fbpx
ಕರ್ನಾಟಕ

ಪಾವಗಡದಲ್ಲಿ ಸೆಪ್ಟೆಂಬರ್ ನಿಂದ ಏಷ್ಯಾದ ಅತಿದೊಡ್ಡ ಸೋಲಾರ್ ವಿದ್ಯುತ್ ಉತ್ಪಾದನೆ

ಏಷ್ಯಾದ ಅತಿದೊಡ್ಡ ಸೋಲಾರ್ ಪಾರ್ಕ್ ನಲ್ಲಿ ಬರುವ ಸೆಪ್ಟಂಬರ್ ನಿಂದ ಸೌರ ವಿದ್ಯುತ್ ಉತ್ಪಾದನೆ ಆರಂಭಗೊಳ್ಳಲಿದೆ. 12 ಸಾವಿರ ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಎರಡು ಸಾವಿರ ಮೆಗಾವ್ಯಾಟ್ ಸಾಮರ್ಥ್ಯದ ಈ ಸೋಲಾರ್ ಪಾರ್ಕ್ ನಲ್ಲಿ ಎರಡು ಹಂತಗಳಲ್ಲಿ ವಿದ್ಯುತ್ ಉತ್ಪಾದನೆ ಆಗಲಿದೆ.

ಏಷ್ಯಾದ ಅತಿದೊಡ್ಡ ಸೋಲಾರ್ ಪಾರ್ಕ್ ಸೆಪ್ಟಂರ್ ನಲ್ಲಿ ಬರುವ ಸಾವಿರ ಮೆಗಾವ್ಯಾಟ್ ರಾಜ್ಯದ ವಿದ್ಯುತ್ ಜಾಲಕ್ಕೆ ಸೇರ್ಪಡೆಗೊಳ್ಳಲಿದೆ, ಎರಡನೇ ಹಂತದಲ್ಲಿ ಉಳಿದ ಸಾವಿರ ಮೆಗಾವ್ಯಾಟ್ ಬರಲಿದೆ.

ಇದಕ್ಕೆ ಪೂರಕವಾಗಿ 825 ಕೋಟಿ ರೂ.ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ, ಬೀದಿ ದೀಪ ಸೇರಿದಂತೆ ಮತ್ತಿತರ ಮೂಲಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ. ಬರುವ ವಿಧಾನಸಭಾ ಚುನಾವಣೆಯೊಳಗೆ ಇಲ್ಲಿಂದ ರಾಜ್ಯಕ್ಕೆ ವಿದ್ಯುತ್ ಪೂರೈಕೆಯಾಗಲಿದೆ ಎಂದು ಇಂಧನ ಸಚಿವ ಡಿ.ಕೆ.ಶಿನಕುಮಾರ್ ಬುಧವಾರ ಪಾವಗಡದ ಸೋಲಾರ್ ಪಾರ್ಕ್ ಕಾಮಗಾರಿ ಪರಿಶೀಲನೆ ನಂತರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯ ವಿದ್ಯುತ್ ಅಭಾವ ಎದುರಿಸುತ್ತಿರುವ ಸಂದರ್ಭದಲ್ಲಿ ವಿದ್ಯುತ್ ಸರಬರಾಜು ಕಂಪನಿ (ಎಸ್ಕಾಂ)ಗಳಿಗೆ ಈ ಸೌರ ವಿದ್ಯುತ್ ಉತ್ಪಾದನೆಯ ಶೇ.90ರಷ್ಟು ಅಂದರೆ 1.800 ಮೆ.ವಾ.ವಿದ್ಯುತ್ ಅನ್ನು ಬಂಡಲ್ಡ್ (ಎಲ್ಲ ಮೂಲಗಳಿಂದ ಪಡೆಯುವ ವಿದ್ಯುತ್) ದರದಲ್ಲಿಯ ಪ್ರತಿ ಯೂನಿಟ್ ಗೆ 3.50 ರಿಂದ 4.50 ರೂ.ದರದಲ್ಲಿ ಪೂರೈಕೆ ಆಗಲಿದೆ. ಇದರ ಜೊತೆಗೆ ಯೋಜನೆಯ ಅನುಷ್ಟಾನದಿಂದ ಸ್ಥಳೀಯರಿಗೆ ಉದ್ಯೋಗ ಕೂಡ ದೊರೆಯಲಿದೆ ಎಂದು ಹೇಳಿದ್ದಾರೆ.

810 ಕೋಟಿ ರೂ. ವೆಚ್ಚದಲ್ಲಿ ಮೊದಲ ಹಂತದಲ್ಲಿ ನಡೆಯಲಿರುವ ಪ್ರಸರಣ ವ್ಯವಸ್ಥೆ ಹೀಗಿದೆ

*400 ಕಿ.ವ್ಯಾಟ್. ಸಾಮಾರ್ಥ್ಯದ ಪಾವಗಡ – ಹಿರಿಯೂರು 109 ಕಿ.ಮೀ.ಡಿಸಿ ಲೈನ್

*400 ಕಿ.ವ್ಯಾ. ಸಾಮರ್ಥ್ಯದ ಗೂಟಿ-ತುಮಕೂರು 0.86 ಕೊ.ಮೀ. ಡಿಸಿ ಲೈನ್

* *400 ಕಿ.ವ್ಯಾ. ಸಾಮರ್ಥ್ಯದ ಬಳ್ಳಾರಿ-ತುಮಕೂರು 55 ಕೊ.ಮೀ. ಡಿಸಿ ಲೈನ್

*ಪಾವಗಡದಲ್ಲಿ 400/220 ಕಿ.ವ್ಯಾ.ಸಾಮರ್ಥ್ಯದ ಉಪಕೇಂದ್ರ

*ಹಿರಿಯೂರು ಉಪಕೇಂದ್ರದಲ್ಲಿ ಬೇ ವಿದ್ತರಣೆ.

ವಾಸ್ತವದಲ್ಲಿ ರಾಜ್ಯದಲ್ಲಿ ವಿದ್ಯುತ್ ಬೇಡಿಕೆ 8.607 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದನೆ ಆಗುತ್ತಿದೆ. ಕೇಂದ್ರ ವಿದ್ಯುತ್ ಜಾಲದಲ್ಲಿ 3.070 ಮಿಲಿಯನ್ ಯೂನಿಟ್ ಲಭಿಸುತ್ತಿದೆ. ರಾಜ್ಯದ ವಿವಿಧ ಎಸ್ಕಾಂಗಳಿಂದ ವಿದ್ಯುತ್ ಬೇಡಿಕೆ ಇದೆ. ಆದರೆ ಕೆಪಿಸಿಎಲ್ ನಿಂದ ಬೇಡಿಕೆ ಇಲ್ಲ ಎಂಬ ಕಾರಣ ನೀಡಿ ಬಿಟಿಪಿಎಸ್ ನ 2ನೇ ಘಟಕದ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಿರುವುದು ಅಚ್ಚರಿ ಮೂಡಿಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top