fbpx
ನನ್ನ ಕಥೆ

13ನೇ ವಯಸ್ಸಿಗೆ ಸ್ಕೂಲ್ ಬಿಟ್ಟು , 15ನೇ ವಯಸ್ಸಿಗೆ ಮದುವೆಯಾಗಿ , ಎರಡಕ್ಷರ ಇಂಗ್ಲಿಷ್ ದ ಬಾರದ ಈಕೆ ಇಂದು ಇಂಗ್ಲೆಂಡ್ ನ ಸಾವಿರಾರು ವಿದ್ಯಾರ್ಥಿಗಳ ಪಾಲಿಗೆ ಆಶಾದೀಪ ..

ಇಂಗ್ಲೆಂಡ್ ವಿದ್ಯಾರ್ಥಿಗಳ ಪಾಲಿನ ಆಶಾದೀಪ:

ಭಾರತದ ಅತಿ ಸಣ್ಣ ಹಳ್ಳಿಯೊಂದರ ಹೆಣ್ಣು ಮಗಳು ಆಕೆ. ಅಂತಹ ಆತ್ಮವಿಶ್ವಾಸವೇನು  ಇರಲಿಲ್ಲ. ಅವಳಿಗೆ ಇಂಗ್ಲೀಷ್ ಸಹ ಸರಿಯಾಗಿ ಬರುತ್ತಿರಲಿಲ್ಲ. ಅಂತಹ ಒಬ್ಬ ಹೆಣ್ಣು ಇಂಗ್ಲೆಂಡಿನ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ದಾರಿದೀಪವಾದಳು ಎಂದರೆ ನಂಬುತ್ತೀರಾ?!! ನಂಬಲೇಬೇಕು. 13ನೇ ವಯಸ್ಸಿಗೆ ಶಾಲೆಯನ್ನು ತೊರೆದು 15ನೇ ವಯಸ್ಸಿನಲ್ಲಿಯೇ ಮದುವೆಯಾಗಿದ್ದ ಆಶಾ ಜೀವನದಲ್ಲಿ ಆತ್ಮವಿಶ್ವಾಸವನ್ನು ಕಳೆದುಕೊಂಡಿರಲಿಲ್ಲ. ಆದ್ದರಿಂದಲೇ ಇಂತಹ ಮಹೋನ್ನತ ಸಾಧನೆ ಮಾಡಲು ಸಾಧ್ಯವಾಯಿತು.

ಆಶಾ ಖೇಮ್ಕಾ, ಮಹಾರಾಣಿ ಲಕ್ಷ್ಮಿದೇವಿ(1931) ಅವರ ನಂತರ ಬ್ರಿಟನ್ನಿನ ಅತ್ಯುನ್ನತ ನಾಗರಿಕ ಪ್ರಶಸ್ತಿ “Dame Commander of the Order of the British empire”  ಎಂಬ ಶೀರ್ಷಿಕೆ ಪಡೆದ ಭಾರತೀಯ ಮೂಲದ ಎರಡನೇ ಮಹಿಳೆ. ಇಂಗ್ಲೀಷ್ ಮಾತನಾಡಲು ಸಹ ಬರದ ಹೆಣ್ಣು ಈ ಪರಿಯ ಸಾಧನೆ ಮಾಡಿದ್ದಾದರೂ ಹೇಗೆ? ಇಲ್ಲಿದೆ ನೋಡಿ ಆಶಾ ಬೆಳೆದು ಬಂದ ಹಾದಿ.

ಅಂದಿನ ಕಾಲದ ಭಾರತೀಯ ಹೆಣ್ಣು ಮಕ್ಕಳಂತೆ 13ನೇ ವಯಸ್ಸಿಗೆ ಹದಿ ಹರೆಯದಕ್ಕೆ ಬಂದ ಆಶಾರನ್ನು ಶಾಲೆ ಬಿಡಿಸಿದರು. 15ನೇ ವಯಸ್ಸಿನಲ್ಲಿ 19ರ ಹರೆಯದ ವೈದ್ಯಕೀಯ ವಿದ್ಯಾರ್ಥಿ ಶಂಕರ್ ಖೇಮ್ಕಾ ಅವರೊಡನೆ ವಿವಾಹವಾಯಿತು. 25ರ ವಯಸ್ಸಿನಲ್ಲಿ ಸೀತಾಮರಿಯೆಂಬ ಹಳ್ಳಿಯಿಂದ ಗಂಡ ಮಕ್ಕಳೊಡನೆ ಇಂಗ್ಲೆಂಡಿಗೆ ಬಂದರು. ಅವರಿಗೆ ಒಂದು ಸಾಂಸ್ಕ್ರತಿಕ ಕೋಲಾಹಲವೇ ಎದುರಿಸಬೇಕಾಗಿ ಬಂತು. ಪ್ರಾರಂಭದಲ್ಲಿ ಇಂಗ್ಲಿಷ್ ಮಾತನಾಡಲು ಸಹ ಬರುತ್ತಿರಲಿಲ್ಲ. ನಂತರ ಮಕ್ಕಳೊಂದಿಗೆ ಕಾರ್ಟೂನ್ ಕಾರ್ಯಕ್ರಮ ನೋಡುತ್ತಾ ಸ್ವಲ್ಪ ಸ್ವಲ್ಪವೇ ಭಾಷೆ ಕಲಿತುಕೊಂಡರು. ನಂತರ ತಮ್ಮ ಕಾಲೋನಿಯ ಅಕ್ಕ ಪಕ್ಕದ ತಾಯಂದಿರೊಂದಿಗೆ ಮಾತನಾಡುವುದನ್ನು ಅಭ್ಯಾಸ ಮಾಡಿಕೊಂಡರು.

ಇದರಿಂದ ಇಂಗ್ಲೀಷ್ ನಲ್ಲಿ ವ್ಯವಹರಿಸುವ ಕೌಶಲ್ಯ ವೃದ್ಧಿಸುತ್ತಾ ಹೋಯಿತು. ವರ್ಷಗಳು ಕಳೆದಂತೆ ಆಶಾ ಇಂಗ್ಲಿಷ್ ನಲ್ಲಿ ಪರಿಣತಿ ಸಾಧಿಸುತ್ತಾ ಹೋದರು. ನಂತರ ಮಕ್ಕಳು ಶಾಲೆಗೆ ಹೋದಾಗ ತುಂಬಾ ಸಮಯವಿದ್ದುದರಿಂದ ಕಾರ್ಡಿಫ್ ವಿಶ್ವವಿದ್ಯಾಲಯದಲ್ಲಿ ಡಿಗ್ರಿಗೆ ನೊಂದಾಯಿಸಿಕೊಂಡರು. ನಂತರ ಶಿಕ್ಷಕಿಯಾಗಿ ವೃತ್ತಿ ಆರಂಭಿಸಿದರು. ನಂತರ ವೆಸ್ಟ್ ನಾಟಿಂಗ್ ಹ್ಯಾಮ್ ಶೈರ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕೆಲಸಕ್ಕೆ ಸೇರಿದರು.

2006ರಲ್ಲಿ ಅದೇ ಕಾಲೇಜಿನ ಪ್ರಾಂಶುಪಾಲೆಯಾದರು. ನಂತರ ಅಲ್ಲಿಯೇ ಸಿ.ಇ.ಓ. ಆದರು. 2008ರಲ್ಲಿ ಆಶಾ “Inspire and Achieve Foundation” ಅನ್ನು ಪ್ರಾರಂಭಿಸಿದರು. ಇಲ್ಲಿ ಕಾರಣಾಂತರಗಳಿಂದ ಓದು ನಿಲ್ಲಿಸಿದ್ದ ಅಥವಾ ಮುಂದುವರೆಸಲು ಆಗದಿದ್ದ ಯುವಕ ಯುವತಿಯರಿಗೆ ತಮ್ಮ ಶಿಕ್ಷಣವನ್ನು ಮುಂದುವರೆಸಲು ಅವಕಾಶ ಮಾಡಿಕೊಟ್ಟರು. 2013ರಲ್ಲಿ ಖ್ಯಾತ ಶಿಕ್ಷಣ ತಜ್ಞೆಯಾದ 69ರ ಹರೆಯದ ಆಶಾ ಬ್ರಿಟನ್ನಿನ ಅತ್ಯುನ್ನತ ನಾಗರಿಕ ಗೌರವಕ್ಕೆ ಪಾತ್ರರಾಗಿದ್ದಾರೆ. ಅದೇ ವರ್ಷ “Business woman of the year” ಗೌರವಕ್ಕೆ ಪಾತ್ರರಾದರು.

ತನ್ನ ಸ್ವಂತ ಪರಿಶ್ರಮದಿಂದ ಮೇಲೆ ಬಂದ ಆಶಾ ಇಂಗ್ಲೆಂಡಿನ ಸಾವಿರಾರು ವಿದ್ಯಾರ್ಥಿಗಳಿಗೆ ಇಂದು ಆಶಾದೀಪವಾಗಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top