fbpx
ಇತರೆ

ದಾಂಪತ್ಯ ಅಥವಾ ಪ್ರೀತಿಯ ಸಂಬಂಧದಲ್ಲಿರುವ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ಸೂಕ್ಷ್ಮ ಸಂಗತಿಗಳು!!

ನಿಮ್ಮ ಪ್ರೇಮ ಸಂಬಂಧದ ಮೇಲೆ ಪ್ರಭಾವ ಬೀರುವ ಮುಖ್ಯ ಅಂಶ !

ನಿಮ್ಮ ಸಂಗಾತಿಯ ಜೊತೆಗಿನ ಸಂಬಂಧ ಜೀವನದಲ್ಲಿ ಅತಿ ಮುಖ್ಯವಾದುದು . ಈ ಸಂಬಂಧ ಆರೋಗ್ಯವಾಗಿರಬೇಕು ಹಾಗೂ ಧನಾತ್ಮಕವಾಗಿರಬೇಕು . ಇದು ನಮ್ಮ ಮೊದಲನೇ ಸಂಬಂಧ ಅಂದರೆ ನಮ್ಮ ತಂದೆ ತಾಯಿಯರೊಂದಿಗಿನ ಸಂಬಂಧದ ಮೇಲೆ ಅವಲಂಬಿತವಾಗಿರುತ್ತದೆ. ನಿಮ್ಮನ್ನು ಹೇಗೆ ಬೆಳಸಲ್ಪಟ್ಟಿತು ಎಂಬುದು ನಿಮ್ಮ ನಿಯಂತ್ರಣಕ್ಕೆ ಮೀರಿದ್ದು , ಆದರೆ ಅದಕ್ಕೆ ನಿಮ್ಮ ಪ್ರತಿಕ್ರಿಯೆ ಮಾತ್ರ ನಿಮ್ಮ ಕೈಯಲ್ಲಿ ಇರುತ್ತದೆ.

Image result for relationship

ಈ ಕೆಳಗೆ ಒಳ್ಳೆಯ ಹಾಗೂ ಕೆಟ್ಟ ಪೋಷಕರ ಅಭ್ಯಾಸಗಳ ಬಗ್ಗೆ ತಿಳಿಸಲಾಗಿದೆ – ಭಾಂಧವ್ಯದ ರೀತಿ ಮನಶ್ಶಾಸ್ತ್ರಜ್ಞರ ಪ್ರಕಾರ ಭಾಂಧವ್ಯದ ರೀತಿಯಲ್ಲಿ 4 ವಿಧಗಳಿವೆ .

1) ಭದ್ರತೆಯ ಭಾಂದವ್ಯ – ಇದು ಅತಿ ಆರೋಗ್ಯಕರವಾದ ಭಾಂದವ್ಯ . ಇದರ ಪ್ರಕಾರ ನಾವು ನಮ್ಮ ಸಂಗಾತಿಯೊಡನೆ ಇದ್ದಾಗ ನಮಗೆ ಭದ್ರತಾ ಭಾವ ಬರುತ್ತದೆ . ಅಂದರೆ ನಮ್ಮ ಪೋಷಕರು ನಮ್ಮನ್ನು ಬೆಳೆಸುವಾಗ ನಮಗೆ ನಮ್ಮನ್ನು ಪರಿತ್ಯಕ್ತ ಮಾಡುವುದಿಲ್ಲ ಎಂಬ ವಿಶ್ವಾಸ ತುಂಬಿರುತ್ತಾರೆ.

2) ಆತಂಕದಲ್ಲಿ ಮುಳುಗಿರುವ ಭಾಂಧವ್ಯ .

ಇಂತ ಸಂಬಂಧದಲ್ಲಿರುವ ವ್ಯಕ್ತಿಗಳಿಗೆ ಒಂದು ಅಪೂರ್ಣ ಅಗತ್ಯವಿರುತ್ತದೆ . ಅವರ ಅಪ್ಪ ಅಮ್ಮ ಅವರಿಗೆ ಕೊಡದ ಪ್ರೀತಿಯನ್ನ ಅವರ ಸಂಗಾತಿಯಿಂದ ಬಯಸುತ್ತಾರೆ.

Image result for troubled relationship

3) ವಿಸರ್ಜಿಸುವ ಪಲಾಯನವಾದದ ಭಾಂಧವ್ಯ

ಇಂತ ಸಂಬಂಧ ಯಶಸ್ವಿಯಾಗುವುದಿಲ್ಲ .ಈ ಸಂಬಂಧದಲ್ಲಿ ಭಾವನಾತ್ಮಕವಾಗಿ ಅವರಿಬ್ಬರೂ ದೂರವಾಗಿರುತ್ತಾರೆ

4). ಭಯಭೀತ ಪಲಾಯನವಾದದ ಭಾಂಧವ್ಯ

ಇವರು ಪೋಷಕರಿಂದ ಹಿಂಸೆಯನ್ನು ಅನುಭವಿಸಿರುತ್ತಾರೆ , ಆದ್ದರಿಂದ ಇವರು ಯಾರನ್ನೂ ಬೇಗ ನಂಬುವುದಿಲ್ಲ. ಆ ಒಂದು ನಡುವಳಿಗೆ , ನಿಮ್ಮ ಎಲ್ಲ ಭವಿಷ್ಯದ ಸಂಬಂಧದ ಮೇಲೇಕೆ ಪ್ರಭಾವ ಬೀರುತ್ತದೆ? ನಿಮ್ಮ ಹಾಗೂ ನಿಮ್ಮ ಅಪ್ಪ ಅಮ್ಮನ ನಡುವಿನ ಸಂಭಂದದಿಂದ ನೀವು ಇನ್ನೊಬ್ಬರನ್ನು ಹೇಗೆ ಪ್ರೀತಿಸುತ್ತೀರಿ ಎಂಬುದು ನಿರ್ಧಾರವಾಗುತ್ತದೆ..

ನೀವು ಇನ್ನೊಬ್ಬರಿಂದ ಏನನ್ನು ನಿರೀಕ್ಷಿಸಬಹುದು ಎಂಬುದನ್ನು ನಿರ್ಧರಿಸುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top