fbpx
Food

ಕಡಿಮೆ ತಿಂದ್ರು ತುಂಬ ದಪ್ಪಗೆ ಆಗ್ಬಿಟ್ಟಿದೀನಿ ಅಂತ ಎಷ್ಟೋ ಸರಿ ಅನ್ಕೋತೀವಿ! ಹಾಗಾದ್ರೆ ಹೀಗ್ ಮಾಡಿ

ಕಡಿಮೆ ತಿಂದ್ರು ತುಂಬ ದಪ್ಪಗೆ ಆಗ್ಬಿಡ್ತೀನಿ ಅಂತ ಹೇಳೋರು ಜಾಸ್ತಿ ! ಹಾಗಿದ್ರೆ ಅಕ್ಕಿ ತಿನ್ನೋದು ಕಮ್ಮಿ ಮಾಡಿ ಸಿರಿಧಾನ್ಯ ತಿನ್ನಿ !
ಇದಕ್ಕೆಮುಖ್ಯ ಕಾರಣ ನಾವು ಸೇವಿಸುವ ಆಹಾರದಲ್ಲಿ ನಾರಿನಂಶ ಕಡಿಮೆ ಇರೋದು ನಮ್ಮ ಪೂರ್ವಜರು ಸಣ್ಣಕ್ಕೆ ಇದ್ರು ಬಹಳ ಶಕ್ತಿಶಾಲಿಗಳಾಗಿ ಇರ್ತಿದ್ರು
ಯಾಕೆ ಅಂದ್ರೆ ಅವ್ರು ದಿನ ಅಕ್ಕಿ ಗೋಧಿ ಸೇವನೆ ಮಾಡ್ತಾ ಇರ್ಲಿಲ್ಲ , ಅಕ್ಕಿಯಲ್ಲಿ ನಾರಿನಂಶ ಕೇವಲ ಶೇಕಡಾ0.2 ಹಾಗೂ ಗೋಧಿಯಲ್ಲಿ ಶೇ.1.೨ ಸಿರಿಧಾನ್ಯಗಳಲ್ಲಿ ನಾರಿನಂಶ ಹಲವು ಪಟ್ಟು ಅಧಿಕ. ನವಣೆಯಲ್ಲಿ ಶೇ.8, ಅರ್ಕದಲ್ಲಿ ಶೇ.9, ಊದಲು ಮತ್ತು ಸಾಮೆಯಲ್ಲಿ ಶೇ.9.8ಹಾಗೂ ಕೊರಲೆಯಲ್ಲಿ ಶೇ.12.೫.

ಬದಲಾಗಿ ಸಿರಿ ಧಾನ್ಯಗಳು ಅಂತ ಕರೆಸಿಕೊಳ್ಳೋ ಕಿರು ಧಾನ್ಯಗಳಾದ ನವಣೆ, ಸಾಮೆ, ಊದಲು, ಬರಗು, ಕೊರಲೆ, ಅರ್ಕ,ಸಜ್ಜೆ, ಹರಕ, ರಾಗಿ, ಜೋಳ ಇವುಗಳ ಸೇವನೆ ಮಾಡ್ತಾ ಇದ್ರು .
ಇನ್ನೊಂದು ಮುಖ್ಯ ಅಂಶ ಅಂದ್ರೆ ಈ ಬೆಳೆಗಳನ್ನು ಬೆಳೆಯಲು ಹೆಚ್ಚು ನೀರು ಬೇಡ ಒಂದು ಕಿಲೋರಾಗಿ ಬೆಳೆಯಲು 800ಲೀಟ ನೀರು ಬೇಕಾಗಿದ್ದರೆ ಒಂದು ಕಿಲೋಅಕ್ಕಿ ಅಥವಾ ಗೋಧಿ ಬೆಳೆಯಲು 8,000ಲೀಟರ್‌ ನೀರು ಬೇಕು ಆದರೆ ಸಿರಿಧಾನ್ಯ ಕೃಷಿಗೆ ಕೇವಲ 300ಲೀಟರ್‌ ನೀರು ಸಾಕು ಇದು ಉಷ್ಣವಲಯದಲ್ಲೂ ಕೃಷಿ ಮಾಡಲು ಉಪಯುಕ್ತ.

ಅಷ್ಟೇಅಲ್ಲದೆ ಹೆಚ್ಚಿನ ಪ್ರಮಾಣದ್ಲಲಿ ಪ್ರೊಟೀನ್, ವಿಟಮಿನ್ ಹಾಗೂ ಖನಿಜಗಳನ್ನು ಹೊಂದಿವೆ, ಅಧಿಕ ರೋಗನಿರೋಧಕ ಶಕ್ತಿಯನ್ನು ಸಹ ಹೊಂದಿದೆ ಫಿನೋಲಿಕ್ ಆಸಿಡ್, ಫ್ಲೆವನೋಯ್ಡ್ಸ್ ಹಾಗೂ ಫೈಟೊ ಆಲೆಕ್ಸಿನ್‌ನಂಥ ಫೈಟೊನ್ಯೂಟ್ರಿಯಂಟ್ಸ್‌ ಹಾಗು ಇನ್ನು ಅನೇಕ ಆರೋಗ್ಯಿಕ ಅಂಶಗಳನ್ನು ಹೊಂದಿವೆ.

ಪಿಷ್ಠದ(ಸ್ಟಾರ್ಚ್) ಅಂಶ ಅಧಿಕವಾಗಿರುತ್ತದೆ ಇದರಲ್ಲಿನ ಅಮಿಲೋಸ್ ಅಂಶವು ಶರೀರದಲ್ಲಿನ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.

ನವಣೆ, ಸಾಮೆ, ಹಾರಕ ಮತ್ತು ರಾಗಿಯ್ಲಲಿ ಡಯಟರಿ ಫೈಬರ್‌ಗಳು (ನಾರಿನಂಶ) ಹೆಚ್ಚಾಗಿರುವುದನ್ನು ಗುರುತಿಸಲಾಗಿದೆ ಇದರಿಂದ ಪಚನಕ್ರಿಯೆ ನಿಧಾನವಾಗಿ, ದೇಹಕ್ಕೆ ಶಕ್ತಿ ಸರಬರಾಜಾಗುತ್ತದೆ.
ಸಜ್ಜೆ:

ಫೈಟೋಕೆಮಿಕಲ್ಸ್, ಫೋಲೇಟ್ , ಮ್ಯಾಗ್ನೇಶಿಯಂ, ತಾಮ್ರ, ಸತು, ಇ ಜೀವಸತ್ವ ಹಾಗೂ ಬಿ ಕಾಂಪ್ಲೆಕ್ಸ್ , ಕ್ಯಾಲ್ಶಿಯಂ ಹಾಗು ಇತರ ಪ್ರೊಟೀನ್ ಅಂಶಗಳು ಇವೆ.

ಬರಗು:

ನಾರಿನಂಶ ಬಹಳವಾಗಿರುತ್ತದೆ , ರಕ್ತದೊತ್ತಡ ಕಡಿಮೆ ಮಾಡಲು ಸಹಾಯಕ.

ರಾಗಿ:

ರಾಗಿಯಲ್ಲಿ ಕ್ಯಾಲ್ಶಿಯಂ, ಪ್ರೊಟೀನುಗಳಲ್ಲದೇ ಎ ಜೀವಸತ್ವ, ಅಮೈನೋ ಆಸಿಡ್ ಗಳು ಗಂಧಕ ಅಂಶಗಳು ಇರುತ್ತವೆ. ಅಧಿಕ ನಾರಿನಂಶ ಇರುತ್ತದೆ.

ನವಣೆ:

ನಾರಿನಂಶ ಬಹಳವಾಗಿರುತ್ತದೆ , ರಕ್ತದೊತ್ತಡ ಕಡಿಮೆ ಮಾಡಲು ಸಹಾಯಕ
ಮೈ ಕೈ ನೋವಿಗೆ ಬಹಳ ಒಳ್ಳೆಯದು, ಗರ್ಭಿಣಿ ಸ್ತ್ರೀಯರಿಗೆ ಪತ್ಯೆಯಲ್ಲಿ ನವಣೆ ಅಡುಗೆ ನೀಡಿದರೆ ಒಳ್ಳೆಯದು.

ಹರಕ:

ರಕ್ತ ಶುದ್ಧಿ ಗೊಳಿಸುತ್ತದೆ ಹಾಗು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.
ಸಾಮೆ: ಹೆಣ್ಣು ಮಕ್ಕಳಲ್ಲಿ ಸಂತಾನೋತ್ಪತ್ತಿಯ ಸಮಸ್ಯೆ ಹಾಗು ಮುಟ್ಟಿನ ಸಮಸ್ಯೆ ಪರಿಹಾರಕ್ಕೆ ಒಳ್ಳೆಯದು.

ಕೊರಲೆ:

ನಾರಿನಂಶ ಹೆಚ್ಚಿಗೆ ಇರುತ್ತೆ ಮಲಬದ್ದತ್ತೆ ಸಮಸ್ಯೆಗೆ ರಾಮಬಾಣ

ಊದಲು: ಸಕ್ಕರೆ ರೋಗಿಗಳಿಗೆ ಮಧುಮೇಹವನ್ನು ಹತೋಟಿಗೆ ತರಲು ಒಳ್ಳೆಯದು.

ಜೋಳ :

ಜೋಳ ತಿಂದವ ತೋಳದಾಂಗ ಅನ್ನೋ ಮಾತು ಸತ್ಯ
ಜೋಳವು ಪೊಟ್ಯಾಶಿಯಂ ಮತ್ತು ಫಾಸ್ಫರಸ್ ಗಳ ಆಗರವಾಗಿದ್ದು , ಕ್ಯಾಲ್ಶಿಯಂ ಪ್ರಮಾಣವೂ ಗಣನೀಯವಾಗಿದೆ. ಜೊತೆಗೆ ಕಬ್ಬಿಣ ಮತ್ತು ಸೋಡಿಯಂ, ಸತುವಿನ ಅಂಶಗಳೂ ಇವೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top