fbpx
ಆರೋಗ್ಯ

ಈ ಸಿಂಪಲ್ ಟ್ರಿಕ್ ಗೊತ್ತಾದ್ರೆ ಒಂದೇ ನಿಮಿಷದಲ್ಲಿ ನಿದ್ದೆ ಮಾಡ್ತೀರಾ..

ಒಂದೇ ನಿಮಿಷದಲ್ಲಿ ನಿದ್ರೆಗೆ ಜಾರುವ ಸರಳವಾದ ಉಪಾಯ.

ಹಾಸಿಗೆ ಮೇಲೆ ಬಿದ್ದ  ಕೂಡಲೇ ಹಾಗೆ ನಿದ್ದೆಗೆ ಜಾರೋರು ನಿಜಕ್ಕೂ ಅದೃಷ್ಟವಂತರು. ಆದರೆ ಈ ಅದೃಷ್ಟ ಎಲ್ಲರಿಗೂ ಸಿಗಲ್ಲ.ನಿಮಗೂ ಹಾಗೆ ನಿದ್ದೆ ಬರಬೇಕು ಅಂದ್ರೆ ಒಂದು ಟೆಕ್ನಿಕ್ ಅಂದರೆ ತಂತ್ರ ಇದೆ.ಅದರ ಹೆಸರು “ಮೈಂಡ್ ಫುಲ್ ಬ್ರೀಥಿಂಗ್”(ಕನ್ನಡದ ಅರ್ಥ ಮನಸ್ಸ ಪೂರ್ತಿಯಾಗಿ  ಉಸಿರಾಡುವುದು ಎಂದು).

ಈಗಿನ ಕಾಲದಲ್ಲಿ ಅಂತು ವಿಪರೀತ ಒತ್ತಡ,ಆತಂಕ ಇರುವವರು ಉಸಿರಾಟದ ಮೇಲೆ ಅಷ್ಟಾಗಿ ಗಮನ ಕೋಡುವುದಿಲ್ಲ. ಶ್ವಾಸಕೋಶದ ತುಂಬಾ ಗಾಳಿ ಎಳೆದು ಕೊಳ್ಳೋದನ್ನು ಮರೆತು ಬಿಟ್ಟಿರುತ್ತಾರೆ. ಕೆಲವು ಕ್ಷಣಗಳ ಕಾಲ ಉಸಿರಾಡೋದನ್ನೇ ಬಿಡ್ತಾರೆ.ಇಂತಹ ಪರಿಸ್ಥಿತಿಗೆ ಕಾರಣ ರಾತ್ರಿ ಹೊತ್ತು ಸರಿಯಾಗಿ ನಿದ್ದೆ ಮಾಡದೇ ಇರೋದು ಅಥವಾ ನಿದ್ರೆ ಬರಲ್ಲ.

ದೇಹ ವಿಶ್ರಾಂತಿಯನ್ನು ಹೊಂದಬೇಕು,ಅಂದರೆ ಹೃದಯದ ಬಡಿತ ಕಡಿಮೆಯಾಗಿ,ಮನಸ್ಸು ಪ್ರಶಾಂತವಾಗಿರಬೇಕು.ಈ ರೀತಿ ಆಗಬೇಕು ಅಂದರೆ ಅಗತ್ಯ ಪ್ರಮಾಣದ ಆಮ್ಲಜನಕ ದೇಹಕ್ಕೆ ಸಿಗಬೇಕು.ಆ ರೀತಿ ಸಿದ್ಧವಾದ ತಂತ್ರವೇ ಮೈಂಡ್ ಪುಲ್ ಬ್ರೀಥಿಂಗ್.

ಇದನ್ನು ಮಾಡೋದು ಹೇಗೆ ?

ನೇರವಾಗಿ ನೆಲದ ಮೇಲೆ ಅಥವಾ ಹಾಸಿಗೆಯ ಮೇಲಾದರು ಸರಿ ಕುಳಿತು 4 ಸೆಕೆಂಡಗಳ ಕಾಲ ಮೂಗಿನ ಮೂಲಕ ಗಾಳಿಯನ್ನು ಒಳಗೆ ಎಳೆದುಕೊಳ್ಳಬೇಕು. ಆ ಗಾಳಿಯನ್ನು 7 ಸೆಕೆಂಡಗಳ ಕಾಲ ಹಿಡಿದಿಟ್ಟುಕೊಳ್ಳಬೇಕು(ಬಂಧಿಸಬೇಕು). ಹೊರಗೆ ಬಿಡಬಾರದು. ಆಮೇಲೆ ಬಾಯಿಯ ಮೂಲಕ 8 ಸೆಕೆಂಡಗಳ ಕಾಲ ನಿಧಾನಕ್ಕೆ ಗಾಳಿಯನ್ನು ಬಿಡಬೇಕು.ಈ ಉಸಿರಾಡುವ ತಂತ್ರಕ್ಕೆ 4-7-8 ಟ್ರಿಕ್ ಅಂತಲೂ ಕೂಡ ಕರೆಯುತ್ತಾರೆ.

ಈ ತಂತ್ರ ಗೊತ್ತಾದ ಕೂಡಲೇ ಕೆಲವರು ಶುರು ಮಾಡಿಕೊಳ್ಳುತ್ತಾರೆ.

ಆದರೆ ಎರಡನೇ ಬಾರಿ ಮಾಡಬೇಕೆಂದರೆ ಅವರಿಗೆ ಸೋಮಾರಿತನ, ಆದರೆ ಛಲದಿಂದ ಮನಸಿಟ್ಟು ಅಭ್ಯಾಸ ಮಾಡಿದರೆ ಒಳ್ಳೆಯ ಪರಿಣಾಮ ಬೀರುತ್ತದೆ ಈ ಟ್ರಿಕ್ .ಇನ್ನೇಕೆ ತಡ ನೀವು ಒಂದು ಬಾರಿ ಪ್ರಯತ್ನಿಸಿ ನೋಡಿ.ಚೆನ್ನಾಗಿ ಸುಖಕರವಾಗಿ ನಿದ್ರೆ ಮಾಡಿ.ಶುಭರಾತ್ರಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

1 Comment
Vishwanand kumar says:

Very good info for present generations.

To Top