿ ನೆಲೆಸಿರುವವರು. ಟ್ರಂಪ್ ನ ಹೊಸ ನೀತಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ಬಂದಲ್ಲಿ ಇವರೆಲ್ಲರೂ ಅಮೆರಿಕದಿಂದ ಹೊರಹೊಗುವುದು ಅನಿವಾರ್ಯವಾಗುತ್ತದೆ. ಆದರೆ ವೀಸಾ ಅವಧಿ ಪೂರ್ಣಗೊಂಡ ಬಳಿಕವೂ ಅಮೆರಿಕದಲ್ಲಿರುವವರಿಗೆ ಸ್ವಲ್ಪ ವಿನಾಯಿತಿ ಇರುವುದರಿಂದ ಅಲ್ಲಿ ಅಕ್ರಮವಾಗಿ ನೆಲೆಸಿರುವ ಭಾರತೀಯರಿಗೆ ಅಲ್ಪಮಟ್ಟಿನ ಸಮಾಧಾನವಿದೆ.

ಅಮೇರಿಕದಲ್ಲಿರುವ ಟಾಪ್ 10 ವಲಸಿಗರು (2015)

*ಮೆಕ್ಸಿಕೊ: 1,16,43,000 (26.9%)

*ಭಾರತ 23,90,000 (5.5%)

*ಚೀನಾ :20,65,000(4.8%)

*ಫಿಲಿಪ್ಪೀನ್ಸ್:19,82,000(4.6%)

*ಎಲ್ ಸಾಲ್ವಡಾರ್:13,52,000(3.1%)

*ವಿಯೆಟ್ನಾಂ: 13,01.000(3.0 %)

*ಕ್ಯೂಬಾ: 12,11,000(2.8 %)

*ಡೊಮಾನಿಕನ್ ರಿಪಬ್ಲಿಕ್: 10,63,000 (2,5%)

*ಕೊರಿಯಾ 10,60,000 (2.4 %) ಗ್ಲಾಟಿಮಾಲಾ: 9,28,000 (2.1%)

*ಇತರೆ ದೇಶಗಳು: 1.82,95,000 (42.3%)

 

ಟ್ರಂಪ್ ಸರ್ಕಾರದ ಪರಿಷ್ಕೃತ ಗಡೀಪಾರು ನೀತಿಯ ಪ್ರಮುಖ ಅಂಶಗಳು

*ಅಂತರಿಕ ಭದ್ರತಾ ಇಲಾಖೆ (ಡಿಎಚ್ ಡಿ) ಗಡಿ ರಕ್ಷಣಾ ಅಧಿಕಾರಿಗಳಿಗೆ ಯಾವುದೇ ವಿಚಾರಣೆ ಇಲ್ಲದೆ ಅಕ್ರಮ ವಲಸಿಗರನ್ನು ಗಡಿಪಾರು ಮಾಡುವ ಅಧಿಕಾರ, ಮುಖ್ಯವಾಗಿ ಮಕ್ಕಳಿಗೆ ಮಾತ್ರ ಇದರಿಂದ ವಿರಳವಾಗಿ ವಿನಾಯಿತಿ, ಬರೀ ಅಕ್ರಮ ವಲಸಿಗರಷ್ಟೇ ಅಲ್ಲ, ಪೌರತ್ವಕ್ಕೆ ಅರ್ಜಿಸಲ್ಲಿಸಿ ನ್ಯಾಯಾಲಯದ ತೀರ್ಮಾನಕ್ಕಾಗಿ ಕಾಯುತ್ತಿರುವ ವಲಸಿಗರನ್ನೂ ವಲಸೆ ಹಾಗೂ ಕಸ್ಷಮ್ಸ್ ಅಧಿಕಾರಿಗಳು ವಶಕ್ಕೆ ಪಡೆದು ಕ್ರಮ ಕೈಗೊಳ್ಳಬಹುದು.

*ಅಕ್ರಮ ವಲಸಿಗರನ್ನು ತಡೆಯಲು ಅಮೆರಿಕಾ-ಮೆಕ್ಸಿಕೋ ಗಡಿಭಾಗದಲ್ಲಿ ಸುಮಾರು 2000 ಮೈಲಿ ಉದ್ದದ ಬೃಹತ್ ಗೋಡೆಯನ್ನು ನಿರ್ಮಿಸಲೂ ಸರ್ಕಾರ ನಿರ್ಧರಿಸಿದೆ. ಈ ಬಗೆಗಿನ ವಿವರಗಳನ್ನು ಪ್ರಕಟಿಸಲಾಗಿದೆ.

*ಅಕ್ರಮ ವಲಸಿಗರಷ್ಟೇ ಅಲ್ಲ, ಸತ್ರಮವಾಗಿಯೇ ನೆಲೆಸಿದ್ದು ಕಳ್ಳತನ, ವ್ಯೇಶ್ಯಾವಾಟಿಕೆಯಂತಹ ಸಣ್ಣಪುಟ್ಟ ಅಪರಾಧಗಳಲ್ಲಿ ತೊಡಗಿಕೊಂಡವರು ಸಹ ಅಮೆರಿಕಾದ ಹೊಸ ಕಾನೂನಿನ ಪ್ರಕಾರ ಅಧಿಕಾರಿಗಳ ಕ್ರಮಕ್ಕೆ ಗುರಿಯಾಗಬಹುದು. ಒಬಾಮ ಆಡಳಿತಾವಧಿಯಲ್ಲಿ ಇಂಥವರ ಬಗ್ಗೆ ಗಡಿಪಾರಿನಂಥ ಉಗ್ರ ಕ್ರಮವಾಗುತ್ತಿರಲಿಲ್ಲ.

*ವೀಸಾ ಅಚಧಿ ಮುಗಿದ ಮೇಲೂ ಉಳಿದುಕೊಂಡವರು ವಲಸಿಗರೂ ಹೊಸ ಕಾನೂನಿನ ಅಡಿಯಲ್ಲಿ ಬರುತ್ತಾರೆ.

*ಈ ಎಲ್ಲ ಯೋಜನೆಗಳನ್ನು ಕಾರ್ಯಗತಗೊಳಿಸಲು ಸುಮಾರು 15 ಸಾವಿರಕ್ಕೂ ಅಧಿಕ ಸಂಖ್ಯೆಯ ವಲಸೆ ಹಾಗೂ ಕಸ್ಟಮ್ಸ್ ಅಧಿಕಾರಿಗಳನ್ನು ಮತ್ತು ಗಡಿ ಸಂರಕ್ಷಣಾ ಅಧಿಕಾರಿಗಳನ್ನು ನೇಮಿಸಿಕೊಳ್ಳಲು ಸರ್ಕಾರ ನಿರ್ಧರಿಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top