fbpx
ತಿಂಡಿ ತೀರ್ಥ

ಈಗ ಬಿಸಿ ಬೇಳೆ ಬಾತ್ ಪುಡಿ ಹಾಗು ಪುಡಿ ಮನೇಲೆ ಮಾಡ್ಕೋಬಹುದು ಹೇಗೆ ಅಂತ ಓದಿ..

ಈಗ ಬಿಸಿ ಬೇಳೆ ಬಾತ್ ಪುಡಿ ಹಾಗು ಪುಡಿ ಮನೇಲೆ ಮಾಡ್ಕೋಬಹುದು ಹೇಗೆ ಅಂತ ಓದಿ..

ಬಿಸಿ ಬೇಳೆ ಬಾತ್ ಪುಡಿ ಮಾಡುವ ವಿಧಾನ :

4 ಬ್ಯಾಡಗಿ ಕೆಂಪು ಮೆಣಸಿನಕಾಯಿ / ಒಣ ಮೆಣಸಿನಕಾಯಿ
1 ಇಂಚು 1 ದಾಲ್ಚಿನ್ನಿ / ಚಕ್ಕೆ
2 ಲವಂಗ
1 ಟೀಸ್ಪೂನ್ ಜೀರಿಗೆ
1 ಟೀಸ್ಪೂನ್ ಉದ್ದಿನ ಬೇಳೆ
1 ಟೀಸ್ಪೂನ್ ಕಡಲೆ ಬೇಳೆ
2 ಚಿಟಿಕೆ ಮೆಂತ್ಯ ಕಾಳು
1 ½ ಟೀಸ್ಪೂನ್ ಕೊತ್ತಂಬರಿ ಬೀಜ
1 ಸಣ್ಣ ಮರಾಠಿ ಮೊಗ್ಗು (ಐಚ್ಛಿಕ)
1ಟೀಸ್ಪೂನ್. ತಾಜಾ ಅಥವಾ ಒಣ ತೆಂಗಿನಕಾಯಿ ತುರಿ ಅಥವಾ ಗಸಗಸೆ (ಐಚ್ಛಿಕ)

ಬಿಸಿ ಬೇಳೆ ಬಾತ್ ಪುಡಿ ಅಥವಾ ಎಂಟಿಆರ್ ಪುಡಿ ಬಳಸಿ :

ಬಿಸಿ ಬೇಳೆ ಬಾತ್ ಮಾಡುವ ವಿಧಾನ

¾ ಕಪ್ ಅಕ್ಕಿ
½ ಕಪ್ ತೊಗರಿ ಬೇಳೆ
2 ಟೀಸ್ಪೂನ್ ತಾಜಾ ತುರಿದ ತೆಂಗಿನಕಾಯಿ (ಪುಡಿಯನ್ನು ಬಳಸುವುದು)
ಸಣ್ಣ ನಿಂಬೆ ಗಾತ್ರದ ಹುಣಿಸೇಹಣ್ಣು
1 ½ ಟೀಸ್ಪೂನ್. ಬೆಲ್ಲ
ರುಚಿಗೆ ಉಪ್ಪು
1 ಟೀಸ್ಪೂನ್ ತುಪ್ಪ

ಬೇಕಾಗುವ ತರಕಾರಿಗಳು :
ಹಸಿರು ಬಟಾಣಿ
4 ರಿಂದ 5 ಹುರುಳಿ ಕಾಯಿ ಅಥವಾ ನೂರು ಗ್ರಾಂ ನಷ್ಟು ಅವರೆಕಾಯಿ
¼ ಕಪ್ ಕತ್ತರಿಸಿದ ಕ್ಯಾಪ್ಸಿಕಮ್ (ಐಚ್ಛಿಕ)
½ ಕಪ್ ಕ್ಯಾರೆಟ್ ಚೌಕವಾಗಿ ಕತ್ತರಿಸಿದ

ಒಗ್ಗರೆಣ್ಣೆಗೆ :

2 ಟೀಸ್ಪೂನ್. ತುಪ್ಪ
1 ಚಿಗುರು ಕರಿ ಬೇವು ಎಲೆಗಳು
ಕೆಲವು ಗೋಡಂಬಿಗಳು
ಸ್ವಲ್ಪ ಹಿಂಗ್
½ ಟೀಸ್ಪೂನ್ ಸಾಸಿವೆ
1 ಮುರಿದ ಕೆಂಪು ಮೆಣಸಿನಕಾಯಿ (ಬೀಜ ತೆಗೆದ)

ಪಾಕವಿಧಾನ :

ಬಿಸಿ ಬೇಳೆ ಬಾತ್ ಪುಡಿ ಮಾಡುವ ವಿಧಾನ :
ಮೇಲೆ ಹೇಳಿದ ಎಲ್ಲ ಪದಾರ್ಥಗಳನ್ನು ಸ್ವಲ್ಪ ಎಣ್ಣೆ ಬೆರೆಸಿ ಹುರಿದು ಪುಡಿ ಮಾಡಿ ನಂತರ ತಣ್ಣಗೆ ಮಾಡಿ.
ಕನಿಷ್ಠ 30 ನಿಮಿಷಗಳ ಕಾಲ ಅಕ್ಕಿಯನ್ನು ನೆನೆ ಇಟ್ಟು ನಂತರ ಬೇಯಿಸಿಕೊಳ್ಳಿ.
ತೊಗರಿ ಬೇಳೆಯನ್ನು ಮತ್ತು ಅಕ್ಕಿಯನ್ನು ಒಟ್ಟಿಗೆ ಬೇಯಿಸಿಕೊಳ್ಳಿ
ಅರ್ಧ ಕಪ್ ಬಿಸಿ ನೀರಿನಲ್ಲಿ ಹುಣಿಸೇಹಣ್ಣನ್ನು ನೆನೆಸಿ. ಅದನ್ನು ಹಿಂಡಿ ರಸ ತೆಗೆದುಕೊಳ್ಳಿ.
ಬಿಸಿ ಬೇಳೆ ಬಾತ್ ಪುಡಿ , ಬೆಲ್ಲ, ಹುಣಿಸೆಹಣ್ಣು ರಸವನ್ನು ಸೇರಿಸಿ.
1 ಟೀಸ್ಪೂನ್ ತುಪ್ಪವನ್ನು ಒಂದು ಪ್ಯಾನ್ ಹಾಕಿ ಒಗ್ಗರಣೆ ಹಾಕಿ , ತರಕಾರಿಗಳನ್ನು ಸೇರಿಸಿ ಬೇಯಿಸಿ.
ತರಕಾರಿ ಬೆಂದ ನಂತರ ಬಿಸಿ ಬೇಳೆ ಬಾತ್ ಪುಡಿ ಮಿಶ್ರಣವನ್ನು ಸೇರಿಸಿ.
ಆನಂತರ ಅನ್ನ ಮತ್ತು ಬೇಳೆಯ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಕಲಸಿ .
ಐದಾರು ನಿಮಿಷದ ಬಳಿಕ ಸ್ಟವ್ ನಿಂದ ಕೆಳಗೆ ಇಳಿಸಿದರೆ ಬಿಸಿ ಬೇಳೆ ಬಾತ್ ಸವಿಯಲು ಸಿದ್ಧ .

ಈಗ ಖಾರ ಬೂನ್ದಿಯ ಅಥವಾ ಚಿಪ್ಸ್ ಜೊತೆ ನಂಚಿಕೊಂಡು ತಿಂದರೆ ರುಚಿ ಇನ್ನು ಅದ್ಬುತ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top