fbpx
ದೇವರು

ಜೀವನದಲ್ಲಿ ಒಂದ್ಸರಿಯಾದ್ರು ನೋಡಿ ಪುಣ್ಯಕಟ್ಕೋಳ್ಳೇಬೇಕಾದ ಶ್ರೀ ಕೃಷ್ಣ ಪರಮಾತ್ಮನ 10 ಸುಂದರವಾದ ದೇವಸ್ಥಾನಗಳು

ಶ್ರೀ ಕೃಷ್ಣ ಪರಮಾತ್ಮನ 10 ಸುಂದರವಾದ ದೇವಸ್ಥಾನಗಳಿವು.  ಈ ದೇವಸ್ಥಾನಗಳು ತಮ್ಮ  ಸಂಕೀರ್ಣ ವಾಸ್ತುಶಿಲ್ಪ ಮತ್ತು ಭವ್ಯವಾದ ಶೈಲಿಗೆ ಹೆಸರುವಾಸಿಯಾಗಿವೆ.

 

ಶ್ರೀ ಕೃಷ್ಣ ಪರಮಾತ್ಮನ ಭಕ್ತಾದಿಗಳು ಇಡೀ ವಿಶ್ವದ ಮೂಲೆ ಮೂಲೆಯಲ್ಲಿಯೂ ಸಹ ನೆಲೆಸಿದ್ದಾರೆ.ಭಾರತದ ಹೊರಗೂ ಕೂಡ ಅನ್ಯ ದೇಶಗಳಲ್ಲಿಯೂ ಕೂಡ ಇದ್ದಾರೆ.ಶ್ರೀ ಕೃಷ್ಣನ  ಭಕ್ತಾದಿಗಳು ತಪ್ಪದೇ ತಮ್ಮ ಜೀವನದಲ್ಲಿ ಒಂದು ಬಾರಿಯಾದರೂ  ನೋಡಲೇಬೇಕಾದ ಹತ್ತು ದೇವಸ್ಥಾನಗಳು ಇಲ್ಲಿವೆ.ಅಂತಹ ದೇವಸ್ಥಾನಗಳಿಗೆ ಭೇಟಿ ನೀಡುವುದು ಮೌಲ್ಯಯುತವಾದುದು.ಈ ದೇವಸ್ಥಾನಗಳು ವಿವಿಧ ಕಾರಣಗಳಿಗೆ ಪ್ರಖ್ಯಾತಿಯನ್ನು ಪಡೆದುಕೊಂಡಿವೆ ಅವುಗಳ ಭವ್ಯತೆಗೆ,ವಾಸ್ತುಶಿಲ್ಪಕ್ಕೆ ಮತ್ತು ನಮ್ಮ ಪೂರ್ವಜರ ಕಾರಣದಿಂದ ಪ್ರಖ್ಯಾತಿಯನ್ನು ಗಳಿಸಿವೆ.

ಈ ಗ್ರಹದ ( ಭೂಮಿಯ) ಮೇಲೆ  ಪರಮಾತ್ಮನಾದ ಶ್ರೀ ಕೃಷ್ಣನಿಗೆಂದೇ ಇಲ್ಲಿ ಕೆಲವು ದೇವಸ್ಥಾನಗಳನ್ನು    ರಚಿನೆ ಮಾಡಿ ನಿರ್ಮಿಸಲಾಗಿದೆ.

1.ದ್ವಾರಕಾದೀಶ ದೇವಸ್ಥಾನ ,ಗುಜರಾತ್.

 

ಇದು ದ್ವಾರಕಾ ನಗರದಲ್ಲಿದೆ.ಇದನ್ನು ಚಾಲುಕ್ಯನ ಶೈಲಿಯಲ್ಲಿ ನಿರ್ಮಿಸಲಾಗಿದ್ದು. ವಾಸ್ತುಶಿಲ್ಪದಲ್ಲಿ ಸುಣ್ಣದ ಕಲ್ಲು ಮತ್ತು ಗ್ರಾನೈಟ್ ಗಳನ್ನು ಬಳಸಿಕೊಂಡು ಈ ದೇವಸ್ಥಾನವನ್ನು ನಿರ್ಮಿಸಲಾಗಿದೆ.ಇಲ್ಲಿನ ಮೂಲೆ ಮೂಲೆಯೂ   ಸಹ ಅತ್ಯಂತ ಸುಂದರವಾಗಿ ಕೆತ್ತನೆ ಮಾಡಲಾಗಿದೆ ಅದರಲ್ಲಿ ಫಲಕಗಳು,ನೃತ್ಯಗಾರರು, ಆನೆಗಳು,ಸಂಗೀತಗಾರರು, ವಾದ್ಯಗಾರರು ಮತ್ತು ಆಕಾಶ ಜೀವಿಗಳನ್ನು ಸಹ  ಸುಂದರವಾಗಿ ಕೆತ್ತನೆ ಮಾಡಲಾಗಿದೆ.

2.ಬಾಲಕೃಷ್ಣ ದೇವಸ್ಥಾನ,ಹಂಪಿ,ಕರ್ನಾಟಕ.

ಶ್ರೀ ಕೃಷ್ಣನ ದೇವಸ್ಥಾನ ಹಂಪಿಯಲ್ಲಿ ನೆಲೆಸಿದೆ.ಈ ಸ್ಥಳಕ್ಕೆ ಹೋಗುವುದು ಸ್ವಲ್ಪ ಕಷ್ಟವಾಗಬಹುದು.ಆದರೆ ಅದು ಮೌಲ್ಯ ಯುತವಾದುದು. ನೀವು ಈ ಗಮ್ಯ ಸ್ಥಾನ ತಲುಪಿದಾಗ  ನಿಮ್ಮ ಕಷ್ಟಗಳು ಮಾಯವಾಗುತ್ತವೆ.ಯುನೆಸ್ಕೋ  ಈ ದೇವಸ್ಥಾನವನ್ನು  ತಮ್ಮ ವಿಶ್ವ  ಪರಂಪರೆಯ  ತಾಣಗಳ  ಪಟ್ಟಿಯಲ್ಲಿ ಸೇರಿಸಿದ್ದಾರೆ.

3.ಇಸ್ಕಾನ್,ಬೆಂಗಳೂರು.

ಶ್ರೀ ಕೃಷ್ಣನ ಅತ್ಯಂತ ದೊಡ್ಡ ದೇವಸ್ಥಾನಗಳ ಪಟ್ಟಿಯಲ್ಲಿ ಇದು  ಸಹ ಒಂದಾಗಿದೆ. ಭಾರತದಲ್ಲಿ ಶ್ರೀ ರಾಧಾಕೃಷ್ಣರ ಇಸ್ಕಾನ್ ದೇವಸ್ಥಾನ  ಬೆಂಗಳೂರಿನಲ್ಲಿ 1997ರಲ್ಲಿ ನಿರ್ಮಿಸಲಾಗಿದೆ.ವೇದ,ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಕಲಿಕೆಗಳಿಗೆ ಉತ್ತೇಜನ ನೀಡುವ ಸಲುವಾಗಿಯೂ ಸಹ ಈ ದೇವಸ್ಥಾನವನ್ನು ನಿರ್ಮಾಣ ಮಾಡಿದ್ದಾರೆ.ಇದು ವೈಕುಂಠದ ಬೆಟ್ಟದ ಮೇಲೆ ಸೃಷ್ಟಿಯಾದಂತಿದೆ ಮತ್ತು ಈ ದೇವಸ್ಥಾನದಲ್ಲಿ ಕೃಷ್ಣನು ಎಚ್ಚರದಿಂದ ಇದ್ದು  ಇಡೀ  ಜಗತ್ತಿನ ಸುತ್ತಲೂ ಸಹ ತನ್ನ ಹೆಸರನ್ನು ಹರಡುತ್ತಿದ್ದಾನೆ.ಇದರ ಜೊತೆಗೆ ಬಂಗಾರ ಲೇಪಿತ ದ್ವಜವು ಮತ್ತು ಕಲಶಗಳೂ ಇವೆ ಇವುಗಳನ್ನೂ ನೀವು ತಪ್ಪದೆ ಒಂದು ಬಾರಿಯಾದರೂ ಜೀವನದಲ್ಲಿ ನೋಡಲೇಬೇಕು.

4.ಇಸ್ಕಾನ್,ವೃಂದಾವನ,ಉತ್ತರ ಪ್ರದೇಶ.

ಉತ್ತರ ಪ್ರದೇಶದ ಮಥುರಾದಲ್ಲಿರುವ ಈ  ದೇವಸ್ಥಾನವನ್ನು  ಕೃಷ್ಣ ಬಲರಾಮ ಮಂದಿರ ಎಂಬ ಹೆಸರಿನಿಂದಲೂ ಸಹ ಕರೆಯಲಾಗುತ್ತದೆ. ಇದು ಅತ್ಯಂತ ಸುಂದರವಾಗಿದ್ದು 1975 ರಲ್ಲಿ ನಿರ್ಮಿತವಾಗಿದೆ.ಇದರ ಗೋಡೆಗಳ ಮೇಲಿರುವ  ಸಂಕೀರ್ಣ ಕೆತ್ತನೆ ಮತ್ತು ಗುಮ್ಮಟಗಳು ದೇವಸ್ಥಾನದ  ದಾರಿಯಲ್ಲಿ ಎದ್ದು ಕಾಣಿಸುತ್ತವೆ ,ಗರ್ಭಗುಡಿಯೂ ಸಹ ಭವ್ಯವಾದ ಮಂದಿರವಾಗಿದೆ.

5.ಜಗನ್ನಾಥ ದೇವಸ್ಥಾನ,ಪೂರಿ, ಒರಿಸ್ಸಾ.

ಈ ಭವ್ಯವಾದ ದೇವಸ್ಥಾನವು ಒರಿಸ್ಸಾ ರಾಜ್ಯದ, ಪೂರಿಯಲ್ಲಿ ಇದೆ. ಹಿಂದೂಗಳಿಗೆ  ಸುಂದರವಾದ ಮತ್ತು ಪವಿತ್ರವಾದ  ತೀರ್ಥ ಯಾತ್ರಾ ಸ್ಥಳವಾಗಿದೆ.ಚಾರ್ ಧಾಮ ಅಂದರೆ ನಾಲ್ಕು ಧಾಮಗಳಲ್ಲಿ ಇದು ಸಹ ಒಂದಾಗಿದೆ.

6.ಪ್ರೇಮ ಮಂದಿರ,ವೃಂದಾವನ.

ಈ ಮಂದಿರವನ್ನು ಒಂದು ಬಾರಿ ನೋಡಲೇಬೇಕು.ಭಾರತದ ಧರ್ಮ ಯಾತ್ರೆಗೆ ಹೋದವರು ಇದನ್ನು  ವಿಶೇಷವಾಗಿ ರಾತ್ರಿಯ ಸಮಯದಲ್ಲಿ ನೋಡಲು ಮರೆಯಬೇಡಿ.ರಾತ್ರಿಯ ಸಮಯದಲ್ಲಿ ಕಂಗೊಳಿಸುವ  ಪಜ್ವಲವಾದ ಬೆಳಕು ಸುಮ್ಮನೆ ಅತ್ಯುತ್ತಮ ಮತ್ತು ಮನುಸೂರೆಗೊಳ್ಳುವಂತೆ  ಮಾಡುತ್ತದೆ.ಇದು ಇಡೀ ಭಾರತದಲ್ಲೇ ಅತ್ಯಂತ ಆಕರ್ಷಕವಾಗಿ ಕಾಣುವ ದೇವಸ್ಥಾನ  ಎಂದು ಪರಿಗಣಿಸಿದ್ದಾರೆ.ಶ್ರೀ ಕೃಷ್ಣನ ಪ್ರೇಮಿಗಳಿಗೆ ಇದು ಅಭಯಾರಣ್ಯ ಇದ್ದ ಹಾಗೆ.

7.ಶ್ರೀ ಶ್ರೀ ರಾಧ ಕೃಷ್ಣ ದೇವಸ್ಥಾನ, ಉತಃ, ಯುನೈಟೆಡ್ ಸ್ಟೇಟ್ಸ್.

ಇದು ನೆಲೆಯೂರಿರುವುದು  ಅಮೆರಿಕಾದಲ್ಲಿ.ಪ್ರಾರಂಭದಲ್ಲಿ ಶ್ರೀ ಶ್ರೀ ರಾಧಾಕೃಷ್ಣ ದೇವಸ್ಥಾನ ನಿರ್ಮಾಣಗೊಂಡಿದ್ದು ಹಿಂದೂ ಜನಾಂಗದವರನ್ನೆಲ್ಲಾ ಒಟ್ಟು ಗೂಡಿಸಲು ನಿರ್ಮಿಸಿದರು.ಕೃಷ್ಣನ ಬಗ್ಗೆ ಅರಿವು ಮೂಡಿಸಲು ನಿರ್ಮಿಸಲಾಗಿದೆ.ಈಗ ಈ ದೇವಸ್ಥಾನದಲ್ಲಿ ಹಿಂದೂಗಳ ಎಲ್ಲಾ ಹಬ್ಬವನ್ನು ಆಚರಿಸಲಾಗುತ್ತದೆ. ಅವು ಹೋಳಿ,ಶ್ರೀ ಕೃಷ್ಣ ಜನ್ಮಾಷ್ಟಮಿ.ಇಲ್ಲಿಗೆ ಬರುವ ಭಕ್ತರು ಮತ್ತು ಪ್ರವಾಸಿಗರು ಸಹ ಎಲ್ಲರೂ ಜೊತೆ ಸೇರಿ  ಆಚರಿಸುತ್ತಾರೆ .

8.ಉಡುಪಿ ಶ್ರೀಕೃಷ್ಣ ಮಂದಿರ

ಉಡುಪಿ ಇಂದು ವಿಶ್ವವಿಖ್ಯಾತವಾದದ್ದೇ ಇಲ್ಲಿನ ಶ್ರೀಕೃಷ್ಣ ಮಂದಿರದಿಂದ. ಬಹು ಪ್ರಾಚೀನ ಬೆಂಗಳೂರಿನಿಂದ 425 ಕಿ. ಮಿ. ದೂರದಲ್ಲಿ ರುವ ಉಡುಪಿ ಮಧ್ವಾಚಾರ್ಯರ ಪಾದಧೂಳಿನಿಂದ ಪುನೀತವಾದ ಉಡುಪಿ, ವೇದ ಶಿಕ್ಷಣ ನೀಡುವ ಪ್ರಸಿದ್ಧ ಶಿಕ್ಷಣಕೇಂದ್ರವೂ ಹೌದು

9.ವೃಂದಾವನ, ಚಂದ್ರೋದಯ  ಮಂದಿರ.

ಇದು ಉತ್ತರ ಪ್ರದೇಶದ ಮಥುರಾ  ಜಿಲ್ಲೆಯಲ್ಲಿ ಈ ದೇವಸ್ಥಾನವು  ನಿರ್ಮಾಣಗೊಂಡಿದೆ. ಇಡೀ ವಿಶ್ವದಲ್ಲಿಯೇ  ಅತ್ಯಂತ ಎತ್ತರವಾದ  700 ಅಡಿಗಳಷ್ಟು  ಎತ್ತರವಿರುವ  ದೇವಸ್ಥಾನ ಮತ್ತು 300 ಕೋಟಿ ರೂಪಾಯಿ ಬಂಡವಾಳವನ್ನು ಹಾಕಿ ಕಟ್ಟಲಾಗಿರುವ  ಮಂದಿರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.ಇದನ್ನು ನಿರ್ಮಾಣ ಮಾಡಿಸಿದವರು  ಬೆಂಗಳೂರಿನ ಇಸ್ಕಾನ್, ಶ್ರೀ ಕೃಷ್ಣ ದೇವಸ್ಥಾನದ ಆಡಳಿತ ಮಂಡಳಿಯು ಈ  ಮಂದಿರವನ್ನು  ನಿರ್ಮಿಸಲು ಇದಕ್ಕೆ ಹಣಕಾಸಿನ ವ್ಯವಸ್ಥೆ ಮಾದಿದೆ.

ಈ ಮಂದಿರವು 5 ಎಕ್ಕರೆ ವಿಸ್ತೀರ್ಣ ಪ್ರದೇಶದಲ್ಲಿ ನಿರ್ಮಿತವಾಗಿದೆ ಜೊತೆಗೆ ಇದರ ವೈಶಿಷ್ಟ್ಯತೆಗಳಾದ  ಪಾರಂಪರಿಕ ಮ್ಯೂಸಿಯಂ, ಅಧ್ಯಯನ ಕೇಂದ್ರ,ಹಬ್ಬಗಳು ಮತ್ತು ಉಪನ್ಯಾಸ ಸಭಾಂಗಣ, ಗ್ಯಾಲರಿ . ಇವೆಲ್ಲವುಗಳ ಜೊತೆಗೆ ವೇದ ಶಾಸ್ತ್ರದ ಅಧ್ಯಯನ,ಒಳಾಂಗಣದಲ್ಲಿ ಕೃಷ್ಣ ಲೀಲಾ ವೃಂದಾವನ ಮತ್ತು ಹಡಗು  ಸವಾರಿ ಇವೆಲ್ಲವುಗಳಿಂದ  ಬಾರಿ ಪ್ರದರ್ಶನದೊಂದಿಗೆ  ಈ ದೇವಸ್ಥಾನ ಬಿಂಭಿತವಾಗಿದೆ.

10.ಗುರುವಾಯುರ್ ದೇವಸ್ಥಾನ,ಗುರುವಾಯುರ್ ,ಕೇರಳ.

ದಕ್ಷಿಣ ಭಾರತದಲ್ಲಿಯೇ ಬಹಳ ಸುಂದರವಾದ ದೇವಸ್ಥಾನ ಗುರುವಾಯುರ್ ದೇವಾಲಯ.ಈ ದೇವಸ್ಥಾನವು  ಇಲ್ಲಿಗೆ ಬರುವ ಯಾತ್ರಾರ್ಥಿಗಳಿಂದ ಗುರಿತಿಸಲ್ಪಟ್ಟಿದೆ. ದ್ವಾರಕಾ, ಉತ್ತರಪ್ರದೇಶದಲ್ಲಿರುವ ಹಾಗೆ  ದೇವಸ್ಥಾನದ ಗೋಪುರ  ಸ್ಥಾಪನೆಯಾಗಿದ್ದು   ಕ್ರಿಸ್ತ್ ಶಕ 1638 ರಲ್ಲಿ.ದೊಡ್ಡ ನಾಲ್ಕು ಕೈಗಳು ಉಳ್ಳ ಶ್ರೀ ಕೃಷ್ಣ ಪರಮಾತ್ಮನ ಶಿಲೆಯು ಇಲ್ಲಿದೆ.ಈ ಶಿಲೆಯನ್ನು ತುಳಸಿ ಹಾರ ಮತ್ತು ಮುತ್ತಿನ ಹಾರದಿಂದ ಸಿಂಗಾರಿಸಲಾಗಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top