fbpx
ನನ್ನ ಕಥೆ

“ಆಗದು ಎಂದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ ..” ಪೇಟೆಲಿ ಲಕ್ಷ ಲಕ್ಷ ಸಂಬಳ ಬಿಟ್ಟು ಹಳ್ಳಿಗೆ ಹೋಗಿ ಉಳುಮೆ ಮಾಡಿ ಕೋಟ್ಯಾಧೀಶನಾದವನ ಕಥೆ !

ಇಂಜಿನಿಯರಿಂಗ್ ಓದಿ ಒಂದು ಕಂಪನಿಯಲ್ಲಿ ಕೆಲಸ ಮಾಡುತಾ ವರ್ಷಕ್ಕೆ 24 ಲಕ್ಷ ಆದಾಯ ಗಳಿಸುತ್ತಿದವನು ಈಗ ಅದೇ ಒಂದು ವರ್ಷಕ್ಕೆ ಬರೋಬ್ಬರಿ 2 ಕೋಟಿ ಆದಾಯ ಪಡೆಯುತ್ತಿದ್ದಾನೆ.

ಛತ್ತೀಸ್ಗಡದ ಬಿಲ್ಲಾಸಪುರ್ ಜಿಲ್ಲೆಯ ಮೇಧಪುರ್ ಎಂಬ ಪುಟ್ಟ ಹಳ್ಳಿಯಲ್ಲಿ ವಾಸವಾಗಿದ್ದ ವಸಂತ ರಾವ್ ಕಾಳೆಯವರು ಸರ್ಕಾರಿ ನೌಕರರು.ಇವರು ನಿವೃತ್ತಿಯನ್ನು ಹೊಂದಿದ ನಂತರ ರೈತ ನಾಗಬೇಕೆಂಬ ಮಹದಾಸೆ ಯನ್ನು ಹೊಂದಿದ್ದರು. ಇವರ ಮೊಮ್ಮಗ ನಾದ ಸಚಿನ್ ಗೆ ಇವರು ಸಮಯ ಸಿಕ್ಕಾಗ ರೈತರ ಬಗ್ಗೆ ಅವರ ಕಷ್ಟ, ನೋವುಗಳ ಬಗ್ಗೆ ಹೇಳುತ್ತಿದ್ದರು.ಆದರೆ ಇವರ ಅಪ್ಪ ಅಮ್ಮನಿಗೆ ಸಚಿನ್ ಕೃಷಿಕನಾಗುವುದು ಸ್ವಲ್ಪವೂ ಇಷ್ಟವಿರಲಿಲ್ಲ.

ಡಾಕ್ಟರ್ ಮತ್ತು ಇಂಜಿನಿಯರ ಆಗಬೇಕೆಂದು ಆಸೆ. ಸಚಿನ್ ಇವರ ಇಚ್ಛೆಯಂತೆ ಚೆನ್ನಾಗಿ ಓದಿ 2000ನೇ ಇಸವಿಯಲ್ಲಿ ಮೆಕ್ಯಾನಿಕಲ್ ಎಂಜಿನಿಯರ್ ಮತ್ತು ಎಂ.ಬಿ.ಎ. ಮುಗಿಸಿ ಪಿ. ಎಚ್. ಡಿ ಯನ್ನು 2007 ರಲ್ಲಿ ಸಂಪೂರ್ಣಗಿ ವ್ಯಾಸಂಗವನ್ನು ಮುಗಿಸಿದರು.

ಆಗ ಅವನು ಯೋಚನೆ ಮಾಡುತ್ತಿದ್ದನು ನಾವು ಬೆರೆಯವರಿಗೋಸ್ಕರ ಏಕೆ ದುಡಿಯುಬೇಕು ನಮಗೋಸ್ಕರ ಯಾಕೆ ನಾವು ದುಡಿಯುತ್ತಿಲ್ಲ.
ನನ್ನ ತಾತ ನನಗೆ ಕೃಷಿಕ ನಾಗಬೇಕೆಂದರೆ ತುಂಬಾ ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಅದು ತುಂಬಾ ಕಷ್ಟ ಕರವಾದ ಕೆಲಸ .ಇದರಲ್ಲಿ ಅತೀ ದೊಡ್ಡ ಸಮಸ್ಯೆ ಎಂದರೆ ಕೆಲಸಗಾರರ ಆಥವಾ ಆಳುಗಳು ಸುಮ್ಮನೆ ಬರುವುದಿಲ್ಲ.ಅವರಿಗೆ ಬೇರೆಯವರು ಕೊಡುವ ದಿನಗೂಲಿ ಬಥ್ಯೆಗಿಂತ ಜಾಸ್ತಿ ಕೊಟ್ಟರೆ ಅದರ ಜೊತೆ ಬೇರೆ ಅವರಿಗೇನಾದರು ಲಾಭ ವಿಷಯ ಇದ್ದರೆ ಬರುತ್ತಾರೆ.

ಒಂದು ತಿಂಗಳ ಹಿಂದೆ ಅವರ ತಾತ ವಸಂತ ರಾವ್ ಅವರು ತೀರಿಕೊಂಡಿದ್ದರು. ತಂದೆ ಅವರು ಹೇಳಿದ ಮಾತುಗಳು ಸಚಿನ್ ಅಗಾಗ್ಗೆ ನೆನಪು ಮಾಡಿಕೊಳ್ಳುತ್ತಿದರು.
2013 ರಲ್ಲಿ ಸಚಿನ್ ಗುರಂಗಾವ್ನ್ ವ್ಯಭೂವೋಪೇರಿತ ಜೀವನವನ್ನು ಬಿಟ್ಟು ಕಂಪನಿಯಲ್ಲಿ ಮ್ಯಾನೇಜರ್ ಆಗಿ 24 ಲಕ್ಷ ಪಡೆಯುತ್ತಿದವನು ಅದೆಲ್ಲ ವನ್ನು ಬಿಟ್ಟು ಮೇಧಪುರ್ ಕ್ಕೆ ಬಂದನು.

ಸಚಿನ್ ಗೆ ಇದೆಲ್ಲವೂ ಒಂದು ಸವಾಲಾಗಿತ್ತು.ಸಚಿನ್ಗೆ ಕೃಷಿಯ ಬಗ್ಗೆ ಒಂದು ಚಿಕ್ಕ ಸುಳಿವು ಮಾಹಿತಿ ಕೂಡಾ ಇರಲಿಲ್ಲ. ಬೀಜವನ್ನು ಬಿತ್ತುವುದರಿಂದ ಹಿಡಿದು ನೇಗಿಲು ಹಿಡಿಯುವ ತನಕವೂ ಎಲ್ಲವೂ ಒಂದು ಹೊಸ ಅನುಭವ ವಾಗಿತ್ತು.
ತನ್ನ ತಾತನ 25 ಎಕರೆ ಪಿತ್ರಾರ್ಜಿತ ಆಸ್ತಿ ಇತ್ತು. ಅದನ್ನು ಬಳಸಿಕೊಂಡು ಉಳುಮೆ ಮಾಡಲು ನಿರ್ಧರಿಸಿದ.

ಸಚಿನ್ ತನ್ನ ಹದಿನೈದು ವರ್ಷದ ಭವಿಷ್ಯ ನಿಧಿ ಯನ್ನೂ ಪೂರ್ತಿಯಾಗಿ ಭೂಮಿಯ ಮೇಲೆ ಹಾಕಿದ. ಇದರಲ್ಲಿ ವಿಫಲನಾದಲ್ಲಿ ಮತ್ತೆ ಕಂಪನಿ ಯ ಕಡೆಗೆ ವಾಪಸ್ ಹೋಗಿಬಿಡೋಣ ಎಂದು ನಿರ್ಧರಿಸಿದ.
ಸಚಿನ್ ಬೆಳೆಯನ್ನು ಬೆಳೆಯಲು ಶುರು ಮಾಡಿ ಅದನ್ನೇ ಮುಂದುವರಿಸಿದರು .ಬತ್ತ ಮತ್ತು ಕಾಲಕಾಲಕ್ಕೆ ತಕ್ಕಂತೆ ಬೆಳೆಯುವ ತರಕಾರಿಗಳನ್ನು ಬೆಳೆಯತೊಡಗಿದರು. ಹೇಗೆಂದರೆ ಬತ್ತವು ಬರೀ ಮೂರ ನಾಲ್ಕು ತಿಂಗಳ ಅವಧಿ ಯ ಬೆಳೆಯಾಗಿದ್ದು ವರ್ಷದ ಉಳಿದ 8 ತಿಂಗಳು ತರಕಾರಿಗಳನ್ನು ಬೆಳೆಯತೊಡಗಿದರು. ಇದಕ್ಕಾಗಿ ಸಚಿನ್ ಅವರು ಆ ಊರಿನ ರೈತರ 200 ಎಕರೆ ಜಮೀನನ್ನು ಉಪಯೋಗಿಸಿಕೊಂಡು ಕೃಷಿ ಬೆಳೆಯನ್ನು ಬೆಳೆಯುತ್ತಿದರು. ಹೀಗೆ ಒಂದು ವರ್ಷಕ್ಕೆ 2 ಕೋಟಿ ಆದಾಯ ಗಳಿಸಿ.ಕಂಪನಿ ಯನ್ನು ತೊರೆದು ಅಲ್ಲಿ ಇರುವ 137 ರೈತ ಕುಟುಂಬಗಳಿಗೆ ಆಧಾರವಾಗಿದ್ದಾರೆ ಮತ್ತು ಇದರಿಂದ ರೈತ ಕುಟುಂಬಗಳು ಅಧಿಕ ಲಾಭ ಗಳಿಸುತ್ತಿವೆ.

2014 ರಲ್ಲಿ ಸಚಿನ್ ಕೊನೆಗೂ ಕೃಷಿಯಲ್ಲಿ ಸಫಲತೆ ಯನ್ನು ಕಂಡಿದ್ದು ತಾನೇ ಒಂದು ಸ್ವಂತ ಕಂಪೆನಿಯನ್ನು ತೆರೆದ .ಅದರ ಹೆಸರು “ಇನ್ನೋವಟಿವ್ ಅಗ್ರಿಲೈಫ್ ಸೊಲ್ಯೂಷನ್ಸ್ Pvt.ltd.” ಈ ಕಂಪೆನಿಯ ಎಷ್ಟೋ ಸಣ್ಣಪುಟ್ಟ ರೈತರಿಗೆ ಸಹಕಾರಿಯಾಗಿತ್ತು.

OLYMPUS DIGITAL CAMERA

ದುಡ್ಡಿಲ್ಲದೆ ಯಾರು ಬೇಕಾದರೂ ಜೀವನ ಮಾಡಬಹುದು ಆದರೆ ಆಹಾರವಿಲ್ಲದೆ ಎಷ್ಟು ದಿನ ಬದುಕಲು ಸಾಧ್ಯ ಹೇಗೆ ಜೀವನ ಮಾಡಲು ಸಾಧ್ಯ.?
ಸಚಿನ್ ಹೆಂಡತಿ ಕಲ್ಯಾಣಿ ಯವರು ಮಾಸ್ಟರ್ ಡಿಗ್ರಿಯನ್ನು ಸಂವಹನ(ಕಮ್ಯುನಿಕೇಶನ್) ದಲ್ಲಿ ಪಡೆದಿದ್ದರು ಇವರು ಕಂಪೆನಿಯ ಹಣಕಾಸಿನ ವಿಭಾಗದ ವ್ಯವಹಾರವನ್ನು ನೋಡಿಕೊಳ್ಳುತ್ತಿದರು.

ಸಚಿನ್ ಅವರನ್ನು ಸಂಪರ್ಕಿಸಲು ಇಚ್ಚೆ ಇದ್ದರೆ ಈ ಕೆಳಕಂಡ ಸಂಖ್ಯೆ ಗೆ ಕರೆ ಮಾಡಿ ph-9425530260.
ಇಮೈಲ ವಿಳಾಸ-infoagrilife@gmail.com.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top