fbpx
ನನ್ನ ಕಥೆ

ವಿವೇಕಾನಂದರ ಜೀವನ ಚರಿತ್ರೆ-ಭಾಗ-1

ವಿವೇಕಾನಂದರ ಜೀವನ ಚರಿತ್ರೆ.

ಭಾಗ-1

ವಿವೇಕಾನಂದರು ಹೇಳಿದ ಮಾತುಗಳು.

ಸೋದರ  ಸೋದರಿಯರಿರಾ, ಕಡೆಗೂ ಸುದೀರ್ಘ ರಾತ್ರಿ  ಕೊನೆಗಾಣುತ್ತಿದೆ.ಶೋಕ ಸಂಕಟಗಳು ಮಾಯವಾಗುತ್ತಿವೆ.ನಮ್ಮದು ನಮ್ಮ ಭಾರತ ಪುಣ್ಯಭೂಮಿ.ಸುತ್ತಲೂ ಬೀಸುತ್ತಿರುವ ಹೊಸ ಗಾಳಿಯಿಂದಾಗಿ ಅದು ಎಚ್ಚರಗೊಳ್ಳುತ್ತಿದೆ.ಯಾರೂ ಎದುರಿಸಲಾರದ ಶಕ್ತಿ ಅದಕ್ಕಿದೆ”.

ನಮ್ಮ ತಾಯ್ನಾಡಿಗಾಗಿ ಎಲ್ಲಾ ತ್ಯಾಗಗಳಿಗೂ ಸಿದ್ದರಾಗಿರುವಿರಾದರೆ ನಾಡಿನ ಬಡತನವನ್ನು ನೀಗಬಲ್ಲಿರಿ. ಅಜ್ಞಾನವನ್ನು ಹೊಡೆದಟ್ಟಬಲ್ಲಿರಿ. ಕೋಟ್ಯಂತರ ಅಣ್ಣ ಅಮ್ಮಂದಿರು,ಅಕ್ಕ ತಂಗಿಯರು ಹೊಟ್ಟೆಗಿಲ್ಲದೆ ನರಳುತ್ತಿದ್ದರೆಂಬುದು ನಿಮಗೆ  ಗೊತ್ತೆ? ಅವರ ಬಗೆಗೆ ನಿಮಗೆ ಕಾಣಿಕರವುಂಟೆ?ಅವರಿಗಾಗಿ ನೀವು ತೊಟ್ಟು ಕಣ್ಣೀರು ಸುರಿಸುವಿರಾ ?”

ಎಂಥ ತೊಂದರೆಗಳೇ ಬರಲಿ,ಅವನ್ನೆದುರಿಸುವ ಕಿಚ್ಚು ಕೆಚ್ಚುಗಳು.ನಿಮ್ಮಲ್ಲಿವೆಯೇ ?ಬಂಧು ಬಳಗವೇ ವಿರೋಧಿಸಲಿ,ಗುರಿಯನ್ನು ಸಾಧಿಸುವ ಛಲ ನಿಮ್ಮಲಿದೆಯೇ?ಆತ್ಮ ಶುದ್ದಿಯಿದ್ದರೆ ಮಾತ್ರ ನೀವು ಸ್ವತಂತ್ರರಾಗಿ  ಬಾಳಬಹುದು. ನೀವು ಗಟ್ಟಿಮುಟ್ಟಾಗಿ ಬೆಳೆಯಬೇಕು.ಧ್ಯಾನ, ವ್ಯಾಸಂಗ  ಕ್ರಿಯೆಗಳ ಮೂಲಕ ಮನಸ್ಸನ್ನು ತಿದ್ದಬೇಕು.ಆಗ ಮಾತ್ರ ನಿಮಗೆ ಜಯ ಲಭಿಸುತ್ತದೆ.

ನಾನು ಅಮೆರಿಕ ಇಂಗ್ಲೆಂಡುಗಳಿಗೆ ಹೋಗುವ ಮುನ್ನ ತಾಯ್ನಾಡನ್ನು ಪ್ರೀತಿಸುತ್ತಿದ್ದೆ.ಅಲ್ಲಿಂದ ಹಿಂದಿರುಗಿದ ನಂತರ ಇಲ್ಲಿಯ ಧೂಳಿನ ಕಣ ಕಣವೂ ಪವಿತ್ರವಾಗಿ ತೋರುತ್ತಿದೆ.

ತುಂಟ ಧೀರ

ಅವರಿಗೆ ವಿವೇಕಾನಂದ ಎಂಬ ಹೆಸರು  ಬಂದದ್ದು ಸನ್ಯಾಸಿಯಾದ ನಂತರ. ಅವರ ತಂದೆ ತಾಯಿಯರು ಇಟ್ಟ ಹೆಸರು ನರೇಂದ್ರ. ಅವರ ತಂದೆ ವಿಶ್ವನಾಥದತ್ತ,ತಾಯಿ ಭುವನೇಶ್ವರಿ ದೇವಿ.ಅವನು ಹುಟ್ಟಿದ್ದು ಕೊಲ್ಕತ್ತಾದಲ್ಲಿ.1863ಯ ಜನವರಿ 12 ರಂದು.ಅವನು ತುಂಬಾ ತುಂಟ ಮಗುವಾಗಿದ್ದರು.

ಮಗುತನದಿಂದ ಹುಡುಗತನಕ್ಕೆ ಕಾಲಿಟ್ಟಾಗ ಅವನ ಆಟ ಪಾಠಗಳು. ಅತಿಯಾದವು.ಓರಗೆಯ ಮಕ್ಕಳಿಗೆ ಅವನೇ ನಾಯಕ.ಅವನ ತೀರ್ಮಾನಕ್ಕೆ ಎಲ್ಲರೂ ತಲೆಬಾಗುತ್ತಿದ್ದರು. “ಮರದ ಮೇಲೊಂದು ಬ್ರಹ್ಮರಾಕ್ಷಸನೆಂಬ ಪಿಶಾಚಿಯಿದೆ.ಅದು ಮಕ್ಕಳನ್ನು ತಿಂದು ಬಿಡುತ್ತದೆಎಂದು ಮಾಲೀಕನೊಬ್ಬ ಹುಡುಗರನ್ನು  ಹೆದರಿಸಿದನು.ಅವನ ಬೆದರಿಕೆಗೆ ನರೇಂದ್ರ ಜಗ್ಗಲಿಲ್ಲ. ಮರದ ಮೇಲೆಯೇ ಬಿಗಿಯಾಗಿ ಕುಳಿತನು. ಉಳಿದ ಹುಡುಗರು ಬಿದ್ದು ಓಡಿಹೋದರು.ಎಷ್ಟು ಹೊತ್ತು ಕುಳಿತರು ಬ್ರಹ್ಮರಾಕ್ಷಸ ಕಾಣಿಸಲಿಲ್ಲ. ಹೀಗಾಗಿ ಮಾಲೀಕ ಕಟ್ಟಿದ ಕಥೆ ಸುಳ್ಳು ಎಂದು ಸಾರಿದನು.

ಅಕ್ಕಂದಿರಿಗೆ ಕೀಟಲೆ ಕೊಡುವುದು ಅವನ ಒಂದು ಆಟವಾಗಿತ್ತು.

 ಧ್ಯಾನವು ಅವನಿಗೆ ಆಟವಾಗಿತ್ತು. ಆಟದಲ್ಲಿ ಮುಳುಗಿ ಹೊರ ಜಗತ್ತನ್ನು  ಮರೆಯುತ್ತಿದ್ದನು.ಅವನ ಪಕ್ಕದಲ್ಲಿ ಹಾವು ಸುಳಿದರೂ ಅವನಿಗೆ ಎಚ್ಚರವಾಗುತ್ತಿರಲ್ಲಿಲ್ಲ.

ನರೇಂದ್ರನಿಗೆ ಚಿಕ್ಕಂದಿನಿಂದಲೂ ಸನ್ಯಾಸಿಗಳಲ್ಲಿ ಅಪಾರವಾದ ಗೌರವ. ಯಾರು ಏನು ಕೇಳಿದರು ಕೊಟ್ಟು ಬಿಡುತ್ತಿದ್ದನು.ಹುಟ್ಟು ಹಬ್ಬದ ದಿನ ಹೊಸ ಬಟ್ಟೆ ತೊಟ್ಟುಕೊಳ್ಳುತ್ತಿದ್ದನಷ್ಟೇ,ಯಾಚಕ ಬಂದು ಬೇಡಿದಾಗ ಅದನ್ನೇ ಎಸೆದು ಬಿಡುತ್ತಿದ್ದನು.

ಅಂದಿನಿಂದ ಬೀದಿಯಲ್ಲಿ ಬಿಕ್ಷಕರನ್ನು ನೋಡಿದ್ದೆ ತಡ, ತಾಯಿ ಮಗುವನ್ನು ಕೋಣೆಗೆ ಕೂಡಿಹಾಕಿ ಬೀಗ ಹಾಕಿಸುತ್ತಿದ್ದನು.ನರೇಂದ್ರನ ಗುಣ ಪ್ರತಿಯೊಬ್ಬ ಬಿಕ್ಷುಕರಿಗೂ ಗೊತ್ತಿತ್ತು.ಅವರು ಕಿಟಕಿಯ ಬಳಿ ಹೋಗಿ ನಿಲ್ಲುತ್ತಿದ್ದರು.ನರೇಂದ್ರ ತನ್ನಲ್ಲಿದ್ದುದನ್ನು  ಬಿಸಾಡುತ್ತಿದ್ದನು. ತ್ಯಾಗ, ವೈರಾಗ್ಯ ಗುಣಗಳು ಆಗಲೇ ಅವನಲ್ಲಿ ಮೊಳಕೆಯೊಡೆಯುತ್ತಿದ್ದವು.

ಬಿಡುವಾದಾಗಲ್ಲೆಲ್ಲಾ ನರೇಂದ್ರನ ತಾಯಿ ರಾಮಾಯಣದ ಕಥೆಯನ್ನು ವಿಸ್ಥಾರವಾಗಿ ಹೇಳುತ್ತಿದ್ದಳು.ಕಥೆ ಹೇಳದೆ ಇದ್ದರೆ ಅವನಿಗೆ ನಿದ್ದೆಯೇ ಬರುತ್ತಿರಲಿಲ್ಲ. ಆಗ ಅವನ ಮೈಯೆಲ್ಲ ಕಿವಿಯಾಗಿ,ಆಟ, ಪಾಠಗಳನ್ನು ಮರೆತು ಕಥೆ ಕೇಳುತ್ತಿದ್ದನು.

ಬ್ರಹ್ಮಚಾರಿ ಹನುಮಂತನ  ಬಗ್ಗೆ ಅಪಾರವಾದ ಗೌರವ.

 ಒಂದು ದಿನ ಅವನು ಮೈಗೆಲ್ಲ ಬೂದಿ ಬಳಿದುಕೊಂಡು, ಶಿವನ ವಿಗ್ರಹದ ಮುಂದೆ ಕಣ್ಣು ಮುಚ್ಚಿಕೊಂಡು ಕುಳಿತ್ತಿದ್ದನು.ಮಗನ ವೇಷವನ್ನು ಕಂಡ ತಾಯಿ ಇದ್ದೆಲ್ಲ ಏನು ನರೇಂದ್ರ”? ಎಂದು ಕೇಳಿದಳು. “ ನಾನು ಶಿವ,ಶಿವ ನಾನುಎಂದವನು ಮುಗುಳು ನಗೆ ಬೀರಿದನು.ಅಜ್ಜನಂತೆ ಮೊಮ್ಮಗನೂ ಸನ್ಯಾಸಿಯಾಗುವನೇನೋ ಎಂದು ತಾಯಿ ಬೆದರಿದಳು….

ಮುಂದಿನ ಭಾಗದಲ್ಲಿ

ಬೆಳೆಯುವ ಸಿರಿ ಮೊಳಕೆಯಲ್ಲಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top