fbpx
ಮಾಹಿತಿ

ಉಗ್ರ ಪ್ರತಿಭಟನೆಯಿಂದ ಬಾರ್ ಮುಚ್ಚಿಸಿದ ಮಹಿಳಾ ಮಣಿಗಳು!!!

ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎನ್ನುವ ಗಾದೆ ಈಗ ಹಳಿತಾಗಿದೆ. ಈಗಿನ ಎಲ್ಲ ವನಿತೆಯರೂ ಶಾಲೆಗೆ ಹೋಗಿ ಶಿಕ್ಷಣವನ್ನು ಪಡೆಯುತ್ತಾರೆ. ಅಲ್ಲದೆ ಇದರಿಂದ ತಮ್ಮ ಜೀವನವನ್ನು ರೂಪಿಸಿಕೊಳ್ಳುತ್ತಾರೆ. ಇನ್ನು ಒಂದೇ ಹೆಜ್ಜೆ ಮುಂದೆ ಹೋಗುವ ಅದೇಷ್ಟೋ ಮಹಿಳೆಯರು ಸಮಾಜಮುಖಿ ಕೆಲಸಗಳನ್ನು ಮಾಡುತ್ತಾರೆ. ಇಂತಹ ದಿಟ್ಟ ನಾರಿಯರ ಸಾಲಿಗೆ ಸೇರುವ ಮಹಿಳಾ ತಂಡ ಹಾಸನ ಜಿಲ್ಲೆಯಲ್ಲಿನ ಬಾರ್ ಮಾಲೀಕರಿಗೆ ಪಾಠ ಕಲಿಸಿದೆ.

ಕುಡಿತದಿಂದ ಸಾಕಷ್ಟು ಜನ ನರಳಾಟ ನಡೆಸುತ್ತಾರೆ. ಇನ್ನು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬಾರ್ ಅಂಗಡಿಗಳು ಜನರನ್ನು ಸೆಳೆಯುತ್ತವೆ. ಇದನ್ನು ಮನಗೊಂಡು ಸುಪ್ರಿಂ ಕೋರ್ಟ್ ರಾಜ್ಯ ಹೆದ್ದಾರಿಗಳಲ್ಲಿ ಬಾರ್ ಮುಚ್ಚುವಂತೆ ಆದೇಶ ನೀಡಿತ್ತು.

ಹಾಸನ ಜಿಲ್ಲೆಯ ಕಾಮೇನ್‌ಹಳ್ಳಿಯಲ್ಲಿ ಹೆದ್ದಾರಿಗೆ ಹತ್ತಿಕೊಂಡಿದ್ದ ಬಾರ್ ಮುಚ್ಚಿ, ಗ್ರಾಮದಲ್ಲಿ ಸ್ಥಳಾಂತರಿಸಲಾಗಿತ್ತು. ಇದಕ್ಕೆ ಆ ಗ್ರಾಮದ ಮಹಿಳೆಯರು ತೀವ್ರ ವಿರೋಧ ವ್ಯಕ್ತ ಪಡಿಸಿದ್ದರು. ಅಲ್ಲದೆ ಬಾರ್ ಮುಚ್ಚವಂತೆ ಕೇಳಿಕೊಂಡರು. ಆದರೂ ಮಾಲೀಕ ಹಠ ಬಿಡದಾಗ ಪ್ರತಿಭಟನೆ ನಡೆಸಿದರು. ಇದಕ್ಕೂ ಜಗ್ಗದಾಗ ಬಾರ್ ಒಳ ನುಗ್ಗಿ ಬಾಟಲ್‌ಗಳನ್ನು ಪೀಸ್ ಪೀಸ್ ಮಾಡಿದರು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಸ್ಥಳಕ್ಕೆ ಆಗಮಿಸಿ, ತಿಳಿ ಗೊಳಿಸಿದ್ದಾರೆ.

ಸುಪ್ರೀಂ ಆದೇಶ ಏನು? ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ದಿಟ್ಟ ನಿಲುವು ಕೈಗೊಂಡಿದೆ. ದೇಶಾದ್ಯಂತ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳ ಪಕ್ಕದಲ್ಲಿರುವ ಎಲ್ಲ ಮದ್ಯದಂಗಡಿಗಳನ್ನು ತೆರವುಗೊಳಿಸುವಂತೆ ತಿಳಿಸಿದೆ. ೨೦೧೭ರ ಏಪ್ರಿಲ್ ಒಳಗೆ ದೇಶಾದ್ಯಂತ ಈ ಸೂಚನೆಯನ್ನು ಜಾರಿಗೆ ತರಬೇಕೆಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿದೆ.
ಮಾ.೩೧ರ ನಂತರ ಹೆದ್ದಾರಿಯ ಇಕ್ಕೆಲಗಳಲ್ಲಿ ಮದ್ಯದ ಮಳಿಗೆ ತೆರೆಯಲು ಸರ್ಕಾರಗಳು ಪರವಾನಗಿ ನೀಡಬಾರದು ಹಾಗೂ ಈಗಿರುವ ಮದ್ಯದ ಅಂಗಡಿಗಳ ಪರವಾನಗಿಯನ್ನು ಭವಿಷ್ಯದಲ್ಲಿ ನವೀಕರಿಸಬಾರದೆಂದೂ ಸುಪ್ರೀಂ ಸೂಚಿಸಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top