fbpx
ನನ್ನ ಕಥೆ

ಮನೇಲಿ ಸಾಕಷ್ಟು ಹಣದ ಕೊರತೆ ಇದ್ದು ಛಲ ಬಿಡದೆ ಓದಿ , ತಾಯಿ ಒಡವೆ ಅಡವಿಟ್ಟು ಮಾಡಿದ ಉದ್ಯಮ ಇಂದು 3,300 ಕೋಟಿ ಬೆಲೆ ಬಾಳೋ ಕಂಪನಿ ಓನರ್ ..

ಅವರು ತಮ್ಮ ವೃತ್ತಿಜೀವನವನ್ನು ರೂ 300 ರ ಮಾಸಿಕ ಸಂಬಳದೊಂದಿಗೆ ಒಂದು ಟ್ರಾವೆಲ್ ಏಜನ್ಸಿನಲ್ಲಿ ಪ್ರಾರಂಭಿಸಿದರು , ಆದರೆ ಅಂದು ಯಾರು ಅಂದುಕೊಂಡಿರಲಿಲ್ಲ ಈ ವ್ಯಕ್ತಿಯು ರಾಷ್ಟ್ರದ ಪ್ರಮುಖ ಕೈಗಾರಿಕೋದ್ಯಮಿಗಳಲ್ಲಿ ಒಬ್ಬರಾಗಿ 3,300 ಕೋಟಿ ರೂ ಸಂಪಾದನೆ ಮಾಡ್ತಾರೆ ಅಂತ ,
ಈ ವ್ಯಕ್ತಿಯು ತನ್ನ ತೀವ್ರ ಉತ್ಸಾಹ, ನಿರ್ಣಯ, ಶ್ರಮ ಮತ್ತು ಉತ್ಸಾಹದಿಂದ ಅಂದು ಮಾಡಿದ ಕೆಲಸಗಳು ಇಂದು ಆತನನ್ನು ಈ ಎತ್ತರಕ್ಕೆ ತಂದು ನಿಲ್ಲಿಸಿದವು.

ಭಾರತದಲ್ಲಿ ಖಾಸಗಿ ಏರ್ಲೈನ್ಸ್ ಪರಿಕಲ್ಪನೆಯನ್ನು ಸಹ ಊಹಿಸಲು ಸಾಧ್ಯವಿಲ್ಲದ ಕಾಲದಲ್ಲೇ ಹಲವಾರು ಸಮಸ್ಯೆಗಳು, ತೊಂದರೆಗಳು ಮತ್ತು ಸವಾಲುಗಳನ್ನು ಎದುರಿಸಬೇಕಾಗಿತ್ತು, ಆದರೆ ಈಗ ಇಡೀ ದೇಶವೇ ಹೆಮ್ಮೆ ಪಡುವಂತೆ ಬೆಳೆದು ನಿಂತಿದ್ದಾರೆ .

 

 

 

 

 

 

 

 

 

 

ಭಾರತದಲ್ಲಿನ ಅತಿದೊಡ್ಡ ಖಾಸಗಿ ಏರ್ಲೈನ್ ಕಂಪೆನಿ ಜೆಟ್ ಏರ್ವೇಸ್ನ ಮಾಲೀಕ ನರೇಶ್ ಗೋಯಲ್ ರವರ ಕಥೆ ಇದು .
1949 ರಲ್ಲಿ ಪಟಿಯಾಲಾದ ಸಣ್ಣ ವ್ಯಾಪಾರಸ್ಥ ಕುಟುಂಬದಲ್ಲಿ ಜನಿಸಿದರು. ತಮ್ಮ ಬಾಲ್ಯದಲ್ಲಿ ಅವರು ತಮ್ಮ ಸ್ವಂತ ಕಣ್ಣುಗಳ ಮುಂದೆ ಕುಟುಂಬ ವ್ಯವಹಾರ ಮುಳುಗಿ ಹೋಗಿದ್ದನ್ನು ಕಂಡಿದ್ದರು . ದೊಡ್ಡ ಆರ್ಥಿಕ ನಷ್ಟವನ್ನು ಭರಿಸಲಾಗದ ಕುಟುಂಬ ತಾವು ಹೊಂದಿದ್ದ ಆಸ್ತಿಯನ್ನು ಮಾರಿ ಬೀದಿಗೆ ಬರಬೇಕಾಯ್ತು .
ಕೇವಲ 12 ವರ್ಷ ವಯಸ್ಸಿನವನಾಗಿದ್ದಾಗ ಅವರ ಜೀವನವು ಎಂದಿಗೂ ಕೊನೆಗೊಳ್ಳದ ಹೋರಾಟವಾಗಿ ಬದಲಾಯ್ತು ಎಷ್ಟು ಕಷ್ಟ ಬಂದರು ನರೇಶ್ ಕೈಬಿಡಲಿಲ್ಲ ಎಲ್ಲಾ ಕಷ್ಟಗಳ ಹೊರತಾಗಿಯೂ ತಮ್ಮ ಅಧ್ಯಯನವನ್ನು ಮುಂದುವರೆಸಿದರು .

 

 

 

 

 

 

 

 

 

 

ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿದ ನಂತರ ನರೇಶ್ ಅವರು ಚಾರ್ಟರ್ಡ್ ಅಕೌಂಟೆಂಟ್ ಆಗಲು ಬಯಸಿದ್ದರು. ಆದರೆ ಅವರ ಆರ್ಥಿಕ ಸ್ಥಿತಿಯಿಂದಾಗಿ ಅವರು ತಮ್ಮ ಕನಸುಗಳನ್ನು ಬಿಡಬೇಕಾಯ್ತು. 1967 ರಲ್ಲಿ 18 ನೇ ವಯಸ್ಸಿನಲ್ಲಿ, ಅವರು ಬಿ.ಕಾಂ ಮುಗಿಸಿದರು ಮತ್ತು ಅವರ ತಾಯಿಯ ಚಿಕ್ಕಪ್ಪನ ಒಡೆತನದ ಟ್ರಾವೆಲ್ ಏಜೆನ್ಸಿಯಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡಲು ಪ್ರಾರಂಭಿಸಿದರು. ಕೇವಲ ರೂ 300 ರ ಮಾಸಿಕ ಸಂಬಳದಲ್ಲಿ ಕೆಲಸ ಮಾಡುತ್ತಿದ್ದಾಗ, ರಾಯಲ್ ಜೋರ್ಡಾನ್ ಏರ್ಲೈನ್ಸ್ನಂಥ ಹಲವಾರು ದೊಡ್ಡ ಕಂಪೆನಿಗಳಲ್ಲಿ ಕೆಲಸ ಮಾಡಲು ಅವರು ಅವಕಾಶವನ್ನು ಪಡೆದರು.

1969 ರಲ್ಲಿ, 20 ನೇ ವಯಸ್ಸಿನಲ್ಲಿ, ನರೇಶ್ ಅವರು ಇರಾನ್ ಮೂಲದ ಏರ್ಲೈನ್ ಕಂಪೆನಿಯ ಮ್ಯಾನೇಜರ್ ಆಗಿ ಸೇರಿದರು , ಅವರು ಐದು ವರ್ಷಗಳ ಕಾಲ ವಿವಿಧ ವಿಮಾನಯಾನ ಕಂಪೆನಿಗಳಲ್ಲಿ ಕೆಲಸ ಮಾಡಿದರು ನಂತರ ಒಂದು ದಿನ ಮನಸು ಮಾಡಿ ತಮ್ಮದೇ ಆದ ಪ್ರಯಾಣ ಏಜೆನ್ಸಿಯನ್ನು ತೆರೆಯಲು ನಿರ್ಧರಿಸಿದರು.

 

 

 

 

 

 

 

 

 

 

ಆ ಕಾಲಕ್ಕೆ ಒಂದು ಯಶಸ್ವಿ ಏಜೆನ್ಸಿ ಕಂಪೆನಿ ತೆರೆಯುವುದು ಅಷ್ಟು ಸುಲಭವಾದ ವಿಷಯವಾಗಿರಲಿಲ್ಲ , 25 ನೇ ವಯಸ್ಸಿನಲ್ಲಿ ಅವರು ತಮ್ಮ ತಾಯಿಯ ಆಭರಣಗಳನ್ನು ಮಾರಾಟ ಮಾಡಿದರು ಇದರಿಂದ ಸುಮಾರು 15,000 ರೂ ಸಿಕ್ಕಿತ್ತು ಆಗ ತಮ್ಮದೇ ಸ್ವಂತ ಪ್ರಯಾಣ ಏಜೆನ್ಸಿಯನ್ನು ಪ್ರಾರಂಭಿಸಿದರು ಮತ್ತು ಶೀಘ್ರದಲ್ಲೇ ತಮ್ಮ ಕನಸಿನ ಯೋಜನೆಯಾದ ಜೆಟ್ ಏರ್ 10,000 ರೂಪಾಯಿಗಳೊಂದಿಗೆ ಪ್ರಾರಂಭಿಸಿದರು.
ಆರಂಭದಲ್ಲಿ, ಜೆಟ್ ಏರ್ ಮಾರ್ಕೆಟಿಂಗ್ ಮತ್ತು ಮಾರಾಟದಲ್ಲಿ ವಿದೇಶಿ ವಿಮಾನಯಾನ ಸಂಸ್ಥೆಗಳಿಗೆ ನೆರವು ನೀಡುವ ಮೂಲಕ ಕೆಲಸ ಮಾಡಿತು ,1991 ರಲ್ಲಿ ಭಾರತವು ಖಾಸಗಿ ವಿಮಾನಯಾನ ಸಂಸ್ಥೆಗಳ ಪ್ರಾರಂಭಕ್ಕೆ ಉತ್ತೇಜನ ನೀಡಿತು ಈ ಅವಕಾಶವನ್ನು ಬಳಸಿಕೊಂಡ ನರೇಶ್ ಜೆಟ್ ಏರ್ ಅನ್ನು ಜೆಟ್ ಏರ್ಲೈನ್ಸ್ ರೂಪದಲ್ಲಿ ಹೊಸ ಆಯಾಮವನ್ನು ನೀಡಿ ಇಡೀ ವಿಶ್ವಕ್ಕೆ ಪರಿಚಯಿಸಿದರು .

ಈ ನಿರ್ಧಾರವು ದೇಶದಲ್ಲೇ ಅತ್ಯಂತ ಯಶಸ್ವಿ ಉದ್ಯಮಿಗಳಲ್ಲಿ ಒಬ್ಬನಾಗಲು ನರೇಶ್ ರವರಿಗೆ ಸಹಾಯ ಮಾಡಿತು . ಏಪ್ರಿಲ್ 18, 1993 ರಂದು, ಮುಂಬೈಯ ಸಾಂಟಾ ಕ್ರೂಜ್ ವಿಮಾನ ನಿಲ್ದಾಣದಿಂದ ಜೆಟ್ ಏರ್ವೇಸ್ನ ಮೊದಲ ಹಾರಾಟ ನಡೆಯಿತು. ಇಂದು, ಜೆಟ್ ಏರ್ವೇಸ್ ವಿಶ್ವದಲ್ಲೇ ಅತಿ ದೊಡ್ಡ ಏರ್ಲೈನ್ ಕಂಪನಿಯಾಗಿದೆ. ಭಾರತೀಯ ಪ್ರಯಾಣ ಮಾರುಕಟ್ಟೆಯ 32% ಭಾಗವನ್ನು ಹೊಂದಿದೆ.
ಪ್ರಸ್ತುತ ನರೇಶ್ 16 ನೇ ಶ್ರೀಮಂತ ಭಾರತೀಯನಾಗಿದ್ದು 3,300 ಕೋಟಿ ರೂಪಾಯಿಗಳ ಆಸ್ತಿ ಹೊಂದಿದ್ದಾರೆ.

 

 

 

 

 

 

 

 

 

 

 

 

ಘೋರ ಆರ್ಥಿಕ ಸ್ಥಿತಿಯ ವಿರುದ್ಧ ತನ್ನ ಕನಸುಗಳನ್ನು ಅಟ್ಟಿಸಿಕೊಂಡು ಯಶಸ್ಸಿನ ಫಲವನ್ನು ಕಂಡ ನರೇಶ್ ನಮಗೆ ಎಲ್ಲರಿಗೂ ನಿಜವಾದ ಸ್ಫೂರ್ತಿ ಅಲ್ಲವೇ ಆಗದು ಎಂದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ ಸಾಗದು ಕೆಲಸವೂ ಮುಂದೆ ಏನ್ ಅಂತೀರಾ ?

ನಿಮಗೆ ಈ ಕಥೆ ಇಷ್ಟ ಆದ್ರೆ ನಿಮ್ಮ ಸ್ನೇಹಿತರ ಜೊತೆ ಕೂಡ ಶೇರ್ ಮಾಡಿ ನಮ್ಮ ಪುಟ
ಅರಳಿಕಟ್ಟೆ  ಲೈಕ್ ಮಾಡೋಕೆ ಮರೀಬೇಡಿ , ಯಾಕಂದ್ರೆ ನಿಮ್ಮ ಲೈಕ್ ಗಳೇ ನಮಗೆ ಸ್ಪೂರ್ತಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top