fbpx
ನನ್ನ ಕಥೆ

ನಾನು ಒಂದೇ ಸಾರಿ ಗೆದ್ದವನಲ್ಲ ಸಾವಿರ ಸಾರಿ ಸೋತವನು – ಥಾಮಸ್ ಆಲ್ವಾ ಎಡಿಸನ್‍

ಆಗದು ಎಂದು ಕೈ ಕಟ್ಟಿ ಕುಳಿತರೆ…

ಥಾಮಸ್ ಎಡಿಸನ್‍ನ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ?

ನಮಗೆ ಬೆಳಕನ್ನು ಕೊಟ್ಟ ವಿಜ್ಞಾನಿ. ವಿದ್ಯುತ್ ಬಲ್ಬ್ ಅನ್ನು ಕಂಡು ಹಿಡಿದವರು.
ಆದರೆ ಅವರು ಎಷ್ಟು ತೊಂದರೆಗಳ ಜೊತೆ ಹೊಡೆದಾಟ ನಡೆಸಿದ್ದರು ಅಂತ ನಿಮಗೆ ಗೊತ್ತ?

ಎಡಿಸನ್‍ ಬಾಲ್ಯ

ಅವರಿಗೆ ಚಿಕ್ಕ ವಯಸ್ಸಿನಲ್ಲೆ ಕಿವಿ ಸರಿಯಾಗಿ ಕೇಳ್ತಾ ಇರಲಿಲ್ಲ.
ಮುಂದೆ ಪ್ರೌಢವಸ್ಥೆಗೆ ಬಂದಾಗ ಸಂಪೂರ್ಣ ಕಿವುಡರಾದರು. ಆಗ ಅವರಿಗೆ 12 ವರ್ಷ ಕುಟುಂಬವನ್ನು ಪೊಷಿಸಲು ರೈಲಿನಲ್ಲಿ ಐಸ್ ಕ್ಯಾಂಡಿ ಮತ್ತು ನ್ಯೂಸ್ ಪೇಪರ್‍ಗಳನ್ನು ಮಾರುತ್ತಿದ್ದರು.


ಆಗ ಅವರ ಜೀವನಕ್ಕೆ ಒಂದು ಉತ್ತಮವಾದ ಟರ್ನ್ ಸಿಕ್ತು. ಅದೇನಪ್ಪ ಅಂತೀರಾ?

ಪ್ರೌಡಾವಸ್ಥೆ

14 ವರ್ಷದ ಪ್ರಾಯದಲ್ಲಿ ನ್ಯೂಸ್ ಪೇಪರ್ ಮಾರಿದ ಅನುಭವದಲ್ಲಿ ಅವರ ಸ್ವಂತ ನ್ಯೂಸ್ ಪೇಪರ್ ಪಬ್ಲೀಶ್ ಮಾಡಲು ಮುಂದಾದರು.
ಅದರಲ್ಲಿ ಉತ್ತಮವಾದ ಬೆಳವಣಿಗೆ ಸಿಕ್ತು ಇದರಿಂದ ಅವರು ಸಕ್ಸಸ್ ಫುಲ್ ಬ್ಯುಸಿನೆಸ್ ಮೆನ್ ಕೂಡ ಆದ್ರು. ಅವರ ಪ್ರಯೋಗದ ಸಮಯದಲ್ಲಿ ಅಗ್ನಿ ಅವಗಡವಾಗಿ ರೈಲ್ವೆ ಸ್ಟೇಷನ್‍ನಲ್ಲಿ ಅವರ ನ್ಯೂಸ್ ಪೇಪರ್ ಮಾರುವುದನ್ನು ಬ್ಯಾನ್ ಮಾಡಲಾಯಿತು.

“ನಮ್ಮ ದೊಡ್ಡ ವೀಕ್‍ನೆಸ್ ಎಂದರೆ ಬೇಗ ಬಿಟ್ಟು ಬಿಡುವುದು. ಸಕ್ಸಸ್ ಸಿಗಬೇಕಾದರೆ ತುಂಬಾ ಸುಲುಭವಾದ ಮಾರ್ಗ ಅಂದರೆ ಮತ್ತೆ ಮತ್ತೆ ಪ್ರಯತ್ನ ಮಾಡು”
ಇದು ಎಡಿಸನ್ ಅವರ ಮಾತಿನ ತುಣುಕು. ದಿನ ನಿತ್ಯ ಓದು ಪ್ರಯೋಗಗಳನ್ನು ಮಾಡು ಆಗ ಇದೆ ಅವರ ಕೆಲಸವಾಗಿತ್ತು.ವಿದ್ಯುತ್ ಬಲ್ಬಿನ ಇನ್ವೇಂಷನ್‍ಗೆ ಮುಂದಾದರು.

ಬಲ್ಬ್ ನಲ್ಲಿ ಹೊಳೆದ ಬೆಳಕು !

ಇವರು ಬಲ್ಪಿಗಾಗಿ ಸುಮಾರು ಎರಡು ಸಾವಿರ ತಂತಿಗಳನ್ನು ಕಂಡು ಹಿಡಿದರು. ಅದು ಯಾವುದರಿಂದಲು ತೃಪ್ತಿ ಸಿಗದಿದ್ದಾಗ ಅವರ ಅಸಿಸ್ಟೆಂಟ್
” ಸರ್, ನಮ್ಮ ಎಲ್ಲಾ ಪ್ರಯತ್ನಗಳು ವಿಫಲವಾಗಿದೆ. ನಾವು ಏನೂ ಕಲಿಯಲಿಲ್ಲ,ಏನೂ ಸಾಧಿಸಲಿಲ್ಲ”
ಎಂದು ಹತಾಶನಾಗಿ ನುಡಿದಾಗ, ಎಡಿಸನ್ ತುಂಬಾ ವಿಶ್ವಾಸದಿಂದ

“ನಾವು ತುಂಬ ದೂರ ಬಂದಿದ್ದೇವೆ. ತುಂಬಾನೇ ಕಲಿತಿದ್ದೇವೆ.ನಮಗೆ ಗೊತ್ತಾಯಿತು ಈ ಎರಡು ಸಾವಿರ ವಸ್ತುಗಳಿಂದ ಒಂದು ಒಳ್ಳೆಯ ಬಲ್ಬ್ ತಯರಿಸಲು ಸಾಧ್ಯವಿಲ್ಲ ” ಎಂದು
ನಂತರ ನಡೆದಿದ್ದು ಇತಿಹಾಸ. 1.5 ವರ್ಷಗಳ ನಿದ್ದೆ ಇಲ್ಲದ ರಾತ್ರಿಗಳನ್ನು ಕಳೆದು ವಿದ್ಯುತ್ ಬಲ್ಬ್ ಕಂಡು ಹಿಡಿದೆ ಬಿಟ್ಟರು.

‘ಎಡಿಸನ್ ಏಂಡ್ ಸ್ಟಾನ್ ಯುನೈಟೆಡ್ ಎಲೆಕ್ಟ್ರಿಕ್’ ಕಂಪೆನಿ ಹುಟ್ಟಿಕೊಂಡಿತು. ಇವತ್ತು “ಜನರಲ್ ಎಲೆಕ್ಟ್ರಿಕ್(ಜಿ.ಈ )”
ಎಂಬ ಹೆಸರಿನ ಬಹುಉತ್ಪನ್ನ ಬಹುರಾಷ್ಟ್ರೀಯ ದೈತ್ಯಕಂಪೆನಿಯಿದೆಯಲ್ಲ.ಅದೇ ಮೂಲತ: ಸ್ಟಾನ್ ಎಡಿಸನ್ ಪಾಲುದಾರಿಕೆಯ ಕಂಪನಿ. ಅಂದು ಮತ್ತೆ ಮತ್ತೆ ಪ್ರಯತ್ನ ಮಾಡದೆ ಹೋಗಿದ್ದರೆ ಇಂದು ನಾವು ವಿದ್ಯುತ್ ಅನ್ನು ಪಡೆಯುವುದೆ ಸಂಶಯವಾಗಿತ್ತು. ಇಂದು ಥಾಮಸ್ ಎಡಿಸನ್ ರವರು ಪ್ರಪಂಚದ ಅದ್ಬುತ ಅನ್ವೇಷಕ.

ಕಥೆಯ ನೀತಿ

“ನಾವು ಮಾಡುವ ಪ್ರತಿಯೊಂದು ಕೆಲಸದಲ್ಲು ವಿಶ್ವಾಸವಿರಬೇಕು. ತಪ್ಪುಗಳಿಂದಲೇ ಕಲಿಬೇಕು. ಇದನ್ನೇ “ಪಾಸಿಟಿವ್ ಥಿಂಕಿಂಗ್” ಎನ್ನುತ್ತಾರೆ.”
ಮನಸಿದ್ದರೆ ಮಾರ್ಗವಲ್ಲವೇ ?

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top