fbpx
ಜಾಗೃತಿ

ನಿಶ್ಚಿತಾರ್ಥದ ಬಳಿಕ ಮದುವೆ ಮುರಿದರೆ ದಂಡ: ಸುಪ್ರೀಂ ಕೋರ್ಟ್!!

ನಿಶ್ವಿತಾರ್ಥದ ಬಳಿಕ ಮದುವೆ ನಿರಾಕರಿಸು ವಧು-ವರರ ಕುಟುಂಬಸ್ಥರಿಗೆ ಸುಪ್ರೀಂ ಕೋರ್ಟ್ ಶಾಕ್ ನೀಡಿದೆ. ಅಲ್ಲದೆ ನಷ್ಟ ಭರಿಸುವಂತೆ ತಾಕೀತು ಮಾಡಿದೆ.

Image result for supreme court of india.

ಈಂತಹ ಪ್ರಕರಣಗಳು ನಮ್ಮ ದೇಶದಲ್ಲಿ ಸಾಮಾನ್ಯವಾಗಿ ಕಾಣಿಸುತ್ತವೆ. ಇದನ್ನು ತಡೆಗಟ್ಟಲು ಸುಪ್ರೀಂ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಇದರಿಂದ ನೊಂದವರಿಗೆ ಕೊಂಚ ಮಟ್ಟಿನ ಸಮಾಧಾನ ಸಿಗುವಂದಂತು ನಿಶ್ಚಿತ. ನಿಶ್ಚಿತಾರ್ಥದ ಬಳಿಕ ಮದುವೆ ಮುರಿದು ಬಿದ್ದಪ್ರಕರಣವನ್ನು ದೆಹಲಿಯಲ್ಲಿ ದಾಖಲಿಸಲಾಗಿತ್ತು. ಈ ಬಗ್ಗೆ ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು ನೀಡಿದ್ದು, ನಿಶ್ಚಿತಾರ್ಥ ಕಾರ್ಯಕ್ರಮದ ಸಂಪೂರ್ಣ ವೆಚ್ಚವನ್ನು ಭರಿಸುವಂತೆ ಆದೇಶ ನೀಡಿದೆ.

Image result for engagement india

ದೂರು: ದೆಹಲಿಯಲ್ಲಿ ವೈದ್ಯರು ತಮ್ಮ ಮಗಳಿಗೆ ವಿಹಾವನ್ನು ಗೊತ್ತು ಮಾಡಿದ್ದರು. ಅಲ್ಲದೆ ನಿಶ್ಚಿತಾರ್ಥ ಸಹ ನಡೆದು ಹೊಗಿತ್ತು. ವೈದ್ಯರು ಅರ್ಧ ಮದುವೆ ಆದ ಖುಷಿಯಲ್ಲಿದ್ದರು. ಆದರೆ ಅವರಿಗೆ ವರನ ಕಡೆಯವರು ಈ ಸಂಬಂಧವನ್ನು ನಿರಾಕರಿಸಿದ್ದರು. ಇದನ್ನು ಪ್ರಶ್ನಿಸಿಹೆಣ್ಣಿನ ಸಂಬಂಧಿಗಳು ಪ್ರಕರಣ ದಾಖಲಿಸಿದ್ದರು. ಅಲ್ಲದೆ ೪೫ ಲಕ್ಷ ಪರಿಹಾರವನ್ನು ಕೊಡಿಸುವಂತೆ ಕೋರ್ಟ್ ಮೆಟ್ಟಿಲು ಏರಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ವಧುವಿಗೆ ೧೫ ಲಕ್ಷ ಪರಿಹಾರ ನೀಡುವಂತೆ ಆದೇಶ ನೀಡಿತ್ತು. ಇದರಿಂದ ಎಚ್ಚೆತ್ತುಕೊಂಡು ವರನಸಂಬಂಧಿಗಳು ವಧುವಿನ ನಷ್ಟವನ್ನು ಭರಿಸಿದರು. ಇದರಿಂದ ವಧುವಿನ ಕುಟುಂಬಸ್ಥರು ನೋವು ಸ್ಪಲ್ಪ ಕಡಿಮೆ ಆದಂತೆ ಆಗಿದೆ.

ಇದರಿಂದ ನಿಶ್ಚಿತಾರ್ಥದ ಬಳಿಕ ಹೆಣ್ಣು ಅಥವಾ ಗಂಡನ್ನು ತಿರಸ್ಕರಿಸುವ ಜನರಿಗೆ ಸುಪ್ರೀಂ ಛಾಟಿ ಬೀಸಿದೆ. ದೇಶದಲ್ಲಿ ಇನ್ನು ಮುಂದೆ ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಲು ಕೋರ್ಟ್ ತೆಗೆದುಕೊಂಡ ತೀರ್ಮಾನ ನೊಂದವರಿಗೆ ಆಮ್ಲಜನಕದಂತೆ ಕಾಣಿಸುತ್ತಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top