fbpx
ವಿಶೇಷ

ತಿಪ್ಪಗೊಂಡನಹಳ್ಳಿಯ ಜನರು ಮಾಸ್ತಿಗುಡಿಯ ದುರಂತದ ನಂತರ ವಿಚಿತ್ರ ಘಟನೆಗಳನ್ನು ನೋಡುತ್ತಿದ್ದಾರೆ!!

ತಿಪ್ಪಗೊಂಡನಹಳ್ಳಿ ಜನ ಅದೆಷ್ಟೋ ಚಿತ್ರಗಳ ಶೂಟಿಂಗ್ ನೋಡಿರಬಹುದು. ಆದರೆ ಅವರಿಗೆ ಮಾಸ್ತಿಗುಡಿ ಅಂದರೆ ಸಾಕು ಕಿವಿ ನಿಮಿರುತ್ತದೆ.. ಮೈ ಬೆವರುತ್ತದೆ.. ಕೈ ಕಾಲು ನಡಗುತ್ತದೆ.. ವಿಚಿತ್ರ ಭಯ ಆವರಿಸುತ್ತದೆ..

Image result for thippagondanahalli

ಮಾಸ್ತಿಗುಡಿ ಚಿತ್ರದ ಶೂಟಿಂಗ್ ವೇಳೆ ನಡೆದ ದುರಂತದಲ್ಲಿ ಇಬ್ಬರು ನಟರು ಸಾವು ಈಜನರನ್ನು ಬಹುವಾಗಿ ಕಾಡುತ್ತಿದೆ. ಈ ಕಹಿ ನೆನಪು ಕಣ್ಣಮುಂದೆ ಕಟ್ಟಿದಂತಿದೆ.

ಈ ದೃಶ್ಯವನ್ನು ರಾಜ್ಯದ ತಮ್ಮ ಮನೆಗಳ ಟೀವಿಯಲ್ಲಿ ನೋಡಿದ ಜನ ಸಹ ಕಣ್ಣೀರು ಸುರಿಸಿದ್ದಾರೆ. ಇಂತಹ ಘಟನೆಗೆ ಕಾರಣವಾಗಿದ್ದ ಕೆರೆಯಲ್ಲಿ ಈಗ ಬರೀ ಮೌನ. ಕೆರೆಯಲ್ಲಿ ಶೂಟಿಂಗ್ ಮಾಡುವ ವೇಳೆ ಸಾವನ್ನಪ್ಪಿದ ಉದಯ-ಅನಿಲ್ ದೆವ್ವವಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಜನರ ನಂಬಿಕೆ. ಅಲ್ಲದೆ ಊರಲ್ಲಿ ಆಗಾಗ ಸದ್ದು ಕೇಳುತ್ತಿದೆ ಎಂಬ ಭಯದಿಂದ ಯಾರೂ ಈಗ ಕೆರೆಯ ಸುತ್ತ ಹೋಗುತ್ತಿಲ್ಲ. ಹಿನ್ನೀರಲ್ಲಿ ಆಗಾಗ ನಡೆಯುತ್ತಿದ್ದ ಪಾರ್ಟಿಗಳು ಈದುರಂತದಿಂದ ನಿಂತಿವೆ.

Image result for mastigudi

ಮೊದಲೆಲ್ಲಾ ಇಲ್ಲಿ ಕುರಿ, ಮೇಕೆ, ದನ ಕಾಯುವವರು ಬರುತ್ತಿದ್ದರು. ಆದರೆ ದುರಂತದ ಬಳಿಕ ಇಲ್ಲಿಗೆ ಬರಲು ಹೆದರುತ್ತಾರೆ. ಆದರೆ ನಾವು ಈ ಕೆರೆಯಲ್ಲಿ ಮೀನು ಹಿಡಿಯುತ್ತೇವೆ. ಜನರು ದೆವ್ವಾ ಎಂದು ಹೇಳುತ್ತಾರೆ ನಮಗೆ ಇದರ ಅನುಭವ ಆಗಿಲ್ಲ ಎಂದು ಮೀನುಗಾರರು ತಿಳಿಸಿದ್ದಾರೆ.

Image result for mastigudi

ಘಟನೆ: ‘ಮಾಸ್ತಿ ಗುಡಿ’ ಚಿತ್ರದ ಶೂಟಿಂಗ್ ನಲ್ಲಿ ನಡೆದಿದೆ. ರೋಚಕ ಸಾಹಸ ದೃಶ್ಯವನ್ನು ಚಿತ್ರೀಕರಿಸಲು ಹೋಗಿ, ಇಬ್ಬರು ಖಳನಟರು ಪ್ರಾಣ ಕಳೆದುಕೊಂಡಿರುವ ದುರ್ಘಟನೆ ರಾಮನಗರದ ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಜರುಗಿತ್ತು. ಹೆಲಿಕಾಫ್ಟರ್ ನಿಂದ ೧೦೦ಕ್ಕೂ ಹೆಚ್ಚು ಅಡಿ ಎತ್ತರದಿಂದ ಹಾರಿದ ’ಮಾಸ್ತಿ ಗುಡಿ’ ಚಿತ್ರದ ವಿಲನ್ ಗಳಾದ ಅನಿಲ್ ಮತ್ತು ಉದಯ್, ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಮುಳುಗಿ ದುರಂತ ಸಾವಿಗೀಡಾಗಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top