fbpx
ಸಮಾಚಾರ

ಭ್ರಷ್ಟ ಅಧಿಕಾರಿ ಮನೆ ರೇಡ್: ಜಯಾ ಸೀರೆ ದಾಖಲೆ ಮುರೆಯುವ ಹೊಸ್ತಿಲಲ್ಲಿ ಔಟ್ ಆದ ನಾರಿ!

ಭ್ರಷ್ಟಾ ಅಧಿಕಾರಿಗಳು ಹೇಗೆಲ್ಲಾ ಐಶಾರಾಮಿ ಜೀವನ ನಡೆಸುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತೆ ಇದೆ. ಈ ಪಟ್ಟಿಗೆ ಮತ್ತೊಂದು ಹೊಸ ಪ್ರಕರಣ ಸೇರ್ಪಡೆ ಆಗಿದೆ.
ಹುಬ್ಬಳ್ಳಿಯ ವಾಣಿಜ್ಯ ತೆರಿಗೆ ಇಲಾಖೆಯ ಜಾರಿ ವಿಭಾಗದ ಸಹಾಯಕ ಆಯುಕ್ತ ಕರಿಯಪ್ಪ ಕರ್ನಾಳ ಅವರ ಮನೆಯಲ್ಲಿ ಎಸಿಬಿ ದಾಳಿ ನಡೆಸಿದ ವೇಳೆ ಮೂಗಿನ ಮೇಲೆ ಬೆಟ್ಟು ಇಟ್ಟುಕೊಳ್ಳುವಂತಹ ಸಂಗತಿಯೊಂದು ಬಯಲಿಗೆ ಬಂದಿದೆ. ಹೌದು ಸಾಮಾನ್ಯವಾಗಿ ವನಿತೆಯರು ವಸ್ತ್ರ ಪ್ರೀಯರು ಎನ್ನುವದರಲ್ಲಿ ಎರಡು ಮಾತಿಲ್ಲ. ಆದರೆ ಸಾವಿರದಷ್ಟು ಸಿರೇಗಳನ್ನು ಹೊಂದುವುದು ನಿಜಕ್ಕೂ ಸಾರ್ವಜನಿಕರಿಗೆ ಆಶ್ಚರ್ಯ ತರೆಸಿದೆ. ಇವರ ಮನೆಯಲ್ಲಿ ಸುಮಾರು ೭ ಸಾವಿರ ಸೀರೆಗಳು ಪತ್ತೆಯಾಗಿವೆ. ಕರ್ನಾಳ ಅವರ ಮನೆಯಲ್ಲಿ ಕೋಟಿ ಕೋಟಿ ಮೌಲ್ಯದ ಸೀರೆಗಳನ್ನು ಕಂಡು ಅಧಿಕಾರಿಗಳೇ ದಂಗಾಗಿದ್ದಾರೆ. ಆ ಸೀರೆಗಳನ್ನು ಅವರಿಗೆ ಏಣಿಸಲೇ ಸುಮಾರು ೬ ಗಂಟೆ ಹಿಡಿದಿದೆ.
Image result for stacks of saree

Representational Image

ದಿ. ಮಾಜಿ ಸಿಎಂ ಜಯಲಲಿತಾ ಅವರ ಮನೆಯ ಮೇಲೆ ೧೯೯೬ರಲ್ಲಿ ಐಟಿ ದಾಳಿ ನಡೆದ ಸಂದರ್ಭದಲ್ಲೂ ಅವರ ಬಳಿ ೧೦೫೦೦ ಸೀರೆಗಳು ಪತ್ತೆಯಾಗಿದ್ದವು. ಆ ಬಳಿಕ ಇಂತಹ ದೊಡ್ಡ ಪ್ರಮಾಣದಲ್ಲಿ ಸೀರೆಗಳು ರೇಡ್ ವೇಳೆ ಪತ್ತೆಯಾಗಿರಲಿಲ್ಲ. ಈಗ ಕರ್ನಾಳ ಅವರ ಪತ್ನಿಯನ್ನು ನೋಡಿದರೆ, ಜಯಲಲಿತಾ ಅವರ ದಾಖಲೆಯನ್ನು ಇವರು ಸಲೀಸಾಗಿ ಬ್ರೇಕ್ ಮಾಡಿ ಬಿಡುತ್ತಿದ್ದರು ಎಂಬ ಭಾವನೆ ಬರುತ್ತದೆ. ಆದರೆ ರೇಡ್ ಇವರ ಅಸಲಿಯತ್ತು ಬಯಲಿಗೆ ಬರುವಂತೆ ಮಾಡಿದೆ.
ದಾಳಿ ವೇಳೆ ವಶಪಡಿಸಿಕೊಳ್ಳಲಾದ ಸೀರೆಗಳ ಒಟ್ಟು ಮೌಲ್ಯವನ್ನು ಅಧಿಕಾರಿಗಳು ೧.೫ ಕೋಟಿ ಎಂದು ಅಂದಾಜಿಸಿದ್ದಾರೆ. ದಾಳಿ ವೇಳೆ ೭ ಲಕ್ಷ ನಗದು ಹಾಗೂ ಅಪಾರ ಆಸ್ತಿ ಪಾಸ್ತಿಗಳು ಪತ್ತೆಯಾಗಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top