fbpx
ತಂತ್ರಜ್ಞಾನ

ಭೂಮಿಯನ್ನು ಹೋಲುವ 7 ಗ್ರಹ ಪತ್ತೆ

ನಾಸಾ ವಿಜ್ಞಾನಿಗಳು ಸೌರವ್ಯೂಹದಲ್ಲಿ ಭೂಮಿಯನ್ನು ಹಫಲುವ 7 ಗ್ರಹಗಳನ್ನು ಪತ್ತೆ ಮಾಡಿದ್ದಾರೆ. ನಮ್ಮ ಸೌರವ್ಯೂಹವಿದ್ದು ಅಲ್ಲಿ ಈ 7 ಗ್ರಹಗಳಿವೆಯಂತೆ, ಈ ಮಾಹಿತಿಯ ಪ್ರಕಾರ 3 ಗ್ರಹಗಳಲ್ಲಿ ಬೃಹತ್ ನೀರಿನ ಮೂಲವಿದೆ ಎಂದು ತಿಳಿದುಬಂದಿದೆ, ಈ ಗ್ರಹಗಳು ವಾಸಿಸುವುದಕ್ಕೆ ಯೋಗ್ಯವಾಗಿವೆ ಎಂದು ತಿಳಿಸಲಾಗಿದೆ.

ಈ ಸೌರವ್ಯೂಹ ಭೂಮಿಯಿಂದ 40 ಜ್ಯೋತಿರ್ವಷಗಳಷ್ಟು ದೂರದಲ್ಲಿದೆ. ಒಂದೇ ನಕ್ಷತ್ರದ ಸುತ್ತ ಈ ಗ್ರಹಗಳು ತಿರುಗುತ್ತವೆ. 7 ಗ್ರಹಗಳು ಅಂದಾಜು ಒಂದೇ ಗಾತ್ರದಲ್ಲಿವೆ. ಭೂಮಿಯನ್ನು ಹೋಲುವ 7 ಗ್ರಹಗಳನ್ನು ಹೊಂದಿರುವ ನಕ್ಷತ್ರಕ್ಕೆ ವಿಜ್ಞಾನಿಗಳು Trappist-1 ಎಂದು ನಾಮಕರಣ ಮಾಡಿದ್ದಾರೆ.

ಭೂಮಿಯ ವಾತಾವರಣಕ್ಕೆ ಅತ್ಯಂತ ಹತ್ತಿರವಾಗಿರುವ ಗ್ರಹ ಮತ್ತು ಸೌರಮಂಡಲ ಇದೇ ಅಂತಾ ವಿಜ್ಞಾನಿಗಳು ತಿಳಿಸಿದ್ದಾರೆ. ಭೂಮಿಗೆ ಪರ್ಯಾಯವಾಗಿರುವ ಗ್ರಹದ ಬಗ್ಗೆ ನಡೆದ ಸಂಶೋಧನೆಗಳಲ್ಲಿ ಇದು ಅತ್ಯಂತ ಮಹತ್ವದ್ದಾಗಿದ್ದು, ಮೂರು ಗ್ರಹಗಳಲ್ಲಿ ನಿಖರವಾಗಿ ಭೂಮಿಯನ್ನೇ ಹೋಲುತ್ತಿವೆ.

ಒಟ್ಟಾರ Trappist-1 ನಕ್ಷತ್ರ ಸಂಶೋಧನೆಯೊಂದಿಗೆ ನಾಸಾ ವಿಜ್ಞಾನಿಗಳು ಮಹತ್ತರ ಸಾಧನೆಯಗೈದುದ್ದು, ಪರ್ಯಾಯ ಭೂಮಿಗಾಗಿ ದಶಕಗಳಿಂದಲೂ ನಡೆಯುತ್ತಿರುವ ಸಂಶೋಧನೆಗೆ ಇದೀಗ ಮಹತ್ವದ ತಿರುವು ದೊರೆತಿದೆ. ಹೀಗಾಗಿ ಇದೀಗ ಎಲ್ಲ ಪ್ರಮುಖ ಬಾಹ್ಯಾಕಾಶ ವಿಜ್ಞಾನಿಗಳ ದೃಷ್ಟಿ ಈ ನೂತನ ಸೌರವ್ಯೂಹ ಮೇಲೆ ನೆಟ್ಟಿದ್ದು, ಈ ನೂತನ ಭೂಮಿಯಲ್ಲಿ ಜೀವಿಗಳಿವೆಯೇ ಎಂಬುದರ ಕುರಿತು ಸಂಶೋಧನೆ ಕೈಗೊಳ್ಳಲು ಸಿದ್ಧತೆ ನಡೆಸಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top