fbpx
ಕರ್ನಾಟಕ

ಪ್ರತಿಯೊಬ್ಬರೂ ನೋಡಬೇಕಾದ ಕರ್ನಾಟಕದ ಧುಮ್ಮಿಕ್ಕುವ ದೂಧ್!!

ಧುಮ್ಮಿಕ್ಕುವ ದೂಧ್
`ಅಂದ ಎಂದಿಗೂ ಆನಂದ ತರಬಲ್ಲುದು’ ಎಂಬುದು ಕವಿವಾಣಿ. ಅದನ್ನು ಮನದುಂಬಿ ಸವಿಯಬೇಕೆಂದರೆ ಸಾಗಬೇಕು ದೂಧ್ ಸಾಗರಕ್ಕೆ. ಇಲ್ಲಿನ ಜಲಧಾರೆ ಬೆಳದಿಂಗಳ ಬಾಲೆ! ಕ್ಷೀರ ಧಾರೆಯಂತಿರುವ `ದೂಧ್ ಸಾಗರ್’ ಹೃನ್ಮನ ತಣಿಸುವ ತಾಣ. `ಕಣ್ಣುಗಳೆರಡು ಸಾಲದು ನಿನ್ನಯ ಅಂದವ ಕಾಣಲು’, ಎಂಬ ಪದ್ಯ ಇಲ್ಲಿUಪೂರಕ. ಭೋರ್ಗರೆವ ಹಾಲು ಬಿಳುಪಿನ ನೀರಧಾರೆ ನಿಜಕ್ಕೂ ರೋಮಾಂಚಕ! ಆಗಸ್ಟ್-ಅಕ್ಟೋಬರ್ ತಿಂಗಳ ನಡುವೆ ಈ ಜಲಧಾರೆಯು ತನ್ನ ವೈಭವವನ್ನುಪರಾಕಾಷ್ಠೆಗೇರಿಸಿಕೊಳ್ಳುವುದರಿಂದ ಪ್ರವಾಸಕ್ಕೆ ಪ್ರಶಸ್ತ ಸಮಯವಾಗಿದೆ.

Image result for dudhsagar
ಅಪ್ರತಿಮ ಸೌಂದರ್ಯ ರಾಶಿ ಹೊತ್ತ ಈ ಜಲಪಾತ ಗೋವಾ ಧಾರವಾಡ ಮಾರ್ಗ ಮಧ್ಯದಲ್ಲಿದೆ. ಮಳೆಗಾಲದಲ್ಲಿ ಇಲ್ಲಿ ಸಣ್ಣ ಪುಟ್ಟ ತೊರೆಗಳು ಹಲವಿದ್ದರೂ ಬಿಳಿ ನೊರೆ ಹೊತ್ತ ಈ ತೊರೆ ಉಕ್ಕುವ ಜಲಪಾತವಾಗಿ ತುಂಬು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಈ ಜಲರಾಶಿಯನ್ನು ನೋಡುತ್ತಾ ನಿಂತರೆ ಹಿಂದಿರುಗಲು ಮನಸ್ಸೇ ಬಾರದು. ಸುತ್ತಲೂ ಹಸಿರು ಕಾನನ. ನಡುವೆ ಹಾಲಿನ ನೊರೆಯಂತಹ ಈ ಧಾರೆ ಹಸಿರ ವನದೇವತೆಯ ಇಳಿಬಿಟ್ಟ ಬಿಳಿ ಸೀರೆ! ಭೋರ್ಗರೆತ ಸೃಷ್ಟಿಸುವ ಮಂಜಿನ ತೆರೆ, ಜಲಪಾತದ ಅನುಪಮ ಸೌಂದರ್ಯ ಹೆಚ್ಚಿಸಿ ನಿಮ್ಮನ್ನು ಕಲ್ಪನಾ ವಿಲಾಸದಲ್ಲಿ ತೇಲಿಸಿ ಬಿಡುತ್ತದೆ.

Image result for dudhsagar
ಪ್ರವಾಸಿಗರ ಮನತುಂಬುವ ಈ ರುದ್ರರಮಣೀಯ ದೃಶ್ಯವು ಸಾವಿರಾರು ಅಡಿ ಎತ್ತರದ ಕಲ್ಲು ಬಂಡೆಗಳ ಮಧ್ಯದಿಂದ ಪ್ರಪಾತಕ್ಕೆ ಧುಮುಕುವ ಧಾರೆ.! 30 ಅಡಿ ಅಗಲದ ಈ ದೂಧ್ ಸಾಗರ್ ಒಟ್ಟು 1027 ಅಡಿಗಳನ್ನು ಧುಮುಕಿ ದಾರಿ ಸವೆಸುತ್ತದಂತೆ. ಜಲಪಾತದ ಬುಡದ ಕೆರೆ ಈಜಲು ಪ್ರಶಸ್ತವಾದ ಸ್ಥಳ. ಚಾರಣಪ್ರಿಯ ಸಾಹಸಿಗರಿಗೆ ಇಲ್ಲಿನ ಬಂಡೆ ಹತ್ತುವುದು ಸವಾಲು. ಕಾಡುಪ್ರಾಣಿ, ಪಕ್ಷಿಗಳನ್ನು ವೀಕ್ಷಿಸಲು `ವನ್ಯಮೃಗ ಆಶ್ರಯಧಾಮ’ ಇದೆ. ಇದು ಗೋವಾ ಗಡಿಯಂಚಿನಲ್ಲಿರುವ ಕ್ಯಾಸಲ್‍ರಾಕ್ ಎಂಬ ಊರಿನಿಂದ ಸುಮಾರು 14 ಕಿ.ಮೀ. ದೂರದಲ್ಲಿದೆ.

Image result for dudhsagar
ಗೋವಾ-ದಿಲ್ಲಿ ಎಕ್ಸ್‍ಪ್ರೆಸ್ ಅಥವಾ ಪುಣೆ-ಎರ್ನಾಕುಲಂ ಎಕ್ಸ್‍ಪ್ರೆಸ್ ರೈಲಿನಲ್ಲಿ ಪ್ರಯಾಣಿಸಿದರೆ ರೈಲಿನಿಂದಲೇ ಅನಾಯಾಸವಾಗಿ ಜಲಪಾತ ವೀಕ್ಷಿಣೆಗೆ ಅವಕಾಶ. ಈ ರೈಲು ಜಲಪಾತದ ನಡುಭಾಗದಲ್ಲಿ, ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಸಾಗುವಾಗ ನಿಮಗಾಗುವ ಆನಂದಕ್ಕೆ ಪಾರವೇ ಇಲ್ಲ. ಇಲ್ಲಿನ ಸೌಂದರ್ಯವನ್ನು `ಚೆನ್ನೈ ಎಕ್ಸ್ ಪ್ರೆಸ್, ಹಾಗೂ `ಮೈನಾ’ ಚಿತ್ರಗಳಲ್ಲಿ ಸುಂದರವಾಗಿ ಸೆರೆಹಿಡಿದಿದ್ದಾರೆ.
ಹೋಗುವುದು ಹೇಗೆ?

ಮೀರಜ್-ಕ್ಯಾಸಲ್ ರಾಕ್ ಪ್ಯಾಸೆಂಜರ್‍ನಲ್ಲಿ ಪ್ರಯಾಣಿಸಿದರೆ ರೈಲುಗಳಲ್ಲಿ ಕುಳಿತೇ ಜಲಪಾತವನ್ನು ಹತ್ತಿರದಿಂದ ನೋಡಬಹುದು. ಜಲಪಾತದ ತಾಣ ತಲುಪಬೇಕಿದ್ದರೆ 4 ಕಿ.ಮೀ. ನಡೆಯಬೇಕು. ಗೋವಾ ಎಕ್ಸ್‍ಪ್ರೆಸ್‍ನಲ್ಲಿ ಮಧ್ಯಾಹ್ನ ಮಡಗಾಂನಿಂದ 3.50ಕ್ಕೆ ಹೊರಟರೆ ದೂಧ್ ಸಾಗರಕ್ಕೆ ಸಂಜೆ 5.00 ಗಂಟೆಗೆ ತಲುಪುತ್ತದೆ. ಆದರೆ ರೈಲಿನಿಂದ ಇಳಿದರೆ ಪುನಃ ಹಿಂದಿರುಗಲು ಬೇರೆ ರೈಲು ಇಲ್ಲ. ಧಾರವಾಡದಿಂದ ಲೋಂಡಾ ಮಾರ್ಗವಾಗಿ ಸುಮಾರು 150 ಕಿ.ಮೀ. ದೂರವಿದೆ. ಧಾರವಾಡದಿಂದ ರೈಲಿನಲ್ಲಿ ಹೋಗಲು 3 ಗಂಟೆ ಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top